BSNL 4G Offer: ದಿನಕ್ಕೆ 3ಜಿಬಿ ಡಾಟಾ, ತಿಂಗಳಿಗೆ ಕೇವಲ 214 ರೂ; ಬಿಎಸ್ಸೆನ್ನೆಲ್ ರೀಚಾರ್ಜ್ ಆಫರ್​ಗೆ ಇಲ್ಲ ಸಾಟಿ

BSNL recharge offer: ಬಿಎಸ್​ಎನ್​ಎಲ್ ಸಂಸ್ಥೆ ಈಗ 4ಜಿ ಸರ್ವಿಸ್ ಒದಗಿಸುತ್ತಿದೆ. ಅದರ ರೀಚಾರ್ಜ್ ಪ್ಲಾನ್​ಗಳೆಲ್ಲವೂ ಅಗ್ಗದ ದರದ್ದಾಗಿವೆ. ಅದರ 599 ರೂ ಪ್ಲಾನ್ 84 ದಿನ ವ್ಯಾಲಿಡಿಟಿ ಇದ್ದು, ದಿನಕ್ಕೆ 3ಜಿಬಿ ಡಾಟಾ ಬಳಕೆಗೆ ಅವಕಾಶ ಇದೆ. 2025ರಷ್ಟರಲ್ಲಿ ಅದು 5ಜಿ ನೆಟ್ವರ್ಕ್ ಅಳವಡಿಸುವ ಸಾಧ್ಯತೆ ಇದೆ.

BSNL 4G Offer: ದಿನಕ್ಕೆ 3ಜಿಬಿ ಡಾಟಾ, ತಿಂಗಳಿಗೆ ಕೇವಲ 214 ರೂ; ಬಿಎಸ್ಸೆನ್ನೆಲ್ ರೀಚಾರ್ಜ್ ಆಫರ್​ಗೆ ಇಲ್ಲ ಸಾಟಿ
ಬಿಎಸ್ಸೆನ್ನೆಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 05, 2024 | 1:48 PM

ರಿಲಾಯನ್ಸ್ ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಸಂಸ್ಥೆಗಳಂತೆ ಬಿಎಸ್ಸೆನ್ನೆಲ್ 5ಜಿ ಸರ್ವಿಸ್ ಕೊಡಲು ಸಾಧ್ಯವಾಗದೇ ಇರಬಹುದು. ಆದರೆ, 3ಜಿ ಮತ್ತು 4ಜಿ ನೆಟ್ವರ್ಕ್ ಅನ್ನು ಬಿಎಸ್ಸೆನ್ನೆಲ್ ಆಫರ್ ಮಾಡುತ್ತಿದೆ. ದೇಶಾದ್ಯಂತ 4ಜಿ ಅಳವಡಿಕೆಗೆ ಇದು ಯೋಜನೆ ಹಾಕಿದೆ. ಜಿಯೋ, ಏರ್ಟೆಲ್, ವಿಐ ಸಂಸ್ಥೆಗಳು ರೀಚಾರ್ಜ್ ದರಗಳನ್ನು ಸಿಕ್ಕಾಪಟ್ಟೆ ಏರಿಸಿವೆ. ಇದೇ ಹೊತ್ತಲ್ಲಿ ಬಿಎಸ್ಸೆನ್ನೆಲ್ ಬಹಳ ಅಗ್ಗದ ಬೆಲೆಗೆ 4ಜಿ ಸರ್ವಿಸ್ ದರ ಆಫರ್ ಮಾಡುತ್ತಿದೆ. ವರ್ಷಗಳ ಹಿಂದೆ ಪ್ರತಿಸ್ಪರ್ಧಿಗಳ ಪಾಲಾದ ತನ್ನ ಬಳಕೆದಾರರನ್ನು ಮರಳಿ ಗಿಟ್ಟಿಸಲು ಬಿಎಸ್ಸೆನ್ನೆಲ್ ಎಲ್ಲಾ ಪಟ್ಟುಗಳನ್ನು ಹಾಕುತ್ತಿದೆ. ಅದರ ಎಲ್ಲಾ ರೀಚಾರ್ಜ್ ದರಗಳೂ ಪ್ರತಿಸ್ಪರ್ಧಿಗಳಿಗಿಂತ ಬಹಳ ಕಡಿಮೆ ಇದೆ.

ದಿನಕ್ಕೆ 3ಜಿಬಿ ಡಾಟಾ ಕೊಡುವ 599 ರೂ ಪ್ಲಾನ್

ದಿನಕ್ಕೆ ಹೆಚ್ಚು ಡಾಟಾ ಅಗತ್ಯ ಇರುವ ಗ್ರಾಹಕರಿಗೆ ಬಿಎಸ್ಸೆನ್ನೆಲ್ ಅಗ್ಗದ ಪ್ಲಾನ್ ಬಿಡುಗಡೆ ಮಾಡಿದೆ. ಅದರ 599 ರೂ ಪ್ಲಾನ್ ಬಹಳ ಲಾಭ ಕೊಡುತ್ತದೆ. ಇದು 84 ದಿನಗಳ ವ್ಯಾಲಿಡಿಟಿ ಹೊಂದಿದೆ. ಹೆಚ್ಚೂಕಡಿಮೆ ಮೂರು ತಿಂಗಳು ಇದನ್ನು ಬಳಸಬಹುದು. 84 ದಿನಗಳ ಕಾಲ ಪ್ರತೀ ದಿನ 3 ಜಿಬಿ ಡಾಟಾ ಪಡೆಯಬಹುದು. ಒಟ್ಟಾರೆ 252 ಜಿಬಿ ಡಾಟಾ ಬಳಸುವ ಅವಕಾಶ ಇರುತ್ತದೆ.

