ಬ್ಯಾಂಕ್ ರಜೆಗಳ ಪಟ್ಟಿ
Bank Holidays in September 2023: ಆರ್ಬಿಐ ಪ್ರಕಟಿಸಿರುವ ಕ್ಯಾಲೆಂಡರ್ ಪ್ರಕಾರ (RBI List of Holidays For Banks) 2023ರ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 16 ದಿನಗಳು ರಜೆ ಇದೆ. ಇದು ಭಾನುವಾರ ಮತ್ತು ಶನಿವಾರದ ರಜೆಗಳೂ ಸೇರಿವೆ. ಪ್ರಾದೇಶಿಕ ವಿಶೇಷ ರಜೆಗಳಿದ್ದು, ಅದು ಆಯಾ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಹೀಗಾಗಿ, ಒಂದೊಂದು ಪ್ರದೇಶದಲ್ಲಿ ರಜಾ ದಿನಗಳ ಸಂಖ್ಯೆ ಭಿನ್ನವಾಗಿರಬಹುದು. ಅ ತಿಂಗಳಲ್ಲಿ ಈದ್ ಮಿಲಾದ್, ಕೃಷ್ಣ ಜನ್ಮಾಷ್ಟಮಿ ಮತ್ತು ವಿನಾಯಕ ಚತುರ್ಥಿ ಪ್ರಮುಖ ಹಬ್ಬಗಳಾಗಿದ್ದು, ಒಂದೊಂದು ಪ್ರದೇಶದಲ್ಲಿ ಬೇರೆ ಬೇರೆ ದಿನ ಅದರ ಆಚರಣೆ ಇದೆ. ಆರ್ಬಿಐ ಕ್ಯಾಲಂಡರ್ನಲ್ಲಿ 16 ದಿನ ರಜೆ ಇದ್ದರೂ ಎಂಟು ದಿನಗಳ ಕಾಲ ಬ್ಯಾಂಕುಗಳು ಬಂದ್ ಆಗಿರುತ್ತವೆ.
ಭಾರತದಲ್ಲಿ 2023ರ ಸೆಪ್ಟೆಂಬರ್ ತಿಂಗಳಲ್ಲಿ ಇರುವ ರಜಾ ದಿನಗಳ ಪಟ್ಟಿ
- 2023ರ ಸೆಪ್ಟೆಂಬರ್ 3: ಭಾನುವಾರ
- 2023ರ ಸೆಪ್ಟೆಂಬರ್ 6: ಶ್ರೀಕೃಷ್ಣ ಜನ್ಮಾಷ್ಟಮಿ (ಭುವನೇಶ್ವರ್, ಚೆನ್ನೈ, ಹೈದರಾಬಾದ್ ಮತ್ತು ಪಾಟ್ನಾದಲ್ಲಿ ಬ್ಯಾಂಕ್ ರಜೆ)
- 2023ರ ಸೆಪ್ಟೆಂಬರ್ 7: ಜನ್ಮಾಷ್ಟಮಿ, ಶ್ರೀ ಕೃಷ್ಣ ಅಷ್ಟಮಿ (ಅಹ್ಮದಾಬಾದ್, ಚಂದೀಗಡ, ಡೆಹ್ರಾಡೂನ್, ಗ್ಯಾಂಗ್ಟೋಕ್, ತೆಲಂಗಾಣ, ಜೈಪುರ್, ಜಮ್ಮು, ಕಾನಪುರ್, ಲಕ್ನೋ, ರಾಯಪುರ್, ರಾಂಚಿ, ಸಿಲಾಂಗ್, ಶಿಮ್ಲಾ ಮತ್ತು ಶ್ರೀನಗರದಲ್ಲಿ ಬ್ಯಾಂಕ್ ರಜೆ)
- 2023ರ ಸೆಪ್ಟೆಂಬರ್ 9: ಎರಡನೇ ಶನಿವಾರ
- 2023ರ ಸೆಪ್ಟೆಂಬರ್ 10: ಭಾನುವಾರ
- 2023ರ ಸೆಪ್ಟೆಂಬರ್ 17: ಭಾನುವಾರ
- 2023ರ ಸೆಪ್ಟೆಂಬರ್ 18: ವರಸಿದ್ಧಿ ವಿನಾಯಕ ವ್ರತ ಮತ್ತು ವಿನಾಯಕ ಚತುರ್ಥಿ (ಬೆಂಗಳೂರು ಮತ್ತು ತೆಲಂಗಾಣದಲ್ಲಿ ಬ್ಯಾಂಕ್ ರಜೆ)
