‘ಆರಾಧ್ಯಾ ನನ್ನ ಮಗಳು, ಭಾವನೆಗಳು ಅರ್ಥವಾಗುತ್ತವೆ’; ನೇರ ಮಾತಲ್ಲಿ ಹೇಳಿದ ಅಭಿಷೇಕ್  

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ವಿಚ್ಛೇದನದ ವದಂತಿಗಳು ನಿಲ್ಲದೆ ಹರಡುತ್ತಿವೆ. ಇತ್ತೀಚೆಗೆ ಆರಾಧ್ಯಾಳ ಜನ್ಮದಿನಾಚರಣೆಯಲ್ಲಿ ಅಭಿಷೇಕ್ ಇರದಿರುವುದು ಈ ವದಂತಿಗಳನ್ನು ಇನ್ನಷ್ಟು ಬಲಪಡಿಸಿದೆ. ಅಭಿಷೇಕ್ ತಮ್ಮ ಹೊಸ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಮಗಳ ಬಗ್ಗೆ ಮಾತನಾಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

‘ಆರಾಧ್ಯಾ ನನ್ನ ಮಗಳು, ಭಾವನೆಗಳು ಅರ್ಥವಾಗುತ್ತವೆ’; ನೇರ ಮಾತಲ್ಲಿ ಹೇಳಿದ ಅಭಿಷೇಕ್  
ಆರಾಧ್ಯಾ-ಅಭಿಷೇಕ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Nov 23, 2024 | 7:50 AM

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ನಿಲ್ಲುವುದಲ್ಲ. ಅವರು ಒಟ್ಟಾಗಿ ಕಾಣಿಸಿಕೊಂಡು ಈ ವದಂತಿಗೆ ಬ್ರೇಕ್ ಹಾಕುವವರೆಗೆ ಈ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಇತ್ತೀಚೆಗೆ ಆರಾಧ್ಯಾ ಅವರು ಬರ್ತ್​ಡೇ ಆಚರಿಸಿಕೊಂಡಿದ್ದರು. ಆದರೆ, ಅಲ್ಲಿ ಅಭಿಷೇಕ್ ಇರಲಿಲ್ಲ. ಈಗ ಅವರು ಮಗಳ ಬಗ್ಗೆ ಕಮೆಂಟ್ ಒಂದನ್ನು ಮಾಡಿದ್ದಾರೆ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾ ಅವರಿಂದ ದೂರವೇ ಇದ್ದಾರೆ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಇನ್ನು ಆರಾಧ್ಯಾ ಅವರನ್ನು ಸಾಕುವ ಜವಾಬ್ದಾರಿ ಕೂಡ ಐಶ್ವರ್ಯಾ ಹೆಗಲಿಗೆ ಬಿದ್ದಿದೆ ಎನ್ನಬಹುದು. ಆರಾಧ್ಯಾ ಇತ್ತೀಚೆಗೆ ತಂದೆಯಿಂದ ದೂರ ಇರುವುದೇ ಇದಕ್ಕೆ ಕಾರಣ. ಅವರು ಎಲ್ಲಿಯೂ ಅಭಿಷೇಕ್ ಜೊತೆ ಕಾಣಿಸಿಕೊಂಡಿಲ್ಲ ಹೀಗಿರುವಾಗಲೇ, ಅಭಿಷೇಕ್ ಅವರು ಮಗಳ ಬಗ್ಗೆ ಮಾತನಾಡಿದ್ದಾರೆ.

ಅಭಿಷೇಕ್ ಬಚ್ಚನ್ ಅವರು ‘ಐ ವಾಂಟ್ ಟು ಟಾಕ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ನವೆಂಬರ್ 22ರಂದು ಈ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದ ಪ್ರಚಾರಕ್ಕಾಗಿ ಅವರು ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮಕ್ಕೆ ಬಂದಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಮಗಳ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾದಲ್ಲಿ ಅವರು ಅರ್ಜುನ್ ಸೇನ್ ಹೆಸರಿನ ಪಾತ್ರ ಮಾಡಿದ್ದಾರೆ. ತಾಯಿ ಇಲ್ಲದೆ ಸಿಂಗಲ್ ಪೇರೆಂಟ್ ಆಗಿ ಮಗಳನ್ನು ಸಾಕುವ ಜವಾಬ್ದಾರಿ ಅವರಿಗೆ ಬರುತ್ತದೆ. ಇದು ಸಿನಿಮಾದ ಕಥೆ. ಇದೇ ವಿಚಾರವಾಗಿ ಅವರು ಮಾತನಾಡಿದ್ದಾರೆ.

‘ಆರಾಧ್ಯಾ ನನ್ನ ಮಗಳು. ಶೂಜಿತ್ (ಸಿನಿಮಾ ನಿರ್ದೇಶಕ) ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ನಾವು ಹೆಣ್ಣು ಮಕ್ಕಳ ಅಪ್ಪಂದಿರು. ನಮಗೆ ಭಾವನೆಗಳು ಅರ್ಥ ಆಗುತ್ತದೆ’ ಎಂದು ಅಭಿಷೇಕ್ ಹೇಳಿಕೊಂಡಿದ್ದಾರೆ. ಅವರ ಈ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಇದನ್ನೂ ಓದಿ: ಹೇಗಿತ್ತು ನೋಡಿ ಆರಾಧ್ಯಾ ಬರ್ತ್​ಡೇ ಸೆಲೆಬ್ರೇಷನ್; ಬಚ್ಚನ್ ಕುಟುಂಬದವರಿಗಿಲ್ಲ ಆಹ್ವಾನ

ಅಭಿಷೇಕ್ ಹಾಗೂ ಐಶ್ವರ್ಯಾ ಬಗ್ಗೆ ಹುಟ್ಟಿರುವುದು ಕೇವಲ ವದಂತಿ ಎಂದು ಅಮಿತಾಭ್ ಬಚ್ಚನ್ ಸ್ಪಷ್ಟನೆ ನೀಡಿದ್ದಾರೆ. ಇಬ್ಬರೂ ಒಟ್ಟಾಗಿ ಇದ್ದಾರೆ ಎಂದಾದರೆ ಅವರು ಎಲ್ಲಿಯೂ ಏಕೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂಬುದು ಅನೇಕರ ಪ್ರಶ್ನೆ. ಈ ಪ್ರಶ್ನೆಗೆ ಈ ವರೆಗೆ ಉತ್ತರ ಸಿಕ್ಕಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್