ಭಾರತ್ ಬಂದ್: ಬುಧವಾರ ಷೇರುಬಜಾರು, ಬ್ಯಾಂಕು ತೆರೆದಿರುತ್ತಾ?

Bharat Bandh on July 9th: ಜುಲೈ 9, ಬುಧವಾರ ವಿವಿಧ ಟ್ರೇಡ್ ಯೂನಿಯನ್​​ಗಳು ಭಾರತ್ ಬಂದ್​​ಗೆ ಕರೆ ಕೊಟ್ಟಿವೆ. ಬ್ಯಾಂಕಿಂಗ್, ಕೈಗಾರಿಕೆ ಸೇರಿ ವಿವಿಧ ವಲಯಗಳಲ್ಲಿರುವ ಕಾರ್ಮಿಕರು ಈ ರಾಷ್ಟ್ರಮಟ್ಟದ ಮುಷ್ಕರಕ್ಕೆ ಬೆಂಬಲ ಕೊಡುವ ನಿರೀಕ್ಷೆ ಇದೆ. ಶಾಲಾ ಕಾಲೇಜು, ಸರ್ಕಾರಿ ಕಚೇರಿ ಇತ್ಯಾದಿಗಳಿಗೆ ಅಧಿಕೃತವಾಗಿ ರಜೆ ನೀಡಿಲ್ಲ. ಕೆಲವೆಡೆ ವೈಯಕ್ತಿಕವಾಗಿ ಕಾರ್ಮಿಕರು ಮುಷ್ಕರದಲ್ಲಿ ತೊಡಗುವುದರಿಂದ ಸೇವೆಗಳಲ್ಲಿ ವ್ಯತ್ಯಯವಾಗಬಹುದು.

ಭಾರತ್ ಬಂದ್: ಬುಧವಾರ ಷೇರುಬಜಾರು, ಬ್ಯಾಂಕು ತೆರೆದಿರುತ್ತಾ?
ಭಾರತ್ ಬಂದ್

Updated on: Jul 08, 2025 | 6:20 PM

ನವದೆಹಲಿ, ಜುಲೈ 8: ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ (anti worker policy) ಅನುಸರಿಸುತ್ತಿದೆ ಎಂದು ಆರೋಪಿಸಿ ವಿವಿಧ ಟ್ರೇಡ್ ಯೂನಿಯನ್​​ಗಳು ಜುಲೈ 9, ಬುಧವಾರದಂದು ಭಾರತ್ ಬಂದ್​​ಗೆ (Bharat Bandh) ಕರೆ ಕೊಟ್ಟಿವೆ. ಹತ್ತು ಟ್ರೇಡ್ ಯೂನಿಯನ್​​ಗಳು ಒಟ್ಟು ಸೇರಿ ನಡೆಸುತ್ತಿರುವ ರಾಷ್ಟ್ರಮಟ್ಟದ ಬೃಹತ್ ಪ್ರತಿಭಟನೆಯಲ್ಲಿ (nationwide protest) 25 ಕೋಟಿಗೂ ಅಧಿಕ ಕಾರ್ಮಿಕರು ಭಾಗವಹಿಸುವ ನಿರೀಕ್ಷೆ ಇದೆ. ಬ್ಯಾಂಕಿಂಗ್, ಕೈಗಾರಿಕೆ, ಕೃಷಿ, ಸಾರಿಗೆ, ಪೋಸ್ಟಲ್ ಹೀಗೆ ನಾನಾ ಸೆಕ್ಟರ್​​ಗಳ ಕಾರ್ಮಿಕರು ಭಾರತ್ ಬಂದ್​ಗೆ ಬೆಂಬಲಿಸುವ ನಿರೀಕ್ಷೆ ಇದೆ.

ಬ್ಯಾಂಕುಗಳು ಮತ್ತು ಷೇರು ಮಾರುಕಟ್ಟೆಯೂ ಬಂದ್ ಆಗುತ್ತವಾ?

