ಕೇವಲ 107 ರೂಗೆ ಬಿಎಸ್ಸೆನ್ನೆಲ್ ಪ್ಲಾನ್; ಇತರ ಕಂಪನಿಗಳ ಪ್ರೀಪೇಯ್ಡ್ ಪ್ಲಾನ್​ಗಳೊಂದಿಗೆ ಹೋಲಿಸಿ ನೋಡಿ

BSNL vs Jio vs Airtel vs VI prepaid plans comparision: ಒಂದು ತಿಂಗಳ ವ್ಯಾಲಿಡಿಟಿ ಇರುವ ಪ್ರೀಪೇಯ್ಡ್ ಪ್ಲಾನ್​ಗಳು ಮೊದಲಿಂದಲೂ ಜನಪ್ರಿಯವಾಗಿರುವಂಥವು. ಏರ್ಟೆಲ್, ವೊಡಾಫೋನ್, ಜಿಯೋ ಬಳಿ ಇಂಥ ಸಾಕಷ್ಟು ಪ್ರೀಪೇಯ್ಡ್ ಪ್ಲಾನ್​ಗಳಿವೆ. ಬಿಎಸ್​ಎನ್​ಎಲ್ ಮತ್ತೆ ಅಖಾಡಕ್ಕೆ ಇಳಿದಿದ್ದು, ಅತಿ ಅಗ್ಗದ ದರದಲ್ಲಿ ಪ್ಲಾನ್​ಗಳನ್ನು ಆಫರ್ ಮಾಡಿದೆ.

ಕೇವಲ 107 ರೂಗೆ ಬಿಎಸ್ಸೆನ್ನೆಲ್ ಪ್ಲಾನ್; ಇತರ ಕಂಪನಿಗಳ ಪ್ರೀಪೇಯ್ಡ್ ಪ್ಲಾನ್​ಗಳೊಂದಿಗೆ ಹೋಲಿಸಿ ನೋಡಿ
ಬಿಎಸ್ಸೆನ್ನೆಲ್
Follow us
|

Updated on: Jul 30, 2024 | 3:56 PM

ಬೆಂಗಳೂರು, ಜುಲೈ 30: ಪೋಸ್ಟ್ ಪೇಯ್ಡ್​ಗೆ ಹೋಲಿಸಿದರೆ ಪ್ರೀಪೇಯ್ಡ್ ಪ್ಲಾನ್​ಗಳು ಹೆಚ್ಚು ಬಳಕೆಯಲ್ಲಿವೆ. ಏರ್ಟೆಲ್, ವೊಡಾಫೋನ್ ಪ್ರಾಬಲ್ಯ ಇದ್ದ ಕಾಲದಲ್ಲಿ ಜಿಯೋ ಪ್ರವೇಶ ಕೊಟ್ಟು ಬೆಲೆ ಇಳಿಕೆಯ ಸರಮಾಲೆಗೆ ನಾಂದಿ ಹಾಡಿತು. ಈಗ ಜಿಯೋ, ವೊಡಾಫೋನ್, ಏರ್ಟೆಲ್​ನ ದುಬಾರಿ ದರಗಳ ಸಂದರ್ಭದಲ್ಲಿ ಬಿಎಸ್ಸೆನ್ನೆಲ್ ಫೀನಿಕ್ಸ್​ನಂತೆ ಮರಳಿ ಬಂದಿದೆ. ಬಹಳ ಕಡಿಮೆ ಬೆಲೆಗೆ ಪ್ಲಾನ್​ಗಳನ್ನು ಆಫರ್ ಮಾಡಿದೆ. 5ಜಿ ಅವಶ್ಯಕತೆ ಇಲ್ಲ ಎನ್ನುವವರಿಗೆ ಬಿಎಸ್​ಎನ್​ಎಲ್ ಉತ್ತಮ ಆಯ್ಕೆ ಎನಿಸಿದೆ. ಬಿಎಸ್ಸೆನ್ನೆಲ್​ನ ಪ್ರೀಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಪ್ಲಾನ್​ಗಳೆಲ್ಲವೂ ಉತ್ತಮವಾಗಿವೆ. 28 ದಿನ ಅಥವಾ ಒಂದು ತಿಂಗಳ ಅಸುಪಾಸಿನ ದಿನಗಳಷ್ಟು ವ್ಯಾಲಿಡಿಟಿ ಇರುವ ಪ್ಲಾನ್​ಗಳಲ್ಲಿ ಬಿಎಸ್​ಎನ್​ನದ್ದು ಮೂರು ಆಯ್ಕೆಗಳಿವೆ.

ಬಿಎಸ್​ಎನ್​ಎಲ್ ನಾಲ್ಕು ಪ್ರೀಪೇಯ್ಡ್ ಪ್ಲಾನ್​ಗಳು

ಬಿಎಸ್ಸೆನ್ನೆಲ್ ಒಂದು ತಿಂಗಳ ವ್ಯಾಲಿಡಿಟಿ ಇರುವ ನಾಲ್ಕು ಪ್ಲಾನ್​ಗಳನ್ನು ಹೊಂದಿದೆ. 107 ರೂನಿಂದ ಇದರ ಪ್ಲಾನ್ ಆರಂಭವಾಗುತ್ತದೆ.

