Warren Buffett: ಹೂಡಿಕೆದಾರರ ಜಗದ್ಗುರು ವಾರೆನ್​ ಬಫೆಟ್​ ಹೇಳಿರುವ ಬದುಕಿನ ಪಾಠಗಳು

| Updated By: Srinivas Mata

Updated on: Mar 12, 2022 | 8:31 AM

ಹೂಡಿಕೆದಾರರ ಪಾಲಿನ ಮಹಾಗುರು ಎನಿಸಿಕೊಂಡಿರುವ ಶತಕೋಟ್ಯಧಿಪತಿ ಹೂಡಿಕೆದಾರ, 91 ವರ್ಷದ ವಾರೆನ್ ಬಫೆಟ್ ವಿದ್ಯಾರ್ಥಿಗಳಿಗೆ ವೃತ್ತಿ ಬದುಕಿನ ಬಹುಮುಖ್ಯ ಪಾಠಗಳನ್ನು ಹೇಳಿದ್ದಾರೆ.

Warren Buffett: ಹೂಡಿಕೆದಾರರ ಜಗದ್ಗುರು ವಾರೆನ್​ ಬಫೆಟ್​ ಹೇಳಿರುವ ಬದುಕಿನ ಪಾಠಗಳು
ವಾರೆನ್ ಬಫೆಟ್ (ಸಂಗ್ರಹ ಚಿತ್ರ)
Follow us on

ನೀವು ವಾರೆನ್ ಬಫೆಟ್ (​Warren Buffett) ಅವರ ಹೆಸರು ಕೇಳಿದ್ದೀರಾ? ಅವರು ಹೂಡಿಕೆದಾರರ ಪಾಲಿಗೆ ಜಗದ್ಗುರು ಇದ್ದಹಾಗೆ. ಶತಕೋಟ್ಯಧಿಪತಿ. ಅಂಥ ವ್ಯಕ್ತಿ ಕಾಲೇಜು ವಿದ್ಯಾರ್ಥಿಗಳಿಗೆ ಕೆಲವು ಸಲಹೆ ಮಾಡಿದ್ದಾರೆ. ನಿಮ್ಮ ಜೀವನದಲ್ಲಿ ಸಂತೃಪ್ತ ವೃತ್ತಿಯನ್ನು ಕಾಣಬೇಕು ಅಂತ ಬಯಸಿದರೆ ಹಣದ ಬಗ್ಗೆ ಆಲೋಚಿಸಬೇಡಿ ಅಂದಿದ್ದಾರೆ. ತಮ್ಮ ಇತ್ತೀಚಿನ ವಾರ್ಷಿಕ ಪತ್ರದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಹೇಳುವ ಮಾತುಗಳನ್ನೇ ಬರ್ಕ್​ಶೈರ್ ಷೇರುದಾರರ ಜತೆಗೂ ವಿನಿಮಯ ಮಾಡಿಕೊಂಡಿದ್ದಾರೆ. ಒಂದು ವೇಳೆ ಹಣದ ಅಗತ್ಯ ಇಲ್ಲ ಅಂತಾದಲ್ಲಿ, ಒಂದು ಫೀಲ್ಡ್​ನಲ್ಲಿ (ಅವರು ಇಷ್ಟಪಡುವ ಕ್ಷೇತ್ರ) ಮತ್ತು ಇನ್ನೊಂದು, ತಾವು ಆರಿಸಿಕೊಳ್ಳುವ ಸಜ್ಜನರ ಜತೆಗೆ ಉದ್ಯೋಗ ಮಾಡಿ ಎಂದು ಸಲಹೆ ನೀಡುತ್ತೇನೆ, ಎಂದಿದ್ದಾರೆ. ಇಂಥ ಹುಡುಕಾಟದಲ್ಲಿ ಆರ್ಥಿಕ ವಾಸ್ತವಗಳು ಮಧ್ಯ ಬರುತ್ತವೆ ಎಂಬುದನ್ನೂ ಹೇಳಿರುವ ಅವರು, ನಿಮ್ಮ ಅನ್ವೇಷಣೆಯನ್ನು ಎಂದಿಗೂ ಬಿಟ್ಟುಕೊಡದಿರಿ ಅಂತ ವಿದ್ಯಾರ್ಥಿಗಳಿಗೆ ತಿಳಿಸುವುದಾಗಿ ಹಂಚಿಕೊಂಡಿದ್ದಾರೆ.

