ಬ್ಯಾಂಕ್ ರಜಾದಿನ
ಬೆಂಗಳೂರು, ಸೆಪ್ಟೆಂಬರ್ 26: ಹಬ್ಬದ ಸೀಸನ್ನಲ್ಲಿರುವ ಅಕ್ಟೋಬರ್ ತಿಂಗಳಲ್ಲಿ ಹೆಚ್ಚಿನ ದಿನಗಳು ರಜೆಯೇ ಇವೆ. ಶನಿವಾರ ಮತ್ತು ಭಾನುವಾರದ ರಜೆಗಳೂ ಸೇರಿ ಮುಂದಿನ ತಿಂಗಳು ಬರೋಬ್ಬರಿ 21 ದಿನಗಳು ಬ್ಯಾಂಕ್ ಬಾಗಿಲು (Bank holidays) ಮುಚ್ಚಿರುತ್ತವೆ. ಇದರಲ್ಲಿ ಪ್ರಾದೇಶಿಕ ರಜೆಗಳೂ ಒಳಗೊಂಡಿವೆ. ಕೆಲ ರಜೆಗಳು ಕೆಲ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿವೆ. ಕರ್ನಾಟಕದಲ್ಲಿ 11 ದಿನ ರಜೆ ಇದೆ.
ಅಕ್ಟೋಬರ್ನಲ್ಲಿ ದಸರಾ, ದೀಪಾವಳಿ, ವಾಲ್ಮೀಕಿ ಜಯಂತಿ, ದುರ್ಗಾ ಪೂಜೆ, ಕರ್ವಾ ಚೌತ್, ಗಾಂಧಿ ಜಯಂತಿ ಇತ್ಯಾದಿ ವಿಶೇಷ ದಿನಗಳಿದ್ದು, ರಜೆಗಳೇ ತುಂಬಿ ಹೋಗಿವೆ.
ಇದನ್ನೂ ಓದಿ: ಅಕ್ಟೋಬರ್ನಲ್ಲಿ ಹೊಸ ನಿಯಮಗಳು; ಯುಪಿಐ, ಎಲ್ಪಿಜಿ, ಬಡ್ಡಿಯಲ್ಲಿ ಬದಲಾವಣೆ?
ಅಕ್ಟೋಬರ್ 2025ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ
- ಅಕ್ಟೋಬರ್ 1, ಬುಧವಾರ: ಮಹಾನವಮಿ (ಹೆಚ್ಚಿನ ಕಡೆ ರಜೆ)
- ಅಕ್ಟೋಬರ್ 2, ಗುರುವಾರ: ಗಾಂಧಿ ಜಯಂತಿ, ವಿಜಯದಶಮಿ (ಸಾರ್ವತ್ರಿಕ ರಜೆ)
- ಅಕ್ಟೋಬರ್ 3, ಶುಕ್ರವಾರ: ದುರ್ಗಾ ಪೂಜೆ (ಸಿಕ್ಕಿಂನಲ್ಲಿ ರಜೆ)
- ಅಕ್ಟೋಬರ್ 4, ಶನಿವಾರ: ದುರ್ಗಾ ಪೂಜೆ (ಸಿಕ್ಕಿಂನಲ್ಲಿ ರಜೆ)
- ಅಕ್ಟೋಬರ್ 5: ಭಾನುವಾರದ ರಜೆ
- ಅಕ್ಟೋಬರ್ 6, ಸೋಮವಾರ: ಲಕ್ಷ್ಮೀ ಪೂಜೆ (ತ್ರಿಪುರ, ಬಂಗಾಳದಲ್ಲಿ ರಜೆ)
- ಅಕ್ಟೋಬರ್ 7, ಮಂಗಳವಾರ: ವಾಲ್ಮೀಕಿ ಜಯಂತಿ (ಕೆಲ ರಾಜ್ಯಗಳಲ್ಲಿ ರಜೆ)
- ಅಕ್ಟೋಬರ್ 10, ಶುಕ್ರವಾರ: ಕರ್ವಾ ಚೌತ್ (ಹಿಮಾಚಲ ಪ್ರದೇಶದಲ್ಲಿ ರಜೆ)
- ಅಕ್ಟೋಬರ್ 11: ಎರಡನೇ ಶನಿವಾರದ ರಜೆ
- ಅಕ್ಟೋಬರ್ 12: ಭಾನುವಾರದ ರಜೆ
- ಅಕ್ಟೋಬರ್ 18, ಶನಿವಾರ: ಕಟಿ ಬಿಹು (ಅಸ್ಸಾಮ್ನಲ್ಲಿ ರಜೆ)
- ಅಕ್ಟೋಬರ್ 19: ಭಾನುವಾರದ ರಜೆ
- ಅಕ್ಟೋಬರ್ 20, ಸೋಮವಾರ: ದೀಪಾವಳಿ, ಕಾಳಿ ಪೂಜೆ (ಹೆಚ್ಚಿನ ಕಡೆ ರಜೆ)
- ಅಕ್ಟೋಬರ್ 21, ಮಂಗಳವಾರ: ದೀಪಾವಳಿ ಅಮಾವಾಸ್ಯ, ಗೋವರ್ಧನ ಪೂಜೆ (ಮಹಾರಾಷ್ಟ್ರ, ಒಡಿಶಾ ಮೊದಲಾದ ಕೆಲವೆಡೆ ರಜೆ)
