AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bitter Layoffs: ಒಂದೇ ಫೋನ್ ಕಾಲ್​ನಲ್ಲಿ ಇಡೀ ರಿಯಲ್ ಎಸ್ಟೇಟ್ ತಂಡ ಲೇ ಆಫ್ ಮಾಡಿದ ಬೆಟರ್ ಡಾಟ್ ಕಾಮ್ ಸಿಇಒ ವಿಶಾಲ್ ಗರ್ಗ್

Better.com Layoffs Whole Real Estate Employees: ಅಮೆರಿಕದ ಬೆಟರ್ ಡಾಟ್ ಕಾಮ್ ಕಂಪನಿಯ ರಿಯಲ್ ಎಸ್ಟೇಟ್ ವಿಭಾಗದ ಎಲ್ಲರನ್ನೂ ಲೇ ಆಫ್ ಮಾಡಿ ಒಂದೇ ದಿನದಲ್ಲಿ ಮನೆಗೆ ಕಳುಹಿಸಲಾಗಿದೆ. ಇಲ್ಲಿಯವರೆಗೆ ಈ ಕಂಪನಿ 4,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ.

Bitter Layoffs: ಒಂದೇ ಫೋನ್ ಕಾಲ್​ನಲ್ಲಿ ಇಡೀ ರಿಯಲ್ ಎಸ್ಟೇಟ್ ತಂಡ ಲೇ ಆಫ್ ಮಾಡಿದ ಬೆಟರ್ ಡಾಟ್ ಕಾಮ್ ಸಿಇಒ ವಿಶಾಲ್ ಗರ್ಗ್
ಬೆಟರ್ ಡಾಟ್ ಕಾಮ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 12, 2023 | 4:26 PM

Share

ಭಾರತ ಮೂಲದ ವಿಶಾಲ್ ಗರ್ಗ್ ಸಿಇಒ ಆಗಿರುವ ಬೆಟರ್ ಡಾಟ್ ಕಾಮ್ (Better.com) ಅಥವಾ ಬೆಟರ್ ಹೋಲ್ಡ್​ಕೋ ತನ್ನ ಉದ್ಯೋಗಿಗಳ ಲೇ ಆಫ್ (Layoffs) ವಿಚಾರದಲ್ಲಿ ಬಹಳ ವಿವಾದಕ್ಕೆ ಒಳಗಾಗಿದ್ದಂತಹ ಸಂಸ್ಥೆ. ಇದೀಗ ಅದರ ಇಡೀ ರಿಯಲ್ ಎಸ್ಟೇಟ್ ವಿಭಾಗದ ಎಲ್ಲರನ್ನೂ ಲೇ ಆಫ್ ಮಾಡಿ ಒಂದೇ ದಿನದಲ್ಲಿ ಮನೆಗೆ ಕಳುಹಿಸಲಾಗಿದೆ. ಇಲ್ಲಿಯವರೆಗೆ ಈ ಕಂಪನಿ 4,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ರಿಯಲ್ ಎಸ್ಟೇಟ್ ವ್ಯವಹಾರದಿಂದ ಪೂರ್ಣ ಹೊರಬಿದ್ದ ಹಿನ್ನೆಲೆಯಲ್ಲಿ ತಂಡದವರನ್ನು ಲೇ ಆಫ್ ಮಾಡುವ ಕ್ರಮ ನಿರೀಕ್ಷಿತವಾಗಿಯೇ ಇತ್ತು. ಆದರೆ, ಸರಿಯಾದ ರೀತಿಯಲ್ಲಿ ಪರಿಹಾರ ನೀಡದೇ ಉದ್ಯೋಗಿಗಳನ್ನು ಹೀನವಾಗಿ ನಡೆಸಿಕೊಂಡದ್ದು ಈ ಕಂಪನಿಗೆ ಕಪ್ಪುಚುಕ್ಕೆಯಾಗಿದೆ. ಬೆಟರ್ ಡಾಟ್ ಕಾಮ್ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ವಿಶಾಲ್ ಗರ್ಗ್ ಒಂದು ಝೂನ್ ಮೀಟಿಂಗ್ ಕಾಲ್​ನಲ್ಲಿ ಇಡೀ ರಿಯಲ್ ಎಸ್ಟೇಟ್ ತಂಡದ ಉದ್ಯೋಗಿಗಳನ್ನು ಲೇ ಆಫ್ ಮಾಡಿದ್ದಾರೆ ಎನ್ನಲಾಗಿದೆ.

