ಈ ದೇಶಗಳ ಜನರು ಆದಾಯ ತೆರಿಗೆಯನ್ನೇ ಪಾವತಿಸಬೇಕಿಲ್ಲ; ಯಾವುವು ಆ ದೇಶಗಳು? ಇಲ್ಲಿದೆ ಪಟ್ಟಿ
No Income Tax: ಜನಸಾಮಾನ್ಯರು ಆದಾಯ ತೆರಿಗೆ ಪಾವತಿಸಬೇಕಿಲ್ಲದ ದೇಶಗಳು ಅಸ್ತಿತ್ವದಲ್ಲಿವೆ. ಕೆಲ ಕೆರಿಬಿಯನ್ ದ್ವೀಪ ರಾಷ್ಟ್ರಗಳು, ಯುಎಇ, ಮೊನಾಕೋ ಮೊದಲಾದ ದೇಶಗಳಲ್ಲಿ ಇನ್ಕಮ್ ಟ್ಯಾಕ್ಸ್ ವ್ಯವಸ್ಥೆಯೇ ಇಲ್ಲ. ಕೆಲವೆಡೆ ಇನ್ಕಮ್ ಟ್ಯಾಕ್ಸ್ ಇಲ್ಲದಿದ್ದರೂ ಬೇರೆ ರೀತಿಯ ತೆರಿಗೆಗಳ ಮೂಲಕ ಸರ್ಕಾರ ಆದಾಯ ಮಾಡುತ್ತದೆ.
ನಾವು ನೀವು ಆದಾಯ ತೆರಿಗೆ ಪಾವತಿಸುವುದು ಕಡ್ಡಾಯ. ಬಹಳಷ್ಟು ದೇಶಗಳಲ್ಲೂ ಆದಾಯ ತೆರಿಗೆ (Income Tax) ವ್ಯವಸ್ಥೆ ಇದೆ. ಸರ್ಕಾರದ ಪ್ರಮುಖ ಆದಾಯಮೂಲಗಳಲ್ಲಿ ಇನ್ಕಮ್ ಟ್ಯಾಕ್ಸ್ ಒಂದು. ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚು ಆದಾಯ ಹೊಂದಿದ ಬಹುತೇಕ ಮಂದಿ ಇನ್ಕಮ್ ಟ್ಯಾಕ್ಸ್ ಪಾವತಿಸುವುದು ಕಡ್ಡಾಯ. ಆದಾಯ ಹೆಚ್ಚಿದಷ್ಟೂ ತೆರಿಗೆಯೂ ಹೆಚ್ಚು ಕಟ್ಟಬೇಕು. ಅಯ್ಯೋ ರೋಡ್ ಟ್ಯಾಕ್ಸ್, ಆ ಟ್ಯಾಕ್ಸ್, ಈ ಟ್ಯಾಕ್ಸ್ ಎಂದು ಮಾತುಮಾತಿಗೂ ಟ್ಯಾಕ್ಸ್ ಕಟ್ಟುವ ನಮಗೆ ಈ ಇನ್ಕಮ್ ಟ್ಯಾಕ್ಸ್ ಹೊರೆ ಯಾಕಪ್ಪ ಬೇಕು ಎಂದು ಹಲವರಿಗೆ ಅನಿಸಬಹುದು. ನಿಮಗೆ ಅಚ್ಚರಿ ಎನಿಸಬಹುದು, ಕೆಲ ದೇಶಗಳಲ್ಲಿ ಆದಾಯ ತೆರಿಗೆಯೇ ಇಲ್ಲ. ಆ ದೇಶದಲ್ಲಿ ನೀವು ಎಷ್ಟು ಬೇಕಾದರೂ ಆದಾಯ ಗಳಿಸಿ, ಆ ಆದಾಯಕ್ಕೆ ತೆರಿಗೆ ಕಟ್ಟುವ ಅವಶ್ಯಕತೆ ಇಲ್ಲ. ಆದರೆ, ಬೇರೆ ರೀತಿಯಲ್ಲಿ ಈ ದೇಶಗಳು ಆದಾಯ ಮಾಡಿಕೊಳ್ಳುತ್ತವೆ. ಇಂಥ ಕೆಲ ದೇಶಗಳ ವಿವರ ಇಲ್ಲಿದೆ:
ದಿ ಬಹಾಮಾಸ್
ಅಮೆರಿಕದ ಪಕ್ಕದ ಕೆರಿಬಿಯನ್ ದ್ವೀಪಗಳ ಸಮೂಹದಲ್ಲಿರುವ ದಿ ಬಹಮಾಸ್ ದೇಶದಲ್ಲಿ ಆದಾಯ ತೆರಿಗೆ ಇಲ್ಲ. ಆದರೆ, ಕೆಲವಿಷ್ಟು ಷರತ್ತುಗಳಿವೆ. ಈ ದೇಶದಲ್ಲಿ 90 ದಿನಗಳಿಗೂ ಹೆಚ್ಚು ದಿನ ನೆಲಸಿದರೆ ಖಾಯಂ ನಿವಾಸಿ ಹಕ್ಕು ಸಿಗುತ್ತದೆ. ಖಾಯಂ ನಿವಾಸಿಗಳು ಆದಾಯ ತೆರಿಗೆ ಪಾವತಿಸುವಂತಿಲ್ಲ.