  • ಈ 107 ರೂ ಪ್ಲಾನ್ 35 ದಿನಗಳ ವ್ಯಾಲಿಡಿಟಿ ಹೊಂದಿದೆ. 200 ನಿಮಿಷಗಳಷ್ಟು ವಾಯ್ಸ್ ಕಾಲ್ ಮತ್ತು 3ಜಿಬಿಯಷ್ಟು ಡಾಟಾ ಬಳಕೆಗೆ ಅವಕಾಶ ಇದೆ.
  • ಬಿಎಸ್ಸೆನ್ನೆಲ್​ನ 108 ರೂ ಪ್ರೀಪೇಯ್ಡ್ ಪ್ಲಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ದಿನಕ್ಕೆ 1 ಜಿಬಿಯಷ್ಟು ಹೈಸ್ಪೀಡ್ ಡಾಟಾ ಸಿಗುತ್ತದೆ. ವಾಯ್ಸ್ ಕಾಲ್ ಅನ್​ಲಿಮಿಟೆಡ್.
  • ಬಿಎಸ್ಸೆನ್ನೆಲ್​ನ 153 ರೂ ಪ್ಲಾನ್ 26 ದಿನಗಳಷ್ಟು ವ್ಯಾಲಿಡಿಟಿ ಹೊಂದಿದೆ. 26 ಜಿಬಿ ಹೈಸ್ಪೀಡ್ ಡಾಟಾ ಸಿಗುತ್ತದೆ.
  • 199 ರೂ ಬಿಎಸ್ಸೆನ್ನೆಲ್ ಪ್ರೀಪೇಯ್ಡ್ ಪ್ಲಾನ್​ನ ವ್ಯಾಲಿಡಿಟಿ 30 ದಿನ ಇದೆ. ಇದರಲ್ಲಿ ಅನ್​ಲಿಮಿಟೆಡ್ ಕಾಲ್ ಮತ್ತು ಡಾಟಾ ಸಿಗುತ್ತದೆ. ದಿನಕ್ಕೆ 2ಜಿಬಿ ಹೈಸ್ಪೀಡ್ ಡಾಟಾ ಬಳಸಬಹುದು.

ಏರ್​ಟೆಲ್ ಪ್ರೀಪೇಯ್ಡ್ ಪ್ಲಾನ್​ಗಳು

ಏರ್​ಟೆಲ್​ನಲ್ಲಿ ಒಂದು ತಿಂಗಳ ವ್ಯಾಲಿಡಿಟಿ ಇರುವ ಹಲವು ಪ್ರೀಪೇಯ್ಡ್ ಪ್ಲಾನ್​ಗಳಿವೆ. 199 ರೂನಿಂದ ಆರಂಭವಾಗಿ 609 ರೂವರೆಗೆ 10ಕ್ಕೂ ಹೆಚ್ಚು ಪ್ಲಾನ್​ಗಳಿವೆ. 199 ರೂ ಪ್ಲಾನ್​ನಲ್ಲಿ 2ಜಿಬಿ ಡಾಟಾ ಸಿಗುತ್ತದೆ. 609 ರೂಗೆ 60 ಜಿಬಿಯಷ್ಟು ಡಾಟಾ ಸಿಗುತ್ತದೆ.

ಇದನ್ನೂ ಓದಿ: ಬಿಎಸ್ಸೆನ್ನೆಲ್ 365 ದಿನ ವ್ಯಾಲಿಡಿಟಿ ಪ್ಲಾನ್ 321 ರೂನಿಂದ ಶುರು; ಇಲ್ಲಿದೆ ಜಿಯೊ, ಏರ್ಟೆಲ್, ಬಿಎಸ್​ಎನ್​ಎಲ್ ಮಧ್ಯೆ ಹೋಲಿಕೆ

ಜಿಯೋ 299 ರೂ ಪ್ರೀಪೇಯ್ಡ್ ಪ್ಲಾನ್​

ರಿಲಾಯನ್ಸ್ ಜಿಯೋದಲ್ಲಿ 28 ದಿನಗಳ ವ್ಯಾಲಿಡಿಟಿ ಇರುವ ಪ್ಲಾನ್​ಗಳ ಪೈಕಿ 299 ರೂ ಪ್ಲಾನ್ ಜನಪ್ರಿಯವಾದುದು. ದಿನಕ್ಕೆ 1.5ಜಿಬಿ ಡಾಟಾ ಸಿಗುತ್ತದೆ. 28 ದಿನದಲ್ಲಿ ಒಟ್ಟು 42 ಜಿಬಿ ಡಾಟಾ ಲಭ್ಯ ಇರುತ್ತದೆ.

ವೊಡಾಫೋನ್ ಐಡಿಯಾ ಒಂದು ತಿಂಗಳ ಪ್ಲಾನ್

ವೊಡಾಫೋನ್ ಐಡಿಯಾ ಕೂಡ ಒಂದು ತಿಂಗಳ ಅವಧಿಗೆ ಉತ್ತಮ ಪ್ರೀಪೇಯ್ಡ್ ಪ್ಲಾನ್​ಗಳ ಪಟ್ಟಿ ಹೊಂದಿದೆ. 365 ರೂ ಪ್ಲಾನ್ 28 ದಿನ ವ್ಯಾಲಿಡಿಟಿ ಇದ್ದು ದಿನಕ್ಕೆ 2ಜಿಬಿ ಡಾಟಾ ಸಿಗುತ್ತದೆ. ಅದರ 279 ರೂ ಪ್ಲಾನ್ ಒಂದು ತಿಂಗಳ ಅವಧಿಯದ್ದಾಗಿದ್ದು ದಿನಕ್ಕೆ 2ಜಿಬಿ ಡಾಟಾ ಬಳಕೆಗೆ ಅವಕಾಶ ಕೊಡುತ್ತದೆ. 449 ರೂ, 409 ರೂ, 469 ರೂ, 407 ರೂ, 408 ರೂ ಹೀಗೆ ವಿವಿಧ ಡಾಟಾ ಮಿತಿಯೊಂದಿಗೆ ಪ್ಲಾನ್​ಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