Bangalore Property Price: ಇಲ್ಲಿದೆ ಬೆಂಗಳೂರಿನ ವಸತಿ ಆಸ್ತಿ ಬೆಲೆಯ ಮಾಹಿತಿ; ಯಾವ ಏರಿಯಾದಲ್ಲಿ ಎಷ್ಟಿದೆ ಬೆಲೆ ಗೊತ್ತಾ?

| Updated By: Srinivas Mata

Updated on: Jul 04, 2022 | 12:57 PM

ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಆಸ್ತಿ ಬೆಲೆ ಎಷ್ಟಿದೆ ಎಂಬ ಬಗ್ಗೆ ವಿವರವಾದ ವರದಿ ಈ ಲೇಖನದಲ್ಲಿ ಇದೆ. ಫ್ಲ್ಯಾಟ್​ಗಳ ಖರೀದಿ ಮಾಡಬೇಕು ಎಂದಿರುವವರಿಗೆ ಇದರಿಂದ ಸಹಾಯ ಆಗುತ್ತದೆ.

Bangalore Property Price: ಇಲ್ಲಿದೆ ಬೆಂಗಳೂರಿನ ವಸತಿ ಆಸ್ತಿ ಬೆಲೆಯ ಮಾಹಿತಿ; ಯಾವ ಏರಿಯಾದಲ್ಲಿ ಎಷ್ಟಿದೆ ಬೆಲೆ ಗೊತ್ತಾ?
ಸಾಂದರ್ಭಿಕ ಚಿತ್ರ
Follow us on

ಭಾರತೀಯರ ಪಾಲಿಗೆ ಅತಿ ದೊಡ್ಡ ಖರ್ಚು ಅಂದರೆ ಅದು ಮನೆ ನಿರ್ಮಾಣ ಅಥವಾ ಖರೀದಿಯದು. ನಗರ ಜನಸಂಖ್ಯೆ ಕಂಡಾಪಟ್ಟೆ ವ್ಯಾಪಿಸುತ್ತಿರುವುದರಿಂದ ದೊಡ್ಡ ನಗರದಲ್ಲಿ ಮನೆ ಖರೀದಿಸುವುದು ದುಬಾರಿ ಬಾಬ್ತು. ಮೆಟ್ರೋಪಾಲಿಟನ್ ನಗರಗಳಲ್ಲಿ ಮನೆ ಖರೀದಿಗೆ ಇರುವ ಅತಿ ದೊಡ್ಡ ತಡೆ ಅಂದರೆ ವೆಚ್ಚದ್ದು. ಆಸ್ತಿಯ (Assets) ಮೌಲ್ಯ ನಿರ್ಧಾರ ಮಾಡುವುದು ಕಷ್ಟ. ಆದರೆ ಹೋಲಿಕೆ ಮಾಡಿ, ಆ ನಂತರ ಒಂದು ಸರಿಯಾದ ನಿರ್ಧಾರ ಮಾಡುವುದು ಮುಖ್ಯವಾಗುತ್ತದೆ. ನಿಮಗೆ ಸಹಾಯ ಆಗಲಿ ಎಂಬ ಉದ್ದೇಶದಿಂದ ಬೆಂಗಳೂರಿನ ವಿವಿಧ ಪ್ರದೇಶದಲ್ಲಿನ ಬೆಲೆಯ ವಿವರವನ್ನು ಸರಾಸರಿ ಲೆಕ್ಕದಲ್ಲಿ ಸಂಗ್ರಹಿಸಿ, ಇಲ್ಲಿ ನೀಡಲಾಗುತ್ತಿದೆ. ಇದರಿಂದ ನಿಮಗೆ ಸಹಾಯ ಆಗುತ್ತದೆ.

ಚಂದಾಪುರ

1 ಬಿಎಚ್​ಕೆ ಫ್ಲ್ಯಾಟ್ಸ್​ ಸರಾಸರಿ ಅಳೆ 550-650 ಚದರಡಿಗೆ ಅಂದಾಜು 19.3ರಿಂದ 23.3 ಲಕ್ಷ ರೂಪಾಯಿ ಆಗುತ್ತದೆ.

ಎಲೆಕ್ಟ್ರಾನಿಕ್ ಸಿಟಿ ಎರಡನೇ ಫೇಸ್

ಎರಡು ಬಿಎಚ್​ಕೆ ಫ್ಲ್ಯಾಟ್​ಗಳು 900ರಿಂದ 1050 ಚದರಡಿಯದಿ 34ರಿಂದ 38 ಲಕ್ಷ ರೂಪಾಯಿ ಆಗುತ್ತದೆ.

ಗೊಟ್ಟಿಗೆರೆ

2 ಬಿಎಚ್​ಕೆ ಫ್ಲ್ಯಾಟ್ಸ್ 800ರಿಂದ 1000 ಚದರಡಿಯದು 32.5ರಿಂದ 36.5 ಲಕ್ಷ ರೂಪಾಯಿ ಆಗುತ್ತದೆ.

