AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಕಿಸ್ ಮಾಡಿದ್ದಕ್ಕೆ ಐಶ್ವರ್ಯಾ ರೈಗೆ ಬಂದಿತ್ತು ಹಲವು ಲೀಗಲ್ ನೋಟಿಸ್

‘ಧೂಮ್ 2' ಬಗ್ಗೆ ಐಶ್ವರ್ಯಾ ಮುಕ್ತವಾಗಿ ಮಾತನಾಡಿದ್ದರು. ಒಂದು ಚುಂಬನದ ದೃಶ್ಯದಿಂದಾಗಿ ಅವರು ಅನೇಕ ನೋಟಿಸ್‌ಗಳನ್ನು ಎದುರಿಸಬೇಕಾಯಿತು. ಸಂದರ್ಶನವೊಂದರಲ್ಲಿ ಐಶ್ವರ್ಯಾ ಚುಂಬನದ ದೃಶ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಹೃತಿಕ್ ಜೊತೆಗಿನ ಈ ದೃಶ್ಯಕ್ಕೆ ಆಕೆ ಒಪ್ಪಿಕೊಂಡ ಕಾರಣವನ್ನು ಹೇಳಿದ್ದರು.

ಒಂದು ಕಿಸ್ ಮಾಡಿದ್ದಕ್ಕೆ ಐಶ್ವರ್ಯಾ ರೈಗೆ ಬಂದಿತ್ತು ಹಲವು ಲೀಗಲ್ ನೋಟಿಸ್
ಹೃತಿಕ್-ಐಶ್ವರ್ಯಾ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Nov 22, 2024 | 10:06 AM

Share

2004ರಲ್ಲಿ ತೆರೆಕಂಡ ‘ಧೂಮ್’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿತ್ತು. ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರವು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಕಳ್ಳತನ, ಸೂಪರ್ ಬೈಕ್​ಗಳು, ದರೋಡೆಕೋರರು ಹಿಡಿಯುವ ತಂತ್ರಗಾರಿಕೆಯಿಂದ ಸಿನಿಮಾ ಹಿಟ್ ಆಗಿತ್ತು. ಈ ಯಶಸ್ಸಿನಿಂದಾಗಿ ಅದರ ಮುಂದುವರಿದ ಭಾಗವೂ ಪ್ರೇಕ್ಷಕರ ಗಮನಕ್ಕೆ ಬಂತು. ಇದರಲ್ಲಿ ಐಶ್ವರ್ಯಾ ರೈ ಮತ್ತು ಹೃತಿಕ್ ರೋಷನ್ ಜೋಡಿಯನ್ನು ಪ್ರೇಕ್ಷಕರು ನೋಡಿದರು. ಮೊದಲ ಭಾಗದಂತೆ ಈ ಸೀಕ್ವೆಲ್ ಕೂಡ ಬ್ಲಾಕ್ ಬಸ್ಟರ್ ಆಗಿತ್ತು. ಐಶ್ವರ್ಯಾ ಮತ್ತು ಹೃತಿಕ್ ಅವರ ಲಿಪ್​ಲಾಕ್ ದೃಶ್ಯ ಸುದ್ದಿಯಲ್ಲಿತ್ತು. ಈ ಬಗ್ಗೆ ಐಶ್ವರ್ಯಾಗೆ ಕೆಲವರು ಲೀಗಲ್ ನೋಟಿಸ್ ಕೂಡ ನೀಡಿದ್ದರು. ಸಂದರ್ಶನವೊಂದರಲ್ಲಿ ಐಶ್ವರ್ಯಾ ಚುಂಬನದ ದೃಶ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಹೃತಿಕ್ ಜೊತೆಗಿನ ಈ ದೃಶ್ಯಕ್ಕೆ ಆಕೆ ಒಪ್ಪಿಕೊಂಡ ಕಾರಣವನ್ನು ಹೇಳಿದ್ದರು.

