‘ಶಾಕಾ ಲಾಕಾ ಬೂಮ್ ಬೂಮ್’ ಖ್ಯಾತಿಯ ಈ ಬಾಲಕ ನೆನಪಿದ್ದಾನ? ನಡೆಯಿತು ವಿವಾಹ

Shaka Laka Boom Boom: ಶಾಕಾಲಾಕಾ ಬೂಂ ಬೂಂ ಧಾರಾವಾಹಿ ನೆನಪಿದೆಯೇ? 90ರ ದಶಕ ಹುಟ್ಟಿದವರಿಗೆ ಈ ಧಾರಾವಾಹಿ ಪಕ್ಕಾ ನೆನಪಿರುತ್ತದೆ. ಆ ಧಾರಾವಾಹಿಯ ಬಾಲನಟ ಈಗ ಹೇಗಿದ್ದಾನೆ?

‘ಶಾಕಾ ಲಾಕಾ ಬೂಮ್ ಬೂಮ್' ಖ್ಯಾತಿಯ ಈ ಬಾಲಕ ನೆನಪಿದ್ದಾನ? ನಡೆಯಿತು ವಿವಾಹ
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Nov 23, 2024 | 9:22 PM

‘ಶಾಕಾ ಲಾಕಾ ಬೂಮ್ ಬೂಮ್’ ಖ್ಯಾತಿಯ ಕಿನ್ಶುಕ್ ವೈದ್ಯ ತಮ್ಮ ಮ್ಯಾಜಿಕ್ ಪೆನ್ಸಿಲ್‌ನಿಂದ 90ರ ದಶಕದ ಮಕ್ಕಳ ಬಾಲ್ಯವನ್ನು ಇನ್ನಷ್ಟು ವಿಶೇಷವಾಗಿಸಿದರು. ಈಗ ನಟನನ್ನು ಗುರುತಿಸುವುದು ಕೂಡ ಕಷ್ಟಕರವಾಗಿದೆ. ಧಾರಾವಾಹಿಯಲ್ಲಿ ಸಂಜು ಪಾತ್ರದಲ್ಲಿ ನಟಿಸಿದ್ದ ನಟ ಕಿನ್ಶುಕ್ ವೈದ್ಯ ವಿವಾಹವಾಗಿದ್ದಾರೆ. ಗೆಳತಿ ದೀಕ್ಷಾ ನಾಗ್ಪಾಲ್ ಅವರನ್ನು ವಿವಾಹವಾಗಿದ್ದಾರೆ. ಇವರಿಬ್ಬರು ಮದುವೆ ದಿರಿಸು ತೊಟ್ಟಿರುವ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸುಮೇಧ್ ಮುದ್ಗಲ್ಕರ್, ಹಿಮಾಂಶು ಸೋನಿ, ಹಿಬಾ ನವಾಬ್, ಶಾಹೀರ್ ಶೇಖ್ ಅವರಂತಹ ಅನೇಕ ಸೆಲೆಬ್ರಿಟಿಗಳು ಅವರ ಮದುವೆಯಲ್ಲಿ ಭಾಗವಹಿಸಿದ್ದರು.

ಕಿನ್ಶುಕ್ ವೈದ್ಯ ಮತ್ತು ದೀಕ್ಷಾ ನಾಗ್ಪಾಲ್ ಸಾಂಪ್ರದಾಯಿಕ ಉಡುಪುಗಳಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ದೀಕ್ಷಾ ಮಹಾರಾಷ್ಟ್ರದ ವಧುವಾಗಿ ತುಂಬಾ ಸುಂದರವಾಗಿ ಕಾಣುತ್ತಾರೆ. ಕಿನ್ಶುಕ್ ಮತ್ತು ದೀಕ್ಷಾ ಅವರ ಮದುವೆಯ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ವೀಡಿಯೊದಲ್ಲಿ, ಕಿನ್ಶುಕ್ ಸ್ನೇಹಿತರ ಜೊತೆ ಡ್ಯಾನ್ಸ್ ಮಾಡಿದ್ದಾರೆ.

‘ರಾಧಾಕೃಷ್ಣ’ ಖ್ಯಾತಿಯ ನಟ ಸುಮೇಧ್ ಮುದ್ಗಲ್ಕರ್ ಅವರು ಕಿನ್ಶುಕ್ ಮತ್ತು ದೀಕ್ಷಾ ಅವರ ಮದುವೆಯ ಫೋಟೋಗಳನ್ನು ಇನ್ ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ನಟನ ಸ್ನೇಹಿತರು ಮತ್ತು ಅತಿಥಿಗಳು ಮದುವೆಯಲ್ಲಿ ಆನಂದಿಸುತ್ತಿದ್ದಾರೆ. ಪ್ರಸ್ತುತ, ಕಿನ್ಶುಕ್ ಅವರ ವಿವಾಹ ಚರ್ಚೆಯಾಗಿದೆ.

ಕಿನ್ಶುಕ್ ವೈದ್ಯ ಅವರ ಪತ್ನಿಯ ಬಗ್ಗೆ ಮಾತನಾಡುತ್ತಾ, ಅವರ ಹೆಸರು ದೀಕ್ಷಾ ನಾಗ್ಪಾಲ್ ಮತ್ತು ಅವರು ನೃತ್ಯ ನಿರ್ದೇಶಕಿ. ಇವರಿಬ್ಬರ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈಗ ಅಭಿಮಾನಿಗಳು ಕಿನ್ಶುಕ್ ವೈದ್ಯ ಅವರಿಗೆ ಶುಭಾಶಯಗಳನ್ನು ಸುರಿಸುತ್ತಿದ್ದಾರೆ.

ಇದನ್ನೂ ಓದಿ:ಬಾಲನಟ ರೋಹಿತ್​ಗೆ ಅಪಘಾತ ಆಗಿದ್ದು ಹೇಗೆ? ಈಗ ಆರೋಗ್ಯ ಹೇಗಿದೆ?

ದೀಕ್ಷಾ ಮೊದಲು ನಟ ಶಿವಯ್ಯ ಪಠಾನಿಯಾ ಜೊತೆ ಡೇಟಿಂಗ್ ಕೂಡ ಮಾಡಿದ್ದಾನೆ. ಇಬ್ಬರೂ ಹಲವು ವರ್ಷಗಳಿಂದ ಸಂಬಂಧದಲ್ಲಿದ್ದರು. ಆದರೆ ಅವರ ಸಂಬಂಧವು ಮದುವೆಗೆ ತಲುಪಲಿಲ್ಲ. ಅಂತಿಮವಾಗಿ, ದೀಕ್ಷಾ ಅವರೊಂದಿಗೆ ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಕಿನ್ಶುಕ್ ವೈದ್ಯ ಮದುವೆಯಾಗಲು ನಿರ್ಧರಿಸಿದರು.

‘ಶಾಕಾ ಲಾಕಾ ಬೂಮ್ ಬೂಮ್’ ಧಾರಾವಾಹಿ 2000ರ ಸಂದರ್ಭದಲ್ಲಿ ಪ್ರಸಾರ ಕಂಡಿತ್ತು. ಇದು ಒಟ್ಟು 491 ಎಪಿಸೋಡ್​ಗಳನ್ನು ಹೊಂದಿದೆ. ಮ್ಯಾಜಿಕ್ ಪೆನ್ಸಿಲ್ ಮೂಲಕ ಬಿಡಿಸಿದ್ದು ಬಾಲಕನ ಎದುರು ಇರುತ್ತಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು