Business Ideas: ಹಳ್ಳಿ, ಪಟ್ಟಣಗಳಲ್ಲಿ ಮಾಡಬಹುದಾದ 5 ಬಿಜಿನೆಸ್ ಐಡಿಯಾಗಳು

Small Scale Business Ideas: ಪಟ್ಟಣ, ಹಳ್ಳಿ ಪ್ರದೇಶದಲ್ಲಿ ಮಾಡಬಹುದಾದ 5 ಬಿಜಿನೆಸ್ ಐಡಿಯಾಗಳು ಈ ಲೇಖನದಲ್ಲಿವೆ. ಕೊರೊನಾ ಕಾಲಘಟ್ಟದಲ್ಲಿ ಈ ಐಡಿಯಾಗಳು ನಿಮ್ಮ ನೆರವಿಗೆ ಬರಬಹುದು.

Business Ideas: ಹಳ್ಳಿ, ಪಟ್ಟಣಗಳಲ್ಲಿ ಮಾಡಬಹುದಾದ 5 ಬಿಜಿನೆಸ್ ಐಡಿಯಾಗಳು
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on:Apr 19, 2021 | 1:02 PM

ತೀರ್ಥಹಳ್ಳಿ ಹತ್ತಿರದ ಹಳ್ಳಿಯಲ್ಲಿ ಎರಡು ಗುಂಟೆಯಷ್ಟಿದ್ದ ಆ ಜಾಗ ಬಹಳ ವರ್ಷಗಳಿಂದ ಹಾಗೇ ಖಾಲಿ ಉಳಿದಿತ್ತು. ರಸ್ತೆ ಪಕ್ಕಕ್ಕೆ ಹಾಗೂ ಜನ ಹೆಚ್ಚು ಓಡಾಡುವಂಥ ಇದ್ದ ಆ ಸ್ಥಳದ ಕಡೆ ಕಣ್ಣು ಹೋಗದೆ ಅಲ್ಲಿಂದ ಮುಂದೆ ಸಾಗುವುದು ಅಪರೂಪ ಎಂಬಂತೆ ಇತ್ತು. ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡ ಮೇಲೆ ಆ ಸ್ಥಳದಲ್ಲಿ ಕಳೆಗಳನ್ನು ಕಿತ್ತು, ಜಾಗ ಸಮತಟ್ಟು ಮಾಡಿ, ಅಲ್ಲೊಂದು ಅಂಗಡಿ ಮತ್ತು ಪುಟ್ಟ ಮನೆ ನಿರ್ಮಾಣ ಮಾಡುವುದಕ್ಕೆ ವ್ಯವಸ್ಥೆ ಮಾಡುತ್ತಿರುವುದು ಒಂದು ದಿನ ಕಂಡುಬಂತು. ಕೆಲಸಗಾರರ ಜತೆಗೂಡಿ ತಾವೂ ಬಿಡುವಿಲ್ಲದೆ ದುಡಿಯುತ್ತಿದ್ದ ಸುಮಾರು 35ರಿಂದ 40 ವರ್ಷ ವಯಸ್ಸಿನ ಆ ಸ್ಥಳದ ಯಜಮಾನ ಮಾತಿಗೆ ಸಿಕ್ಕರು.

