AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎದೆ ಹಾಲು ಸಂಸ್ಕರಣೆ, ಮಾರಾಟ, ವಾಣಿಜ್ಯೀಕರಣಕ್ಕೆ ಅನುಮತಿ ನಿರಾಕರಿಸಿದ ಎಫ್​ಸಿಸಿಎಐ

No to Human milk commercialization: ತಾಯಿ ಹಾಲು ಸಂಸ್ಕರಣೆ ಮತ್ತು ಮಾರಾಟದ ಮೂಲಕ ವಾಣಿಜ್ಯಾತ್ಮಕವಾಗಿ ಲಾಭ ಮಾಡಿಕೊಳ್ಳುವವರಿಗೆ ಸರ್ಕಾರ ಕಡಿವಾಣ ಹಾಕಲು ಮುಂದಾಗಿದೆ. ಸ್ತನ ಹಾಲಿನ ಪ್ರೋಸಸಿಂಗ್ ಮತ್ತು ಸೇಲ್ ಮಾಡಬಾರದು ಎಂದು ಎಫ್​ಸಿಸಿಎಐ ಸೂಚಿಸಿದೆ. ಸರ್ಕಾರದಿಂದ ನೊಂದಾಯಿತವಾದ ಸಂಸ್ಥೆಗಳು ಮಾತ್ರವೇ ಈ ಹಾಲಿನ ಸಂಗ್ರಹ ಮಾಡಿ ಹಂಚಿಕೆ ಮಾಡಬಹುದು. ಯಾರಾದರೂ ನಿಯಮ ಮೀರಿದರೆ ಅವರಿಗೆ ಪರವಾನಿಗೆ ನೀಡಬಾರದು ಎಂದು ಎಲ್ಲಾ ಸಂಬಂಧಿತ ಪ್ರಾಧಿಕಾರಗಳಿಗೆ ಎಫ್​ಸಿಸಿಎಐ ತಿಳಿಸಿದೆ.

ಎದೆ ಹಾಲು ಸಂಸ್ಕರಣೆ, ಮಾರಾಟ, ವಾಣಿಜ್ಯೀಕರಣಕ್ಕೆ ಅನುಮತಿ ನಿರಾಕರಿಸಿದ ಎಫ್​ಸಿಸಿಎಐ
ಎದೆ ಹಾಲು
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 26, 2024 | 1:15 PM

Share

ನವದೆಹಲಿ, ಮೇ 26: ಆಹಾರ ಸುರಕ್ಷತೆ ಮತ್ತು ಪ್ರಮಾಣ ಕಾಯ್ದೆ 2006ರ ಅಡಿಯಲ್ಲಿ ಮನುಷ್ಯರ ಹಾಲಿನ (ತಾಯಿ ಎದೆ ಹಾಲು) ಮಾರಾಟ ಅಥವಾ ಸಂಸ್ಕರಣೆ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರದ ಎಫ್​ಎಸ್​ಎಸ್​ಎಐ (FCCAI) ಹೇಳಿದೆ. ಮಹಿಳೆಯ ಹಾಲು ಮತ್ತು ಅದರಿಂದ ತಯಾರಿಸಲಾಗುವ ಉತ್ಪನ್ನಗಳ (Human milk and products) ವಾಣಿಜ್ಯೀಕರಣಗೊಳಿಸುವುದು (commercialization) ಇತ್ಯಾದಿ ಸಂಬಂಧಿತ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಪ್ರಮಾಣ ಪ್ರಾಧಿಕಾರ ಮೇ 24 ಎಂದು ಹೊರಡಿಸಿದ ಪ್ರಕಟಣೆಯಲ್ಲಿ (advisory) ಸೂಚಿಸಿದೆ.

ಮಾನವ ಹಾಲು ಮತ್ತದರ ಉತ್ಪನ್ನಗಳ ವಾಣಿಜ್ಯೀಕರಣ ಸಂಬಂಧ ಹಲವು ನೊಂದಾಯಿತ ಸಂಸ್ಥೆಗಳು ನೀಡಿರುವ ದೂರನ್ನು ಪರಿಗಣಿಸಿ ಆ ಉತ್ಪನ್ನಗಳ ಅನಧಿಕೃತ ವಾಣಿಜ್ಯೀಕರಣ ವಿರುದ್ಧ ಪ್ರಕಟಣೆ ಹೊರಡಿಸಲಾಗುತ್ತಿದೆ. ಎಫ್​ಸಿಸಿ ಕಾಯ್ದೆ ಅಡಿಯಲ್ಲಿ ಮಾನವ ಹಾಲಿನ ಮಾರಾಟ ಅಥವಾ ಸಂಸ್ಕರಣೆಗೆ ಅನುಮತಿ ಇರುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ಐಟಿ ಉದ್ಯೋಗಾವಕಾಶ; ಬೆಂಗಳೂರನ್ನು ಮೀರಿಸಿದ ಹೈದರಾಬಾದ್; ಯಾವ ಸಾಫ್ಟ್​ವೇರ್ ಸ್ಪೆಷಲಿಸ್ಟ್​ಗಳಿಗೆ ಬೇಡಿಕೆ ಹೆಚ್ಚಿದೆ, ನೋಡಿ

ಯಾರಾದರೂ ಈ ನಿಯಮವನ್ನು ಉಲ್ಲಂಘಿಸಿದರೆ ಅಂಥವರಿಗೆ ಕಾಯ್ದೆ ಅಡಿ ಕ್ರಮ ಜರುಗಿಸಲಾಗುವುದು. ತಾಯಿ ಹಾಲು ಸಂಸ್ಕರಣೆ ಮತ್ತು ಮಾರಾಟದಲ್ಲಿ ತೊಡಗಿ ಕಾಯ್ದೆ ನಿಯಮ ಮೀರುವ ಇಂಥ ಸಂಸ್ಥೆಗಳಿಗೆ ಯಾವ ಪರವಾನಿಗೆ ಅಥವಾ ನೊಂದಣಿ ಸಿಗದಂತೆ ಸರ್ಕಾರದ ಪ್ರಾಧಿಕಾರಗಳು ಎಚ್ಚರ ವಹಿಸಬೇಕು ಎಂದು ತಿಳಿಸಿದೆ.

ಬೆಂಗಳೂರಿನ ವಾಣಿ ವಿಲಾಸ್ ಸೇರಿದಂತೆ ವಿವಿಧೆಡೆ ಸರ್ಕಾರದಿಂದಲೇ ಎದೆ ಹಾಲು ಕೇಂದ್ರಗಳನ್ನು ನಿರ್ಮಿಸಲಾಗಿದೆ. ಆದರೆ, ಖಾಸಗಿ ಸಂಸ್ಥೆಗಳು ವಾಣಿಜ್ಯಾತ್ಮಕವಾಗಿ ಲಾಭ ಮಾಡುವ ಉದ್ದೇಶದಿಂದ ಎದೆ ಹಾಲು ಸಂಗ್ರಹಿಸಿ ಮಾರುವ ಪ್ರಯತ್ನಗಳು ನಡೆಯುತ್ತಿವೆ. ಎಫ್​ಸಿಸಿಐ ಇಂಥ ವಾಣಿಜ್ಯೀಕರಣಕ್ಕೆ ಅನುಮತಿ ನಿರಾಕರಿಸಿದೆ.

ಸಾಂಬಾರ್ ಪದಾರ್ಥ: ಎವರೆಸ್ಟ್, ಎಂಡಿಎಚ್ ಕಂಪನಿಗಳಿಗೆ ನಿರಾಳ

ಸಂಬಾರ್ ಪದಾರ್ಥಗಳನ್ನು ತಯಾರಿಸಿ ಮಾರುವ ಎವರೆಸ್ಟ್ ಮತ್ತು ಎಂಡಿಎಚ್ ಮಸಾಲ ಸಂಸ್ಥೆಗಳಿಗೆ ನಿರಾಳ ತರುವ ಬೆಳವಣಿಗೆಯಲ್ಲಿ, ಈ ಸಂಸ್ಥೆಗಳ ಉತ್ಪನ್ನಗಳಿಗೆ ಎಫ್​ಸಿಸಿಎಐ ಹೆಚ್ಚೂಕಡಿಮೆ ಕ್ಲೀನ್ ಚಿಟ್ ಕೊಟ್ಟಿದೆ.

ಇದನ್ನೂ ಓದಿ: 648 ಬಿಲಿಯನ್ ಡಾಲರ್ ಗಡಿ ದಾಟಿದ ಫಾರೆಕ್ಸ್ ರಿಸರ್ವ್ಸ್; ಹೊಸ ದಾಖಲೆ ಮಟ್ಟದಲ್ಲಿ ನಿಧಿ

ಹಾಂಕಾಂಗ್ ಮತ್ತು ಸಿಂಗಾಪುರದ ಆಹಾರ ಸುರಕ್ಷತೆ ಪ್ರಾಧಿಕಾರಗಳು ಈ ಎರಡು ಸಂಸ್ಥೆಗಳ ಉತ್ಪನ್ನಗಳಲ್ಲಿ ಎಥಿಲಿನ್ ಆಕ್ಸೈಡ್ ಅಂಶ ಇದೆ ಎಂದು ಹೇಳಿ ನಿರ್ಬಂಧ ಹಾಕಿತ್ತು. ಆದರೆ, ಭಾರತದಲ್ಲಿ ವಿವಿಧ ಲ್ಯಾಬ್​​ಗಳಲ್ಲಿ ಈ ಉತ್ಪನ್ನಗಳನ್ನು ಪರೀಕ್ಷಿಸಲಾಗಿದೆ. 28 ಲ್ಯಾಬ್​ಗಳಲ್ಲಿ ನಡೆದ ಪರೀಕ್ಷೆಯಲ್ಲಿ, ಈ ಉತ್ಪನ್ನಗಳಲ್ಲಿ ಯಾವ ಎಥಿಲೀನ್ ಆಕ್ಸೈಡ್ ಅಂಶ ಇರುವುದು ಕಂಡು ಬಂದಿಲ್ಲ ಎನ್ನಲಾಗಿದೆ. ಇನ್ನೂ ಆರು ಲ್ಯಾಬ್​​ಗಳ ಪರೀಕ್ಷಾ ವರದಿ ಬರಬೇಕಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:35 pm, Sun, 26 May 24

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?