ಬ್ಯಾಂಕಿಂಗ್ ವಲಯದ ಹಲವು ಕೆಲಸಗಾರರು ಜುಲೈ 9ರ ಭಾರತ್ ಬಂದ್​​ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹೀಗಾಗಿ, ಬ್ಯಾಂಕುಗಳು ಬುಧವಾರ ಕಾರ್ಯನಿರ್ವಹಿಸುತ್ತವಾ ಇಲ್ಲವಾ ಅನ್ನುವ ಅನುಮಾನ ಹಲವರಲ್ಲಿ ಇದೆ. ಆದರೆ, ಬ್ಯಾಂಕುಗಳು ಜುಲೈ 9ಕ್ಕೆ ಅಧಿಕೃತವಾಗಿ ರಜೆ ಘೋಷಿಸಿಲ್ಲ. ನಾಳೆ ಬ್ಯಾಂಕುಗಳು ಬಹುತೇಕ ಬಾಗಿಲು ತೆರಿದಿರುವ ಸಾಧ್ಯತೆ ಇದೆಯಾದರೂ ಬ್ಯಾಂಕ್ ಉದ್ಯೋಗಿಗಳು ಮುಷ್ಕರದಲ್ಲಿ ತೊಡಗುವುದರಿಂದ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗಬಹುದು.

ಇದನ್ನೂ ಓದಿ: Bharat Bandh: ನಾಳೆ ಭಾರತ್ ಬಂದ್ ಘೋಷಿಸಲು ಕಾರಣವೇನು? ಏನೆಲ್ಲ ಓಪನ್, ಯಾವುದು ಬಂದ್?

ಇದನ್ನೂ ಓದಿ
ನಾಳೆ ಭಾರತ್ ಬಂದ್; ಏನೆಲ್ಲ ಓಪನ್, ಯಾವುದು ಬಂದ್?
ಟ್ರಂಪ್ ಟ್ಯಾರಿಫ್​​ನಿಂದ ಬಾಂಗ್ಲಾ ತತ್ತರ; ಭಾರತಕ್ಕೆ ಲಾಭ
ಅದಾನಿ ಪವರ್ ಸಾಮರ್ಥ್ಯ 18,150 ಮೆ.ವ್ಯಾ.ಗೆ ಏರಿಕೆ
ಟ್ರಂಪ್ ಟ್ಯಾರಿಫ್​​ನಿಂದ ಸದ್ಯ ಭಾರತ ಬಚಾವ್

ಇನ್ನು, ಷೇರು ಮಾರುಕಟ್ಟೆ ಕೂಡ ಎಂದಿನಿಂತೆ ತೆರೆದಿರಬಹುದು. ಷೇರು ವಿನಿಮಯ ಕೇಂದ್ರಗಳಾದ ಬಿಎಸ್​​ಇ ಮತ್ತು ಎನ್​ಎಸ್​ಇ ರಜೆ ಘೋಷಿಸಿಲ್ಲ.

ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ ಆಗುತ್ತಿರುವುದು ಯಾಕೆ?

ಕೇಂದ್ರ ಸರ್ಕಾರವು ಕಾರ್ಪೊರೇಟ್ ಪರವಾದ ಮತ್ತು ಕಾರ್ಮಿಕ ವಿರೋಧಿಯಾದ ನೀತಿಯನ್ನು ಅನುಸರಿಸುತ್ತಿದೆ. ಕಾರ್ಪೊರೇಟ್ ಕಂಪನಿಗಳಿಗೋಸ್ಕರ ಕಾರ್ಮಿಕರ ಹಿತ ಬಲಿಕೊಡುತ್ತಿದೆ ಎನ್ನುವುದು ಕಾರ್ಮಿಕ ಸಂಘಟನೆಗಳ ಆರೋಪ.

ಇದನ್ನೂ ಓದಿ: ತಡಬಡಾಯಿಸುತ್ತಿರುವ ಬಾಂಗ್ಲಾದೇಶ; ಟ್ರಂಪ್ ಟ್ಯಾರಿಫ್​ನಿಂದ ಬಾಂಗ್ಲಾಗೆ ಭಾರೀ ಹೊಡೆತ; ಭಾರತಕ್ಕೆ ಎಷ್ಟು ಲಾಭ?

ಕೇಂದ್ರ ರೂಪಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ನಿಲ್ಲಿಸಬೇಕು; ಮುಷ್ಕರ ನಡೆಸುವ ಕಾರ್ಮಿಕರ ಹಕ್ಕು ಪುನಃಸ್ಥಾಪಿಸಿ; ಮನ್ರೆಗಾ ಸ್ಕೀಮ್ ಅನ್ನು ನಗರಗಳಿಗೂ ವಿಸ್ತರಿಸಿ, ವೇತನವನ್ನೂ ಹೆಚ್ಚಿಸಿ ಎಂಬಿತ್ಯಾದಿ ಪ್ರಮುಖ 17 ಬೇಡಿಕೆಗಳನ್ನು ಟ್ರೇಡ್ ಯೂನಿಯನ್​​ಗಳು ಸರ್ಕಾರದ ಮುಂದಿಟ್ಟಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