ಅಂಥದ್ದೊಂದು ಕೆಲಸವನ್ನು ಹುಡುಕಿಕೊಂಡ ಮೇಲೆ, ಅವರು “ಕೆಲಸ ಮಾಡುತ್ತಾ ಇದ್ದೀನಿ” ಎಂಬ ಭಾವದಲ್ಲಿ ಇರುವುದಿಲ್ಲ, ಎಂದಿದ್ದಾರೆ ಬಫೆಟ್. ಈಗ ವಾರೆನ್ ಬಫೆಟ್ ಅವರಿಗೆ 91 ವರ್ಷ ವಯಸ್ಸು. ಬರ್ಕ್​ಶೈರ್ ಹಾಥ್​ವೇ ತಮ್ಮ ಹತೋಟಿಗೆ ತೆಗೆದುಕೊಂಡಿದ್ದು 1965ನೇ ಇಸವಿಯಲ್ಲಿ. ತಮ್ಮ ದೀರ್ಘಾವಧಿಯ ಉದ್ಯಮ ಭಾಗೀದಾರ ಚಾರ್ಲಿ ಮುಂಗರ್​ ಜತೆ ಸೇರಿಕೊಂಡು ಬಹಳ ಕಷ್ಟದಲ್ಲಿದ್ದ ಟೆಕ್ಸ್​ಟೈಲ್ ಮಿಲ್ ಅನ್ನು 70,000 ಕೋಟಿ ಅಮೆರಿಕನ್ ಡಾಲರ್​ಗೂ ಹೆಚ್ಚು ಮಾರುಕಟ್ಟೆ ಮೌಲ್ಯದ ಹೋಲ್ಡಿಂಗ್​ ಕಂಪೆನಿಯಾಗಿ ಬೆಳೆಸಿ ನಿಲ್ಲಿಸಿದ್ದಾರೆ. ಆ ಕಂಪೆನಿ ಬಳಿ ಈಗ ಆಪಲ್, ಕೋಕೋ ಕೋಲಾ, ಜನರಲ್ ಮೋಟಾರ್ಸ್​ನಂಥದ್ದೂ ಸೇರಿ ಹಲವು ಸಂಸ್ಥೆಗಳ ಷೇರುಗಳಿವೆ.

ನಾವು ಏನು ಮಾಡುವುದಕ್ಕೆ ಬಯಸುತ್ತಿದ್ದೆವೋ ಅದನ್ನು ಬರ್ಕ್​ಶೈರ್​ನಲ್ಲಿ ಕಂಡುಕೊಂಡೆವು, ಎಂದು ಬಫೆಟ್​ ಬರೆದುಕೊಂಡಿದ್ದಾರೆ. ಅಂದ ಹಾಗೆ ಈ ಜೋಡಿ (ಮುಂಗರ್ ಹಾಗೂ ಬಫೆಟ್​) ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಸಮಸ್ಯೆ ಕಾಣದೆ ಏನಿಲ್ಲ. ಮುಂಗರ್ ಕಾನೂನು ಕ್ಷೇತ್ರಕ್ಕೆ ಮತ್ತು ಬಫೆಟ್ ಸೆಕ್ಯೂರಿಟಿಗಳ ಮಾರಾಟ ಕ್ಷೇತ್ರಕ್ಕೆ ಹೋದ ನಂತರ ಉದ್ಯೋಗಲ್ಲಿನ ತೃಪ್ತಿಯು ಈ ಜೋಡಿಯನ್ನು “ತಪ್ಪಿಸಿಕೊಂಡಿತು” ಎಂದು ಅವರು ಬರೆದಿದ್ದಾರೆ. ಕೆಲವು ಅಲ್ಲಿ-ಇಲ್ಲಿ ವ್ಯತ್ಯಾಸಗಳು ಇರಬಹುದು. ಆದರೆ ಹಲವು ದಶಕಗಳ ಕಾಲ “ಕೆಲಸ” ಮಾಡಿರುವುದು ನಾನು ಇಷ್ಟಪಡುವ ಹಾಗೂ ನಂಬುವ ಜನರ ಜತೆಗೇ ಎಂದು ಹೇಳಿದ್ದಾರೆ.

