ವಿದೇಶಗಳಲ್ಲಿ ಕೆಲಸ ಕೊಡಿಸುತ್ತೇವೆನ್ನುವ ಫೇಕ್ ಕಂಪನಿಗಳನ್ನು ಗುರುತಿಸುವುದು ಹೇಗೆ? ಕರ್ನಾಟಕದ ನಕಲಿ ಏಜೆಂಟ್​ಗಳ ಪಟ್ಟಿ

foreign job scams: ಕಾಂಬೋಡಿಯಾ, ಲಾವೋಸ್, ಥಾಯ್ಲೆಂಡ್ ಮೊದಲಾದ ಸ್ಥಳಗಳಲ್ಲಿ ಜಾಬ್ ಆಫರ್ ಬಂದರೆ ಹುಷಾರಾಗಿರಿ. ಇಲ್ಲಿ ಸೈಬರ್ ಕ್ರೈಮ್ ಇತ್ಯಾದಿ ಘಾತುಕ ಕಾರ್ಯಗಳನ್ನು ಎಸಗುವ ಕಂಪನಿಗಳಿಗೆ ರೆಕ್ರುಟ್ಮೆಂಟ್ ನಡೆಯುತ್ತದೆ. ಉದ್ಯೋಗ ಕೊಡಿಸುತ್ತೇವೆಂದು ಏಜೆಂಟ್​​ಗಳು ನಿಮ್ಮನ್ನು ಈ ಕಂಪನಿಗಳ ಜಾಲಕ್ಕೆ ತಳ್ಳಿಬಿಟ್ಟಾರು. ಭಾರತದ ವಿದೇಶ ವ್ಯವಹಾರಗಳ ಸಚಿವಾಲಯವು ಈ ಬಗ್ಗೆ ಅಡ್ವೈಸರಿ ಬಿಡುಗಡೆ ಮಾಡಿದೆ.

ವಿದೇಶಗಳಲ್ಲಿ ಕೆಲಸ ಕೊಡಿಸುತ್ತೇವೆನ್ನುವ ಫೇಕ್ ಕಂಪನಿಗಳನ್ನು ಗುರುತಿಸುವುದು ಹೇಗೆ? ಕರ್ನಾಟಕದ ನಕಲಿ ಏಜೆಂಟ್​ಗಳ ಪಟ್ಟಿ
ವಂಚಕ ಕಂಪನಿಗಳು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 31, 2024 | 4:45 PM

ನವದೆಹಲಿ, ಮೇ 31: ವಿದೇಶಗಳಲ್ಲಿ ಕೆಲಸ ಮಾಡಿ ಕೈತುಂಬ ಹಣ ಸಂಬಳ ಪಡೆಯಬೇಕೆಂಬ ಹಂಬಲ ಹೆಚ್ಚಿನ ಜನರಲ್ಲಿ ಇರುತ್ತೆ. ವಿದೇಶದಲ್ಲಿ ಕೆಲಸ ಇದೆ ಎಂದು ಯಾವುದಾದರೂ ಜಾಬ್ ಆಫರ್ ಬಂದರೆ ಕಣ್ಮುಚ್ಚಿ ಒಪ್ಪಿ ಬಿಡುತ್ತೇವೆ. ಹೇಗೋ ಒಂದು ಫಾರೀನ್ ಕೆಲಸ ಸಿಕ್ಕರೆ ಸಾಕು ಎಂಬ ಆತುರದಲ್ಲಿ ವಂಚಕರ ಗಾಳಕ್ಕೆ ಬೀಳುವ ಸಾಧ್ಯತೆ ಇದೆ. ಉದ್ಯೋಗ ಕೊಡಿಸುತ್ತೇವೆಂದು ಸುಳ್ಳು ಭರವಸೆ ನೀಡಿ ಕೆಲ ನಕಲಿ ಏಜೆಂಟ್​ಗಳು (fake agents) ಹಣ ಲಪಟಾಯಿಸಬಹುದು. ವಂಚಕ ಕಂಪನಿಗಳಲ್ಲಿ ಕೆಲಸ ಮಾಡಲು ಕಳುಹಿಸಬಹುದು. ಹೀಗೆ ವಿವಿಧ ಸಾಧ್ಯತೆಗಳಿವೆ. ಕಾಂಬೋಡಿಯಾ, ಥಾಯ್ಲೆಂಡ್, ಲಾವೋಸ್ ಮೊದಲಾದ ಆಗ್ನೇಯ ಏಷ್ಯನ್ (south east asian countries) ದೇಶಗಳಲ್ಲಿ ಉದ್ಯೋಗಾವಕಾಶ (job offer) ಬಂದರೆ ಹುಷಾರಾಗಿರಿ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಡ್ವೈಸರಿ ಹೊರಡಿಸಿದೆ.