ಇದನ್ನೂ ಓದಿ: Highest Tax Paying Sportsperson: ಅತಿಹೆಚ್ಚು ತೆರಿಗೆ ಕಟ್ಟುವ ಭಾರತೀಯ ಕ್ರಿಕೆಟಿಗರು; ವಿರಾಟ್ ಕೊಹ್ಲಿ ನಂ. 1

84 ದಿನಕ್ಕೆ 599 ರೂ ಎಂದರೆ ಒಂದು ತಿಂಗಳಿಗೆ 214 ರೂ ಬೆಲೆ ಆಗುತ್ತದೆ. ಈ ಪ್ಲಾನ್​ನಲ್ಲಿ ನೀವು ದಿನಕ್ಕೆ 100 ಎಸ್ಸೆಮ್ಮೆಸ್​​ಗಳನ್ನು ಉಚಿತವಾಗಿ ಕಳುಹಿಸಬಹುದು. ಈ 599 ರೂ ರೀಚಾರ್ಜ್ ಪ್ಲಾನ್ ವಿವರವನ್ನು ಬಿಎಸ್ಸೆನ್ನೆಲ್ ತನ್ನ ಸೋಷಿಯಲ್ ಮೀಡಿಯಾ ಪೋಸ್ಟ್​ನಲ್ಲಿ ತಿಳಿಸಿದೆ.

5ಜಿ ಸರ್ವಿಸ್ ಕೊಡಲು ಬಿಎಸ್ಸೆನ್ನೆಲ್ ಸಜ್ಜು

ಒಂದು ಕಾಲದಲ್ಲಿ ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿದ್ದ ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ತನ್ನ ಅಸ್ತಿತ್ವ ಕಳೆದುಕೊಂಡಿತು ಎಂದೇ ಭಾವಿಸಿದ್ದರು. ಇತ್ತೀಚೆಗೆ ಅದು ಫೀನಿಕ್ಸ್​ನಂತೆ ಮೇಲೇರಲು ಯತ್ನಿಸುತ್ತಿದೆ. 3ಜಿ ಮತ್ತು 4ಜಿ ಸರ್ವಿಸ್ ಕೊಡಲು ಆರಂಭಿಸಿದೆ. ಬಹಳಷ್ಟು ಗ್ರಾಹಕರು ಬಿಎಸ್ಸೆನ್ನೆಲ್ ಕಡೆ ವಲಸೆ ಹೋಗಿದ್ದಾರೆ.

ಇದನ್ನೂ ಓದಿ: ತಪ್ಪದೇ ಗಮನಿಸಿ; ಒಂದಕ್ಕಿಂತ ಹೆಚ್ಚು ಖಾತೆ ಹೊಂದಿರುವುದೂ ಸೇರಿ ಪಿಪಿಎಫ್ ಯೋಜನೆಯ 3 ನಿಯಮಗಳಲ್ಲಿ ಮಾರ್ಪಾಡು; ಅ. 1ರಿಂದ ಜಾರಿ

ಇದೇ ಹೊತ್ತಲ್ಲಿ 2025ರಷ್ಟರಲ್ಲಿ ಬಿಎಸ್ಸೆನ್ನೆಲ್ 5ಜಿ ಸರ್ವಿಸ್ ಆಫರ್ ಮಾಡುವ ನಿರೀಕ್ಷೆ ಇದೆ. ಅದಕ್ಕೆ ಬೇಕಾದ ಮೂಲಸೌಕರ್ಯಗಳನ್ನು ನಿರ್ಮಿಸಲು ಯೋಜನೆ ಹಾಕಿದೆ. ಸರ್ಕಾರದಿಂದಲೂ ಅನುದಾನ ಬಿಡುಗಡೆ ಆಗುತ್ತಿದೆ. ಬಿಎಸ್ಸೆನ್ನೆಲ್​ಗೆ 4ಜಿ ನೆಟ್ವರ್ಕ್ ಅಳವಡಿಕೆ ಮಾಡಿದ್ದ ಟಿಸಿಎಸ್​ನಿಂದಲೇ 5ಜಿ ನೆಟ್ವರ್ಕ್ ಸಿದ್ಧಗೊಳ್ಳಲಿದೆ. 4ಜಿ ನೆಟ್ವರ್ಕ್ ಅಳವಡಿಸುವಾಗಲೇ 5ಜಿಗೆ ಪರಿವರ್ತನೆಯಾಗುವ ರೀತಿಯಲ್ಲಿ ನಿರ್ಮಿಸಲಾಗಿತ್ತು. ಹೀಗಾಗಿ, 5ಜಿ ಅಳವಡಿಕೆಗೆ ಬಿಎಸ್ಸೆನ್ನೆಲ್​ಗೆ ಹೆಚ್ಚಿನ ವೆಚ್ಚ ಮಾಡುವ ಅವಶ್ಯಕತೆ ಇರುವುದಿಲ್ಲ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