ಬಫೆಟ್ ಈ ಹಿಂದೆ ಕೂಡ ಇಂಥದ್ದೇ ಸಲಹೆ ನೀಡಿದ್ದಾರೆ. 2020ರಲ್ಲಿ ನೆಬ್ರಸ್ಕ- ಲಿಂಕನ್ ವಿಶ್ವವಿದ್ಯಾಲಯದಲ್ಲಿ ಮಾತನಾಡುತ್ತಾ, ತೃಪ್ತಿದಾಯಕವಾದ ವೃತ್ತಿಜೀವನವನ್ನು ಹುಡುಕುವುದರ ಪ್ರಾಮುಖ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಹೇಳಿದ್ದರು. “ನಾನು ಅಂಥದ್ದನ್ನು ಹೊಂದಿರುವುದಕ್ಕೆ ಸಾಕಷ್ಟು ಅದೃಷ್ಟಶಾಲಿಯಾಗಿದ್ದೇನೆ. ಮತ್ತು ಹೇಗೋ ಒಂದು ಅಂತ ಏನೂ ಇಲ್ಲ ಎಂದು ನಾನು ನಿಮಗೆ ಹೇಳಬಲ್ಲೆ. ಇದು ಇನ್ನು ಮುಂದೆ ಬರೀ ಕೆಲಸ ಮಾಡುವುದು ಅಂತಿರುವುದಿಲ್ಲ, ನಿಜವಾಗಿ ನೀವು ಪ್ರತಿದಿನ ಎದುರು ನೋಡುತ್ತಿರುವ ವಿಷಯವಾಗಿರುತ್ತದೆ. ನೀವು ಅದನ್ನು ದಿನದಲ್ಲಿ ಕಂಡು ಹಿಡಿಯಬೇಕಾಗಿಲ್ಲ, ನೀವು ಹೊರಬನ್ನಿ, ಅದು ಹೊರಗಿದೆ,” ಎಂದು ಅವರು ಹೇಳಿದ್ದರು. ವಿದ್ಯಾರ್ಥಿಗಳು ತಮ್ಮ ಸಂವಹನ ಕೌಶಲವನ್ನು ಉತ್ತಮ ಮಾಡಿಕೊಳ್ಳಬೇಕು ಮತ್ತು ಸಾಕಷ್ಟು ಓದಬೇಕು ಎಂದು ಸಲಹೆ ನೀಡಿದ್ದರು.

ಬಫೆಟ್ ತನ್ನ ಮೊದಲ ಹೂಡಿಕೆಯನ್ನು 70 ವರ್ಷಗಳ ಹಿಂದೆ ಪ್ರಾರಂಭಿಸಿದರು ಮತ್ತು 2018ರವರೆಗೆ ಎಲ್ಲ ವಯಸ್ಸಿನ ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರೆಸಿದರು ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. “ಬರಹದಂತೆಯೇ ಬೋಧನೆಯು ನನ್ನ ಸ್ವಂತ ಆಲೋಚನೆಗಳನ್ನು ಬೆಳೆಸಲು ಮತ್ತು ಸ್ಪಷ್ಟಪಡಿಸಲು ನನಗೆ ಸಹಾಯ ಮಾಡಿದೆ,” ಎಂದು ಬಫೆಟ್ ಬರೆದಿದ್ದು, ಇದು ಒರಾಂಗುಟಾನ್ ಪರಿಣಾಮ ಎಂದು ಕರೆಯಲಾಗುವ ಮುಂಗರ್ ವಿದ್ಯಮಾನವಾಗಿದೆ. “ನೀವು ಒರಾಂಗುಟಾನ್ ಜೊತೆ ಕುಳಿತು ನಿಮ್ಮ ಅದ್ಭುತ ಆಲೋಚನೆಗಳಲ್ಲಿ ಒಂದನ್ನು ಎಚ್ಚರಿಕೆಯಿಂದ ವಿವರಿಸಿದರೆ, ನೀವು ಗೊಂದಲಕ್ಕೊಳಗಾದ ಸಂಗತಿಯನ್ನು ಅಲ್ಲೇ ಬಿಡಬಹುದು, ಆದರೆ ನೀವೇ ಹೆಚ್ಚು ಸ್ಪಷ್ಟವಾಗಿ ಯೋಚಿಸುವುದನ್ನು ಬಿಟ್ಟುಬಿಡುತ್ತೀರಿ.”

ಇದನ್ನೂ ಓದಿ: Warren Buffett: 90ರ ವಯಸ್ಸಿನ ವಾರೆನ್ ಬಫೆಟ್ ಆಸ್ತಿ ದಾಟಿತು 100 ಬಿಲಿಯನ್ ಯುಎಸ್​ಡಿ; ಆತ ವಿಶ್ವದ ಆರನೇ ಸಿರಿವಂತ