ಜಾಗತಿಕ ವಿಮಾನ ಉತ್ಪಾದನೆಗೆ ಭಾರತ ಅಡ್ಡೆಯಾಗಬಲ್ಲುದಾ? ಎಸ್​ಪಿವಿ ತಂಡ ಕಟ್ಟಲಿರುವ ಸರ್ಕಾರ; ಎಚ್​​ಎಎಲ್​ಗೆ ಗುರುತರ ಜವಾಬ್ದಾರಿ

India plans to manufacture planes indigenously: ಬೋಯಿಂಗ್ ಮತ್ತು ಏರ್​ಬಸ್ ಪ್ರಾಬಲ್ಯ ಇರುವ ವಿಮಾನ ತಯಾರಿಕಾ ಕ್ಷೇತ್ರಕ್ಕೆ ಹೆಜ್ಜೆ ಇರಿಸಲು ಸರ್ಕಾರ ನಿರ್ಧರಿಸಿದೆ. ಭಾರತದಲ್ಲೇ ಸಂಪೂರ್ಣ ವಿಮಾನ ತಯಾರಿಕೆಯ ಸೌಲಭ್ಯ ನಿರ್ಮಾಣವಾಗಲಿದೆ. ಭಾರತಕ್ಕೆ ಅಗತ್ಯ ಇರುವ ವಿಮಾನಗಳನ್ನು ಪೂರೈಸಲು ಮಾತ್ರವಲ್ಲ, ಬೇರೆಡೆ ರಫ್ತು ಮಾಡಲು ಭಾರತ ಯೋಜಿಸುತ್ತಿದೆ.

ಜಾಗತಿಕ ವಿಮಾನ ಉತ್ಪಾದನೆಗೆ ಭಾರತ ಅಡ್ಡೆಯಾಗಬಲ್ಲುದಾ? ಎಸ್​ಪಿವಿ ತಂಡ ಕಟ್ಟಲಿರುವ ಸರ್ಕಾರ; ಎಚ್​​ಎಎಲ್​ಗೆ ಗುರುತರ ಜವಾಬ್ದಾರಿ
ವಿಮಾನ ತಯಾರಿಕೆ
Follow us
|

Updated on: Sep 05, 2024 | 10:53 AM

ನವದೆಹಲಿ, ಸೆಪ್ಟೆಂಬರ್ 5: ಸೆಮಿಕಂಡಕ್ಟರ್ ಉತ್ಪಾದನೆಗೆ ಹೆಜ್ಜೆ ಇಟ್ಟಿರುವ ರೀತಿಯಲ್ಲಿ ವಿಮಾನಗಳ ತಯಾರಿಕೆಗೂ ಭಾರತ ಸಾಹಸಕ್ಕೆ ಕೈಹಾಕಲು ನಿರ್ಧರಿಸಿದಂತಿದೆ. ಭಾರತದಲ್ಲಿ ವಿಮಾನಗಳ ತಯಾರಿಕೆ (Aircraft manufacturing) ಕಾರ್ಯವನ್ನು ಶೀಘ್ರದಲ್ಲೇ ಆರಂಭಿಸುವುದಾಗಿ ಕೇಂದ್ರ ವಿಮಾನಯಾನ ಸಚಿವ ಕೆ ರಾಮಮೋಹನ್ ನಾಯ್ಡು ಹೇಳಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿನ್ನೆ ನಡೆದ ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದ ಅವರು, ಏರ್​ಕ್ರಾಫ್ಟ್ ಮ್ಯಾನುಫ್ಯಾಕ್ಚರಿಂಗ್​ನಲ್ಲಿ ಭಾರತವನ್ನು ವಿಶ್ವದ ಅಡ್ಡೆಯನ್ನಾಗಿ ಮಾಡುವ ಗುರಿ ಇದೆ ಎಂದಿದ್ದಾರೆ. ಇದಕ್ಕಾಗಿ ಸ್ಪೆಷಲ್ ಪರ್ಪೋಸ್ ವೆಹಿಕಲ್ (ಎಸ್​​ಪಿವಿ) ಮೂಲಕ ಒಂದು ವಿಶೇಷ ತಂಡವನ್ನು ರಚಿಸುವ ಪ್ಲಾನ್ ಹೊಂದಿರುವುದನ್ನೂ ಅವರು ತಿಳಿಸಿದ್ದಾರೆ.

