AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬಾರಿಯಾಗ್ತಿದೆ ಹೊಸ ಮನೆ ಕಟ್ಟೋ ಕನಸು: ನಿಲ್ಲುತ್ತಲೇ ಇಲ್ಲ ನಿರ್ಮಾಣ ಉತ್ಪನ್ನಗಳ ಬೆಲೆ ಏರಿಕೆಯ ಓಟ

ಬೆಲೆ ನಿಯಂತ್ರಣಕ್ಕೆ ಸರ್ಕಾರಗಳು ಗಮನವನ್ನೇ ಹರಿಸುತ್ತಿಲ್ಲ ಎಂದು ಮನೆಕಟ್ಟಿಸುವವರು ದೂರುತ್ತಿದ್ದಾರೆ. ಬ್ಯಾಂಕುಗಳಲ್ಲಿ ಈಗಾಗಲೇ ಹೋಂಲೋನ್ ಮಾಡಿರುವವರು, ಟಾಪ್​ಅಪ್​ ಅಂದರೆ ಹೆಚ್ಚುವರಿ ಸಾಲ ಪಡೆಯಲು ಮುಂದಾಗಿದ್ದಾರೆ.

ದುಬಾರಿಯಾಗ್ತಿದೆ ಹೊಸ ಮನೆ ಕಟ್ಟೋ ಕನಸು: ನಿಲ್ಲುತ್ತಲೇ ಇಲ್ಲ ನಿರ್ಮಾಣ ಉತ್ಪನ್ನಗಳ ಬೆಲೆ ಏರಿಕೆಯ ಓಟ
ರಿಯಲ್ ಎಸ್ಟೇಟ್ ಉದ್ಯಮ ಕಳಾಹೀನವಾಗಿದೆ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Mar 17, 2022 | 9:27 AM

Share

ಬೆಂಗಳೂರು: ರಷ್ಯಾ-ಉಕ್ರೇನ್ ಸಂಘರ್ಷದ (Russia Ukraine Crisis) ಪರಿಣಾಮ ಗೃಹ ನಿರ್ಮಾಣ ಚಟುವಟಿಕೆಗಳನ್ನೂ (Real Estate Industry) ಕಾಡುತ್ತಿದೆ. 2016ರಲ್ಲಿ ನೋಟು ಅಮಾನ್ಯೀಕರಣದ ನಂತರ ಕಳೆಗುಂದಿದ್ದ ರಿಯಲ್ ಎಸ್ಟೇಟ್ ವಲಯಕ್ಕೆ ಏಟಿನ ಮೇಲೆ ಏಟು ಬೀಳುತ್ತಿದ್ದು ಚೇತರಿಸಿಕೊಳ್ಳಲು ಅವಕಾಶವೇ ಸಿಗುತ್ತಿಲ್ಲ. ಕೊವಿಡ್ ಸಂಕಷ್ಟದಿಂದ ಕಂಗಾಲಾಗಿದ್ದ ಉದ್ಯಮ ಇದೀಗ ನಿರ್ಮಾಣ ಚಟುವಟಿಕೆಗಳಿಗೆ ಬಳಸುವ ಉತ್ಪನ್ನಗಳ ಬೆಲೆ ಏರಿಕೆಯಿಂದ ಕಂಗಾಲಾಗಿದೆ. ಏಪ್ರಿಲ್ 1ರಿಂದ ಆರಂಭವಾಗಲಿರುವ ಹೊಸ ಆರ್ಥಿಕ ವರ್ಷದಿಂದ ಬೆಲೆಗಳು ಇನ್ನಷ್ಟು ಪರಿಷ್ಕರಣೆಗೊಂಡು, ಹೆಚ್ಚಾಗಬಹುದು ಎಂದು ಮೂಲಗಳು ಹೇಳಿವೆ.

