ನನ್ನ ಅವಧಿಯಲ್ಲೇ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ: ನರೇಂದ್ರ ಮೋದಿ

PM Narendra Modi at CII meeting: ಸಿಐಐ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಜೆಟ್ ನಂತರದ ಭಾಷಣ ಮಾಡುತ್ತಾ, ಕಳೆದ 10 ವರ್ಷದಲ್ಲಿ ಆಗಿರುವ ಬದಲಾವಣೆಯ ಸಂಗತಿಯನ್ನೂ ಪ್ರಸ್ತಾಪಿಸಿದ್ದಾರೆ. ಹತ್ತು ವರ್ಷದ ಹಿಂದೆ ಅಂದಿನ ಸರ್ಕಾರ ಇನ್​ಫ್ರಾಸ್ಟ್ರಕ್ಚರ್​ಗೆ ಹಣ ಎತ್ತಿ ಇಡುತ್ತಿತ್ತಾದರೂ ಅದರ ಪೂರ್ಣ ಬಳಕೆ ಆಗುತ್ತಿರಲಿಲ್ಲ. ಈಗ ಬಜೆಟ್ ಪೂರ್ತಿ ಬಳಕೆ ಆಗುತ್ತಿದೆ. ಇಂದು ಆರ್ಥಿಕತೆಯ ಪ್ರತಿಯೊಂದು ವಲಯದ ಮೇಲೂ ಗಮನ ಹರಿಸಲಾಗುತ್ತಿದೆ ಎಂದು ಪ್ರಧಾನಿಯವರು ಹೇಳಿದ್ದಾರೆ.

ನನ್ನ ಅವಧಿಯಲ್ಲೇ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ: ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 30, 2024 | 2:02 PM

ನವದೆಹಲಿ, ಜುಲೈ 30: ತಮ್ಮ ಸರ್ಕಾರ ಒಂದೆರಡು ವಲಯಗಳಲ್ಲಿ ಮಾತ್ರವಲ್ಲ, ಎಲ್ಲಾ ವಲಯಗಳ ಬೆಳವಣಿಗೆ ಮೇಲೆ ಗಮನ ಹರಿಸಿದೆ. ಈ ಬಾರಿಯ ಬಜೆಟ್ ಕೂಡ ಇದೇ ದಿಕ್ಕಿನಲ್ಲಿ ಇತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇಲ್ಲಿ ಭಾರತೀಯ ಕೈಗಾರಿಕೆಗಳ ಮಹಾಒಕ್ಕೂಟವಾದ ಸಿಐಐನ ಸಭೆಯಲ್ಲಿ ಪಾಲ್ಗೊಂಡ ಪ್ರಧಾನಿಯವರು ಬಜೆಟ್​ವೋತ್ತರ ಭಾಷಣ ಮಾಡುತ್ತಾ ದೇಶದಲ್ಲಾಗಿರುವ ಪರಿವರ್ತನೆ ಬಗ್ಗೆ ತಿಳಿಸಿದರು. ಹತ್ತು ವರ್ಷಗಳ ಹಿಂದೆ ಇದ್ದ ಪರಿಸ್ಥಿತಿ ಈಗ ಬಹಳ ಬದಲಾಗಿದೆ. ಆಡಳಿತ ವ್ಯವಸ್ಥೆ ಮತ್ತು ಆರ್ಥಿಕತೆ ಹೆಚ್ಚು ಚುರುಕಾಗಿದೆ, ವಿಸ್ತೃತವಾಗಿದೆ ಎಂದು ಮೋದಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಭಾಷಣದ ಕೆಲ ಪ್ರಮುಖ ಅಂಶಗಳಿವು…