ಸೈಬರ್ ಕ್ರೈಮ್ ಕಾರ್ಯಗಳಿಗೆ ಬಳಕೆ

ಕಾಂಬೋಡಿಯಾ, ಲಾವೋಸ್ ಮೊದಲಾದ ಕೆಲಸ ಸೌತ್ ಈಸ್ಟ್ ದೇಶಗಳಲ್ಲಿ ನಕಲಿ ಏಜೆಂಟ್​​ಗಳು ಚಟುವಟಿಯಲ್ಲಿದ್ದಾರೆ. ಭಾರತದಲ್ಲಿರುವ ಕೆಲ ಏಜೆಂಟ್​ಗಳ ಜೊತೆ ಸೇರಿ ಇವರು ಸೈಬರ್ ಕ್ರೈಮ್​ಗಳಲ್ಲಿ ತೊಡಗಿರುವ ಸ್ಕ್ಯಾಮ್ ಕಂಪನಿಗಳಿಗೆ ಜನರನ್ನು ಸರಬರಾಜು ಮಾಡುತ್ತಿದ್ದಾರೆ. ಜಾಬ್ ಆಫರ್ ಪಡೆದಿರುವ ಭಾರತೀಯರು ಕಾಂಬೋಡಿಯಾದ ರಾಜಧಾನಿ ನಗರಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಅಮೆರಿಕಕ್ಕೆ ಹೋಗಿ ಭೂಮಿತ್ರ ಮೂಲಕ ರೈತರಿಗೆ ಡಬಲ್ ಧಮಾಕ ಸೃಷ್ಟಿಸುತ್ತಿರುವ ಕನ್ನಡಿಗ ಆದಿತ್ ಮೂರ್ತಿ

ಲಾವೋಸ್​ನಲ್ಲಿ ಡಿಜಿಟಲ್ ಸೇಲ್ಸ್, ಮಾರ್ಕೆಟಿಂಗ್ ಕೆಲಸದ ಆಫರ್?

ಲಾವೋಸ್​ನಲ್ಲಿ ಡಿಜಿಟಲ್ ಸೇಲ್ಸ್ ಅಂಡ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ಸ್ ಕೆಲಸ ಹಾಗೂ ಕಸ್ಟಮರ್ ಸಪೋರ್ಟ್ ಸರ್ವಿಸ್ ಕೆಲಸಗಳಿಗೆ ನೇಮಕಾತಿ ನಡೆಯುತ್ತಿದೆ ಎಂಬ ಜಾಹೀರಾತು ನೀಡಿ ಉದ್ಯೋಗಾಕಾಂಕ್ಷಿಗಳನ್ನು ಸೆಳೆಯುವ ಕೆಲಸ ಮಾಡಲಾಗುತ್ತಿದೆ. ಲಾವೋಸ್​ನ ಸ್ಪೆಷಲ್ ಎನಾಮಿಕ್ ಝೋನ್​ನಲ್ಲಿ ಕಾಲ್ ಸೆಂಟರ್ ಸ್ಕ್ಯಾಮ್, ಕ್ರಿಪ್ಟೋ ಕರೆನ್ಸಿ ಫ್ರಾಡ್​ನಲ್ಲಿ ನಿರತವಾಗಿರುವ ಕಂಪನಿಗಳಿದ್ದು ಅಲ್ಲಿಗೆ ಕಳುಹಿಸಲಾಗುತ್ತಿದೆ. ಭಾರತ, ಸಿಂಗಾಪುರ, ದುಬೈ ಮೊದಲಾದ ಕಡೆ ಈ ಕಂಪನಿಗಳೊಂದಿಗೆ ಸಂಪರ್ಕ ಇರುವ ಏಜೆಂಟ್​ಗಳಿದ್ದಾರೆ.

