Bank Holidays: ಏಪ್ರಿಲ್​ನಲ್ಲಿ 30 ದಿನದ ಪೈಕಿ 15 ದಿನ ದೇಶದ ವಿವಿಧ ಭಾಗಗಳಲ್ಲಿ ಬ್ಯಾಂಕ್ ರಜಾ

2022ರ ಏಪ್ರಿಲ್ ತಿಂಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಬ್ಯಾಂಕ್​ಗಳಿಗೆ 30 ದಿನದ ಪೈಕಿ 15 ದಿನ ರಜಾ ಇರುತ್ತದೆ. ಆ ಬಗ್ಗೆ ವಿವರ ಇಲ್ಲಿನ ಲೇಖನದಲ್ಲಿ ಇದೆ.

Bank Holidays: ಏಪ್ರಿಲ್​ನಲ್ಲಿ 30 ದಿನದ ಪೈಕಿ 15 ದಿನ ದೇಶದ ವಿವಿಧ ಭಾಗಗಳಲ್ಲಿ ಬ್ಯಾಂಕ್ ರಜಾ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Mar 31, 2022 | 7:34 PM

ಹಣಕಾಸು ವರ್ಷ FY23ರ ಮೊದಲ ತಿಂಗಳಾದ 2022ನೇ ಇಸವಿಯ ಏಪ್ರಿಲ್​ ಆರಂಭಕ್ಕೆ ಎದುರಿಗಿದ್ದೇವೆ ಮತ್ತು ಬ್ಯಾಂಕಿಂಗ್ ವಲಯಕ್ಕೆ ಈಗಾಗಲೇ ರಜಾದಿನಗಳು ಕಾಯುತ್ತಿವೆ. ನಿಮಗೆ ಗೊತ್ತಾ, ಬ್ಯಾಂಕ್‌ಗಳಿಗೆ ಏಪ್ರಿಲ್ ತಿಂಗಳ ಅರ್ಧದಷ್ಟು ಅಂದರೆ 15 ದಿನ ರಜೆ ಇದ್ದು, ತಿಂಗಳಲ್ಲಿ 30 ದಿನಗಳಿವೆ. ಏಪ್ರಿಲ್‌ನಲ್ಲಿ ಯಾವುದೇ ರಾಷ್ಟ್ರೀಯ ರಜಾದಿನಗಳಿಲ್ಲ. ಆದರೂ ಹಲವಾರು ಹಬ್ಬಗಳು ಮತ್ತು ದೀರ್ಘ ವಾರಾಂತ್ಯಗಳಿವೆ. ಬ್ಯಾಂಕ್ ರಜಾದಿನಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ನಿರ್ಧರಿಸುತ್ತದೆ. ಸೆಂಟ್ರಲ್ ಬ್ಯಾಂಕ್​ನಿಂದ ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕ್‌ಗಳಿಗೆ ವರ್ಷದ ಆರಂಭದಲ್ಲಿ ತಿಂಗಳವಾರು ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ರಜಾದಿನಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ – ನೆಗೋಷಿಯೇಬಲ್ ಇನ್​ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನಗಳು; ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್‌ಮೆಂಟ್ ಹಾಲಿಡೇ; ಮತ್ತು ಬ್ಯಾಂಕ್‌ಗಳ ಖಾತೆಗಳನ್ನು ಮುಕ್ತಾಯಗೊಳಿಸುವುದು ಹೀಗಿದೆ.

ಏಪ್ರಿಲ್‌ನಲ್ಲಿ ಒಟ್ಟು 15 ರಜೆಗಳನ್ನು ಬ್ಯಾಂಕ್‌ಗಳಿಗೆ ನೀಡಲಾಗುವುದು. ಅದರಲ್ಲಿ 6 ರಜಾದಿನಗಳು ವಾರಾಂತ್ಯದ ರಜೆಗಳು. ಬ್ಯಾಂಕ್ ಖಾತೆಗಳನ್ನು ವಾರ್ಷಿಕವಾಗಿ ಮುಕ್ತಾಯಗೊಳಿಸುವುದರಿಂದ ಹೆಚ್ಚಿನ ಬ್ಯಾಂಕ್‌ಗಳು ಏಪ್ರಿಲ್ 1ರಂದು ಮುಚ್ಚಿರುತ್ತವೆ. ಈ ಮಧ್ಯೆ, ಗುಡಿ ಪಡ್ವಾ/ಯುಗಾದಿ ಹಬ್ಬ/1ನೇ ನವರಾತ್ರಿ/ತೆಲುಗು ಹೊಸ ವರ್ಷದ ದಿನ/ಸಜಿಬು ನೋಂಗ್ಮಾಪನ್ಬಾ (ಚೀರಾಬಾ)ಗಾಗಿ ಏಪ್ರಿಲ್ 2ರಂದು ಬ್ಯಾಂಕುಗಳಿಗೆ ರಜಾ ಇರುತ್ತದೆ. ಇದಲ್ಲದೆ ಭಾರತದ ಕೆಲವು ಪ್ರದೇಶಗಳಲ್ಲಿ ಸರ್ಹುಲ್ ಮತ್ತು ಬಾಬು ಜಗಜೀವನ್ ರಾಮ್ ಅವರ ಜನ್ಮದಿನದ ಕಾರಣ ಏಪ್ರಿಲ್ 4 ಮತ್ತು 5ರಂದು ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುವುದಿಲ್ಲ.

