ಎಲ್​ಪಿಜಿ ಸಿಲಿಂಡರ್ ರೀಫಿಲ್ ಪಡೆಯಲು ಲೋನ್ ಸ್ಕೀಮ್; ಭಾರತ್ ಗ್ಯಾಸ್ ಗ್ರಾಹಕರಿಗೆ ಬಡ್ಡಿರಹಿತ ಸಾಲ ಸೌಲಭ್ಯ

ಭಾರತ್ ಗ್ಯಾಸ್ (Bharatgas) ಸಿಲಿಂಡರ್ ರೀಫಿಲ್ ಮಾಡಲು ಗ್ರಾಹಕರಿಗೆ 600 ರೂಗಳ ಕಿರು ಲೋನ್ (Micro Loan) ಆಫರ್ ನೀಡಲಾಗುತ್ತಿದೆ. ಗ್ಯಾಸ್​ಗೆ ಪೂರ್ಣವಾಗಿ ಪಾವತಿಸಲು ಹಣವಿಲ್ಲದಿದ್ದಾಗ ಈ ಸೌಲಭ್ಯ ಬಳಸಬಹುದು. ಆರು ವಾರಗಳ ಇಎಂಐ ಅವಕಾಶ ಇರುತ್ತದೆ. ಈ ಬಡ್ಡಿ ರಹಿತ ಸಾಲವನ್ನು ಪಡೆದುಕೊಳ್ಳುವುದು ಹೇಗೆ ಮತ್ತು ನಿಯಮಗಳ ಸಂಪೂರ್ಣ ವಿವರ ಇಲ್ಲಿದೆ.

ಎಲ್​ಪಿಜಿ ಸಿಲಿಂಡರ್ ರೀಫಿಲ್ ಪಡೆಯಲು ಲೋನ್ ಸ್ಕೀಮ್; ಭಾರತ್ ಗ್ಯಾಸ್ ಗ್ರಾಹಕರಿಗೆ ಬಡ್ಡಿರಹಿತ ಸಾಲ ಸೌಲಭ್ಯ
ಭಾರತ್ ಗ್ಯಾಸ್
Image Credit source: Getty Images

Updated on: Sep 30, 2026 | 12:20 PM

ನವದೆಹಲಿ, ಸೆಪ್ಟೆಂಬರ್ 30: ಹಣಕಾಸಿನ ತುರ್ತು ಸಂದರ್ಭಗಳಲ್ಲಿ ಎಲ್‌ಪಿಜಿ ಸಿಲಿಂಡರ್ ರೀಫಿಲ್ ಮಾಡಲು ಕಷ್ಟಪಡುವ ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಹೊಸ ಪ್ರಯೋಗಕ್ಕೆ ಮುಂದಾಗಿದೆ. ಅದರ ‘ಭಾರತ್ ಗ್ಯಾಸ್’ (Bharatgas) ಗ್ರಾಹಕರಿಗಾಗಿ ವಿಶೇಷ ಮೈಕ್ರೋ ಲೋನ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಭಾರತ್ ಗ್ಯಾಸ್‌ನ ಅರ್ಹ ಗ್ರಾಹಕರು ಸಿಲಿಂಡರ್ ಬುಕಿಂಗ್ ಮತ್ತು ರೀಫಿಲ್ ಪಾವತಿಗಾಗಿ 600-650 ಗಳವರೆಗೆ ಸಣ್ಣ ಮೊತ್ತದ ಮೈಕ್ರೋ ಸಾಲವನ್ನು (Micro Loan) ಪಡೆಯಬಹುದು. ಈ ಸಾಲಕ್ಕೆ ಯಾವುದೇ ಬಡ್ಡಿ ಇರುವುದಿಲ್ಲ.

ಇದೊಂದು ರೀತಿ ಫ್ರೀ ಇಎಂಐ ಪ್ಲಾನ್​ನಂತೆ. ಬಯ್ ನೌ ಪೇ ಲೇಟರ್ ಎಂಬಂತೆಯೂ ಹೌದು. ಗ್ಯಾಸ್ ಪಡೆಯಲು ತತ್​ಕ್ಷಣಕ್ಕೆ ಹಣದ ಕೊರತೆ ಎದುರಿಸುವ ಗ್ರಾಹಕರಿಗೆ ಬಹಳ ಉಪಯೋಗವಾಗುವ ಯೋಜನೆಯನ್ನು ಬಿಪಿಸಿಎಲ್ ತಂದಿದೆ. ಇದು 5 ಕಿಲೋ ಚೋಟು ಭಾರತ್​ಗ್ಯಾಸ್ ಎಲ್​ಪಿಜಿ ಸಿಲಿಂಡರ್ ಬುಕಿಂಗ್​ಗೆ ಅನ್ವಯಿಸಲಿದೆ.

