‘ಪೇ’ ಹೆಸರಿಗೆ ಕಿತ್ತಾಟ; ಭಾರತ್​ಪೆ, ಫೋನ್​ಪೆ ನಡುವಿನ ವ್ಯಾಜ್ಯ ಸೌಹಾರ್ದಯುತವಾಗಿ ಅಂತ್ಯ

BharatPe, PhonePe issues resolved: ಭಾರತ್ ಪೇ ಮತ್ತು ಫೋನ್ ಪೇ ಗ್ರೂಪ್ ಸಂಸ್ಥೆಗಳು ತಮ್ಮ ಕಂಪನಿ ಮತ್ತು ಉತ್ಪನ್ನಗಳ ಹೆಸರಿನಲ್ಲಿರುವ ಪೇ ಹೆಸರಿನ ಗೊಂದಲವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡಿವೆ. ಫೋನ್​ಪೆ 2015ರಲ್ಲಿ ಆರಂಭವಾದರೆ, ಭಾರತ್ ಪೇ 2018ರಲ್ಲಿ ಶುರುವಾಗಿದೆ. 2018ರಿಂದಲೂ ಪೇ ಅಕ್ಷರದ ಬಗ್ಗೆ ಫೋನ್​ಪೇ ತಕರಾರು ವ್ಯಕ್ತಪಡಿಸುತ್ತಲೇ ಬಂದಿದೆ. ದೆಹಲಿ ಹೈಕೋರ್ಟ್ ಮತ್ತು ಬಾಂಬೆ ಹೈಕೋರ್ಟ್​ಗಳಲ್ಲಿ ವ್ಯಾಜ್ಯಗಳು ನಡೆಯುತ್ತಿವೆ. ಈ ಹೊತ್ತಿನಲ್ಲಿ ಪರಸ್ಪರ ಮಾತನಾಡಿ ಸಮಸ್ಯೆ ನಿವಾರಿಕೊಂಡಿವೆ ಎರಡೂ ಕಂಪನಿಗಳ ಮ್ಯಾನೇಜ್ಮೆಂಟ್.

‘ಪೇ’ ಹೆಸರಿಗೆ ಕಿತ್ತಾಟ; ಭಾರತ್​ಪೆ, ಫೋನ್​ಪೆ ನಡುವಿನ ವ್ಯಾಜ್ಯ ಸೌಹಾರ್ದಯುತವಾಗಿ ಅಂತ್ಯ
ಫೋನ್​ಪೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 26, 2024 | 4:19 PM

ನವದೆಹಲಿ, ಮೇ 26: ಭಾರತದ ಎರಡು ಪ್ರಮುಖ ಹಣಕಾಸು ತಂತ್ರಜ್ಞಾನ ಕಂಪನಿಗಳಾದ ಭಾರತ್​ಪೆ (BharatPe) ಮತ್ತು ಫೋನ್​ಪೆ (PhonePe) ಹೆಸರಿನಲ್ಲಿರುವ ಸಾಮ್ಯತೆ ಎಲ್ಲರ ಗಮನಕ್ಕೆ ಬಂದಿರಬಹುದು. ಹೆಸರಿನ ಕೊನೆಯಲ್ಲಿರುವ ‘ಪೇ’ ಅಕ್ಷರ ಎರಡೂ ಕಂಪನಿಗಳು ಒಂದೇ ಗ್ರೂಪ್​ಗೆ ಸೇರಿವೆಯಾ ಎನ್ನುವ ಅನುಮಾನ ಮೂಡಿಸಬಹುದು. ಈ ವಿಚಾರವಾಗಿ ಎರಡೂ ಕಂಪನಿಗಳು ಕಳೆದ ಐದಾರು ವರ್ಷಗಳಿಂದಲೂ ಕೋರ್ಟ್ ಕಟಕಟೆಯಲ್ಲಿ ಕಿತ್ತಾಡಿಕೊಂಡಿವೆ. ಎಲ್ಲಿಯೂ ಇನ್ನೂ ಅಂತಿಮ ಪರಿಹಾರ ಸಿಕ್ಕಿಲ್ಲ. ಇದೇ ವೇಳೆ, ಎರಡೂ ಕಂಪನಿಗಳು ಈ ವಿವಾದವನ್ನು ಸೌಹಾರ್ದಯುತವಾಗಿ ಶಮನ ಮಾಡಿಕೊಂಡಿವೆ.

