ಯುಎವಿ ಶ್ರೇಣಿಯಲ್ಲಿ ವ್ಯಕ್ತಿ ಚಾಲಿತ ಬಾಂಬರ್ ವಿಮಾನ ತಯಾರಿಸಿದ ಮೊದಲ ಭಾರತೀಯ ಕಂಪನಿ ಬೆಂಗಳೂರಿನ ಫ್ಲೈಯಿಂಗ್ ವೆಡ್ಜ್

Flying Wedge FWD 200B Manned Bomber Aircraft: ಅನ್​ಮಾನ್ಡ್ ಏರಿಯಲ್ ವೆಹಿಕಲ್ (ಯುಎವಿ) ತಂತ್ರಜ್ಞಾನದಲ್ಲಿ ಮಾನ್ಡ್ ಬಾಂಬರ್ ವಿಮಾನವೊಂದನ್ನು ಭಾರತದಲ್ಲಿ ತಯಾರಿಸಲಾಗಿದೆ. ಬೆಂಗಳೂರಿನ ಫ್ಲೈಯಿಂಗ್ ವೆಡ್ಜ್ ಸಂಸ್ಥೆ ಇದರ ನಿರ್ಮಾತೃ. ಇಂಥ ಬಾಂಬರ್ ತಯಾರಿಸಿದ ಮೊದಲ ಭಾರತೀಯ ಕಂಪನಿ ಇದು. 800 ಕಿಮೀ ದೂರದವರೆಗೂ ಇದು ಕಾರ್ಯಾಚರಿಸಬಲ್ಲುದು.

ಯುಎವಿ ಶ್ರೇಣಿಯಲ್ಲಿ ವ್ಯಕ್ತಿ ಚಾಲಿತ ಬಾಂಬರ್ ವಿಮಾನ ತಯಾರಿಸಿದ ಮೊದಲ ಭಾರತೀಯ ಕಂಪನಿ ಬೆಂಗಳೂರಿನ ಫ್ಲೈಯಿಂಗ್ ವೆಡ್ಜ್
ಎಫ್​ಡಬ್ಲ್ಯುಡಿ 200ಬಿ ಬಾಂಬರ್ ವಿಮಾನ
Follow us
|

Updated on: Sep 05, 2024 | 4:28 PM

ಬೆಂಗಳೂರು, ಸೆಪ್ಟೆಂಬರ್ 5: ಭಾರತದಲ್ಲೇ ದೇಶೀಯವಾಗಿ ನಿರ್ಮಿತವಾದ ಎಫ್​ಡಬ್ಲ್ಯುಡಿ 200ಬಿ ಎಂಬ ವ್ಯಕ್ತಿ ಚಾಲಿತ ಬಾಂಬರ್ ವಿಮಾನದ ಪ್ರಯೋಗಾರ್ಥ ಹಾರಾಟ ಮೊನ್ನೆ ಯಶಸ್ವಿಯಾಗಿದೆ. ಬೆಂಗಳೂರಿನ ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಅಂಡ್ ಏರೋಸ್ಪೇಸ್ (ಎಫ್​ಡಬ್ಲ್ಯುಡಿಎ) ಸಂಸ್ಥೆ ಈ ಮಾನ್ಡ್ ಬಾಂಬರ್ ಏರ್​ಕ್ರಾಫ್ಟ್ ಅನ್ನು ತಯಾರಿಸಿದೆ. ಯುಎವಿ ತಂತ್ರಜ್ಞಾನ ಬಳಸಿ ವ್ಯಕ್ತಿ ಚಾಲಿತವಾದ ಬಾಂಬರ್ ವಿಮಾನ ತಯಾರಿಸಿದ ಭಾರತದ ಮೊದಲ ಕಂಪನಿ ಎನ್ನುವ ದಾಖಲೆ ಫ್ಲೈಯಿಂಗ್ ವೆಡ್ಜ್​ನದ್ದಾಗಿದೆ.

ಎಫ್​ಡಬ್ಲ್ಯುಡಿ 200 ಬಿ ವಿಮಾನದ ವಿಶೇಷತೆಗಳೇನು?

ಫ್ಲೈಯಿಂಗ್ ವೆಡ್ಜ್ ಸಂಸ್ಥೆ ತಯಾರಿಸಿದ ಈ ಬಾಂಬರ್ ವಿಮಾನ ಅನ್​ಮಾನ್ಡ್ ಏರಿಯಲ್ ವೆಹಿಕಲ್ ಅಥವಾ ಡ್ರೋನ್ ತಂತ್ರಜ್ಞಾನದ ಸುಧಾರಿತ ರೂಪ. 30 ಕಿಲೋ ತೂಕ ಹೊತ್ತು ಹೋಗಬಲ್ಲುದು. ಗರಿಷ್ಠ ತೂಕ 102 ಕಿಲೋ ಇರುತ್ತದೆ. ಅಂದರೆ ಒಬ್ಬ ವ್ಯಕ್ತಿಯೂ ಸೇರಿ ಒಟ್ಟು ಲೋಡ್ 102 ಕಿಲೋವರೆಗೂ ಇರಬಹುದು. ಇದರ ಉದ್ದ 3.5 ಮೀಟರ್ಸ್ ಇದೆ. ಇದರ ರೆಕ್ಕೆ ವಿಸ್ತಾರ 5 ಮೀಟರ್ ಇದೆ.