ಕಟ್ಟಡ ನಿರ್ಮಾಣದ ಬೆಲೆಗಳು ಪ್ರತಿ ಚದರ ಅಡಿಗೆ ಸರಾಸರಿ ₹ 400ರಿಂದ ₹ 600ರಷ್ಟು ಹೆಚ್ಚಾಗಿದೆ. ಮೂರು ವಾರಗಳ ಹಿಂದೆ ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ನಂತರ ಕಟ್ಟಡ ನಿರ್ಮಾಣಕ್ಕೆ ಬಳಸುವ ಉತ್ಪನ್ನಗಳ ಬೆಲೆ ಒಂದೇ ಸಮನೆ ಹೆಚ್ಚಾಗಿದ್ದು ಇದಕ್ಕೆ ಮುಖ್ಯ ಕಾರಣ. ಮನೆ ನಿರ್ಮಾಣಕ್ಕೆ ಒಪ್ಪಂದ ಕೊಟ್ಟಿರುವ ಗ್ರಾಹಕರು ಬೆಲೆ ಏರಿಕೆಗೆ ತಕ್ಕಂತೆ ಹೆಚ್ಚುವರಿಯಾಗಿ ಹಣಪಾತಿಸಬೇಕು ಎಂದು ಗುತ್ತಿಗೆದಾರರು ಒತ್ತಾಯಿಸುತ್ತಿದ್ದಾರೆ. ಕೆಲವೆಡೆ ನಿರ್ಮಾಣ ಚಟುವಟಕೆಗಳು ಸ್ಥಗಿತಗೊಂಡಿವೆ.

‘ಎರಡು ಮೂರು ವರ್ಷಗಳ ಹಿಂದೆ ಮಾಡಿಕೊಂಡಿರುವ ಒಪ್ಪಂದದ ದರಗಳಿಗೆ ಅನುಗುಣವಾಗಿ ಕೆಲಸ ಮುಗಿಸಿಕೊಡುವುದು ಸಾಧ್ಯವೇ ಇಲ್ಲ. ವಿಶ್ವವಿದ್ಯಮಾನಗಳು, ಕೊವಿಡ್ ಪರಿಸ್ಥಿತಿಯ ವಿಚಾರದಲ್ಲಿ ಅಸ್ಪಷ್ಟ ಭವಿಷ್ಯ ಇರುವುದು ಗೃಹ ನಿರ್ಮಾಣ ಚಟುವಟಿಕೆಯ ಮೇಲೆ ಪರಿಣಾಮ ಬೀರಿವೆ’ ಎನ್ನುವ ಕ್ರೆಡಾಯ್ (Confederation of Real Estate Developers of India – CREDAI) ಅಧ್ಯಕ್ಷ ಭಾಸ್ಕರ್ ನಾಗೇಂದ್ರಪ್ಪ ಅವರ ಹೇಳಿಕೆಯನ್ನು ಹ್ಯಾನ್ಸ್​ ಇಂಡಿಯಾ ಜಾಲತಾಣ ವರದಿ ಮಾಡಿದೆ.

ಈಗಾಗಲೇ ಪೂರ್ಣಪ್ರಮಾಣದಲ್ಲಿ ನಿರ್ಮಾಣವಾಗಿರುವ ಮನೆ ಮತ್ತು ಫ್ಲಾಟ್​ಗಳ ಬೆಲೆಯನ್ನೂ ಶೇ 10ರಿಂದ 15ರಷ್ಟು ಬೆಲೆ ಹೆಚ್ಚಿಸಲು ಗುತ್ತಿಗೆದಾರರು ಹಾಗೂ ರಿಯಲ್​ ಎಸ್ಟೇಟ್ ಕಂಪನಿಗಳು ಸಜ್ಜಾಗಿವೆ. ಸಿಮೆಂಟ್, ಉಕ್ಕು, ಪಿವಿಸಿ ಪೈಪ್, ತಾಮ್ರ, ಅಲ್ಯೂಮಿನಿಯಮ್ ಸೇರಿದಂತೆ ಕಟ್ಟಡ ನಿರ್ಮಾಣಕ್ಕೆ ಬಳಕೆಯಾಗುವ ಹಲವು ವಸ್ತುಗಳ ಬೆಲೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿವೆ. ಉಕ್ರೇನ್ ಯುದ್ಧದಿಂದಾಗಿ ವಿಶ್ವಾದ್ಯಂತ ಇಂಧನ ಮತ್ತು ನೈಸರ್ಗಿಕ ಅನಿಲದ ದರ ಹೆಚ್ಚಾಗಿರುವುದರಿಂದ ಸಾರಿಗೆ ದುಬಾರಿಯಾಗಲಿದೆ. ಸಹಜವಾಗಿಯೇ ಇದು ಎಲ್ಲ ಉತ್ಪನ್ನಗಳ ಬೆಲೆಗಳ ಮೇಲೆಯೂ ಪರಿಣಾಮ ಬೀರುತ್ತದೆ.