‘ಹತ್ತು ವರ್ಷಗಳ ನಂತರ ನನ್ನ ವೃತ್ತಿ ಜೀವನದಲ್ಲಿ ಧೂಮ್ ಬಂದಿತ್ತು . ಆ ಹೊತ್ತಿಗೆ ಚುಂಬನದ ದೃಶ್ಯವು ಜನರಿಗೆ ಚಿರಪರಿಚಿತವಾಗಿತ್ತು. ಸಮಯ ಬದಲಾದಂತೆ, ಪ್ರೇಕ್ಷಕರಿಗೆ ಯಾವುದು ಆಘಾತಕಾರಿಯಾಗಿರಬಹುದು ಅಥವಾ ಇಲ್ಲದಿರಬಹುದು ಎಂಬುದನ್ನು ನೀವು ಹೇಗೆ ಪರಿಗಣಿಸುತ್ತೀರಿ? ನಿಮಗೆ ಯಾವುದು ಉತ್ತಮ ಎಂಬುದರ ಆಧಾರದ ಮೇಲೆ ನೀವು ಅದನ್ನು ನಿರ್ಧರಿಸುತ್ತೀರಿ’ ಎಂದಿದ್ದರು ಐಶ್ವರ್ಯಾ.

‘ಧೂಮ್‌ನಲ್ಲಿ ಚುಂಬನದ ದೃಶ್ಯವನ್ನು ಮಾಡಬೇಕು ಎಂದು ಬಂತು. ನಾನು ಅದನ್ನು ಮಾಡಲು ನಿರ್ಧರಿಸಿದೆ.. ಆ ಮುತ್ತಿನಲ್ಲೂ ಡೈಲಾಗ್ ಇತ್ತು. ಕೇವಲ ಸಂಗೀತ ನುಡಿಸುವುದು ಮತ್ತು ನಾವು ಚುಂಬಿಸುವಂತೆ ಏನೂ ಇರಲಿಲ್ಲ. ಹೃತಿಕ್ ಮತ್ತು ನಾನು ಪರಸ್ಪರರ ತೆಕ್ಕೆಗೆ ಬರುವುದಿಲ್ಲ’ ಎಂದಿದ್ದರು ಐಶ್ವರ್ಯಾ.

ಇದನ್ನೂ ಓದಿ: ‘ವದಂತಿ ಸತ್ಯ ಆಗಲ್ಲ’; ಐಶ್ವರ್ಯಾ-ಅಭಿಷೇಕ್ ವಿಚ್ಛೇದನದ ಬಗ್ಗೆ ಕೊನೆಗೂ ಮೌನ ಮುರಿದ ಅಮಿತಾಭ್

‘ಧೂಮ್ 2′ ಬಗ್ಗೆ ಐಶ್ವರ್ಯಾ ಮುಕ್ತವಾಗಿ ಮಾತನಾಡಿದ್ದರು. ಒಂದು ಚುಂಬನದ ದೃಶ್ಯದಿಂದಾಗಿ ಅವರು ಅನೇಕ ನೋಟಿಸ್‌ಗಳನ್ನು ಎದುರಿಸಬೇಕಾಯಿತು. ‘ಧೂಮ್ ಚಿತ್ರದಲ್ಲಿ ನಾನು ಚುಂಬನದ ದೃಶ್ಯವನ್ನು ಮಾಡಿದ್ದೇನೆ. ನಿಮಗೆ ಆಶ್ಚರ್ಯವಾಗಬಹುದು ಆದರೆ ಅದಕ್ಕಾಗಿ ನನಗೆ ಹಲವು ಲೀಗಲ್ ನೋಟಿಸ್‌ಗಳು ಬಂದಿವೆ. ದೇಶದ ಕೆಲವರು ನೀನು ರೋಲ್ ಮಾಡೆಲ್, ನಮ್ಮ ಹುಡುಗಿಯರಿಗೆ ರೋಲ್ ಮಾಡೆಲ್ ಎಂದು ಹೇಳಲು ಪ್ರಾರಂಭಿಸಿದರು. ನೀವು ನಿಮ್ಮ ಜೀವನವನ್ನು ಗೌರವಯುತವಾಗಿ ನಡೆಸುತ್ತೀರಿ, ಆದ್ದರಿಂದ ನೀವು ಅಂತಹ ದೃಶ್ಯಗಳನ್ನು ತೆರೆಯ ಮೇಲೆ ನೋಡುವುದು ಅವರಿಗೆ ಇಷ್ಟ ಇರಲಿಲ್ಲ. ನೀವು ಯಾಕೆ ಹೀಗೆ ಮಾಡಿದಿರಿ ಎಂದು ಜನರು ನನ್ನನ್ನು ಕೇಳಲು ಪ್ರಾರಂಭಿಸಿದರು’ ಎಂದು ಐಶ್ವರ್ಯಾ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.