ಬಜೆಟ್ 2026: ಆಸ್ಪತ್ರೆಗಳು ಹೆಚ್ಚಬೇಕು, ಸ್ಥಳೀಯ ಉತ್ಪಾದನೆ ಹೆಚ್ಚಬೇಕು- ಹೆಲ್ತ್​ಕೇರ್ ಉದ್ಯಮದ ಬಜೆಟ್ ನಿರೀಕ್ಷೆಗಳು…

Healthcare industry expectations from Budget 2026: ಫೆಬ್ರುವರಿ 1ರಂದು ಮಂಡನೆಯಾಗುವ ಬಜೆಟ್​ನಲ್ಲಿ ಹೆಲ್ತ್ ಕೇರ್ ಉದ್ಯಮ ಹಲವು ಕ್ರಮಗಳನ್ನು ನಿರೀಕ್ಷಿಸುತ್ತಿದೆ. ಆಸ್ಪತ್ರೆ, ಮೆಡಿಕಲ್ ಕಾಲೇಜುಗಳ ಸಂಖ್ಯೆ ಹೆಚ್ಚಬೇಕು, ಮೆಡಿಕಲ್ ಉಪಕರಣಗಳ ಸ್ಥಳೀಯ ಉತ್ಪಾದನೆ ಹೆಚ್ಚಬೇಕು. ಮಕ್ಕಳ ಆರೋಗ್ಯ ಗಮನದಲ್ಲಿಟ್ಟುಕೊಂಡು ನೀತಿ ರೂಪಿಸಬೇಕು, ಎಂಬಿತ್ಯಾದಿ ಸಲಹೆಗಳು ಈ ಕ್ಷೇತ್ರದಿಂದ ಬರುತ್ತಿವೆ.

ಬಜೆಟ್ 2026: ಆಸ್ಪತ್ರೆಗಳು ಹೆಚ್ಚಬೇಕು, ಸ್ಥಳೀಯ ಉತ್ಪಾದನೆ ಹೆಚ್ಚಬೇಕು- ಹೆಲ್ತ್​ಕೇರ್ ಉದ್ಯಮದ ಬಜೆಟ್ ನಿರೀಕ್ಷೆಗಳು...
ಹೆಲ್ತ್​ಕೇರ್

Updated on: Jan 21, 2026 | 12:34 PM

ನವದೆಹಲಿ, ಜನವರಿ 21: ಭಾರತದ ವೈದ್ಯಕೀಯ ಕ್ಷೇತ್ರದ ಉದ್ಯಮ ಬಹಳ ವೇಗದಲ್ಲಿ ಬೆಳೆಯುತ್ತಿದ್ದರೂ ಹಲವು ಸಮಸ್ಯೆಗಳು, ಅಡೆತಡೆಗಳಿಂದ ಬಳಲುತ್ತಿರುವುದು ಹೌದು. ಜಾಗತಿಕ ಅನಿಶ್ಚಿತತೆ ಮತ್ತು ಅಮೆರಿಕದ ಟ್ಯಾರಿಫ್​ಗಳು ಭಾರತದಲ್ಲಿಯ ಈ ಉದ್ಯಮದ ಉತ್ಸಾಹ ಕುಂದಿಸಿದೆ. ಹೆಚ್ಚಿನ ವೈದ್ಯಕೀಯ ಉಪಕರಣಗಳನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಮುಂದುವರಿದಿದೆ. ಫಾರ್ಮಾ ಕಂಪನಿಗಳು ಅಮೆರಿಕದ ಟ್ಯಾರಿಫ್​ನಿಂದ ಭೀತಿಗೊಂಡಿವೆ. ಈ ಹಿನ್ನೆಲೆಯಲ್ಲಿ ಮುಂಬರುವ ಬಜೆಟ್​ನಲ್ಲಿ (Union Budget) ಹೆಲ್ತ್​ಕೇರ್ ಉದ್ಯಮದ ಸಮಸ್ಯೆಗಳನ್ನು ಅರಿತು ಸರ್ಕಾರ ಒಂದಷ್ಟು ಕ್ರಮಗಳನ್ನು ಘೋಷಿಸಬಹುದು ಎನ್ನುವ ನಿರೀಕ್ಷೆಯಲ್ಲಿ ಉದ್ಯಮ ಇದೆ.

