56 ಲಕ್ಷ ಹಿಂಬಾಲಕರಿದ್ದರೂ, ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ನಟ

Ajaz Khan: ಹಿಂದಿ, ತೆಲುಗಿನ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ಮತ್ತು ಹಿರಿಯ ನಟ ಏಜಾಜ್ ಖಾನ್​ಗೆ ಇನ್​ಸ್ಟಾಗ್ರಾಂನಲ್ಲಿ ಭಾರಿ ಸಂಖ್ಯೆಯ ಫಾಲೋವರ್​ಗಳಿದ್ದಾರೆ ಆದರೆ ಚುನಾವಣೆಯಲ್ಲಿ ಅವು ಮತಗಳಾಗಿ ಪರಿವರ್ತನೆಗೊಂಡಿಲ್ಲ.

56 ಲಕ್ಷ ಹಿಂಬಾಲಕರಿದ್ದರೂ, ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ನಟ
Follow us
ಮಂಜುನಾಥ ಸಿ.
|

Updated on: Nov 23, 2024 | 8:05 PM

ಸಾಮಾಜಿಕ ಜಾಲತಾಣಕ್ಕೂ, ಸತ್ಯಕ್ಕೂ ನಡುವೆ ದೊಡ್ಡ ಅಂತರವಿದೆ. ವ್ಯಕ್ತಿಯೊಬ್ಬರ ಬಗ್ಗೆ ಅವರ ಸಾಮಾಜಿಕ ಜಾಲತಾಣದಲ್ಲಿ ಕಾಣುವುದೆಲ್ಲವೂ ಸತ್ಯವಲ್ಲ, ಬದಲಿಗೆ ಬಹುತೇಕ ಸುಳ್ಳೇ ಹೆಚ್ಚಾಗಿರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಫೋಲೋವರ್​ಗಳನ್ನು ಹೊಂದಿರುವವರಿಗೆ ನಿಜ ಜೀವನದಲ್ಲಿ ಹತ್ತು ಮಂದಿ ಆತ್ಮೀಯರು ಸಹ ಇರುವುದಿಲ್ಲ. ಇದಕ್ಕೆ ತಾಜಾ ಉದಾಹರಣೆಯೆಂದರೆ ನಟ ಏಜಾಜ್ ಖಾನ್. ಹಲವು ದಶಕಗಳಿಂದಲೂ ಬಾಲಿವುಡ್, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿರುವ ಏಜಾಜ್ ಖಾನ್​ಗೆ ಇನ್​ಸ್ಟಾಗ್ರಾಂನಲ್ಲಿ 56 ಲಕ್ಷ ಫಾಲೋವರ್​ಗಳಿದ್ದಾರೆ ಆದರೆ ಚುನಾವಣೆಯಲ್ಲಿ 155 ಮತಗಳನ್ನಷ್ಟೆ ಗಳಿಸಿದ್ದಾರೆ.

ಏಜಾಜ್ ಖಾನ್, ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಗೆ ಪ್ರತಿಷ್ಢಿತ ಕ್ಷೇತ್ರಗಳಲ್ಲಿ ಒಂದಾದ ವರಸೋವಾದಿಂದ ಸ್ಪರ್ಧೆ ಮಾಡಿದ್ದರು. ಆದರೆ ಏಜಾಜ್ ಖಾನ್​ ಹೀನಾಯ ಸೋಲು ಕಂಡಿದ್ದಾರೆ. ನೋಟಾಗಿಂತಲೂ ಕಡಿಮೆ ಮತಗಳು ಏಜಾಜ್ ಖಾನ್​ಗೆ ದೊರೆತಿವೆ. ಸಂಸದ ಚಂದ್ರಶೇಖರ್ ಅಜಾದ್ ರಾವಣ ಅವರ ಆಜಾದ್ ಸಮಾಜ್ ಪಾರ್ಟಿಯ ವತಿಯಿಂದ ಅವರು ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಆದರೆ ಹೀನಾಯ ಸೋಲು ಕಂಡಿದ್ದಾರೆ. ಅವರಿಗೆ ಕೇವಲ 155 ಮತಗಳು ಮಾತ್ರವೇ ಸಿಕ್ಕಿವೆ.