ನಿರ್ಮಾಣ ಚಟುವಟಿಕೆಯ ಒಟ್ಟು ವೆಚ್ಚದ ಮೇಲೆ ಪರಿಣಾಮ ಬೀರುವ ಉಕ್ಕಿನ ಬೆಲೆ ಹೆಚ್ಚಾಗಿದೆ. ಟಾಟಾ ಸ್ಟೀಲ್ ಬೆಲೆಯು ಒಂದು ಟನ್​ಗೆ ₹ 4600ರಷ್ಟು ಹೆಚ್ಚಾಗಿದೆ. ‘ತಯಾರಿ ವೆಚ್ಚ ಹೆಚ್ಚಾದ ಕಾರಣ ಉಕ್ಕಿನ ಬೆಲೆ ಹೆಚ್ಚಿಸಲೇಬೇಕಾಯಿತು’ ಎಂದು ಟಾಟಾ ಸ್ಟೀಲ್ ಕಂಪನಿಯ ಅಧ್ಯಕ್ಷ ಟಿ.ವಿ.ನಾಗೇಂದ್ರನ್ ಹೇಳಿದ್ದಾರೆ. ಆರ್ಥಿಕ ಆವರ್ತನದಲ್ಲಿ ಬರುವ ಯಾವುದೇ ಸಂಕಷ್ಟವು ಸಾಮಾನ್ಯವಾಗಿ ಎರಡರಿಂದ ಮೂರು ವರ್ಷ ಇರುತ್ತದೆ. ಆದರೆ ರಿಯಲ್ ಎಸ್ಟೇಟ್ ಉದ್ಯಮವು ಸತತ ಏಳನೇ ವರ್ಷ ಸಂಕಷ್ಟ ಅನುಭವಿಸುತ್ತಿದೆ. ಮೊದಲೇ ಸಂಕಷ್ಟದ ಬಿಸಿ ಅನುಭವಿಸುತ್ತಿದ್ದ ಉದ್ಯಮಕ್ಕೆ ಉಕ್ರೇನ್-ರಷ್ಯಾ ಯುದ್ಧವು ಕಾರ್ಮೋಡದಂತೆ ಆವರಿಸಿದೆ.

ಡಬಲ್ ರೇಟ್: ನಿಂತ ಕೆಲಸ

ಸಂಬಂಧ ಇದೆಯೋ, ಇಲ್ಲವೋ ಎಲ್ಲದಕ್ಕೂ ಯುದ್ಧವನ್ನು ಹೊಣೆಯಾಗಿಸಲಾಗುತ್ತಿದೆ. ಸಿಮೆಂಟ್, ಉಕ್ಕು, ಮರ, ಗಾಜು, ಪಿಒಪಿ, ಪ್ಲಾಸ್ಟಿಕ್ ಸೇರಿದಂತೆ ಹಲವು ಉತ್ಪನ್ನಗಳ ಬೆಲೆ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದೆ. ಮುಖ್ಯವಾಗಿ ಕಬ್ಬಿಣ ಮತ್ತು ಸಿಮೆಂಟ್ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. ಬೆಲೆ ನಿಯಂತ್ರಣಕ್ಕೆ ಸರ್ಕಾರಗಳು ಗಮನವನ್ನೇ ಹರಿಸುತ್ತಿಲ್ಲ ಎಂದು ಮನೆಕಟ್ಟಿಸುವವರು ದೂರುತ್ತಿದ್ದಾರೆ. ಬ್ಯಾಂಕುಗಳಲ್ಲಿ ಈಗಾಗಲೇ ಹೋಂಲೋನ್ ಮಾಡಿರುವವರು, ಟಾಪ್​ಅಪ್​ ಅಂದರೆ ಹೆಚ್ಚುವರಿ ಸಾಲ ಪಡೆಯಲು ಮುಂದಾಗಿದ್ದಾರೆ.