- ಅಕ್ಟೋಬರ್ 22, ಬುಧವಾರ: ದೀಪಾವಳಿ ಲಕ್ಷ್ಮೀ ಪೂಜೆ, ಬಲಿಪಾಡ್ಯಮಿ (ಹಲವು ರಾಜ್ಯಗಳಲ್ಲಿ ರಜೆ)
- ಅಕ್ಟೋಬರ್ 23, ಗುರುವಾರ: ಭಾಯಿ ದೂಜ್, ಲಕ್ಷ್ಮೀ ಪೂಜೆ, ಚಿತ್ರಗುಪ್ತ ಪೂಜೆ (ಕೆಲವು ರಾಜ್ಯಗಳಲ್ಲಿ ರಜೆ)
- ಅಕ್ಟೋಬರ್ 25: ನಾಲ್ಕನೇ ಶನಿವಾರದ ರಜೆ
- ಅಕ್ಟೋಬರ್ 26: ಭಾನುವಾರದ ರಜೆ
- ಅಕ್ಟೋಬರ್ 27, ಸೋಮವಾರ: ಛಾತ್ ಪೂಜೆ (ಬಂಗಾಳ, ಬಿಹಾರ, ಜಾರ್ಖಂಡ್ನಲ್ಲಿ ರಜೆ)
- ಅಕ್ಟೋಬರ್ 28, ಮಂಗಳವಾರ: ಛಾತ್ ಪೂಜೆ (ಬಂಗಾಳ, ಬಿಹಾರ, ಜಾರ್ಖಂಡ್ನಲ್ಲಿ ರಜೆ)
- ಅಕ್ಟೋಬರ್ 31, ಶುಕ್ರವಾರ: ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ (ಗುಜರಾತ್ನಲ್ಲಿ ರಜೆ)
ಇದನ್ನೂ ಓದಿ: ಬ್ಯಾಂಕ್ನಲ್ಲಿವೆ RTGS, NEFT, IMPS, ECS ACH ಪೇಮೆಂಟ್ ಸಿಸ್ಟಂಗಳು; ಯಾವುದಕ್ಕೆ ಎಷ್ಟಿದೆ ಶುಲ್ಕ? ಇಲ್ಲಿದೆ ಮಾಹಿತಿ
ಕರ್ನಾಟಕದಲ್ಲಿ ಅಕ್ಟೋಬರ್ ತಿಂಗಳ ಬ್ಯಾಂಕ್ ರಜೆಗಳು
- ಅಕ್ಟೋಬರ್ 1, ಬುಧವಾರ: ಮಹಾನವಮಿ
- ಅಕ್ಟೋಬರ್ 2, ಗುರುವಾರ: ಗಾಂಧಿ ಜಯಂತಿ, ವಿಜಯದಶಮಿ
- ಅಕ್ಟೋಬರ್ 5: ಭಾನುವಾರದ ರಜೆ
- ಅಕ್ಟೋಬರ್ 7, ಮಂಗಳವಾರ: ವಾಲ್ಮೀಕಿ ಜಯಂತಿ
- ಅಕ್ಟೋಬರ್ 11: ಎರಡನೇ ಶನಿವಾರದ ರಜೆ
- ಅಕ್ಟೋಬರ್ 12: ಭಾನುವಾರದ ರಜೆ
- ಅಕ್ಟೋಬರ್ 19: ಭಾನುವಾರದ ರಜೆ
- ಅಕ್ಟೋಬರ್ 20, ಸೋಮವಾರ: ದೀಪಾವಳಿ
- ಅಕ್ಟೋಬರ್ 22, ಬುಧವಾರ: ದೀಪಾವಳಿ ಬಲಿಪಾಡ್ಯಮಿ
- ಅಕ್ಟೋಬರ್ 25: ನಾಲ್ಕನೇ ಶನಿವಾರದ ರಜೆ
- ಅಕ್ಟೋಬರ್ 26: ಭಾನುವಾರದ ರಜೆ
ಬ್ಯಾಂಕುಗಳ ಕಚೇರಿಗಳು ಬಂದ್ ಆದರೂ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆ ಆನ್ಲೈನಲ್ಲಿ ಲಭ್ಯ ಇರುತ್ತವೆ. ಕ್ಯಾಷ್ ಅಗತ್ಯ ಇದ್ದವರಿಗೆ 24 ಗಂಟೆ ಎಟಿಎಂಗಳು ತೆರೆದಿರುತ್ತವೆ. ಹಣ ಪಾವತಿಗೆ ನೆಟ್ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್ ಮತ್ತು ಯುಪಿಐ ಇದ್ದೇ ಇರುತ್ತದೆ. ಚೆಕ್ ಸಲ್ಲಿಸಲು, ಆರ್ಟಿಜಿಎಸ್ ಇತ್ಯಾದಿ ಕಾರ್ಯಗಳಿಗೆ ಬ್ಯಾಂಕ್ ಕಚೇರಿಗೆ ಹೋಗಬೇಕೆನ್ನುವವರು ರಜಾ ದಿನಗಳನ್ನು ಗಮನಿಸಿ ಅದಕ್ಕೆ ತಕ್ಕಂತೆ ಸಜ್ಜುಗೊಳ್ಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