ಜೂನ್ 7ರಂದು ಈ ಬೆಳವಣಿಗೆ ಆಗಿರುವುದು. ಈ ಹಿಂದೆಯೂ ಬೆಟರ್ ಡಾಟ್ ಕಾಮ್ ಹಂತ ಹಂತವಾಗಿ ಉದ್ಯೋಗಿಗಳನ್ನು ಕೆಲಸದಿಂದ ಬಿಡಿಸುತ್ತಾ ಬಂದಿತ್ತು. ಜೂನ್ 7ರ ಲೇ ಆಫ್ ಸೇರಿ ಒಟ್ಟು 4,000 ಜನರು ಕೆಲಸ ಕಳೆದುಕೊಂಡಿದ್ದಾರೆ. ನವೆಂಬರ್ ತಿಂಗಳಲ್ಲಿ ಬಹುತೇಕ ಎಲ್ಲಾ ಉದ್ಯೋಗಿಗಳಿಗೆ ಅರ್ಧದಷ್ಟು ಸಂಬಳಕಡಿತ ಮಾಡಲಾಗಿತ್ತು. ಈ ಬಾರಿ ಮಾಡಲಾದ ಲೇ ಆಫ್​ನಲ್ಲಿ ಉದ್ಯೋಗಿಗಳಿಗೆ ತೀರಾ ಕಡಿಮೆ ಪರಿಹಾರ ಕೊಡಲಾಗಿದೆ. ಕೆಲವರಿಗೆ ಹೆಚ್ಚುವರಿ ಸಂಬಳ ಇಲ್ಲದೆಯೇ ಮನೆಗೆ ಕಳುಹಿಸಲಾಗಿದೆ.

ಇದನ್ನೂ ಓದಿಗೂಗಲ್ ಸಿಇಒ ಸುಂದರ್ ಪಿಚೈ ಅವರ ಐಐಟಿ ಖರಗ್‌ಪುರ​ ಕ್ಲಾಸ್​ಮೇಟ್​​ ಶರ್ಮಿಷ್ಠಾ ದುಬೆ ಸಾಧನೆ ಏನು ಗೊತ್ತಾ!?

2021ರ ಡಿಸೆಂಬರ್ ತಿಂಗಳಲ್ಲಿ ಸಿಇಒ ವಿಶಾಲ್ ಗರ್ಗ್ ಅವರು ವಿಡಿಯೋ ಕಾಲ್​ನಲ್ಲಿ 900 ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕುವ ನಿರ್ಧಾರ ಪ್ರಕಟಿಸಿದ್ದರು. ಈ ವಿಡಿಯೋ ಕಾನ್ಫೆರೆನ್ಸಿಂಗ್​ನ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಬಹಳಷ್ಟು ಜನರು ಗರ್ಗ್ ಅವರದ್ದು ಅಮಾನುಷ ವರ್ತನೆ ಎಂದು ಟೀಕಿಸಿದ್ದರು.

2022ರ ಮಾರ್ಚ್ ತಿಂಗಳಲ್ಲಿ ಕೆಲ ಉದ್ಯೋಗಿಗಳಿಗೆ ಕೆಲಸ ಹೋಗುವ ನೋಟೀಸ್ ತಲುಪುವ ಮುನ್ನವೇ ಪರಿಹಾರ ಹಣ ಸಿಕ್ಕಿದ ಘಟನೆಯೂ ಎಲ್ಲೆಡೆ ಟೀಕೆಗೆ ಗುರಿಯಾಗಿತ್ತು. ಉದ್ಯೋಗಿಗಳನ್ನು ಬಹಳ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳ ಮಧ್ಯೆಯೇ ಬೆಟರ್ ಡಾಟ್ ಕಾಮ್ ಸಿಇಒ ವಿಶಾಲ್ ಗರ್ಗ್ ತಮ್ಮ ಲೇ ಆಫ್ ಕೈಂಕರ್ಯವನ್ನು ಮುಂದುವರಿಸಿದ್ದರು.

ಇದನ್ನೂ ಓದಿLayoffs: ನವೆಂಬರ್​ನಲ್ಲಿ ಶೇ. 20 ಈಗ ಶೇ. 30, ಒಟ್ಟು ಅರ್ಧದಷ್ಟು ಉದ್ಯೋಗಿಗಳ ಲೇ ಆಫ್ ಮಾಡಿದ ನೂರೋ

ಅಮೆರಿಕದ ನ್ಯೂಯಾರ್ಕ್​ನಲ್ಲಿರುವ ವರ್ಲ್ಡ್ ಟ್ರೇಡ್ ಸೆಂಟರ್​ನಲ್ಲಿ ಮುಖ್ಯ ಕಚೇರಿ ಹೊಂದಿರುವ ಬೆಟರ್ ಡಾಟ್ ಕಾಂ ಮಾರ್ಟ್​ಗೇಜ್ ಕಂಪನಿಯಾಗಿದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸ್ವಂತವಾಗಿ ಏಜೆಂಟ್​ಗಳನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿತ್ತು. ಆದೀಗ ಹೆಚ್ಚು ಸಫಲ ಕಾಣದ ಹಿನ್ನೆಲೆಯಲ್ಲಿ ಪಾರ್ಟ್ನರ್​ಶಿಪ್ ಏಜೆಂಟ್ ಆಧಾರದಲ್ಲಿ ವ್ಯವಹಾರ ನಡೆಸಲು ಕಂಪನಿ ನಿರ್ಧರಿಸಿದೆ. ಹೀಗಾಗಿ, ಏಜೆಂಟ್​ಗಳಾಗಿ ಕೆಲಸ ಮಾಡುತ್ತಿದ್ದ ಅದರ ರಿಯಲ್ ಎಸ್ಟೇಟ್ ವಿಭಾಗದ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವಂತಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