Banks & Dravid: ಬ್ಯಾಂಕುಗಳು ರಾಹುಲ್ ದ್ರಾವಿಡ್​ರಂತೆ ಆಡಬೇಕು: ಆರ್​ಬಿಐ ಗವರ್ನರ್ ಕರೆ; ಕ್ರಿಕೆಟಿಗನಿಗೂ ಬ್ಯಾಂಕಿಗೂ ಏನು ಸಂಬಂಧ?

|

Updated on: Jan 21, 2024 | 2:17 PM

RBI Governor Shaktikanta Das Speaks: ಭಾರತದ ಹಣಕಾಸು ವಲಯದ ಎಲ್ಲರೂ ಕೂಡ ರಾಹುಲ್ ದ್ರಾವಿಡ್ ಅವರಂತೆ ಆಡಬೇಕು ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕರೆ ನೀಡಿದ್ದಾರೆ. ಬ್ಯಾಂಕುಗಳು ಕೇವಲ ಕಾರ್ಪೊರೇಟ್ ಲೋನ್ ಮತ್ತು ಅನ್​ಸೆಕ್ಯೂರ್ಡ್ ಲೋನ್ ಮೇಲೆ ಅವಲಂಬಿತವಾಗಿರುವುದು ಅಪಾಯಕಾರಿ ಎಂದಿದ್ದಾರೆ. ಮುಂಬೈನಲ್ಲಿ ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆ ಇತ್ತೀಚೆಗೆ ಆಯೋಜಿಸಿದ್ದ ಬಿಎಫ್​ಎಸ್​ಐ ಸಮಿಟ್​ನಲ್ಲಿ ಶಕ್ತಿಕಾಂತ ದಾಸ್ ಮಾತನಾಡುತ್ತಿದ್ದರು.

Banks & Dravid: ಬ್ಯಾಂಕುಗಳು ರಾಹುಲ್ ದ್ರಾವಿಡ್​ರಂತೆ ಆಡಬೇಕು: ಆರ್​ಬಿಐ ಗವರ್ನರ್ ಕರೆ; ಕ್ರಿಕೆಟಿಗನಿಗೂ ಬ್ಯಾಂಕಿಗೂ ಏನು ಸಂಬಂಧ?
ಶಕ್ತಿಕಾಂತ ದಾಸ್
Follow us on

ಮುಂಬೈ, ಜನವರಿ 21: ರಾಹುಲ್ ದ್ರಾವಿಡ್ (Rahul Dravid) ಹೆಸರನ್ನು ಕ್ರಿಕೆಟ್ ಪ್ರೇಮಿಗಳಲ್ಲದವರೂ ಕೇಳಿದ್ದೇ ಇರುತ್ತಾರೆ. ಭಾರತ ಕಂಡ ಅತ್ಯುತ್ತಮ ಕ್ರಿಕೆಟಿಗರಲ್ಲಿ ಅವರೂ ಒಬ್ಬರು. ದಿ ವಾಲ್, ಮಿಸ್ಟರ್ ಡಿಪೆಂಡಬಲ್ ಇತ್ಯಾದಿ ಬಿರುದಾಂಕಿತ ಬ್ಯಾಟರ್ ಅವರು. ಇನ್ನಿಂಗ್ಸ್ ಕಟ್ಟುವುದರಲ್ಲಿ ನಿಸ್ಸೀಮ. ರಕ್ಷಣಾತ್ಮಕವಾಗಿ ಆಡಿ ಎದುರಾಳಿ ಬೌಲರ್​ಗಳನ್ನು ನಿಸ್ತೇಜಗೊಳಿಸಬಲ್ಲ ಚಾಣಾಕ್ಷ್ಯ ಆಟಗಾರ. ಆಟದ ಮೈದಾನದಲ್ಲಿ, ಅದರಲ್ಲೂ ಬ್ಯಾಟಿಂಗ್ ಮಾಡುವಾಗ ಅವರದ್ದು ಅತಿ ವಿರಳದ ಏಕಾಗ್ರತೆ. ಎಂಥ ಒತ್ತಡದಲ್ಲೂ ಸಂಯಮ ಕಳೆದುಕೊಳ್ಳುವುದಿಲ್ಲ, ಉದ್ವೇಗಗೊಳ್ಳುವುದಿಲ್ಲ. ಬಿಸಿನೆಸ್ ಸುದ್ದಿಯಲ್ಲಿ ರಾಹುಲ್ ದ್ರಾವಿಡ್ ಗುಣಗಾನ ಯಾಕೆ ಎಂದು ಕೇಳಬಹುದು. ಅದಕ್ಕೆ ಕಾರಣ, ಇತ್ತೀಚೆಗೆ ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ (RBI Governor Shaktikanta Das) ಅವರು ಬ್ಯಾಂಕುಗಳಿಗೆ ರಾಹುಲ್ ದ್ರಾವಿಡ್​ರ ಗುಣಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದರು. ಬ್ಯಾಂಕ್ ಮಾತ್ರವಲ್ಲ, ಎನ್​ಬಿಎಫ್​ಸಿ ಮತ್ತಿತರ ಹಣಕ್ಷೇತ್ರದ ಸರ್ವರಿಗೂ ಅನ್ವಯಿಸಿ ಅವರು ಸಲಹೆ ನೀಡಿದ್ದಾರೆ.

