AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಾಯ್ ಹೊಸ ನಿಯಮಗಳು: ಸ್ಪ್ಯಾಮ್ ಕಾಲ್​ಗೆ ಕಡಿವಾಣ ಹಾಕಲು ಟೆಲಿಕಾಂ ಆಪರೇಟರ್ಸ್​ಗೆ ಹೆಚ್ಚಿನ ಅಧಿಕಾರ, ಜವಾಬ್ದಾರಿ

ಭಾರತದಲ್ಲಿ ಹೆಚ್ಚುತ್ತಿರುವ ಸ್ಪ್ಯಾಮ್ ಕರೆಗಳು ಮತ್ತು ನಕಲಿ ಸಂದೇಶಗಳಿಗೆ ಕಡಿವಾಣ ಹಾಕಲು ಟ್ರಾಯ್ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಗ್ರಾಹಕರ ದೂರಿನ ಅವಶ್ಯಕತೆಯಿಲ್ಲದೆ ಟೆಲಿಕಾಂ ಸಂಸ್ಥೆಗಳಿಗೆ ಸ್ಪ್ಯಾಮರ್‌ಗಳ ವಿರುದ್ಧ ನೇರ ಕ್ರಮ ಕೈಗೊಳ್ಳಲು ಅಧಿಕಾರ ನೀಡಲಾಗಿದೆ. AI ಮತ್ತು ಮೆಷಿನ್ ಲರ್ನಿಂಗ್ ತಂತ್ರಜ್ಞಾನ ಬಳಸಿ ಕರೆಗಳನ್ನು ನಿರ್ಬಂಧಿಸಲು ಟೆಲಿಕಾಂ ಕಂಪನಿಗಳಿಗೆ ಆದೇಶಿಸಲಾಗಿದೆ. ನಿಯಮ ಉಲ್ಲಂಘಿಸುವವರಿಗೆ ದಂಡ ಹಾಗೂ ಪರವಾನಗಿ ರದ್ದತಿಯಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು.

ಟ್ರಾಯ್ ಹೊಸ ನಿಯಮಗಳು: ಸ್ಪ್ಯಾಮ್ ಕಾಲ್​ಗೆ ಕಡಿವಾಣ ಹಾಕಲು ಟೆಲಿಕಾಂ ಆಪರೇಟರ್ಸ್​ಗೆ ಹೆಚ್ಚಿನ ಅಧಿಕಾರ, ಜವಾಬ್ದಾರಿ
ಸ್ಪ್ಯಾಮ್ ಕರೆImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 29, 2026 | 7:16 PM

Share

ನವದೆಹಲಿ, ಸೆಪ್ಟೆಂಬರ್ 29: ದೇಶದಲ್ಲಿ ಹೆಚ್ಚುತ್ತಿರುವ ಸ್ಪ್ಯಾಮ್ ಕರೆಗಳು ಮತ್ತು ನಕಲಿ ಸಂದೇಶಗಳ ಹಾವಳಿಗೆ ಶಾಶ್ವತ ಮುಕ್ತಿ ನೀಡಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಸ್ಪ್ಯಾಮ್ ಕರೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಟೆಲಿಕಾಂ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡಿದೆ. ಗ್ರಾಹಕರು ದೂರು ಕೊಡದೇ ಇದ್ದರೂ ಸ್ಪ್ಯಾಮ್ ಕರೆಗಾರರ ವಿರುದ್ಧ ಕ್ರಮ ಕೈಗೊಳ್ಳುವ ಅವಕಾಶ ಮತ್ತು ಅಧಿಕಾರವು ಇವುಗಳಿಗೆ ಸಿಗಲಿದೆ.

ಆಟೊಮೇಟ್ ಸ್ಪ್ಯಾಮರ್​ಗಳ ವಿರುದ್ಧ ಟೆಲಿಕಾಂ ಆಪರೇಟರ್​ಗಳು ನೇರವಾಗಿ ಕ್ರಮ ತೆಗೆದುಕೊಳ್ಳುವುದು ಕಡ್ಡಾಯ. ಈ ಸ್ಪ್ಯಾಮರ್​ಗಳ ಕೆವೈಸಿ ವಿವರದ ಪುನರ್​ಪರಿಶೀಲನೆ, ಔಟ್​ಗೋಯಿಂಗ್ ಕರೆಗಳನ್ನು ನಿರ್ಬಂಧಿಸುವುದು, ಸಂಪನ್ಮೂಲಗಳನ್ನು ಡಿಸ್ಕನೆಕ್ಟ್ ಮಾಡುವುದು, ಬಾರಿ ಬಾರಿ ತಪ್ಪು ಮಾಡಿದವರನ್ನು ಕಾನೂನು ಕ್ರಮಕ್ಕೆ ಒಪ್ಪಿಸುವುದು ಇತ್ಯಾದಿ ಕ್ರಮ ತೆಗೆದುಕೊಳ್ಳಬಹುದು.

