ಬಿಎಸ್​ಇ ಲಿಸ್ಟೆಡ್ ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ ಸಾರ್ವಕಾಲಿಕ ದಾಖಲೆ ಮಟ್ಟ 274.73 ಲಕ್ಷ ಕೋಟಿ ರೂಪಾಯಿಗೆ

| Updated By: Srinivas Mata

Updated on: Jan 10, 2022 | 5:01 PM

ಬಿಎಸ್​ಇ ಸೆನ್ಸೆಕ್ಸ್ ಲಿಸ್ಟೆಡ್ ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು ಜನವರಿ10ನೇ ತಾರೀಕಿನ ಸೋಮವಾರದಂದು ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ.

ಬಿಎಸ್​ಇ ಲಿಸ್ಟೆಡ್ ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ ಸಾರ್ವಕಾಲಿಕ ದಾಖಲೆ ಮಟ್ಟ 274.73 ಲಕ್ಷ ಕೋಟಿ ರೂಪಾಯಿಗೆ
ಸಾಂದರ್ಭಿಕ ಚಿತ್ರ
Follow us on

ಬಿಎಸ್​ಇಯಲ್ಲಿ ಲಿಸ್ಟ್​ ಆಗಿರುವಂಥ ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು ಜನವರಿ 10ನೇ ತಾರೀಕಿನ ಸೋಮವಾರದಂದು ಸಾರ್ವಕಾಲಿಕ ದಾಖಲೆ ಮಟ್ಟವಾದ 274.73 ಲಕ್ಷ ಕೋಟಿ ರೂಪಾಯಿಯನ್ನು ಮುಟ್ಟಿದೆ. ಸ್ಮಾಲ್ ಮತ್ತು ಮಿಡ್​ ಕ್ಯಾಪ್ ಷೇರುಗಳಲ್ಲಿನ ಏರಿಕೆಯು ಈ ದಾಖಲೆಗೆ ನೆರವು ನೀಡಿವೆ. ಈ ಹಿಂದೆ ಅಕ್ಟೋಬರ್ 18, 2018ರಂದು ಮಾರುಕಟ್ಟೆ ಬಂಡವಾಳ ಮೌಲ್ಯವು 274.70 ಲಕ್ಷ ಕೋಟಿ ರೂಪಾಯಿ ಮುಟ್ಟಿದ್ದು ದಾಖಲೆಯಾಗಿತ್ತು. ಕಳೆದ ವರ್ಷ ಅಕ್ಟೋಬರ್ 19ನೇ ತಾರೀಕಿನಂದು ಸೆನ್ಸೆಕ್ಸ್, ನಿಫ್ಟಿ ದಾಖಲೆಯ ಎತ್ತರವನ್ನು ಬರೆದ ಮೇಲೆ ಡಿಸೆಂಬರ್ 21ನೇ ತಾರೀಕಿನ ತನಕ ಹತ್ತಿರ ಹತ್ತಿರ ತಲಾ ಶೇ 10ರಷ್ಟು ಇಳಿಕೆ ಕಂಡವು. ಅಲ್ಲಿಂದ ಈಚೆಗೆ ಇಲ್ಲಿಯ ತನಕ ಎರಡೂ ಸೂಚ್ಯಂಕಗಳು ತಲಾ ಶೇ 7.6ರ ವರೆಗೆ ಗಳಿಕೆಯನ್ನು ಕಂಡಿವೆ. ಬಿಎಸ್​ಇ ಮಿಡ್​ಕ್ಯಾಪ್ ಶೇ 7.5ರಷ್ಟು, ಬಿಎಸ್​ಇ ಸ್ಮಾಲ್​ಕ್ಯಾಪ್ ಶೇ 11.71ರಷ್ಟು, ಬಿಎಸ್​ಇ500 ಶೇ 7.6ರಷ್ಟು ಈ ಅವಧಿಯಲ್ಲಿ ಹೆಚ್ಚಳ ಆಗಿದೆ.

ವಿದೇಶೀ ಸಾಂಸ್ಥಿಕ ಹೂಡಿಕೆದಾರರು ನವೆಂಬರ್​ ಹಾಗೂ ಡಿಸೆಂಬರ್ ತಿಂಗಳಲ್ಲಿ ಮಾರಾಟದಲ್ಲಿ ತೊಡಗಿದ್ದರೂ ಮಿಡ್ ಮತ್ತು ಸ್ಮಾಲ್ ಕ್ಯಾಪ್ಸ್ ಉತ್ತಮವಾಗಿ ಪ್ರದರ್ಶನ ನೀಡಿದವು. ಏಕೆಂದರೆ, ಎಪ್​ಐಐಗಳು ಲಾರ್ಜ್ ಕ್ಯಾಪ್ ಷೇರುಗಳ ಮಾರಾಟದಲ್ಲಿ ತೊಡಗಿದ್ದರು. ಕೊವಿಡ್​ ಪ್ರಕರಣಗಳು ಹೆಚ್ಚಾಗುತ್ತಾ ಇದ್ದರೂ ಈ ಕಾರಣಕ್ಕೆ ಆರ್ಥಿಕ ಚಟುವಟಿಕೆಗಳ ಮೇಲೆ ಯಾವುದೇ ನಿರ್ಬಂಧ ಹಾಕುವುದಿಲ್ಲ ಹಾಗೂ ಲಾಕ್​ಡೌನ್ ಆಗುವುದಿಲ್ಲ ಎಂಬುದು ಖಾತ್ರಿ ಆದ ಮೇಲೆ ಜಾಗತಿಕ ಮಾರುಕಟ್ಟೆಗಳು ಕೊರೊನಾವನ್ನು ಗಂಭೀರವಾಗಿ ಪರಿಗಣಿಸಿಲ್ಲ.

