ಗ್ರಾಹಕ ವಸ್ತುಗಳಿಗೆ ಐಎಸ್ಐ ಮಾರ್ಕ್ ಇರುವಂತೆ ಚಿನ್ನಕ್ಕೂ ಬಿಐಎಸ್ ಗುರುತುಗಳನ್ನು (BIS mark) ಹಾಕಲಾಗುತ್ತದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಸಂಸ್ಥೆಯಿಂದ ಚಿನ್ನದ ಶುದ್ಧತೆಯ ಪ್ರಮಾಣ ಕೊಡಲಾಗುತ್ತದೆ. ಈ ಬಿಐಎಸ್ ಗುರುತು ಮೂಲಕ ಗ್ರಾಹಕರು ಚಿನ್ನದ ಗುಣಮಟ್ಟವನ್ನು ತಿಳಿಯಬಹುದು. ಈ ಕಾರ್ಯವನ್ನು ಸುಲಭಗೊಳಿಸುತ್ತದೆ ಬಿಐಎಸ್ ಕೇರ್ ಆ್ಯಪ್. ಇದನ್ನು ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ ಸಂಸ್ಥೆಯೇ ಸ್ವತಃ ಅಭಿವೃದ್ಧಿಪಡಿಸಿದೆ.
ಈ ಬಿಐಎಸ್ ಕೇರ್ ಆ್ಯಪ್ನಲ್ಲಿ (BIS Care app) ಚಿನ್ನದ ಶುದ್ಧತೆ ಎಷ್ಟೆಂದು ಪತ್ತೆ ಮಾಡಬಹುದು. ನಕಲಿ ಚಿನ್ನವನ್ನೂ ಕಂಡುಹಿಡಿಯಬಹುದು. ಉತ್ಪನ್ನದ ಗುಣಮಟ್ಟ ತೃಪ್ತಿ ತರದಿದ್ದರೆ ಈ ಆ್ಯಪ್ ಮೂಲಕ ದೂರು ಕೂಡ ದಾಖಲಿಸಬಹುದು. ಈ ಆ್ಯಪ್ ಆಂಡ್ರಾಯ್ಡ್ ಮತ್ತು ಆ್ಯಪಲ್ ಎರಡೂ ಆವೃತ್ತಿಯಲ್ಲೂ ಸಿಗುತ್ತದೆ.
ಇದನ್ನೂ ಓದಿ: ಒಂದು ವರ್ಷದಲ್ಲಿ ಲಾಭ ತಂದಿರುವುದು ಯಾವುದು? ಷೇರುಪೇಟೆಗಿಂತ ಚಿನ್ನ ಹೆಚ್ಚು ಲಾಭ ತರುತ್ತದಾ?
ಪರಿಶುದ್ಧ ಚಿನ್ನ ಎಂದರೆ 24 ಕ್ಯಾರಟ್ನದ್ದಾಗಿರುತ್ತದೆ. ಆಭರಣ ತಯಾರಿಸಲು ಬೇರೆ ಕೆಲ ಲೋಹಗಳನ್ನು ಬೆರೆಸಲಾಗುತ್ತದೆ. ಹೀಗಾಗಿ ಆಭರಣ ಚಿನ್ನಗಳಿಗೆ ಶುದ್ಧತೆ ತುಸು ಕಡಿಮೆ ಆಗುತ್ತದೆ. ಬಹುತೇಕ ಆಭರಣಗಳು 22 ಕ್ಯಾರಟ್ ಚಿನ್ನದ್ದಾಗಿರುತ್ತವೆ. ಹಾಗೆಯೇ, 18 ಕ್ಯಾರಟ್, 16 ಕ್ಯಾರಟ್ ಹೀಗೆ ಇನ್ನೂ ಕಡಿಮೆ ಶುದ್ಧತೆಯ ಚಿನ್ನವೂ ಲಭ್ಯ ಇರುತ್ತವೆ.
ಮಾರಾಟ ಮಾಡುವ ಪ್ರತೀ ಚಿನ್ನಕ್ಕೂ ಬಿಐಎಸ್ ಮಾರ್ಕ್ ಹಾಕುವುದು ಕಡ್ಡಾಯ. ಇದರಲ್ಲಿ ಎಚ್ಯುಐಡಿ ನಂಬರ್, ಲೈಸೆನ್ಸ್ ನಂಬರ್ ಇರುತ್ತದೆ. ಇಷ್ಟು ಮಾಹಿತಿಯನ್ನು ಬಿಐಎಸ್ ಕೇರ್ ಆ್ಯಪ್ನಲ್ಲಿ ಹಾಕಿ ಹುಡುಕಿದಾಗ, ಆ ಚಿನ್ನ ಎಷ್ಟು ಕ್ಯಾರಟ್ನದ್ದು, ಎಲ್ಲಿ ತಯಾರಿಸಲಾಗಿದ್ದು, ಯಾರು ತಯಾರಿಸಿದ್ದು ಎಂಬಿತ್ಯಾದಿ ಮಾಹಿತಿ ಹೊರಬರುತ್ತದೆ.
ಇದನ್ನೂ ಓದಿ: ನಿಮ್ಮಲ್ಲಿ 10 ಲಕ್ಷ ರೂ ಇದ್ದರೆ ಎಲ್ಲೆಲ್ಲಿ ಹೂಡಿಕೆ ಮಾಡಬಹುದು? ಇಲ್ಲಿವೆ ನಾಲ್ಕು ಆಯ್ಕೆಗಳು
22 ಕ್ಯಾರಟ್ ಚಿನ್ನವೆಂದು ಹೇಳಿ ನಿಮಗೆ 18 ಕ್ಯಾರಟ್ ಚಿನ್ನ ಕೊಟ್ಟಿದ್ದರೆ ನೀವು ದೂರು ದಾಖಲಿಸಲು ಈ ಆ್ಯಪ್ನಲ್ಲಿ ಅವಕಾಶ ಇದೆ. ಆಗೆಯೇ, ಬಿಐಎಸ್ ಕಚೇರಿಗಳು ಮತ್ತು ಲ್ಯಾಬ್ಗಳು ಎಲ್ಲೆಲ್ಲಿವೆ ಎಂಬ ಪಟ್ಟಿಯನ್ನೂ ಇದರಲ್ಲಿ ಕಾಣಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