ಇದನ್ನೂ ಓದಿ: ಅಕ್ಟೋಬರ್ ತಿಂಗಳಲ್ಲಿ ಗಾಂಧಿ ಜಯಂತಿ, ದಸರಾ ಹಬ್ಬ ಸೇರಿ ಬ್ಯಾಂಕುಗಳಿಗೆ 15 ದಿನ ರಜೆ; ಇಲ್ಲಿದೆ ಪಟ್ಟಿ

ಸ್ಪ್ಯಾಮರ್‌ಗಳ ವಿರುದ್ಧ AI ಮತ್ತು ತಂತ್ರಜ್ಞಾನದ ಬಳಕೆ

ಏರ್‌ಟೆಲ್, ಜಿಯೋ, ವಿಐ (Vi) ಮತ್ತು ಬಿಎಸ್‌ಎನ್‌ಎಲ್‌ ಸಂಸ್ಥೆಗಳು ಕೃತಕ ಬುದ್ಧಿಮತ್ತೆ (AI) ಮತ್ತು ಮೆಷಿನ್ ಲರ್ನಿಂಗ್ ಆಧಾರಿತ ನೆಟ್‌ವರ್ಕ್ ಫಿಲ್ಟರ್‌ಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯ. ಇವು ನಕಲಿ ಮತ್ತು ಸ್ಪ್ಯಾಮ್ ಸಂದೇಶ/ಕರೆಗಳನ್ನು ಗ್ರಾಹಕರನ್ನು ತಲುಪುವ ಮುನ್ನವೇ ಪತ್ತೆ ಹಚ್ಚುತ್ತವೆ. ಒಳಬರುವ ಕರೆಯು ಶಂಕಿತ ಸ್ಪ್ಯಾಮ್ ಎಂದು ಗುರುತಿಸಲಾಗಿದ್ದರೆ, ಕರೆ ಸ್ವೀಕರಿಸುವ ನೆಟ್ವರ್ಕ್​ನಿಂದ ಎರಡು ಗಂಟೆಯ ಒಳಗೆ ಕರೆ ಮಾಡಲಾದ ಆಪರೇಟರ್​ಗೆ ಮಾಹಿತಿ ನೀಡಬೇಕು

ಇದಾಗಿ ಒಂದು ವ್ಯವಹಾರ ದಿನದೊಳಗೆ ಕರೆ ಮಾಡಲಾದ ಆಪರೇಟಿಂಗ್ ಸಂಸ್ಥೆಯು, ಕರೆ ಮಾಡಿದವರ ಕೆವೈಸಿ ವಿವರಗಳನ್ನು ಪಡೆದು, ಎಲ್ಲಾ ಇತರ ಟೆಲಿಕಾಂ ನೆಟ್ವರ್ಕ್​ಗಳಿಗೆ ಆ ಮಾಹಿತಿ ಹಂಚಬೇಕು ಎಂದು ಟ್ರಾಯ್​ನ ಹೊಸ ನಿಯಮವು ಹೇಳುತ್ತದೆ.

ಈಗ ಎಲ್ಲಾ ಟೆಲಿಕಾಂ ಆಪರೇಟರ್​ಗಳು ಆ ಮಾಹಿತಿಯನ್ನು ಪರಿಶೀಲಿಸುತ್ತವೆ. ಸ್ಪ್ಯಾಮ್ ಕರೆ ಮಾಡಿದವರಿಗೆ ಸಂಬಂಧಿಸಿದ ಇತರ ಕನೆಕ್ಷನ್​ಗಳು ಹಾಗೂ ಸಂಪನ್ಮೂಲಗಳು ಕಳೆದ 10 ದಿನದಲ್ಲಿ ಬಳಕೆಯಾಗಿವೆಯಾ ಎಂಬುದನ್ನು ಈ ಸಂಸ್ಥೆಗಳು ತಮ್ಮ ಇಂಟರ್ನಲ್ ಸಿಸ್ಟಂಗಳ ಮೂಲಕ ಪರಿಶೀಲಿಸುತ್ತವೆ. ಇದಕ್ಕೆ 24 ಗಂಟೆಗಳ ಕಾಲಾವಕಾಶ ಇರುತ್ತದೆ.