ಎಫ್​ಡಿಬ್ಲ್ಯುಡಿ 200ಬಿ ಬಾಂಬರ್ ವಿಮಾನವು ಗಂಟೆಗೆ 250 ಕಿಮೀವರೆಗೂ ವೇಗದಲ್ಲಿ ಸಾಗಬಲ್ಲುದು. ಇದು ಹಾರಾಟ ಆರಂಭಿಸಲು 300 ಮೀಟರ್ ರನ್​ವೇ ಇದ್ದರೆ ಸಾಕು.

ಇದನ್ನೂ ಓದಿ: ಜಾಗತಿಕ ವಿಮಾನ ಉತ್ಪಾದನೆಗೆ ಭಾರತ ಅಡ್ಡೆಯಾಗಬಲ್ಲುದಾ? ಎಸ್​ಪಿವಿ ತಂಡ ಕಟ್ಟಲಿರುವ ಸರ್ಕಾರ; ಎಚ್​​ಎಎಲ್​ಗೆ ಗುರುತರ ಜವಾಬ್ದಾರಿ

ಗಮನಾರ್ಹ ಸಂಗತಿ ಎಂದರೆ, ಇದೇ ರೀತಿಯ ಮಾನ್ಡ್ ಬಾಂಬರ್ ಏರ್​ಕ್ರಾಫ್ಟ್ ಅನ್ನು ಅಮೆರಿಕದಲ್ಲೂ ತಯಾರಿಸಲಾಗುತ್ತದೆ. ಅದರ ಬೆಲೆ 250 ಕೋಟಿ ರೂ ಆಗಿದೆ. ಇದೇ ವಿಮಾನವನ್ನು ಫ್ಲೈಯಿಂಗ್ ವೆಡ್ಜ್ ಸಂಸ್ಥೆ 150 ಕೋಟಿ ರೂಗೆ ಕೊಡುತ್ತದೆ.

ಏಳು ಗಂಟೆ ಕಾಲ ಕಾರ್ಯಾಚರಿಸಬಲ್ಲುದು

ಎಫ್​ಡಬ್ಲ್ಯುಡಿ 200ಬಿ ಬಾಂಬರ್​ನ ಕಾರ್ಯಾಚರಣೆ ಶ್ರೇಣಿ ಬರೋಬ್ಬರಿ 800 ಕಿಮೀ ದೂರದವರೆಗೂ ಸಾಧ್ಯ ಇದೆ. ಗಂಟೆಗೆ 250 ಕಿಮೀ ವೇಗದಲ್ಲಿ ಇದು ಸಾಗುತ್ತದೆ. ಒಮ್ಮೆ ಇಂಧನ ತುಂಬಿಸಿದರೆ ಏಳು ಗಂಟೆ ಕಾಲ ನಿರಂತರವಾಗಿ ಹಾರಬಲ್ಲುದು.

ಇದನ್ನೂ ಓದಿ: ಭಾರತದಲ್ಲಿ ಹೂಡಿಕೆ ಎರಡು ಪಟ್ಟು ಹೆಚ್ಚಿಸುತ್ತೇವೆ: ಸಿಂಗಾಪುರದ ಕ್ಯಾಪಿಟಲ್ಯಾಂಡ್ ಸಂಸ್ಥೆ ಘೋಷಣೆ

ಬೆಂಗಳೂರಿನ ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಏರೋಸ್ಪೇಸ್ ಕಂಪನಿ

ಫ್ಲೈಯಿಂಗ್ ವೆಡ್ಜ್ ಸಂಸ್ಥೆ ಬೆಂಗಳೂರಿನ ಮೂಲದ್ದಾಗಿದ್ದು ಇದರ ಸಿಇಒ ಸುಹಾಸ್ ತೇಜಸ್​ಕಂಡ್. ವಿವಿಧ ರೀತಿಯ ಡ್ರೋನ್​ಗಳನ್ನು ಇದು ತಯಾರಿಸುತ್ತದೆ. ನರಕಾಯನ್, ರುದ್ರ, ವಿಜಯ್ ಎನ್ನುವ ವಿವಿಧ ವೈಮಾನಿಕ ಉತ್ಪನ್ನಗಳನ್ನು ಇದು ತಯಾರಿಸುತ್ತದೆ. ಕೃಷಿಗಾರಿಕೆಗೆ ಸಹಾಯವಾಗುವ ವ್ಯೂಹ ಎನ್ನುವ ಡ್ರೋನ್ ಕೂಡ ಇದೆ. ಇದರ ಆ್ಯಪ್​ನಲ್ಲಿ ಜಮೀನಿನ ಸ್ಥಳ ನೀಡಿದರೆ ಆ ಜಮೀನಿಗೆ ಹೋಗಿ ಸ್ಪ್ರೇ ಮಾಡಿ ಬರಬಲ್ಲುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