ಇದನ್ನೂ ಓದಿ: ಟೈಪ್ ಸಿ ಅಥವಾ ಟೈಪ್ ಎ: ಫೋನ್‌ ಬೇಗ ಚಾರ್ಜ್ ಆಗುವುದು ಯಾವ ಕೇಬಲ್‌ನಲ್ಲಿ?

ಸಾಲ ಪಡೆಯುವ ಮತ್ತು ಮರುಪಾವತಿಸುವ ವಿಧಾನ

ಗ್ರಾಹಕರು ಭಾರತ್ ಗ್ಯಾಸ್‌ನ ಅಧಿಕೃತ ಆಪ್ ಅಥವಾ ಡಿಜಿಟಲ್ ಪಾವತಿ ಪ್ಲಾಟ್​ಫಾರ್ಮ್​ಗಳ ಮೂಲಕ ಸಿಲಿಂಡರ್ ಬುಕ್ ಮಾಡುವಾಗ ಈ ಲೋನ್ ಆಯ್ಕೆಯನ್ನು ಬಳಸಿಕೊಳ್ಳಬಹುದು. ಮುಂದಿನ ಸಿಲಿಂಡರ್ ಬುಕಿಂಗ್ ವೇಳೆಗೆ, ಅಥವಾ ನಿಗದಿತ ಕಾಲಾವಧಿಯೊಳಗೆ ಈ ಮೊತ್ತವನ್ನು ಹಿಂತಿರುಗಿಸಲು ಸುಲಭ ಕಂತು/ಮರುಪಾವತಿ ವ್ಯವಸ್ಥೆ ಇರುತ್ತದೆ.

ಬಿಪಿಸಿಎಲ್ ಎಕ್ಸ್ ಪೋಸ್ಟ್

ಭಾರತ್ ಗ್ಯಾಸ್ ಗ್ರಾಹಕರಿಗೆ ನೀಡಲಾಗುವ ಈ ಕಿರು ಸಾಲಕ್ಕೆ ಯಾವುದೇ ಬಡ್ಡಿ ಇರುವುದಿಲ್ಲ. ಕಂತುಗಳಲ್ಲಿ ಹಣ ಕಟ್ಟುವ ಅವಕಾಶ ಇರುತ್ತದೆ. ತತ್​ಕ್ಷಣದ ಹಣದ ಕೊರತೆಯಿಂದ ಗ್ಯಾಸ್ ಬುಕಿಂಗ್ ಮಾಡಲು ಆಗದಿರುವ ಗ್ರಾಹಕರಿಗೆ ಈ ಸ್ಕೀಮ್ ನೆರವಾಗಬಹುದು. ಕೂಲಿಗಾಗಿ ನಗರಗಳಿಗೆ ಬರುವ ಕಾರ್ಮಿಕರಿಗೆ ಇದು ಹೆಚ್ಚಿನ ಅನುಕೂಲ ಎನಿಸಬಹುದು.

ಇದನ್ನೂ ಓದಿ: ಟ್ರಾಯ್ ಹೊಸ ನಿಯಮಗಳು: ಸ್ಪ್ಯಾಮ್ ಕಾಲ್​ಗೆ ಕಡಿವಾಣ ಹಾಕಲು ಟೆಲಿಕಾಂ ಆಪರೇಟರ್ಸ್​ಗೆ ಹೆಚ್ಚಿನ ಅಧಿಕಾರ, ಜವಾಬ್ದಾರಿ

ಬಿಪಿಸಿಎಲ್ ಸಂಸ್ಥೆಯು OneAgro Fintech Private Limited ಜೊತೆಗೆ ಸಹಭಾಗಿತ್ವದಲ್ಲಿ ಈ ಸೌಲಭ್ಯ ನೀಡುತ್ತಿದೆ. ಯಾವುದೇ ಹೆಚ್ಚಿನ ದಾಖಲೆಗಳ ಅಗತ್ಯವಿಲ್ಲದೆ ಸಂಪೂರ್ಣ ಡಿಜಿಟಲ್ ಮಾರ್ಗದ ಮೂಲಕ ತಕ್ಷಣವೇ ಸಾಲ ಅನುಮೋದನೆಯಾಗುವಂತೆ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us