AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Price Today: ಮೂರ್ನಾಲ್ಕು ದಿನಗಳಿಂದ ಚಿನ್ನದ ಬೆಲೆ ಇಳಿಕೆ; ಇಂದಿನ ಬೆಳ್ಳಿ ದರ ಹೀಗಿದೆ

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

Gold Price Today: ಮೂರ್ನಾಲ್ಕು ದಿನಗಳಿಂದ ಚಿನ್ನದ ಬೆಲೆ ಇಳಿಕೆ; ಇಂದಿನ ಬೆಳ್ಳಿ ದರ ಹೀಗಿದೆ
ಚಿನ್ನದ ಆಭರಣ
TV9 Web
| Edited By: |

Updated on: Mar 17, 2022 | 6:05 AM

Share

ಬೆಂಗಳೂರು: ಹಲವು ನಗರಗಳಲ್ಲಿ ಚಿನ್ನದ ಬೆಲೆ ಗಗನಕ್ಕೇರಿತ್ತು. ಆದರೆ, ಇದೀಗ ನಾಲ್ಕೈದು ದಿನಗಳಿಂದ ಬಂಗಾರದ ದರ ಕಡಿಮೆಯಾಗುತ್ತಲೇ ಇದೆ. ಇಂದು ಕೂಡ 10 ಗ್ರಾಂ ಚಿನ್ನಕ್ಕೆ 330 ರೂ. ಕುಸಿತವಾಗಿದೆ. ಭಾರತದಲ್ಲಿ ಬೆಳ್ಳಿಯ ಬೆಲೆ ಕೂಡ (Silver Price) ನಿನ್ನೆಗಿಂತಲೂ ಇಂದು 1,100 ರೂ. ಇಳಿಕೆ ಕಂಡಿದೆ. ನೀವೇನಾದರೂ ಬಂಗಾರ ಖರೀದಿಸುವವರಾದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದ ಅನೇಕ ನಗರಗಳಲ್ಲಿ 4 ದಿನಗಳಿಂದ ಚಿನ್ನದ ಬೆಲೆ ಕುಸಿತವಾಗಿದೆ. ನಿನ್ನೆ ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,600 ರೂ. ಇದ್ದುದು ಇಂದು 47,300 ರೂ.ಗೆ ಕುಸಿತ ಕಂಡಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,930 ರೂ. ಇದ್ದುದು 51,600 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,920 ರೂ. ಮುಂಬೈ- 47,300 ರೂ, ದೆಹಲಿ- 47,300 ರೂ, ಕೊಲ್ಕತ್ತಾ- 47,300 ರೂ, ಬೆಂಗಳೂರು- 47,300 ರೂ, ಹೈದರಾಬಾದ್- 47,300 ರೂ, ಕೇರಳ- 47,300 ರೂ, ಪುಣೆ- 47,30 ರೂ, ಮಂಗಳೂರು- 47,300 ರೂ, ಮೈಸೂರು- 47,300 ರೂ. ಇದೆ.

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 52,280 ರೂ, ಮುಂಬೈ- 51,600 ರೂ, ದೆಹಲಿ- 51,600 ರೂ, ಕೊಲ್ಕತ್ತಾ- 51,600 ರೂ, ಬೆಂಗಳೂರು- 51,600 ರೂ, ಹೈದರಾಬಾದ್- 51,600 ರೂ, ಕೇರಳ- 51,600 ರೂ, ಪುಣೆ- 51,650 ರೂ, ಮಂಗಳೂರು- 51,600 ರೂ, ಮೈಸೂರು- 51,600 ರೂ. ಇದೆ.

ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಚಿನ್ನದ ಬೆಲೆ ಏರಿಕೆಯಾಗುತ್ತಿದ್ದರೆ ಬೆಳ್ಳಿ ಬೆಲೆ (Silver Price) ಇಳಿಮುಖವಾಗಿದೆ.

ಇಂದಿನ ಬೆಳ್ಳಿಯ ದರ: ಒಂದೇ ದಿನದಲ್ಲಿ ಬೆಳ್ಳಿ ಬೆಲೆ 1,100 ರೂ. ಕುಸಿತ ಕಂಡಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 69,000 ರೂ. ಇದ್ದುದು 67,900 ರೂ. ಆಗಿದೆ. ದಾಖಲೆಯ ಮಟ್ಟಕ್ಕೇರಿದ್ದ ಬೆಳ್ಳಿ ಬೆಲೆ ಒಂದೇ ದಿನದಲ್ಲಿ ಭಾರೀ ಕುಸಿತ ಕಂಡಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 72,300 ರೂ, ಮೈಸೂರು- 72,300 ರೂ., ಮಂಗಳೂರು- 72,300 ರೂ., ಮುಂಬೈ- 67,900 ರೂ, ಚೆನ್ನೈ- 72,300 ರೂ, ದೆಹಲಿ- 67,900 ರೂ, ಹೈದರಾಬಾದ್- 72,300 ರೂ, ಕೊಲ್ಕತ್ತಾ- 67,900 ರೂ. ಇದೆ.

ಇದನ್ನೂ ಓದಿ: Gold Price Today: 3 ದಿನಗಳಿಂದ ಸತತವಾಗಿ ಚಿನ್ನದ ಬೆಲೆ ಕುಸಿತ; ಬೆಳ್ಳಿ ದರದಲ್ಲೂ ಮತ್ತೆ ಇಳಿಕೆ

Gold Rate: ಇಂದು ಆಭರಣ ಖರೀದಿಸುವವರು ಚಿನ್ನ, ಬೆಳ್ಳಿ ದರ ಎಷ್ಟಿದೆ ಅಂತ ನೋಡಿ

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!