  • 2014ರ ಬಳಿಕ ಭಾರತ ಆರ್ಥಿಕವಾಗಿ ಸಾಕಷ್ಟು ಬೆಳದಿದೆ. ಈಗ ಐದನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿದೆ. ನನ್ನ ಮೂರನೇ ಅವಧಿಯಲ್ಲಿ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ.
  • ಭಾರತ ಈಗ ಆರ್ಥಿಕತೆಯ ಪ್ರತಿಯೊಂದು ವಲಯದ ಮೇಲೂ ಗಮನ ಕೇಂದ್ರೀಕರಿಸಲಾಗಿದೆ.
  • 2014ರಲ್ಲಿ ಇದ್ದುದ್ದಕ್ಕಿಂತ ಈಗ ಬಂಡವಾಳ ವೆಚ್ಚ (ಕ್ಯಾಪೆಕ್ಸ್) ನಾಲ್ಕು ಪಟ್ಟು ಬೆಳೆದಿದೆ.
  • ರೈಲ್ವೆ ಬಜೆಟ್ 8 ಪಟ್ಟು ಹೆಚ್ಚು ಬೆಳೆದಿದೆ. ಕೃಷಿ ಬಜೆಟ್ 4 ಪಟ್ಟು ಹೆಚ್ಚಾಗಿದೆ. ರಕ್ಷಣಾ ಬಜೆಟ್ 2 ಪಟ್ಟು ಹೆಚ್ಚಿದೆ.
  • ತೆರಿಗೆಯಲ್ಲೂ ಸಾಕಷ್ಟು ಕಡಿತಗೊಳಿಸಲಾಗಿದೆ. 2014ರಲ್ಲಿ 50 ಲಕ್ಷ ಆದಾಯ ಪಡೆಯುವ ಎಂಎಸ್​ಎಂಇ ಶೇ. 30ರಷ್ಟು ತೆರಿಗೆ ಕೊಡಬೇಕಿತ್ತು. ಈಗ 22 ಪರ್ಸೆಂಟ್​ಗೆ ಇಳಿಸಲಾಗಿದೆ.
  • 400 ಕೋಟಿ ಆದಾಯ ಇರುವ ಕಾರ್ಪೊರೇಟ್ ಕಂಪನಿಗಳು ಶೇ. 30ರಷ್ಟು ತೆರಿಗೆ ಕಟ್ಟಬೇಕಿತ್ತು. ಈಗ ಕಾರ್ಪೊರೇಟ್ ತೆರಿಗೆಯನ್ನು ಶೇ. 25ಕ್ಕೆ ಇಳಿಸಲಾಗಿದೆ.
  • ಹಿಂದಿನ ಸರ್ಕಾರ ಇನ್​ಫ್ರಾಸ್ಟ್ರಕ್ಚರ್​ಗೆಂದು ಇಟ್ಟ ಹಣವನ್ನು ಪೂರ್ಣವಾಗಿ ಬಳಕೆ ಮಾಡುತ್ತಿರಲಿಲ್ಲ. ಹತ್ತು ವರ್ಷದಲ್ಲಿ ಆ ಪರಿಸ್ಥಿತಿಯನ್ನು ಬದಲಿಸಿದ್ದೇವೆ. ನಮ್ಮ ಸರ್ಕಾರ ಇನ್​ಫ್ರಾಸ್ಟ್ರಕ್ಚರ್ ಬೆಳವಣಿಗೆಯ ವೇಗ ಮತ್ತು ಪ್ರಮಾಣವನ್ನು ಹೆಚ್ಚಿಸಿರುವುದನ್ನು ನೀವು ಗಮನಿಸಿರಬಹುದು.
  • ಇಂಟರ್ನ್​ಶಿಪ್ ಸ್ಕೀಮ್ ತಂದಿದ್ದೇವೆ. ಯುವಕರಿಗೆ ದೊಡ್ಡ ಮಟ್ಟದಲ್ಲಿ ಉತ್ತೇಜನ ಕೊಡಲಾಗುತ್ತದೆ.
  • ಸರ್ಕಾರದ ಗುರಿಯಲ್ಲಿ ಯಾವ ಬದಲಾವಣೆ ಇಲ್ಲ. ನಮಗೆ ದೇಶ ಮುಖ್ಯ, ಅದು ನಮಗಿರುವ ಬದ್ಧತೆ.
  • ಐದು ಬಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವುದು, ಆತ್ಮ ನಿರ್ಭರ ಭಾರತ್ ನಿರ್ಮಿಸುವುದು, ಇವೆಲ್ಲಕ್ಕೂ ನಾವು ಬದ್ಧತೆಯಿಂದ ಮುಂದುವರಿಯುತ್ತಿದ್ದೇವೆ.
  • ನಾವು ರೂಪಿಸಿದ ಯೋಜನೆಗಳನ್ನು ನಿಲ್ಲಿಸದೆ ನಿರಂತವಾಗಿ ವಿಸ್ತರಣೆ ಮಾಡುತ್ತಿದ್ದೇವೆ.