ಇದನ್ನೂ ಓದಿ: ಬ್ಯಾಂಕುಗಳಲ್ಲಿ ಬಲ್ಕ್ ಡೆಪಾಸಿಟ್ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಹೊಸ ನಿಯಮಗಳು ಅ. 1ರಿಂದ ಜಾರಿ

ಟೆಲಿಕಾಂ ಕಂಪನಿಗಳು ಸ್ಪ್ಯಾಮ್ ಕರೆಗಾರರ ವಿರುದ್ಧ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬಹುದು:

  • ಶಂಕಿತ ಸಂಖ್ಯೆಗಳ ತಡೆ ಹಾಗೂ ಕಪ್ಪುಪಟ್ಟಿ: ವಾಣಿಜ್ಯ ಉದ್ದೇಶಗಳಿಗಾಗಿ ಸಾಮೂಹಿಕ ಕರೆ ಅಥವಾ ಸಂದೇಶ ಕಳುಹಿಸುವ ವೈಯಕ್ತಿಕ ಸಂಖ್ಯೆಗಳನ್ನು ತಕ್ಷಣವೇ ನಿಷ್ಕ್ರಿಯಗೊಳಿಸಲಾಗುತ್ತದೆ.
  • ಸಂಪರ್ಕ ಕಡಿತ: ಒಂದಕ್ಕಿಂತ ಹೆಚ್ಚು ಬಾರಿ ಸ್ಪ್ಯಾಮ್ ನಿಯಮ ಉಲ್ಲಂಘಿಸುವ ಚಂದಾದಾರರ ಎಲ್ಲಾ ಟೆಲಿಕಾಂ ಸಂಪರ್ಕಗಳನ್ನು ಕಡಿತಗೊಳಿಸಿ, ಅವರನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ.
  • ದಂಡದ ಪ್ರಮಾಣ: ಸ್ಪ್ಯಾಮ್ ನಿಯಂತ್ರಿಸುವಲ್ಲಿ ವಿಫಲರಾಗುವ ಟೆಲಿಕಾಂ ಆಪರೇಟರ್‌ಗಳಿಗೆ ಹಾಗೂ ನಿಬಂಧನೆಗಳನ್ನು ಉಲ್ಲಂಘಿಸುವ ವಾಣಿಜ್ಯ ಸಂಸ್ಥೆಗಳಿಗೆ ಟ್ರಾಯ್ ಭಾರಿ ದಂಡ ವಿಧಿಸಲಿದೆ. ಮೊದಲ ಉಲ್ಲಂಘನೆಯಾದರೆ ಎಚ್ಚರಿಕೆ ಮತ್ತು ಸಣ್ಣ ಪ್ರಮಾಣದ ದಂಡ ಇರುತ್ತದೆ. ಮತ್ತೆ ಉಲ್ಲಂಘನೆಯಾದರೆ ದಂಡದ ಮೊತ್ತವು ಪ್ರತಿಯೊಂದು ಪ್ರಕರಣಕ್ಕೂ ಲಕ್ಷಾಂತರ ರೂಪಾಯಿಗಳವರೆಗೆ ಹೆಚ್ಚಾಗಲಿದೆ. ನಿರಂತರ ಉಲ್ಲಂಘನೆ ಆಗುತ್ತಿದ್ದರೆ ನೊಂದಾಯಿತ ಟೆಲಿಮಾರ್ಕೆಟರ್‌ಗಳ ಲೈಸೆನ್ಸ್ ರದ್ದುಗೊಳಿಸಿ, 2 ವರ್ಷಗಳವರೆಗೆ ಕಪ್ಪುಪಟ್ಟಿಗೆ ಸೇರಿಸಲಾಗುವುದು.

ಸ್ಪ್ಯಾಮರ್‌ಗಳನ್ನು ತಡೆಯಲು ವಿಫಲರಾಗುವ ಟೆಲಿಕಾಂ ಕಂಪನಿಗಳಿಗೂ ಟ್ರಾಯ್ ಹಣಕಾಸಿನ ದಂಡ ವಿಧಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕೆವಿಎನ್ ಹಾಗೂ ಸುಪ್ರೀತ್ ಬಗ್ಗೆ ನಿರ್ಮಾಪಕ ಉದಯ್ ಮೆಹ್ತಾ ಮಾತು
ಕೆವಿಎನ್ ಹಾಗೂ ಸುಪ್ರೀತ್ ಬಗ್ಗೆ ನಿರ್ಮಾಪಕ ಉದಯ್ ಮೆಹ್ತಾ ಮಾತು
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