ಈ ಮಧ್ಯೆ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ, ಬೈಸಾಖಿ, ವೈಶಾಖಿ, ತಮಿಳು ಹೊಸ ವರ್ಷದ ದಿನ, ಚೀರೋಬಾ, ಬಿಜು ಹಬ್ಬ, ಗುಡ್​ ಫ್ರೈಡೇ, ಬಂಗಾಳಿ ಹೊಸ ವರ್ಷದ ದಿನ (ನಬಬರ್ಷ), ಹಿಮಾಚಲ ದಿನ, ವಿಷು ಸೇರಿದಂತೆ ಹಲವಾರು ಹಬ್ಬಗಳ ಕಾರಣದಿಂದ ಏಪ್ರಿಲ್ 14ರಿಂದ 16ರ ವರೆಗೆ ಬ್ಯಾಂಕ್​ಗಳಿಗೆ ರಜೆ ಇರುತ್ತವೆ. ಏಪ್ರಿಲ್ 16ರಂದು ಬ್ಯಾಂಕ್‌ಗಳ ಮೂರನೇ ಶನಿವಾರವೂ ಸಹ ಬೋಹಾಗ್ ಬಿಹು ಕಾರಣದಿಂದಾಗಿ ರಜೆ ಇರುತ್ತದೆ. ಏಪ್ರಿಲ್ 21ರಂದು ಗರಿಯಾ ಪೂಜೆಯ ಕಾರಣ ಮತ್ತು ಏಪ್ರಿಲ್ 29ರಂದು ಶಬ್-ಐ-ಕದ್ರ್/ಜುಮಾತ್-ಉಲ್-ವಿದಾ ಕಾರಣ ಬ್ಯಾಂಕ್ ರಜಾದಿನಗಳಿವೆ.

ವಾರದ ರಜೆಯ ಭಾಗವಾಗಿ ನಾಲ್ಕು ಭಾನುವಾರಗಳ ರಜೆ ಇರುತ್ತದೆ (ಏಪ್ರಿಲ್ 3, 10, 17 ಮತ್ತು 24). ಎರಡು ಶನಿವಾರ (ಏಪ್ರಿಲ್ 9, 23) ಸಹ ರಜೆ ಇರುತ್ತದೆ. ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ಬ್ಯಾಂಕ್​ಗಳು ಸಾಮಾನ್ಯವಾಗಿ ತೆರೆದಿರುತ್ತವೆ. ವಾರದ ರಜೆಗಳ ಹೊರತಾಗಿ ಹೆಚ್ಚಿನ ಬ್ಯಾಂಕ್​ಗಳು ಏಪ್ರಿಲ್ 1, 14 ಮತ್ತು 15ರಂದು ಮುಚ್ಚುತ್ತವೆ. ಗ್ರಾಹಕರು ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡುವ ಅಗತ್ಯವಿರುವ ಯಾವುದೇ ಬ್ಯಾಂಕಿಂಗ್ ವಹಿವಾಟುಗಳನ್ನು ಕೈಗೊಳ್ಳಲು ಯೋಜಿಸುತ್ತಿದ್ದಲ್ಲಿ ಏಪ್ರಿಲ್‌ನಲ್ಲಿ ಈ ರಜಾದಿನಗಳನ್ನು ಗಮನಿಸಬೇಕು.

ಇದನ್ನೂ ಓದಿ: Paytm Payments Bank: ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್​ಗೆ ಹೊಸ ಗ್ರಾಹಕರ ಸೇರ್ಪಡೆ ಮಾಡದಂತೆ ಆರ್​ಬಿಐ ಸೂಚನೆ

Published On - 9:09 pm, Tue, 29 March 22

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್