AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Diesel Price on September 06: ಮಹಾರಾಷ್ಟ್ರ, ಬಿಹಾರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಸೆಪ್ಟೆಂಬರ್ 6, ಶುಕ್ರವಾರದ ಪೆಟ್ರೋಲ್, ಡೀಸೆಲ್ ದರಗಳನ್ನು ಬಿಡುಗಡೆ ಮಾಡಿವೆ. ಇಂದು ಬ್ರೆಂಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 72.99 ಡಾಲರ್​ ಮತ್ತು WTI ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 69.36 ಡಾಲರ್​ ತಲುಪಿದೆ. ಇದು ಕಳೆದ ಕೆಲವು ದಿನಗಳಿಗಿಂತ ತೀರಾ ಕಡಿಮೆ. ಕೆಲವೆಡೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ.

Petrol Diesel Price on September 06: ಮಹಾರಾಷ್ಟ್ರ, ಬಿಹಾರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
ಪೆಟ್ರೋಲ್Image Credit source: The Economic Times
ನಯನಾ ರಾಜೀವ್
|

Updated on: Sep 06, 2024 | 7:16 AM

Share

ಬಿಹಾರ, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಇಂದು ಪೆಟ್ರೋಲ್ ಮತ್ತು ಡೀಸೆಲ್ ದುಬಾರಿಯಾಗಿದೆ. ಇಂದು ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ಡೀಸೆಲ್ ದರಗಳು ಅಗ್ಗವಾಗಿವೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಇತ್ತೀಚಿನ ಬೆಲೆಗಳು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 94.72 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 87.62 ರೂ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 103.44 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 89.97 ರೂ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 104.95 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 91.76 ರೂ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಡೀಸೆಲ್ ದರ 88.95 ರೂ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 100.85 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 92.44 ರೂ.

ಬಿಹಾರದಲ್ಲಿ ಪೆಟ್ರೋಲ್ ಬೆಲೆ 48 ಪೈಸೆ ಮತ್ತು ಡೀಸೆಲ್ 45 ಪೈಸೆ ಹೆಚ್ಚಾಗಿದೆ

ಬಿಹಾರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದುಬಾರಿಯಾಗಿದೆ. ಬಿಹಾರದಲ್ಲಿ ಪೆಟ್ರೋಲ್ (ಬಿಹಾರದಲ್ಲಿ ಇಂದು ಪೆಟ್ರೋಲ್ ಬೆಲೆ) ಲೀಟರ್‌ಗೆ 43 ಪೈಸೆ ಏರಿಕೆಯಾಗಿ 107.60 ರೂ.ಗೆ ಮತ್ತು ಡೀಸೆಲ್ (ಬಿಹಾರದಲ್ಲಿ ಡೀಸೆಲ್ ಬೆಲೆ) ಲೀಟರ್‌ಗೆ 40 ಪೈಸೆ ಏರಿಕೆಯಾಗಿ 94.29 ರೂ. ಇದಲ್ಲದೇ ಯುಪಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 6 ಪೈಸೆ ಏರಿಕೆಯಾಗಿ 94.57 ರೂ.ಗೆ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 7 ಪೈಸೆ ಏರಿಕೆಯಾಗಿ 87.64 ರೂ.ಗೆ ತಲುಪಿದೆ.

ಅದೇ ಸಮಯದಲ್ಲಿ, ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಬೆಲೆ (ಮಹಾರಾಷ್ಟ್ರದಲ್ಲಿ ಇಂದು ಪೆಟ್ರೋಲ್ ಬೆಲೆ) ಲೀಟರ್‌ಗೆ 72 ಪೈಸೆ ಏರಿಕೆಯಾಗಿ 104.59 ರೂ.ಗೆ ಮತ್ತು ಡೀಸೆಲ್ (ಮಹಾರಾಷ್ಟ್ರದಲ್ಲಿ ಇಂದು ಡೀಸೆಲ್ ಬೆಲೆ) ಲೀಟರ್‌ಗೆ 69 ಪೈಸೆ ಏರಿಕೆಯಾಗಿ 91.11 ರೂ.ಗೆ ತಲುಪಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿನ ಏರಿಳಿತಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಬೆಲೆಗಳು, ಸರ್ಕಾರದ ಅಬಕಾರಿ ಸುಂಕದಲ್ಲಿನ ಬದಲಾವಣೆಗಳು, ಜಾಗತಿಕ ಭೌಗೋಳಿಕ ರಾಜಕೀಯ ಘಟನೆಗಳು ಮತ್ತು ಜಾಗತಿಕ ಆರ್ಥಿಕತೆ ಇತ್ಯಾದಿಗಳಂತಹ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ.

ಮತ್ತಷ್ಟು ಓದಿ:Petrol Diesel Price on September 05: ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

ಹೆಚ್ಚುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಜನಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತಿದೆ. ದುಬಾರಿ ಇಂಧನದಿಂದಾಗಿ, ಸಾರಿಗೆ ವೆಚ್ಚಗಳು ಹೆಚ್ಚಾಗುತ್ತವೆ, ಇದು ಆಹಾರ ಪದಾರ್ಥಗಳು ಮತ್ತು ಇತರ ಸರಕುಗಳ ಬೆಲೆಗಳನ್ನು ಹೆಚ್ಚಿಸುತ್ತದೆ. ಇದಲ್ಲದೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಹಣದುಬ್ಬರವೂ ಹೆಚ್ಚಾಗಬಹುದು.

ಹೈದರಾಬಾದ್‌ನಲ್ಲಿ ಇಂದು ಪೆಟ್ರೋಲ್ ಬೆಲೆ 107.41 ರೂ ಮತ್ತು ಡೀಸೆಲ್ ಬೆಲೆ ಇಂದು ಲೀಟರ್‌ಗೆ 95.65 ರೂ., ಗುರುಗ್ರಾಮ್‌ನಲ್ಲಿ ಇಂದು ಪೆಟ್ರೋಲ್ ಬೆಲೆ 95.11 ರೂ ಮತ್ತು ಡೀಸೆಲ್ ಬೆಲೆ ಇಂದು ಲೀಟರ್‌ಗೆ 87.97 ರೂ.,ಲಕ್ನೋದಲ್ಲಿ ಇಂದು ಪೆಟ್ರೋಲ್ ಬೆಲೆ 94.53 ರೂ ಮತ್ತು ಡೀಸೆಲ್ ಬೆಲೆ ಇಂದು ಲೀಟರ್‌ಗೆ 87.62 ರೂ.,ಅಹಮದಾಬಾದ್‌ನಲ್ಲಿ ಇಂದು ಪೆಟ್ರೋಲ್ ಬೆಲೆ 94.43 ರೂ ಮತ್ತು ಡೀಸೆಲ್ ಬೆಲೆ ಇಂದು ಲೀಟರ್‌ಗೆ 90.10 ರೂ ಆಗಿದೆ.

ಪೆಟ್ರೋಲ್, ಡೀಸೆಲ್ ನಿಖರ ಬೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಜೈಪುರದಲ್ಲಿ ಇಂದು ಪೆಟ್ರೋಲ್ ಬೆಲೆ 104.88 ರೂ ಮತ್ತು ಡೀಸೆಲ್ ಬೆಲೆ ಇಂದು ಲೀಟರ್‌ಗೆ 90.36 ರೂ., ಥಾಣೆಯಲ್ಲಿ ಇಂದು ಪೆಟ್ರೋಲ್ ಬೆಲೆ 103.74 ರೂ ಮತ್ತು ಡೀಸೆಲ್ ಬೆಲೆ ಇಂದು ಲೀಟರ್‌ಗೆ 90.25 ರೂ.,ಸೂರತ್‌ನಲ್ಲಿ ಇಂದು ಪೆಟ್ರೋಲ್ ಬೆಲೆ 94.45 ರೂ ಮತ್ತು ಡೀಸೆಲ್ ಬೆಲೆ ಇಂದು ಲೀಟರ್‌ಗೆ 90.14 ರೂ.ಪುಣೆಯಲ್ಲಿ ಇಂದು ಪೆಟ್ರೋಲ್ ಬೆಲೆ 104.02 ರೂ ಮತ್ತು ಡೀಸೆಲ್ ಬೆಲೆ ಇಂದು ಲೀಟರ್‌ಗೆ 90.55 ರೂ. ಇದೆ.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಛತ್ತೀಸ್​ಗಢ: 48 ಗಂಟೆಗಳ ಮಳೆಗೆ ಕುಸಿದ ಬೆಟ್ಟ
ಛತ್ತೀಸ್​ಗಢ: 48 ಗಂಟೆಗಳ ಮಳೆಗೆ ಕುಸಿದ ಬೆಟ್ಟ
ಲಾರಿ ಅಡ್ಡಗಟ್ಟಿದ ಗಜಪಡೆ: ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ!
ಲಾರಿ ಅಡ್ಡಗಟ್ಟಿದ ಗಜಪಡೆ: ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ!
'ಮನೆಯಲ್ಲಿ ಅಮ್ಮ ಇರಲಿಲ್ಲ, ಹೀಗಾಗಿ ಬರೋದು ತಡವಾಯ್ತು': ಸಚಿವ ಯತೀಂದ್ರ
'ಮನೆಯಲ್ಲಿ ಅಮ್ಮ ಇರಲಿಲ್ಲ, ಹೀಗಾಗಿ ಬರೋದು ತಡವಾಯ್ತು': ಸಚಿವ ಯತೀಂದ್ರ