‘ವ್ಯಾಜ್ಯವನ್ನು ಪರಿಸ್ಪರ ಸೌಹಾರ್ದಯುತವಾಗಿ ಬಗೆಹರಿಸಿಕೊಂಡಿದ್ದೇವೆ. ಇದಕ್ಕೆ ಸಂಬಂಧಿಸಿದ ಎಲ್ಲಾ ಕೋರ್ಟ್ ಕೇಸ್​ಗಳು ಅಂತ್ಯಗೊಳ್ಳಲಿವೆ,’ ಎಂದು ಭಾರತ್ ಪೇ ಮತ್ತು ಫೋನ್ ಪೇ ಗ್ರೂಪ್ ಸಂಸ್ಥೆಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಇದನ್ನೂ ಓದಿ: ಐಟಿ ಉದ್ಯೋಗಾವಕಾಶ; ಬೆಂಗಳೂರನ್ನು ಮೀರಿಸಿದ ಹೈದರಾಬಾದ್; ಯಾವ ಸಾಫ್ಟ್​ವೇರ್ ಸ್ಪೆಷಲಿಸ್ಟ್​ಗಳಿಗೆ ಬೇಡಿಕೆ ಹೆಚ್ಚಿದೆ, ನೋಡಿ

ಈಗ ಎರಡೂ ಕಂಪನಿಗಳು ಟ್ರೇಡ್​ಮಾರ್ಕ್ ನೊಂದಣಿಗೆ ಪರಸ್ಪರ ವಿರೋಧಿಸಿ ಹಾಕಿದ್ದ ಎಲ್ಲಾ ಕೇಸ್​ಗಳನ್ನು ಹಿಂಪಡೆಯಲು ಕ್ರಮ ತೆಗೆದುಕೊಂಡಿವೆ. ದೆಹಲಿ ಹೈಕೋರ್ಟ್ ಮತ್ತು ಬಾಂಬೆ ಹೈಕೋರ್ಟ್​ನಲ್ಲಿರುವ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿ ಮಾಡಿಕೊಳ್ಳಲಾಗಿರುವ ಒಪ್ಪಂದದ ಅಂಶಗಳನ್ನು ಪಾಲಿಸಲು ಎರಡೂ ಸಂಸ್ಥೆಗಳು ಬದ್ಧವಾಗಿವೆ. ಆದರೆ, ಎರಡು ಕಂಪನಿಗಳ ಮಧ್ಯೆ ವ್ಯಾಜ್ಯ ಪರಿಹಾರಕ್ಕೆ ಯಾವ ರೀತಿಯ ಒಪ್ಪಂದ ಆಗಿದೆ ಎನ್ನುವುದು ಗೊತ್ತಾಗಿಲ್ಲ. ತಮ್ಮ ಟ್ರೇಡ್​ಮಾರ್ಕ್​ಗಳ ನೊಂದಣಿ ಮಾಡಿಸುವುದನ್ನು ಅವು ಮುಂದುವರಿಸಲಿವೆ.

‘ಉದ್ಯಮಕ್ಕೆ ಇದು ಸಕಾರಾತ್ಮಕ ಬೆಳವಣಿಗೆ ಎನಿಸುತ್ತದೆ. ಎರಡೂ ಕಂಪನಿಗಳ ಮ್ಯಾನೇಜ್ಮೆಂಟ್ ತೋರಿದ ಪಕ್ವತೆ ಮತ್ತು ವೃತ್ತಿಪರತೆಯನ್ನು ನಾನು ಮೆಚ್ಚುತ್ತೇನೆ. ಎಲ್ಲಾ ಕಾನೂನು ತೊಡಕನ್ನು ನಿವಾರಿಸಿಕೊಂಡು ಒಳ್ಳೆಯ ಡಿಜಿಟಲ್ ಪೇಮೆಂಟ್ ಇಕೋಸಿಸ್ಟಂ ನಿರ್ಮಿಸಲು ತಮ್ಮ ಶಕ್ತಿ ಮತ್ತು ಸಂಪನ್ಮೂಲಗಳನ್ನು ವಿನಿಯೋಗಿಸಲಿವೆ,’ ಎಂದು ಭಾರತ್​ಪೆ ಛೇರ್ಮನ್ ರಜನೀಶ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಷೇರು ಮಾರುಕಟ್ಟೆಯ ಈ ಸ್ಫೋಟಕ ಬೆಳವಣಿಗೆ ಯಾಕಾಗುತ್ತಿದೆ, ಹೇಗಾಗುತ್ತಿದೆ?

ಫೋನ್​ಪೆ 2015ರಲ್ಲಿ ಸ್ಥಾಪನೆಯಾಗಿದ್ದು. ಭಾರತ್​ಪೆ ಸಂಸ್ಥೆಯನ್ನು ಅಶ್ನೀರ್ ಗ್ರೋವರ್ ಅವರು 2018ರಲ್ಲಿ ಆರಂಭಿಸಿದ್ದಾರೆ. ಫೋನ್​ಪೆ ಈಗ ದೇಶದ ನಂಬರ್ ಒನ್ ಯುಪಿಐ ಸರ್ವಿಸ್ ಪ್ರೊವೈಡರ್ ಆಗಿದೆ. ಅಮೆರಿಕದ ವಾಲ್ಮಾರ್ಟ್ ಎಂಬ ರೀಟೇಲ್ ವ್ಯಾಪಾರ ಮಳಿಗೆ ಕಂಪನಿಯು ಫೋನ್​ಪೆಯನ್ನು ಖರೀದಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