ಮುಂಬೈನಲ್ಲಿ ಕೆಲ ದಿನಗಳ ಹಿಂದೆ ನಡೆದ ಬಿಸಿನೆಸ್ ಸ್ಟ್ಯಾಂಡರ್ಡ್​ನ ಬಿಎಫ್​ಎಸ್​ಐ ಸಮಿಟ್​ನಲ್ಲಿ ಒಂದು ಗಂಟೆಗೂ ಅಧಿಕ ಕಾಲ ಮಾತನಾಡಿದ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್, ಬ್ಯಾಂಕುಗಳು ರಾಹುಲ್ ದ್ರಾವಿಡ್ ಬ್ಯಾಟಿಂಗ್​ನಂತೆ ದೀರ್ಘಾವಧಿ ಆಡಬೇಕು ಎಂದಿದ್ದಾರೆ. ಅಂದಹಾಗೆ ಶಕ್ತಿಕಾಂತ ದಾಸ್ ಕ್ರಿಕೆಟ್ ಅಭಿಮಾನಿಯಾಗಿದ್ದು, ಸಾಮಾನ್ಯವಾಗಿ ತಮ್ಮ ಭಾಷಣದ ವೇಳೆ ಕ್ರಿಕೆಟ್​ನ ನಿದರ್ಶನ ನೀಡುತ್ತಿರುತ್ತಿರುವುದುಂಟು.

ಇದನ್ನೂ ಓದಿ: Great Return: ಒಂದು ಲಕ್ಷ ಹಣ ಆರು ತಿಂಗಳಲ್ಲಿ 12 ಲಕ್ಷ ರೂ; ಇದು ಈ ಮಲ್ಟಿಬ್ಯಾಗರ್ ಮ್ಯಾಜಿಕ್

ಸಾಲದ ಮಿಶ್ರಣ ಸಮರ್ಪಕವಾಗಿರಬೇಕು

ಬ್ಯಾಂಕುಗಳು ಕೇವಲ ಕಾರ್ಪೊರೇಟ್ ಲೋನ್ ಮತ್ತು ಅನ್​ಸೆಕ್ಯೂರ್ಡ್ ಲೋನ್​ಗಳ ಮೇಲೆಯೇ ಹೆಚ್ಚು ಅವಲಂಬಿತವಾಗಿವೆ. ಈ ಪರಿಸ್ಥಿತಿ ಅಪಾಯಕಾರಿಯಾಗಿರುತ್ತದೆ. ಇದು ನಿಯಂತ್ರಣವಾಗಬೇಕು. ಗೃಹಸಾಲ, ವಾಹನ ಸಾಲ ಇತ್ಯಾದಿ ಎಲ್ಲಾ ರೀತಿಯ ಲೋನ್ ಪ್ರಾಡಕ್ಟ್​ಗಳ ಮಿಶ್ರಣವನ್ನು ಬ್ಯಾಂಕುಗಳು ಹೊಂದಿರಬೇಕು ಎಂದು ಆರ್​ಬಿಐ ಗವರ್ನರ್ ಸಲಹೆ ನೀಡಿದ್ದಾರೆ.

ಸರ್ಕಾರಿ ಬ್ಯಾಂಕುಗಳಲ್ಲಿನ ಉದ್ಯೋಗಿಗಳು, ಅದರಲ್ಲೂ ಉನ್ನತ ಹಂತದ ಅಧಿಕಾರಿಗಳ ಸಂಬಳ ಕಡಿಮೆ ಇದೆ. ಆರ್​ಬಿಐ ಒಂದು ನಿಯಮ ಹಾಕಬೇಕು ಎನ್ನುವ ಕೂಗನ್ನು ಆರ್​ಬಿಐ ಗವರ್ನರ್ ಇದೇ ವೇಳೆ ತಳ್ಳಿಹಾಕಿದ್ದಾರೆ.

ಇದನ್ನೂ ಓದಿ: Inspiring: ರೋಲೆಕ್ಸ್ ವಾಚ್ ಗೊತ್ತೆ? ಇದನ್ನು ಸ್ಥಾಪಿಸಿದವ ಕಡುಬಡವ, ನಿರ್ಗತಿಕ; ಇದು ವ್ಯವಹಾರ ಜಗತ್ತಿನ ಕೌತುಕ

ಪಬ್ಲಿಸ್ ಸೆಕ್ಟರ್ ಬ್ಯಾಂಕ್​ನ ಉದ್ಯೋಗಿಯ ಸಂಬಳವನ್ನು ಇಂಡಿಯನ್ ಬ್ಯಾಂಕ್ ಅಸೋಸಿಯೇಶನ್ ಮಧ್ಯಸ್ಥಿಕೆಯಿಂದ ತೀರ್ಮಾನಿತವಾಗುತ್ತದೆ. ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಎಕ್ಸಿಕ್ಯೂಟಿವ್ ಡೈರೆಕ್ಟರ್​ಗಳ ವೇತನಕ್ಕೆ ಸರ್ಕಾರದ ನಿಯಮ ಅನ್ವಯ ಆಗುತ್ತದೆ. ಇದರಲ್ಲಿ ಆರ್​ಬಿಐನ ಪಾತ್ರವೇನೂ ಇರುವುದಿಲ್ಲ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