ವಿಶ್ವದಲ್ಲಿ ಬಹುತೇಕ ವಿಮಾನಗಳನ್ನು ತಯಾರಿಸುವುದು ಬೋಯಿಂಗ್ ಮತ್ತು ಏರ್​ಬಸ್ ಕಂಪನಿಗಳು. ಭಾರತದ ವಿಮಾನ ಸಂಸ್ಥೆಗಳ ಬಳಿ ಇರುವ ಎಲ್ಲಾ ವಿಮಾನಗಳು ಬೋಯಿಂಗ್ ಅಥವಾ ಏರ್​​ಬಸ್ ಕಂಪನಿಗಳದ್ದೇ ಆಗಿವೆ. ಹೆಚ್ಚಿನವನ್ನು ಎರವಲು ಪಡೆದುಕೊಂಡು ಸೇವೆಗೆ ಬಳಸಲಾಗಿದೆ. ಈಗ ಭಾರತದಲ್ಲೇ ದೇಶೀಯವಾಗಿ ವಿಮಾನಗಳನ್ನು ನಿರ್ಮಾಣ ಮಾಡುವ ಗುರಿ ಸರ್ಕಾರಕ್ಕಿದೆ. ಇದರಿಂದ ಸಾಕಷ್ಟು ಹಣ ಉಳಿತಾಯವಾಗುವ ನಿರೀಕ್ಷೆ ಇದೆ. ಹಾಗೂ ವೈಮಾನಿಕ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಸಾಧಿಸುವ ಸಂಭವ ಇದೆ.

ಭಾರತದಲ್ಲಿ ವಿಮಾನ ತಯಾರಿಕೆ ಕಾರ್ಯಕ್ಕೆ ಹಲವು ಸವಾಲುಗಳಿವೆ. ಯಾವ ಭಾರತೀಯ ಕಂಪನಿಗಳಿಗೆ ವಿಮಾನ ತಯಾರಿಕೆಯ ತಂತ್ರಜ್ಞಾನ ತಿಳಿದಿಲ್ಲ. ಎಂಜಿನ್ ಇತ್ಯಾದಿ ಪ್ರಮುಖ ಭಾಗಗಳಿಗೆ ವಿದೇಶೀ ಕಂಪನಿಗಳನ್ನು ಅವಲಂಬಿಸುವುದು ಅನಿವಾರ್ಯ. ಇವೆಲ್ಲವನ್ನೂ ಮೀರಿ ವಿಮಾನ ತಯಾರಿಕೆಗೆ ಅಡಿ ಇಡುವುದು ಸರಕಾರದ ನಿರ್ಧಾರವಾಗಿದೆ. ತಯಾರಿಕೆಗೆ ಅಗತ್ಯವಾದ ಮೂಲಭೂತ ಸೌಕರ್ಯದಲ್ಲಿ ಯಾವುದಾದರೂ ಕೊರತೆ ಕಂಡುಬಂದರೆ ಅದನ್ನು ಪತ್ತೆ ಮಾಡಿ ನೀಗಿಸುವುದು ಎಸ್​ಪಿವಿ ತಂಡದ ಗುರಿಯಾಗಿರುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ವಿಶ್ವದ ಅತಿದೊಡ್ಡ ವ್ಯಾಪಾರ ಬಳಗವಾದ ಆರ್​ಸಿಇಪಿಯಿಂದ ಭಾರತ ಹೊರಬೀಳಲು ಏನು ಕಾರಣ?

ಸರ್ಕಾರದ ಈ ಗುರಿಯಲ್ಲಿ ಎಚ್​ಎಎಲ್ ಪಾತ್ರ ಮಹತ್ವದ್ದಿರಲಿದೆ. ಎಚ್​ಎಎಲ್​ಗೆ ಯುದ್ಧವಿಮಾನಗಳನ್ನು ತಯಾರಿಸಿರುವ ಅನುಭವ ಇದೆ. 119 ಸೀಟುಗಳಿರುವ ವಿಮಾನವನ್ನೂ ಅದು ತಯಾರಿಸಿದೆ. ಹೀಗಾಗಿ, ಬೆಂಗಳೂರು ಮೂಲದ ಈ ಸಂಸ್ಥೆಯ ಮೇಲೆ ಗುರುತರ ಜವಾಬ್ದಾರಿ ಬೀಳುವ ಸಂಭವ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