ಮೆಡಿಕಲ್ ಇನ್​ಫ್ರಾಸ್ಟ್ರಕ್ಚರ್ ವಿಸ್ತರಣೆ ನಿರೀಕ್ಷೆ…

ದೇಶದ ಮೊದಲ ಸ್ತರ ಮತ್ತು ಎರಡನೇ ಸ್ತರದ ನಗರಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ಅಲ್ಲಿ ಆಸ್ಪತ್ರೆಗಳು ಮತ್ತು ಮೆಡಿಕಲ್ ಕಾಲೇಜುಗಳ ಸಂಖ್ಯೆ ಹೆಚ್ಚಿಸಬೇಕು. ಅದಕ್ಕೆ ತಕ್ಕುದಾಗಿ ವೈದ್ಯರು, ನರ್ಸ್ ಹಾಗು ಇತರ ಸಿಬ್ಬಂದಿಯ ನೇಮಕಾತಿಗಳೂ ಆಗಬೇಕು. ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಹೂಡಿಕೆ ಆಗಬೇಕು ಎಂದು ಈ ಉದ್ಯಮ ವಲಯ ನಿರೀಕ್ಷಿಸುತ್ತಿದೆ.

ಇದನ್ನೂ ಓದಿ: ಬಜೆಟ್​ನಲ್ಲಿ ಫ್ಯಾಮಿಲಿ ಭಾಗ್ಯ; ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂ ತರಲು ಯೋಜನೆ; ಯಾರಿಗೆ ಲಾಭ?

ಮ್ಯಾನುಫ್ಯಾಕ್ಚರಿಂಗ್ ಸಾಮರ್ಥ್ಯ ಹೆಚ್ಚಬೇಕು…

ಆರ್ ಅಂಡ್ ಡಿ ಒಳಗೊಂಡ ವೈದ್ಯಕೀಯ ತಂತ್ರಜ್ಞಾನ ಉತ್ಪಾದನೆಗೆ ಉತ್ತೇಜಿಸಲಾಗುವಂತೆ ಪಿಎಲ್​ಐ ಸ್ಕೀಮ್ ಅನ್ನು ಮಾರ್ಪಡಿಸಬೇಕು ಎನ್ನುವ ಕೂಗು ಕೇಳಿಬರುತ್ತಿದೆ.

ಫಾರ್ಮಾ ಸೆಕ್ಟರ್​ನಲ್ಲೂ ಪರಿವರ್ತನೆಗೆ ಕೂಗು ಕೇಳಿ ಬಂದಿದೆ. ಸದ್ಯ ಫಾರ್ಮಾ ಕ್ಷೇತ್ರದಲ್ಲಿ ಕಡಿಮೆ ಮೌಲ್ಯದ ಸರಕುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ. ಆದರೆ, ಹೆಚ್ಚು ಮೌಲ್ಯದ ಸರಕುಗಳ ಉತ್ಪಾದನೆಗೆ ಆಧ್ಯತೆ ಕೊಡುವ ರೀತಿಯಲ್ಲಿ ಬೆಳವಣಿಗೆ ಆಗಬೇಕು. ಈ ನಿಟ್ಟಿನಲ್ಲಿ 2026ರ ಬಜೆಟ್​ನಲ್ಲಿ ಗಮನ ಹರಿಸಲಿ ಎಂದು ಫಾರ್ಮಾ ಉದ್ಯಮಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ: 2025ರಲ್ಲಿ ಸರ್ಕಾರ ತೆಗೆದುಕೊಂಡ ಪ್ರಮುಖ ಸುಧಾರಣೆಗಳಿವು…

ಜನರ ಜೇಬಿಂದ ಆಸ್ಪತ್ರೆ ವೆಚ್ಚ ಭರಿಸುವುದನ್ನು ಕಡಿಮೆ ಮಾಡಬೇಕು. ಹೆಲ್ತ್ ಇನ್ಷೂರೆನ್ಸ್, ಟ್ಯಾಕ್ಸ್ ಡಿಡಕ್ಷನ್ ಇತ್ಯಾದಿ ಹೆಚ್ಚಿಸಬೇಕು. ಜನರು ಕೆಲಸ ಮಾಡುವ ಕಂಪನಿಗಳು ಉದ್ಯೋಗಿಗಳ ಆರೋಗ್ಯ ಕಾಳಜಿ ಯೋಜನೆಗಳನ್ನು ನಡೆಸಬೇಕು. ಇವೇ ಮುಂತಾದ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನೀತಿ ರೂಪಿಸಬೇಕು ಎಂದು ಹೆಲ್ತ್​ಕೇರ್ ಉದ್ಯಮದವರು ಕೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:34 pm, Wed, 21 January 26