ಥಾಯ್ಲೆಂಡ್ ಅಥವಾ ಲಾವೋಸ್​ನಲ್ಲಿ ಕೆಲಸ ಇದೆ ಎಂದು ಏಜೆಂಟ್ ವತಿಯಿಂದ ಟೂರಿಸ್ಟ್ ವೀಸಾ ಕೊಡಿಸಲಾಗಿದ್ದರೆ ಹುಷಾರಾಗಿರಿ. ಇಲ್ಲಿ ಉದ್ಯೋಗ ಮಾಡಬೇಕಾದರೆ ಮುಂಚಿತವಾಗಿಯೇ ವರ್ಕ್ ವೀಸಾ ಪಡೆಯಬೇಕು. ಅಲ್ಲಿಗೆ ಹೋದ ಬಳಿಕ ವರ್ಕ್ ಪರ್ಮಿಟ್ ಪಡೆಯಲು ಆಗುವುದಿಲ್ಲ.

ಅಕ್ರಮ ಏಜೆಂಟ್​​ಗಳನ್ನು ಪತ್ತೆ ಹಚ್ಚುವುದು ಹೇಗೆ?

ಭಾರತದಲ್ಲಿರುವ ಅಕ್ರಮ ಏಜೆಂಟ್​ಗಳನ್ನು ಸರ್ಕಾರ ಗುರುತಿಸಿ ಪಟ್ಟಿ ಮಾಡುತ್ತದೆ. ಈ ಮುಂದಿನ ವೆಬ್​ಸೈಟ್​ಗೆ ಹೋದರೆ ಅಧಿಕೃತ ಮತ್ತು ಅನಧಿಕೃತ ಏಜೆಂಟ್​ಗಳ ಪಟ್ಟಿ ನೋಡಬಹುದು.

ವೆಬ್​ಸೈಟ್ ವಿಳಾಸ ಇಂತಿದೆ: www.emigrate.gov.in

ಇದನ್ನೂ ಓದಿ: ಸರ್ಕಾರಿ ಬೆಂಬಲದ ಪಿಎಂ ವಿದ್ಯಾಲಕ್ಷ್ಮೀ ಯೋಜನೆ; 15 ಲಕ್ಷ ರೂವರೆಗೆ ಸಾಲದ ಅವಕಾಶ

ಇಲ್ಲಿ ಮೈನ್ ಮೆನುನಲ್ಲಿ ರೆಕ್ರುಟಿಂಗ್ ಏಜೆಂಟ್ ಟ್ಯಾಬ್ ಅಡಿಯಲ್ಲಿ ಅನಧಿಕೃತ ಏಜೆಂಟ್​ಗಳ ಪಟ್ಟಿಗೆ ಲಿಂಕ್ ಇರುತ್ತದೆ. ಅಧಿಕೃತ ಏಜೆಂಟ್​ಗಳ ಪಟ್ಟಿಯನ್ನೂ ಕಾಣಬಹುದು. ಇಲ್ಲಿ ರಾಜ್ಯವಾರು ಪಟ್ಟಿ ವೀಕ್ಷಿಸಲು ಸಾಧ್ಯ. ಕರ್ನಾಟಕದಲ್ಲಿ ಅಧಿಕೃತ ಏಜೆಂಟ್ಸ್ ಯಾರು, ಅನಧಿಕೃತ ಏಜೆಂಟ್ಸ್ ಯಾರು ಎಂಬ ಪಟ್ಟಿ ನಿಮಗೆ ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