‘ಯುದ್ಧಕ್ಕೆ ಮೊದಲು ಕಬ್ಬಿಣ ಒಂದು ಟನ್​ಗೆ ₹ 75,000 ಇತ್ತು. ಈಗ ₹ 90,000 ಮುಟ್ಟಿದೆ. ಯುದ್ಧ ಮುಗಿದರೆ ಬೆಲೆ ಕಡಿಮೆಯಾಗಬಹುದು ಎಂಬ ಕಾರಣಕ್ಕೆ ನಾವು ಮನೆ ಕಟ್ಟುವುದನ್ನೇ ಕೆಲ ಸಮಯ ಮುಂದೂಡಿದ್ದೇವೆ’ ಎನ್ನುತ್ತಾರೆ ದೊಡ್ಡಬಳ್ಳಾಪುರದಲ್ಲಿ ಕಟ್ಟಡ ಕಟ್ಟಿಸುತ್ತಿರುವ ಕೋಟೇಶ್ವರ.

‘ನಾನು ಕಳೆದ ವರ್ಷವೇ ಮನೆ ಕಟ್ಟಿಸಬೇಕು ಎಂದುಕೊಂಡಿದ್ದೆ. ಆದರೆ ಕೊವಿಡ್ ಪಿಡುಗಿನ ಬಗ್ಗೆ ಅಸ್ಪಷ್ಟತೆ ಇದ್ದ ಕಾರಣ ಮನೆ ಕಟ್ಟುವುದನ್ನು ಮುಂದೂಡಿದೆ. ಕಳೆದ ತಿಂಗಳು ಮನೆ ಕಟ್ಟಲು ಶುರು ಮಾಡೋಣ ಎಂದುಕೊಂಡೆ. ₹ 35 ಲಕ್ಷಕ್ಕೆ ಮನೆ ಕಟ್ಟಿಕೊಡುವುದಾಗಿ ಕಂಟ್ರಾಕ್ಟರ್ ಒಪ್ಪಿಕೊಂಡಿದ್ದರು. ಆದರೆ ಈಗ ಅದೇ ವಿನ್ಯಾಸ ಮತ್ತು ಅಂಥದ್ದೇ ವಸ್ತುಗಳನ್ನು ಬಳಸಿ ಕಟ್ಟುವ ಮನೆಗೆ ₹ 42 ಲಕ್ಷ ಕೇಳುತ್ತಿದ್ದಾರೆ. ನಾನು ಮನೆಕಟ್ಟುವ ಆಸೆಯನ್ನು ಇನ್ನೂ ಒಂದು ವರ್ಷ ಮುಂದೂಡೋಣ ಎಂದುಕೊಂಡಿದ್ದೇನೆ’ ಎಂದು ಬೆಂಗಳೂರಿನ ಗೃಹಿಣಿ ಹೇಮಾವತಿ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ಉಕ್ರೇನ್​ ಯುದ್ಧದ ಪರಿಣಾಮ: ಕರ್ನಾಟಕದ ಹೊಟೆಲ್​ಗಳಲ್ಲಿ ವಡೆ, ಪಕೋಡಾ, ಪೂರಿ ಬೆಲೆ ಹೆಚ್ಚಳ

ಇದನ್ನೂ ಓದಿ: ಅಡುಗೆಯಲ್ಲಿ ಕಡಿಮೆ ಎಣ್ಣೆಯನ್ನು ಬಳಸಲು 5 ಸುಲಭ ಮಾರ್ಗಗಳು

Published On - 9:06 am, Thu, 17 March 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