ಏಜಾಜ್ ಖಾನ್ 2003 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಹಿಂದಿ ಮತ್ತು ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಬಹುತೇಕ ವಿಲನ್ ಪಾತ್ರಗಳಲ್ಲಿಯೇ ಏಜಾಜ್ ಖಾನ್ ಹೆಚ್ಚಾಗಿ ನಟಿಸಿದ್ದಾರೆ. ‘ರಕ್ತ ಚರಿತ್ರ’, ಜೂ ಎನ್​ಟಿಆರ್ ನಟನೆಯ ‘ಬಾದ್​ಶಾ’, ‘ಟೆಂಪರ್’, ರಾಮ್ ಚರಣ್ ನಟನೆಯ ‘ವಿನಯ ವಿಧೇಯ ರಾಮ’ ಕನ್ನಡದಲ್ಲೂ ಬಿಡುಗಡೆ ಆಗಿದ್ದ ‘ರೋಗ್’ ಇನ್ನೂ ಹಲವು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ. 2018 ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೂ ಒಳಗಾಗಿದ್ದ ಏಜಾಜ್ ಖಾನ್ 26 ತಿಂಗಳ ಕಾಲ ಜೈಲು ವಾಸ ಸಹ ಅನುಭವಿಸಿದ್ದಾರೆ.

ಇದನ್ನೂ ಓದಿ:‘ಅನಿಮಲ್​’ ಸಿನಿಮಾ ನಟಿ ತೃಪ್ತಿ ದಿಮ್ರಿ ಒಟ್ಟು ಆಸ್ತಿ ಎಷ್ಟು?

ಸಾಮಾಜಿಕ ಜಾಲತಾಣಗಳು ಹೆಚ್ಚು ಜನಪ್ರಿಯವಾಗುವ ವೇಳೆಗೆ ತಮ್ಮ ವಿಡಿಯೋ, ಭಾಷಣ, ವಿವಾದಗಳ ವಿಡಿಯೋಗಳನ್ನು ಹಂಚಿಕೊಂಡು ಭಾರಿ ಸಂಖ್ಯೆಯ ಫಾಲೋವರ್​ಗಳನ್ನು ಏಜಾಜ್ ಖಾನ್ ಪಡೆದುಕೊಂಡಿದ್ದಾರೆ. 56 ಲಕ್ಷ ಜನ ಏಜಾಜ್ ಖಾನ್ ಅವರನ್ನು ಫಾಲೋ ಮಾಡುತ್ತಾರೆ. ಆದರೆ ಚುನಾವಣೆಯಲ್ಲಿ ಅವರಿಗೆ ಕೇವಲ 155 ಮತಗಳು ಮಾತ್ರ ಸಿಕ್ಕಿವೆ. ಅದೇ ಕ್ಷೇತ್ರದಲ್ಲಿ ನೋಟಾಗೆ ಅವರಿಗಿಂತಲೂ ಹತ್ತು ಪಟ್ಟು ಹೆಚ್ಚು ಮತಗಳು ದೊರೆತಿವೆ. ನೋಟಾಗೆ 1298 ಮತಗಳು ಬಂದಿವೆ. ವಿಶೇಷವೆಂದರೆ ಈ ಕ್ಷೇತ್ರದಲ್ಲಿ ಏಜಾಜ್ ಖಾನ್​ಗಿಂತಲೂ ಕಡಿಮೆ ಮತ ಪಡೆದ ಐದು ಅಭ್ಯರ್ಥಿಗಳಿದ್ದಾರೆ. ಒಟ್ಟು 19 ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ಶಿವಸೇನೆಯ ಹರೂನ್ ಖಾನ್ ಈ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