Gold Rate: ಇಂದು ಆಭರಣ ಖರೀದಿಸುವವರು ಚಿನ್ನ, ಬೆಳ್ಳಿ ದರ ಎಷ್ಟಿದೆ ಅಂತ ನೋಡಿ

Gold Rate: ಇಂದು ಆಭರಣ ಖರೀದಿಸುವವರು ಚಿನ್ನ, ಬೆಳ್ಳಿ ದರ ಎಷ್ಟಿದೆ ಅಂತ ನೋಡಿ
ಚಿನ್ನದ ಬಳೆಗಳು

Gold Silver Price Today: ಬೆಂಗಳೂರಿನಲ್ಲಿ ಚಿನ್ನದ ಬೆಲೆ ನಿನ್ನೆ ಇದ್ದಷ್ಟೇ ಇದೆ. 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,990 ರೂ. ಇದೆ. ಇದೇ ಚಿನ್ನ 100 ಗ್ರಾಂಗೆ 4,49,900 ರೂಪಾಯಿ ದರ ನಿಗದಿಯಾಗಿದೆ. 24 ಕ್ಯಾರೆಟ್ 10 ಗ್ರಾಂಗೆ 49,090 ರೂಪಾಯಿ ಇದೆ.

TV9kannada Web Team

| Edited By: sandhya thejappa

Jan 18, 2022 | 9:13 AM

ಸದ್ಯ ರಾಜ್ಯದಲ್ಲಿ ಕೊರೊನಾ (Coronavirus) ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಕರ್ನಾಟಕ ಸರ್ಕಾರ ಕೊರೊನಾ ವಿರುದ್ಧ ಹೋರಾಡಲು ಕಠಿಣ ನಿಯಮಗಳನ್ನ ಜಾರಿಗೆ ತಂದಿದೆ. ಈ ನಡುವೆ ಸರ್ಕಾರ ಮತ್ತೆ ಲಾಕ್​ಡೌನ್ ಜಾರಿಗೊಳಿಸುತ್ತಾ ಎಂಬ ಆತಂಕ ಜನರಲ್ಲಿ ಮೂಡಿದೆ. ಇದೇನೇ ಇರಲಿ. ಸದ್ಯ ರಾಜ್ಯದಲ್ಲಿ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಇದರ ಮದ್ಯೆ ನಿಗದಿತ ಜನ ಸೇರಿ ಮದುವೆ ಸೇರಿದಂತೆ ಇತರೆ ಸಮಾರಂಭಗಳನ್ನ ಮಾಡುತ್ತಿದ್ದಾರೆ. ಚಿನ್ನಾಭರಣವನ್ನೂ ಖರೀದಿಸುತ್ತಿದ್ದಾರೆ. ಇಂದು (ಜ.18) ಚಿನ್ನ (Gold price) ಮತ್ತು ಬೆಳ್ಳಿ (Silver Price) ಖರೀದಿಸುವವರಿಗೆ ಇಂದಿನ ದರ ಎಷ್ಟಿದೆ ಅಂತ ಇಲ್ಲಿ ತಿಳಿಸಲಾಗಿದೆ. ಗಮನಿಸಿ.

ಬೆಂಗಳೂರಿನಲ್ಲಿ ಆಭರಣದ ಬೆಲೆ ಎಷ್ಟಿದೆ? ((Bangalore Gold Price)                                                                            ಬೆಂಗಳೂರಿನಲ್ಲಿ ಚಿನ್ನದ ಬೆಲೆ ನಿನ್ನೆ ಇದ್ದಷ್ಟೇ ಇದೆ. 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,990 ರೂ. ಇದೆ. ಇದೇ ಚಿನ್ನ 100 ಗ್ರಾಂಗೆ 4,49,900 ರೂಪಾಯಿ ದರ ನಿಗದಿಯಾಗಿದೆ. 24 ಕ್ಯಾರೆಟ್ 10 ಗ್ರಾಂಗೆ 49,090 ರೂಪಾಯಿ ಇದೆ. 24 ಕ್ಯಾರೆಟ್ 100 ಗ್ರಾಂಗೆ 4,90,900 ರೂಪಾಯಿ ದರ ನಿಗದಿಯಾಗಿದೆ. ನಗರದಲ್ಲಿ ಒಂದು ಕೆಜಿ ಬೆಳ್ಳಿಗೆ 65,500 ರೂ. ಇದೆ. ನಿನ್ನೆಯೂ ಇಷ್ಟೇ ದರ ನಿಗದಿಯಾಗಿತ್ತು.