ಮೊನಾಕೊ
ಯೂರೋಪ್ನ ಮೊನಾಕೊ ದೇಶ ಶ್ರೀಮಂತರ ಪಾಲಿಗೆ ವಿಲಾಸೀ ತಾಣವಾಗಿದೆ. ಭೂಮಿಯಲ್ಲಿರುವ ಅತ್ಯಂತ ಸುಂದರ ಪ್ರದೇಶಗಳಲ್ಲಿ ಇದೂ ಒಂದು. ಇಲ್ಲಿ ಯಾವುದೇ ಆದಾಯ ತೆರಿಗೆ ಕಟ್ಟುವ ಅವಶ್ಯಕತೆ ಇಲ್ಲ. ಆದರೆ, ಬಹಳ ದುಬಾರಿ ಸ್ಥಳ. ಮೂರು ತಿಂಗಳಲ್ಲಿ 5 ಲಕ್ಷ ಯೂರೋ ನೀಡಿ ನಿವಾಸಿ ಅನುಮತಿ ಪಡೆಯಬೇಕು. ಈ ದೇಶಕ್ಕೆ ಆದಾಯ ತೆರಿಗೆಗಿಂತ ಹೆಚ್ಚಾಗಿ ಪ್ರವಾಸಿಗರ ಖರ್ಚುಗಳೇ ಪ್ರಮುಖ ಆದಾಯ ಮೂಲ.
ಯುಎಇ
ದುಬೈ, ಶಾರ್ಜಾ, ಅಬುಧಾಬಿಯನ್ನು ಒಳಗೊಂಡಿರುವ ಯುಎಇ ದೇಶದಲ್ಲಿ ಆದಾಯ ತೆರಿಗೆ ಇಲ್ಲ, ಕಾರ್ಪೊರೇಟ್ ತೆರಿಗೆಯೂ ಇಲ್ಲ. ಯುಎಇ ಮಾತ್ರವಲ್ಲ, ಹಲವು ಗಲ್ಫ್ ದೇಶಗಳಲ್ಲೂ ಈ ತೆರಿಗೆಗಳಿಲ್ಲ.
ಇದನ್ನೂ ಓದಿ: ವಂಚಕ ಜಾಹೀರಾತುಗಳ ವಿರುದ್ಧ ಕೇಂದ್ರ ಕರಡು ನಿಯಮಾವಳಿ; ಸಾರ್ವಜನಿಕ ಅಭಿಪ್ರಾಯಕ್ಕೆ ಆಹ್ವಾನ; ಡಾರ್ಕ್ ಪ್ಯಾಟರ್ನ್ಸ್ ಎಂದರೇನು?
ಬರ್ಮುಡಾ
ದುಬಾರಿ ಕೆರಿಬಿಯನ್ ದೇಶಗಳಲ್ಲಿ ಬರ್ಮುಡಾ ಕೂಡ ಒಂದು. ಬೀಚ್ಗಳಿಗೆ ಖ್ಯಾತವಾಗಿರುವ ಬರ್ಮುಡಾದಲ್ಲಿ ಬಹಳ ವೈಭೋಗ ಎನಿಸುವ ರೆಸ್ಟೋರೆಂಟ್ ಇತ್ಯಾದಿಗಳಿವೆ. ಇಲ್ಲಿ ಯಾವ ಆದಾಯ ತೆರಿಗೆ ಇಲ್ಲ. ಆದರೆ, ಕಂಪನಿಗಳಿಗೆ ಪೇರೋಲ್ ಟ್ಯಾಕ್ಸ್ ಹಾಕುತ್ತದೆ. ಆಸ್ತಿ ಮಾಲೀಕರು ಮತ್ತು ಬಾಡಿಗೆದಾರರಿಗೆ ಲ್ಯಾಂಡ್ ಟ್ಯಾಕ್ಸ್ ವಿಧಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