ತುಮಕೂರು ರಸ್ತೆ

2 ಬಿಎಚ್​ಕೆ ಫ್ಲ್ಯಾಟ್ಸ್ ಸರಾಸರಿ ಅಳತೆ 800ರಿಂದ 1200 ಚದರಡಿಗೆ 42ರಿಂದ 46 ಲಕ್ಷ ಆಗುತ್ತದೆ.

ಕೆಂಗೇರಿ

2 ಬಿಎಚ್​ಕೆ ಫ್ಲ್ಯಾಟ್ಸ್ 950ರಿಂದ 1150 ಚದರಡಿಯದು 44.2 ಲಕ್ಷ ರೂಪಾಯಿಯಿಂದ 48.2 ಲಕ್ಷ ಆಗುತ್ತದೆ.

ಕಾಡುಗೋಡಿ

ಇಲ್ಲಿ ಸರಾಸರಿ 1000-1200 ಚದರ ಅಡಿ ಗಾತ್ರದ 2 ಬಿಎಚ್​ಕೆ ಫ್ಲ್ಯಾಟ್‌ಗಳ ಬೆಲೆ ಅಂದಾಜು ರೂ. 51.4-55.4 ಲಕ್ಷ.

ಕೆ.ಆರ್. ಪುರಂ

ಈ ಪ್ರದೇಶದಲ್ಲಿ ಸರಾಸರಿ 1100-1300 ಚದರ ಅಡಿ ಗಾತ್ರದ 2 ಬಿಎಚ್​ಕೆ ಫ್ಲ್ಯಾಟ್‌ಗಳ ಬೆಲೆ ಸುಮಾರು ರೂ. 55.6-59.6 ಲಕ್ಷ.

ಯಲಹಂಕ

ಬೆಂಗಳೂರಿನ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಲ್ಲಿ ಒಂದು. ಇಲ್ಲಿ 1100ರಿಂದ 1200 ಚದರ ಅಡಿಗಳ ಸರಾಸರಿ ಯೂನಿಟ್ ಗಾತ್ರದ 2 ಬಿಎಚ್​ಕೆ ಫ್ಲ್ಯಾಟ್‌ಗಳಿಗೆ ರೂ. 55.5-60 ಲಕ್ಷಗಳ ಮಧ್ಯೆ ಬೆಲೆ ಇದೆ.

ಥಣಿಸಂದ್ರ ರಸ್ತೆ

1050-1250 ಚದರ ಅಡಿಗಳ ಸರಾಸರಿ ಯೂನಿಟ್ ಗಾತ್ರದ 2 ಬಿಚ್​ಕೆ ಫ್ಲ್ಯಾಟ್‌ಗಳು ಸುಮಾರು ರೂ. 58-62 ಲಕ್ಷ ವೆಚ್ಚದಲ್ಲಿ ಲಭ್ಯವಿದೆ.

ಬನ್ನೇರುಘಟ್ಟ ರಸ್ತೆ

1000-1300 ಚದರ ಅಡಿಗಳ ಸರಾಸರಿ ಯೂನಿಟ್ ಗಾತ್ರದ 2 ಬಿಎಚ್​ಕೆ ಫ್ಲ್ಯಾಟ್‌ಗಳ ಬೆಲೆ ಪ್ರದೇಶದಲ್ಲಿ ಅಂದಾಜು ರೂ. 63-67 ಲಕ್ಷಗಳ ನಡುವೆ ಇದೆ.

ಮಾರತಹಳ್ಳಿ

ಇಲ್ಲಿ ಸರಾಸರಿ 1100-1550 ಚದರ ಅಡಿ ಗಾತ್ರದ 2 ಬಿಎಚ್‌ಕೆ ಫ್ಲ್ಯಾಟ್‌ಗಳು ರೂ. 79.5ರಿಂದ 83.5 ಲಕ್ಷದಲ್ಲಿ ಲಭ್ಯವಿವೆ.

ವೈಟ್‌ಫೀಲ್ಡ್

ಇದು ಪ್ರಸಿದ್ಧ ಐಟಿ ಕೇಂದ್ರವಾಗಿದೆ. ತನ್ನ ಟೆಕ್ ಪಾರ್ಕ್‌ಗಳು ಮತ್ತು ದುಬಾರಿ ಅಪಾರ್ಟ್​ಮೆಂಟ್ ಸಂಕೀರ್ಣಗಳಿಗೆ ಹೆಸರುವಾಸಿಯಾಗಿದೆ. 1400ರಿಂದ 1600 ಚದರ ಅಡಿಗಳ ಸರಾಸರಿ ಯೂನಿಟ್ ಗಾತ್ರದ 3 ಬಿಎಚ್​ಕೆ ಫ್ಲ್ಯಾಟ್‌ಗಳು ರೂ. 88ರಿಂದ 92 ಲಕ್ಷ ವೆಚ್ಚದಲ್ಲಿ ಲಭ್ಯವಿದೆ.

ಸರ್ಜಾಪುರ ರಸ್ತೆ

ಈ ಭಾಗದಲ್ಲಿ ಸರಾಸರಿ 5800-6500 ಚದರ ಅಡಿ ಗಾತ್ರದ 3 ಬಿಎಚ್​ಕೆ ಫ್ಲ್ಯಾಟ್‌ಗಳ ಬೆಲೆ ರೂ. 92.5ರಿಂದ 96 ಲಕ್ಷಗಳ ನಡುವೆ ಇದೆ.

ಜೆ.ಪಿ.ನಗರ

ಜೆ.ಪಿ.ನಗರ ಅಥವಾ ಜಯಪ್ರಕಾಶನಾರಾಯಣ ನಗರದಲ್ಲಿ 1700ರಿಂದ 2100 ಚದರ ಅಡಿಗಳ ಸರಾಸರಿ ಯೂನಿಟ್ ಗಾತ್ರದ 3 ಬಿಎಚ್​ಕೆ ಫ್ಲ್ಯಾಟ್‌ಗಳ ಬೆಲೆ ಸುಮಾರು ರೂ. 156-160 ಲಕ್ಷಗಳು.

ಹೆಬ್ಬಾಳ

ಈ ಪ್ರದೇಶದಲ್ಲಿ ಸರಾಸರಿ 1600-2400 ಚದರ ಅಡಿ ವಿಸ್ತೀರ್ಣದ 3 ಬಿಎಚ್‌ಕೆ ಫ್ಲ್ಯಾಟ್‌ಗಳ ಬೆಲೆ ರೂ. 188ರಿಂದ 192 ಲಕ್ಷಗಳು.

ವರದಿಯ ಪ್ರಕಾರ, ಇತರ ನಗರಗಳನ್ನು ಹೋಲಿಸಿದರೆ ಹೈದರಾಬಾದ್ ದೇಶದ ಎಲ್ಲ ಭಾಗಗಳಿಗಿಂತ ಮನೆ ಬೆಲೆಗಳ ವಿಷಯದಲ್ಲಿ ಅಗ್ಗವಾಗಿದೆ. ವಸತಿ ವೆಚ್ಚಗಳೊಂದಿಗೆ ಜೀವನ ವೆಚ್ಚದ ವಿಷಯದಲ್ಲಿ ಪುಣೆಯು ಕೋಲ್ಕತ್ತಾ, ಹೈದರಾಬಾದ್‌ಗಿಂತ ಹಿಂದಿದೆ. ದೇಶದಲ್ಲೇ ಅತಿ ಹೆಚ್ಚು ಬಾಡಿಗೆ ಮುಂಬೈ ಮತ್ತು ದೆಹಲಿಯಲ್ಲಿದೆ. ಆ ನಂತರದ ಸ್ಥಾನದಲ್ಲಿ ಬೆಂಗಳೂರಿದೆ.

ಹೆಚ್ಚಿದ ಆಸ್ತಿ ಬೆಲೆಗಳು ಮತ್ತು ಸಾಲದ ದರ ಹೆಚ್ಚಳದ ಕಾರಣಕ್ಕೆ ಅಗ್ರ 7 ನಗರಗಳು ವಸತಿ ಮಾರಾಟವನ್ನು ಸುಮಾರು ಶೇ 15ರ ದರದಲ್ಲಿ ಸಾಮಾನ್ಯವಾಗಿವೆ ಎಂಬುದು ಇತ್ತೀಚಿನ ANAROCK ಸಂಶೋಧನಾ ಡೇಟಾದಿಂದ ತಿಳಿದುಬರುತ್ತದೆ.

ಮಾರಾಟವು ಕೆಲವು ಪರಿಣಾಮವನ್ನು ಕಂಡಿದ್ದರೂ ಕೆಲವು ಮಾರುಕಟ್ಟೆಗಳು ತುಲನಾತ್ಮಕವಾಗಿ ಉತ್ತಮ ವೇಗವನ್ನು ಕಂಡಿವೆ. ಬೆಂಗಳೂರು, ಹೈದರಾಬಾದ್, ಚೆನ್ನೈ ಮತ್ತು ಪುಣೆಯಂತಹ ನಗರಗಳು ಇಳಿಮುಖದ ಪ್ರವೃತ್ತಿಯನ್ನು ಕಂಡಿದ್ದರೆ, ಮುಂಬೈ ಮತ್ತು NCR ವಸತಿ ಆಕರ್ಷಣೆಯನ್ನು ಮುನ್ನಡೆಸಿವೆ.

ಇದನ್ನೂ ಓದಿ: ದುಬಾರಿಯಾಗ್ತಿದೆ ಹೊಸ ಮನೆ ಕಟ್ಟೋ ಕನಸು: ನಿಲ್ಲುತ್ತಲೇ ಇಲ್ಲ ನಿರ್ಮಾಣ ಉತ್ಪನ್ನಗಳ ಬೆಲೆ ಏರಿಕೆಯ ಓಟ

Published On - 12:57 pm, Mon, 4 July 22