ಇದನ್ನೂ ಓದಿ: ಆಧಾರ್, ಪ್ಯಾನ್ ಲಿಂಕ್ ಮಾಡದಿರುವವರಿಗೆ ದುಬಾರಿ ತೆರಿಗೆ; ಬರಲಿದೆ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್

  • ನಾವು ಪ್ರತೀ ಬಾರಿಯೂ ಮೈಲಿಗಲ್ಲುಗಳನ್ನು ದಾಟುತ್ತಿದ್ದೇವೆ.
  • 10 ವರ್ಷದಲ್ಲಿ ಮ್ಯಾನುಫ್ಯಾಕ್ಚರಿಂಗ್ ವಲಯ ಹೇಗೆ ಬದಲಾಯಿತು ನೋಡಿದ್ದೀರಿ. 14 ಸೆಕ್ಟರ್​ನಲ್ಲಿ ಪಿಎಲ್​ಐ ಯೋಜನೆ ತಂದಿದ್ದೇವೆ. ತಯಾರಕ ವಲಯಕ್ಕೆ ಪುಷ್ಟಿ ಕೊಡಲಾಗಿದೆ.
  • ಹೊಸ ನಗರಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ಕೊಡಲಾಗಿದೆ. ಈ ನೂರು ನಗರಗಳು ವಿಕಸಿತ ಭಾರತಕ್ಕೆ ಕೊಡುಗೆ ನೀಡಲಿವೆ.
  • ನಮ್ಮ ದೊಡ್ಡ ಗಮನವು ಎಂಎಸ್​ಎಂಇ ಮೇಲಿದೆ. ಕೋಟಿ ಕೋಟಿ ಜನರಿಗೆ ಉದ್ಯೋಗ ಸಿಗುತ್ತದೆ. ಎಂಎಸ್​ಎಂಇಗಳಿಗೆ ವರ್ಕಿಂಗ್ ಕ್ಯಾಪಿಟಲ್ ಸಿಗಲು, ಅದರ ಮಾರುಕಟ್ಟೆ ಅಸ್ತಿತ್ವ ಗಟ್ಟಿಗೊಳ್ಳಲು 2014ರಿಂದಲೂ ಕ್ರಮ ತೆಗೆದುಕೊಳ್ಳುತ್ತಾ ಬಂದಿದ್ದೇವೆ. ಈ ಬಜೆಟ್​ನಲ್ಲೂ ಕ್ರೆಡಿಟ್ ಗ್ಯಾರಂಟಿ ಸ್ಕೀಮ್ ತಂದಿದ್ದೇವೆ.
  • ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ತಂದಿದ್ದೇವೆ. ಕೃಷಿಕರಿಗೆ ಭೂ ಆಧಾರ್ ತಂದಿದ್ದೇವೆ.
  • ಕ್ರಿಟಿಕಲ್ ಮಿನರಲ್ ಪಡೆಯಲು ಹೊಸ ಕಾನೂನು ಮಾಡಿದ್ದೇವೆ.
  • ಭಾರತ ಬಲಿಷ್ಠ ಆರ್ಥಿಕತೆಯಾಗುತ್ತಿದೆ. ಹೊಸ ಹೊಸ ವಲಯಗಳನ್ನು ಗುರುತಿಸಲಾಗುತ್ತಿದೆ.
  • ಟೆಕ್ನಾಲಜಿಯ ಪಾತ್ರ ಬಹಳ ಮಹತ್ವದ್ದಾಗಿದೆ. ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಅನ್ನು ಉತ್ತೇಜಿಸಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:03 pm, Tue, 30 July 24

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