- 2023ರ ಸೆಪ್ಟೆಂಬರ್ 19: ಗಣೇಶ ಚತುರ್ಥಿ (ಅಹ್ಮದಾಬಾದ್, ಬೇಲಾಪುರ್, ಭುನವೇಶ್ವರ್, ಮುಂಬೈ, ನಾಗಪುರ್ ಮತ್ತು ಪಣಜಿಯಲ್ಲಿ ಬ್ಯಾಂಕ್ ರಜೆ)
- 2023ರ ಸೆಪ್ಟೆಂಬರ್ 20: ಗಣೇಶ ಚತುರ್ಥಿ ಎರಡನೇ ದಿನ (ಕೊಚ್ಚಿ) ಮತ್ತು ನುವಾಖಾಯ್ (ಒಡಿಶಾ)
- 2023ರ ಸೆಪ್ಟೆಂಬರ್ 22: ಶ್ರೀ ನಾರಾಯಣಗುರು ಸಮಾಧಿ ದಿನ (ಕೊಚ್ಚಿ, ಪಣಜಿ ಮತ್ತು ತಿರುವನಂತಪುರಂ)
- 2023ರ ಸೆಪ್ಟೆಂಬರ್ 23: ನಾಲ್ಕನೇ ಶನಿವಾರ ಮತ್ತು ಮಹಾರಾಜ ಹರಿಸಿಂಗ್ ಜನ್ಮದಿನ (ಜಮ್ಮು ಮತ್ತು ಕಾಶ್ಮೀರ)
- 2023ರ ಸೆಪ್ಟೆಂಬರ್ 24: ಭಾನುವಾರ
- 2023ರ ಸೆಪ್ಟೆಂಬರ್ 25: ಶ್ರೀಮಂತ್ ಶಂಕರದೇವರ ಜನ್ಮೋತ್ಸವ (ಗುವಾಹಟಿಯಲ್ಲಿ ಬ್ಯಾಂಕ್ ರಜೆ)
- 2023ರ ಸೆಪ್ಟೆಂಬರ್ 27: ಪ್ರವಾದಿ ಮೊಹಮ್ಮದ್ ಜನ್ಮದಿನ (ಮಿಲಾದ್ ಇ ಷರೀಫ್) – ಜಮ್ಮು, ಕೊಚ್ಚಿ, ಶ್ರೀನಗರ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್ ರಜೆ.
- 2023ರ ಸೆಪ್ಟೆಂಬರ್ 28: ಈದ್ ಮಿಲಾದ್ (ಅಹ್ಮದಾಬಾದ್, ಬೆಂಗಳೂರು, ಚೆನ್ನೈ, ಕಾನಪುರ್, ಲಕ್ನೋ, ಮುಂಬೈ ಮತ್ತು ನವದೆಹಲಿಯಲ್ಲಿ ಬ್ಯಾಂಕ್ ರಜೆ)
- 2023ರ ಸೆಪ್ಟೆಂಬರ್ 29: ಇಂದ್ರಜಾತ್ರ, ಈದ್ ಇ ಮಿಲಾದ್ ಉಲ್ ನಬಿ (ಗ್ಯಾಂಗ್ಟಕ್, ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಯಾಂಕ್ ರಜೆ)
ಇದನ್ನೂ ಓದಿ: 5 ವರ್ಷದ ಸೇವೆಗಿಂತ ಮುನ್ನವೇ ಗ್ರಾಚುಟಿ ಪಡೆಯಲು ಸಾಧ್ಯವಾ? ಇಲ್ಲಿದೆ ಡೀಟೇಲ್ಸ್
ಇದರಲ್ಲಿ ನಾಲ್ಕು ಭಾನುವಾರ ಮತ್ತು ಎರಡು ಶನಿವಾರ ರಜೆಗಳು ಸಾರ್ವತ್ರಿಕವಾಗಿದ್ದು ದೇಶದ ಎಲ್ಲಾ ಬ್ಯಾಂಕುಗಳು ಬಂದ್ ಆಗಿರುತ್ತವೆ. ಇನ್ನು, ಈದ್ ಮಿಲಾದ್, ಕೃಷ್ಣ ಜನ್ಮಾಷ್ಟಮಿ, ವಿನಾಯಕ ಚತುರ್ಥಿ ಹಬ್ಬಗಳೂ ಇವೆ.