ವಿಶ್ಲೇಷಕರು ಅಭಿಪ್ರಾಯ ಪಡುವಂತೆ, ಈ ವಾರದಿಂದ ಆರಂಭ ಆಗಲಿರುವ ಮೂರನೇ ತ್ರೈಮಾಸಿಕದ ಫಲಿತಾಂಶಗಳು ಅತ್ಯುತ್ತಮವಾಗಿ ಇರಲಿವೆ. ಅದರಲ್ಲೂ ಮಾಹಿತಿ ತಂತ್ರಜ್ಞಾನ ಮತ್ತು ಹಣಕಾಸು ಸಂಸ್ಥೆಗಳ ಫಲಿತಾಂಶ ಉತ್ತಮವಾಗಿ ಇರಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಉತ್ತಮ ಷೇರುಗಳು ಖರೀದಿಗೆ ದೊರೆಯುತ್ತಿವೆ. ಸ್ಥಿರವಾದ ಸ್ಥೂಲ ಆರ್ಥಿಕ ಡೇಟಾ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ದರ ಏರಿಕೆಯನ್ನು ಫೆಬ್ರವರಿಯಲ್ಲೂ ಮುಂದೂಡಬಹುದು ಎಂಬ ನಿರೀಕ್ಷೆಯು ಭಾರತದ ಷೇರು ಮಾರುಕಟ್ಟೆಯಲ್ಲಿ ಗಳಿಕೆಗೆ ಕೊಡುಗೆ ನೀಡಿವೆ.

ಇದರ ಜತೆಗೆ ವಾಹನ ವಲಯ, ರಿಯಾಲ್ಟಿ, ಬ್ಯಾಂಕಿಂಗ್ ವಲಯದ ಸಕಾರಾತ್ಮಕ ಸಾಲದ ಬೆಳವಣಿಗೆಯಿಂದಲೂ ಉತ್ತೇಜಿತಗೊಂಡಿದೆ. ಇನ್ನು ಸತತ ಆರನೇ ತಿಂಗಳು 1 ಲಕ್ಷ ಕೋಟಿ ರೂಪಾಯಿ ದಾಟಿದ ಜಿಎಸ್​ಟಿ ಸಂಗ್ರಹ, ಉತ್ಪಾದನೆ ಪಿಎಂಐ ಸತತ ವಿಸ್ತರಣೆ, ದಾಖಲೆಯ ರಫ್ತು ಬೆಳವಣಿಗೆ, ಡಿಸೆಂಬರ್​ನಲ್ಲಿ ಪ್ರಬಲ ತ್ರೈಮಾಸಿಕ ಗಳಿಕೆ ಇವೆಲ್ಲ ಸೇರಿ ಹೂಡಿಕೆದಾರರಲ್ಲಿ ಸಕಾರಾತ್ಮಕ ಭಾವನೆ ಮೂಡಿಸಿದೆ.

ನವೆಂಬರ್​ ಹಾಗೂ ಡಿಸೆಂಬರ್​ನಲ್ಲಿ ಒಟ್ಟಾರೆಯಾಗಿ 570 ಕೋಟಿ ಅಮೆರಿಕನ್ ಡಾಲರ್ ಮೌಲ್ಯದಷ್ಟು ಮಾರಾಟ ಮಾಡಿದ ಮೇಲೆ ವಿದೇಶೀ ಹೂಡಿಕೆದಾರರು ಭಾರತದ ಮಾರುಕಟ್ಟೆಗೆ ಹಿಂತಿರುಗಿದ್ದಾರೆ.

ಇದನ್ನೂ ಓದಿ: ಹಿಂದೂಜಾ ಗ್ಲೋಬಲ್ ಸಲ್ಯೂಷನ್ಸ್​ನಿಂದ 150 ರೂ. ಡಿವಿಡೆಂಡ್, 1:1 ಬೋನಸ್ ಷೇರು ಘೋಷಣೆ

Published On - 4:59 pm, Mon, 10 January 22