Bank Holidays In December: ಡಿಸೆಂಬರ್ನಲ್ಲಿ 14 ದಿನ ಬ್ಯಾಂಕ್ ರಜೆ! ಕರ್ನಾಟಕದ ರಜೆ ವಿವರ ಇಲ್ಲಿದೆ
ಡಿಸೆಂಬರ್ ತಿಂಗಳಿನಲ್ಲಿ ಬ್ಯಾಂಕ್ಗಳ ರಜೆಗೆ ಸಂಬಂಧಿಸಿದ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೋಮವಾರ ಬಿಡುಗಡೆ ಮಾಡಿದೆ. ಕರ್ನಾಟಕ ವಲಯದಲ್ಲಿ ಡಿಸೆಂಬರ್ ತಿಂಗಳಲ್ಲಿ 6 ದಿನ ಮಾತ್ರ ಬ್ಯಾಂಕ್ ರಜೆ ಇರಲಿದೆ.
ನವದೆಹಲಿ: ಡಿಸೆಂಬರ್ (December) ತಿಂಗಳಿನಲ್ಲಿ ಬ್ಯಾಂಕ್ಗಳ ರಜೆಗೆ ಸಂಬಂಧಿಸಿದ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸೋಮವಾರ ಬಿಡುಗಡೆ ಮಾಡಿದೆ. ದೇಶದ ಎಲ್ಲ ವಲಯಗಳ ಲೆಕ್ಕಾಚಾರದ ಪ್ರಕಾರ, ಡಿಸೆಂಬರ್ನಲ್ಲಿ ಬ್ಯಾಂಕ್ಗಳು 14 ದಿನ ರಜೆ ಇರಲಿವೆ. ಆದರೆ, ಆಯಾ ಪ್ರದೇಶಗಳಿಗೆ ಅನುಗುಣವಾಗಿ ರಜೆ ನೀಡಲಾಗುವುದರಿಂದ ದೇಶದಾದ್ಯಂತ ಎಲ್ಲ ಕಡೆಗಳಲ್ಲಿಯೂ ಬ್ಯಾಂಕ್ಗಳು 14 ದಿನವೂ ರಜೆ ಇರುವುದಿಲ್ಲ. 1881ರ ನೆಗೊಷಿಯೇಬಲ್ ಇನ್ಸ್ಟ್ರುಮೆಂಟ್ ಆ್ಯಕ್ಟ್ ಪ್ರಕಾರ ಬ್ಯಾಂಕ್ ರಜೆಗಳನ್ನು ಪ್ರಕಟಿಸಲಾಗುತ್ತದೆ.
ಆನ್ಲೈನ್, ನೆಟ್ ಬ್ಯಾಂಕಿಂಗ್ ಸೇವೆಗೆ ಇಲ್ಲ ಅಡ್ಡಿ
ದೇಶದಾದ್ಯಂತ ಒಟ್ಟು 13 ದಿನಗಳ ಕಾಲ ಬ್ಯಾಂಕ್ಗಳು ರಜೆ ಇದ್ದರೂ ನೆಟ್ ಬ್ಯಾಂಕಿಂಗ್ ಹಾಗೂ ಇತರ ಆನ್ಲೈನ್ ಸೇವೆಗಳಲ್ಲಿ ವ್ಯತ್ಯಯ ಇರುವುದಿಲ್ಲ ಎಂದು ಆರ್ಬಿಐ ತಿಳಿಸಿದೆ. ಡಿಸೆಂಬರ್ 3ರಂದು ಪಣಜಿಯಲ್ಲಿ, 12ರಂದು ಶಿಲ್ಲಾಂಗ್ನಲ್ಲಿ, 19ರಂದು ಪಣಜಿಯಲ್ಲಿ, 24ರಂದು ಶಿಲ್ಲಾಂಗ್ನಲ್ಲಿ, 26ರಂದು ಐಜ್ವಾಲ್, ಗ್ಯಾಂಗ್ಟಕ್ ಮತ್ತು ಶಿಲ್ಲಾಂಗ್ನಲ್ಲಿ, 29ರಂದು ಚಂಡೀಗಢದಲ್ಲಿ, 30ರಂದು ಶಿಲ್ಲಾಂಗ್ ಹಾಗೂ 31ರಂದು ಐಜ್ವಾಲ್ನಲ್ಲಿ ಬ್ಯಾಂಕ್ ರಜೆ ಇರಲಿದೆ.
ಕರ್ನಾಟಕದಲ್ಲಿ ಬ್ಯಾಂಕ್ ರಜೆ ದಿನಾಂಕಗಳು…
ಕರ್ನಾಟಕ ವಲಯದಲ್ಲಿ ಡಿಸೆಂಬರ್ ತಿಂಗಳಲ್ಲಿ 6 ದಿನ ಮಾತ್ರ ಬ್ಯಾಂಕ್ ರಜೆ ಇರಲಿದೆ. ಡಿಸೆಂಬರ್ 4ರಂದು ಭಾನುವಾರ, 10ರಂದು ಎರಡನೇ ಶನಿವಾರ, 11ರಂದು ಭಾನುವಾರ, 18ರಂದು ಭಾನುವಾರ, 24ರಂದು ನಾಲ್ಕನೇ ಶನಿವಾರ ಹಾಗೂ 25ರಂದು ಭಾನುವಾರ ಕರ್ನಾಟಕದಲ್ಲಿ ಬ್ಯಾಂಕ್ ರಜೆ ಇರಲಿದೆ. ಈ ರಜೆಗಳು ದೇಶದ ಉಳಿದ ಭಾಗಗಳಿಗೂ ಅನ್ವಯವಾಗುತ್ತವೆ. ಹೀಗಾಗಿ ದೇಶದಾದ್ಯಂತ ಒಟ್ಟು ಲೆಕ್ಕಾಚಾರ ಹಾಕಿದರೆ 14 ದಿನ ಬ್ಯಾಂಕ್ ರಜೆ ಇರುತ್ತವೆ.
ನವೆಂಬರ್ನಲ್ಲಿತ್ತು 10 ದಿನ ರಜೆ
ನವೆಂಬರ್ ತಿಂಗಳಲ್ಲಿ ಬ್ಯಾಂಕ್ಗಳಿಗೆ 10 ದಿನ ರಜೆ ಇತ್ತು. ನವೆಂಬರ್ 1, ನವೆಂಬರ್ 8, ನವೆಂಬರ್ 11 ಹಾಗೂ ನವೆಂಬರ್ 23ರಂದು ಬ್ಯಾಂಕ್ಗಳು ರಜೆ ಇದ್ದವು. ಉಳಿದಂತೆ ಭಾನುವಾರ ಮತ್ತು ಎರಡನೇ ಹಾಗೂ ನಾಲ್ಕನೇ ಶನಿವಾರಗಳಂದು, ಅಂದರೆ ನವೆಂಬರ್ 6, ನವೆಂಬರ್ 12, ನವೆಂಬರ್ 13, ನವೆಂಬರ್ 20, ನವೆಂಬರ್ 26 ಹಾಗೂ ನವೆಂಬರ್ 27ರಂದು ಬ್ಯಾಂಕ್ಗಳು ರಜೆ ಇದ್ದವು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