ಬೆಂಗಳೂರಿನಲ್ಲಿ 2023ರ ಸೆಪ್ಟೆಂಬರ್ನಲ್ಲಿ ಬ್ಯಾಂಕ್ ರಜೆಗಳ ಪಟ್ಟಿ
- ಸೆಪ್ಟೆಂಬರ್ 3: ಭಾನುವಾರ
- ಸೆಪ್ಟೆಂಬರ್ 9: ಎರಡನೇ ಶನಿವಾರ
- ಸೆಪ್ಟೆಂಬರ್ 10: ಭಾನುವಾರ
- ಸೆಪ್ಟೆಂಬರ್ 17: ಭಾನುವಾರ
- ಸೆಪ್ಟೆಂಬರ್ 18: ವಿನಾಯಕ ಚತುರ್ಥಿ
- ಸೆಪ್ಟೆಂಬರ್ 23: ನಾಲ್ಕನೇ ಶನಿವಾರ
- ಸೆಪ್ಟೆಂಬರ್ 24: ಭಾನುವಾರ
- ಸೆಪ್ಟೆಂಬರ್ 28: ಈದ್ ಮಿಲಾದ್
ಇದನ್ನೂ ಓದಿ: ಗಾಬರಿ ಬೇಡ, ಎಐ ಟೆಕ್ನಾಲಜಿ ನಮ್ಮ ಉದ್ಯೋಗ ಕಸಿಯಲ್ಲ; ಹೆಚ್ಚು ಕೆಲಸ ಸೃಷ್ಟಿಸುತ್ತೆ: ಟಾಟಾ ಸನ್ಸ್ ಛೇರ್ಮನ್ ಅನಿಸಿಕೆ
2023ರ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ನಲ್ಲಿ ಇರುವ ಸಾರ್ವತ್ರಿಕ ಬ್ಯಾಂಕ್ ರಜೆಗಳು
- ಅಕ್ಟೋಬರ್ 1: ಮಹಾತ್ಮ ಗಾಂಧಿ ಜಯಂತಿ
- ಅಕ್ಟೋಬರ್ 8: ಭಾನುವಾರ
- ಅಕ್ಟೋಬರ್ 14: ಎರಡನೇ ಶನಿವಾರ
- ಅಕ್ಟೋಬರ್ 15: ಭಾನುವಾರ
- ಅಕ್ಟೋಬರ್ 22: ಭಾನುವಾರ
- ಅಕ್ಟೋಬರ್ 24: ದಸರಾ
- ಅಕ್ಟೋಬರ್ 28: ನಾಲ್ಕನೇ ಶನಿವಾರ
- ಅಕ್ಟೋಬರ್ 29: ಭಾನುವಾರ
- ನವೆಂಬರ್ 5: ಭಾನುವಾರ
- ನವೆಂಬರ್ 11: ಎರಡನೇ ಶನಿವಾರ
- ನವೆಂಬರ್ 12: ಭಾನುವಾರ
- ನವೆಂಬರ್ 14: ದೀಪಾವಳಿ
- ನವೆಂಬರ್ 19: ಭಾನುವಾರ
- ನವೆಂಬರ್ 25: ನಾಲ್ಕನೇ ಶನಿವಾರ
- ನವೆಂಬರ್ 26: ಭಾನುವಾರ
- ನವೆಂಬರ್ 27: ಗುರುನಾನಕ್ ಜಯಂತಿ
- ಡಿಸೆಂಬರ್ 3: ಭಾನುವಾರ
- ಡಿಸೆಂಬರ್ 9: ಎರಡನೇ ಶನಿವಾರ
- ಡಿಸೆಂಬರ್ 10: ಭಾನುವಾರ
- ಡಿಸೆಂಬರ್ 17: ಭಾನುವಾರ
- ಡಿಸೆಂಬರ್ 23: ನಾಲ್ಕನೇ ಶನಿವಾರ
- ಡಿಸೆಂಬರ್ 24: ಭಾನುವಾರ
- ಡಿಸೆಂಬರ್ 25: ಕ್ರಿಸ್ಮಸ್ ಹಬ್ಬ
- ಡಿಸೆಂಬರ್ 31: ಭಾನುವಾರ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