ಅತಿ ದೊಡ್ಡ ಡಿಜಿಟಲ್ ಆಸ್ತಿಯಾದ ಬಿಟ್ಕಾಯಿನ್ (Bitcoin) ಶನಿವಾರದಂದು ನಷ್ಟವನ್ನು ವಿಸ್ತರಿಸಿಕೊಂಡಿದೆ. ನವೆಂಬರ್ನಲ್ಲಿ ತಲುಪಿದ್ದ ದಾಖಲೆಯ ಮಟ್ಟದಿಂದ ಶೆಕಡಾ 50ಕ್ಕಿಂತ ಹೆಚ್ಚು, ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ದಾಖಲೆಯ ಮಟ್ಟವನ್ನು ತಲುಪಿದ ಬಿಟ್ಕಾಯಿನ್ ಅಲ್ಲಿಂದ ಕೆಳಗೆ ಇಳಿದು, ಮಾರುಕಟ್ಟೆ ಮೌಲ್ಯ 60,000 ಕೋಟಿ ಡಾಲರ್ಗೂ ಹೆಚ್ಚನ್ನು ಕಳೆದುಕೊಂಡಿದೆ. ಮತ್ತು ಕ್ರಿಪ್ಟೋ ಮಾರುಕಟ್ಟೆಯಲ್ಲಿ ಸರಾಸರಿ 1 ಲಕ್ಷ ಕೋಟಿ ಡಾಲರ್ ಕಳೆದುಕೊಂಡಿದೆ. ಬಿಟ್ಕಾಯಿನ್ ಮತ್ತು ಸರಾಸರಿ ಮಾರುಕಟ್ಟೆ ದೊಡ್ಡ ಮಟ್ಟದಲ್ಲಿ ಮೌಲ್ಯದಲ್ಲಿ ಕುಸಿತ ಕಂಡಿದೆ.
ಎರಡಕ್ಕೂ ಇದು ಡಾಲರ್ ಮೌಲ್ಯದಲ್ಲಿ ಅತಿ ದೊಡ್ಡ ಇಳಿಕೆ ಇದಾಗಿದೆ ಎಂದು ಬೀಸ್ಪೋಕ್ ಇನ್ವೆಸ್ಟ್ಮೆಂಟ್ ಸಮೂಹವು ಹೇಳಿದೆ. ಅಮೆರಿಕದ ಫೆಡ್ನ ಉದ್ದೇಶವು ಕ್ರಿಪ್ಟೋಕರೆನ್ಸಿಗಳು ಹಾಗೂ ಸ್ಟಾಕ್ಗಳು ಎರಡರ ಮೇಲೂ ಪ್ರಭಾವ ಬೀರಿದೆ. ಡಿಜಿಟಲ್ ಆಸ್ತಿ ವರ್ಗದಲ್ಲಿ ಪ್ರಮುಖ ಥೀಮ್ ಕಾಣಿಸಿಕೊಂಡಿದೆ: ಕ್ರಿಪ್ಟೋಗಳ ಬದಲಾವಣೆಯು ಈಕ್ವಿಟಿಗಳಂತೆಯೇ ವರ್ತಿಸುತ್ತಿದೆ. ಕಾಯಿನ್ಡೆಸ್ಕ್ ಅನ್ನು ಉದಾಹರಿಸಿ ವಾಲ್ಸ್ಟ್ರೀಟ್ ಜರ್ನಲ್ ವರದಿ ಮಾಡಿರುವಂತೆ, 2021ರ ಆಗಸ್ಟ್ ನಂತರದಲ್ಲಿ ಬಿಟ್ಕಾಯಿನ್ ಡಾಲರ್ ಮೌಲ್ಯದಲ್ಲಿ ಅತ್ಯಂತ ಕನಿಷ್ಠ ಮಟ್ಟಕ್ಕೆ ತಲುಪಿದೆ.
ಬಿಟ್ಕಾಯಿನ್ ಶನಿವಾರದಂದು ಶೇ 7.2ರಷ್ಟು ಇಳಿಕೆ ಕಂಡು, 34,042 ಡಾಲರ್ಗೆ ಇಳಿದಿದೆ. ಬಿಟ್ಕಾಯಿನ್ ದರದ ಏರಿಳಿತಕ್ಕೂ ಹಾಗೂ ಷೇರು ಮಾರುಕಟ್ಟೆಯ ಏರಿಳಿತಕ್ಕೂ 2020ರ ಸೆಪ್ಟೆಂಬರ್ನಿಂದ ನೇರ ಸಂಬಂಧ ಇದೆ ಎಂಬುದು ಕಂಡುಬಂದಿದೆ. ಯಾವಾಗೆಲ್ಲ ಷೇರು ಮಾರುಕಟ್ಟೆ ಕುಸಿದಿದೆಯೋ ಆಗ ಬಿಟ್ ಕಾಯಿನ್ ದರ ಕೂಡ ಕುಸಿತ ಕಂಡಿದೆ. ಶುಕ್ರವಾರದಂದು ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ನೆಟ್ಫ್ಲಿಕ್ಸ್ ಷೇರು ಸಹ ಶೇ 20ರಷ್ಟು ನೆಲ ಕಚ್ಚಿ, 4000 ಕೋಟಿ ಅಮೆರಿಕನ್ ಡಾಲರ್ನಷ್ಟು ಮಾರುಕಟ್ಟೆ ಮೌಲ್ಯದ ನಷ್ಟ ಅನುಭವಿಸಿದೆ. ಅದೇ ರೀತಿ ಬಿಟ್ಕಾಯಿನ್ ಪರ್ಫಾರ್ಮೆನ್ಸ್ ಟ್ರ್ಯಾಕ್ ಮಾಡುವ ಷೇರುಗಳ ದರ ಕೂ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿವೆ.
ಇದನ್ನೂ ಓದಿ: Cryptocurrencies: ಕ್ರಿಪ್ಟೋಕರೆನ್ಸಿಗಳಿಗೆ ಹೊಸ ತೆರಿಗೆ ಕಾನೂನು ತರಲು ಕೇಂದ್ರ ಸರ್ಕಾರದ ಚಿಂತನೆ