ಮುಂಬೈನಲ್ಲಿ ಆಭರಣದ ಬೆಲೆ ಹೀಗಿದೆ (Mumbai Gold Price)                                                                                         ಮುಂಬೈನಲ್ಲೂ ಆಭರಣದ ಬೆಲೆ ನಿನ್ನೆ ಇದ್ದಷ್ಟೇ ಇದೆ. 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,090 ರೂ. ಇದ್ದರೆ, 100 ಗ್ರಾಂಗೆ 4,70,900 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 49,090 ರೂ. ಇದೆ. ಇನ್ನು ಇದೇ ಚಿನ್ನ 100 ಗ್ರಾಂಗೆ 4,90,900 ರೂಪಾಯಿ ನಿಗದಿಯಾಗಿದೆ. ಇಂದು ಒಂದು ಕೆಜಿ ಬೆಳ್ಳಿಗೆ 300 ರೂಪಾಯಿ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿಗೆ 61,700 ರೂ. ಇದ್ದ ದರ 62,000 ರೂ. ಆಗಿದೆ.

ದೆಹಲಿಯಲ್ಲಿ ಚಿನ್ನ, ಬೆಳ್ಳಿ ದರ ಹೇಗಿದೆ? (Delhi Gold Price)                                                                                                              ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಭರಣದ ಬೆಲೆ ಹೀಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,140 ರೂ. ಇದೆ. ಇದೇ ಚಿನ್ನ 100 ಗ್ರಾಂಗೆ 4,71,400 ರೂಪಾಯಿ ಇದೆ. ಇನ್ನು ದೆಹಲಿಯಲ್ಲಿ 24 ಕ್ಯಾರೆಟ್ 10 ಗ್ರಾಂಗೆ 51,430 ರೂ. ನಿಗದಿಯಾಗಿದ್ದರೆ, 100 ಗ್ರಾಂಗೆ 5,14,300 ರೂ. ಇದೆ. ದೆಹಲಿಯಲ್ಲೂ ಬೆಳ್ಳಿ ದರ ನಿನ್ನೆಗಿಂತ ಹೆಚ್ಚಾಗಿದೆ. ಒಂದು ಕೆಜಿ ಬೆಳ್ಳಿಗೆ ನಿನ್ನೆ 61,700 ರೂ. ಇತ್ತು. ಇಂದು 62,000 ರೂಪಾಯಿ ಆಗಿದೆ.

ಇದನ್ನೂ ಓದಿ

ವೀಕೆಂಡ್ ಕರ್ಫ್ಯೂಗೆ ವಿರೋಧ: ಅರಮನೆ ಮೈದಾನದ ವೈಟ್ ಪೆಟಲ್ಸ್​​ನಲ್ಲಿ ಸಾಲುಸಾಲು ಸಭೆ! ವಿರೋಧಕ್ಕೆ ಕಾರಣವೇನು? ವಾಸ್ತವ ಇಲ್ಲಿದೆ

ಕೋವಿಡ್ ಲಸಿಕೆ ಅಭಿಯಾನದಡಿ ಭಾರತ ಮಾಡಿರುವ ಸಾಧನೆಯನ್ನು ಇಡೀ ವಿಶ್ವ ಬೆರಗುಗಣ್ಣುಳಿಂದ ನೋಡುತ್ತಿದೆ!!

Follow us on

Related Stories

Most Read Stories

Click on your DTH Provider to Add TV9 Kannada