ಬೆಂಗಳೂರಿನ ರೆಸ್ಟುರಾಂಟ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು, ವಾಪಸ್ ಊರಿಗೆ ಬಂದಿದ್ದರು. ಇನ್ನು ಬೆಂಗಳೂರಿಗೆ ವಾಪಸ್ ಹೋಗೋದು ಬೇಡ ಎಂಬುದು ಅವರ ಆಲೋಚನೆ ಆಗಿತ್ತು. ತಮ್ಮ ಪಾಲಿಗೆ ಬಂದಿದ್ದ ಪುಟ್ಟ ಜಾಗದಲ್ಲಿ ಮಳಿಗೆ- ಮನೆ ನಿರ್ಮಾಣಕ್ಕೆ ಮುಂದಾಗಿ, ಆ ಸ್ಥಳದಲ್ಲಿ ಮಾಡಬಹುದಾದ ವ್ಯಾಪಾರ ಅಥವಾ ಉದ್ಯಮದ ಪಟ್ಟಿಯೊಂದನ್ನು ಮಾಡಿಟ್ಟುಕೊಂಡಿದ್ದರು. ಅದು ವಿವರಿಸುತ್ತಾ, ಈ ಪೈಕಿ ಯಾವುದಾದರೂ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ವ್ಯವಹಾರ ಆ ಸ್ಥಳದಲ್ಲಿ ಮಾಡುವುದಾಗಿ ಹೇಳಿದರು. ಎರಡು ಸಾವಿರ ಚದರಡಿಗೂ ಹೆಚ್ಚು ಜಾಗ ಇದೆ, ಸಾಗಣೆಗೆ ಅನುಕೂಲ ಆಗುವಂಥ ಸ್ಥಳ, ಆ ಸ್ಥಳದಲ್ಲಿ ಯಾವುದಕ್ಕೆ ಬೇಡಿಕೆ ಇರುತ್ತದೆ ಎಂದು ಅವರಿಗಿರುವ ಅವಗಾಹನೆ ಇವೆಲ್ಲದರ ಹಿನ್ನೆಲೆಯಲ್ಲಿ ತಮ್ಮ ಯೋಜನೆಯನ್ನು ಹೇಳುತ್ತಾ ಹೋದರು.

ಹಿಟ್ಟಿನ ಗಿರಣಿ ತಮ್ಮ ಚಿಕ್ಕ ವಯಸ್ಸಿನಿಂದಲೇ ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯುತ್ ವ್ಯತ್ಯಯ ಸಮಸ್ಯೆ ಕಣ್ಣಾರೆ ಕಂಡಿದ್ದ ಅವರಿಗೆ, ಉತ್ತಮ ವಿದ್ಯುತ್ ವ್ಯವಸ್ಥೆ ಮಾಡಿಕೊಂಡು, ಹಿಟ್ಟಿನ ಗಿರಣಿ ಆರಂಭಿಸುವುದು ಆ ಸ್ಥಳದಲ್ಲಿ ಒಳ್ಳೆ ವ್ಯವಹಾರ ಆಗಬಹುದು ಎಂಬ ನಂಬಿಕೆ ಆಗಿತ್ತು. ಅದಕ್ಕೆ ಬೇಕಾದ ವಿದ್ಯುತ್ ಸಂಪರ್ಕದ ಅಗತ್ಯ, ಸ್ಥಳಾವಕಾಶ, ಆದಾಯ ಇತ್ಯಾದಿ ಸಂಗತಿಗಳ ಬಗ್ಗೆ ಸರ್ವೇ ಮಾಡುತ್ತಿದ್ದರು ಆ ವ್ಯಕ್ತಿ.

ಪೌಲ್ಟ್ರಿ ಫಾರ್ಮ್ ಬೆಂಗಳೂರಿನಲ್ಲಿ ಇದ್ದು ಬಂದಿದ್ದ ಅನುಭವದ ಜತೆಗೆ, ತಮ್ಮ ಗ್ರಾಮೀಣ ಪ್ರದೇಶದ ಹಿನ್ನೆಲೆಯಲ್ಲಿ ನಾಟಿ ಕೋಳಿ ಪೌಲ್ಟ್ರಿ ಫಾರ್ಮ್ ಮಾಡುವುದಾದರೆ ಹೇಗೆ ಎಂಬ ಆಲೋಚನೆ ಸಹ ಅವರಲ್ಲಿತ್ತು.

ಕುಡಿಯುವ ನೀರಿನ ಘಟಕ ಇತ್ತೀಚಿನ ದಿನಮಾನಗಳಲ್ಲಿ ಪ್ಯಾಕೇಜ್ಡ್ ಕುಡಿಯುವ ನೀರಿಗೆ ಬೇಡಿಕೆ ಇದೆ ಎಂಬುದು ಗಮನಿಸಬೇಕಾದ ಸಂಗತಿ. ಅದಕ್ಕೆ ಅಗತ್ಯ ಇರುವ ಅನುಮತಿ ಪಡೆದು, ವ್ಯವಹಾರ ಆರಂಭಿಸಬಹುದು ಎಂಬ ಯೋಜನೆ ಸಹ ಅವರಲ್ಲಿ ಸುಳಿದಾಡುತ್ತಿತ್ತು.

ದಿನಸಿ ಮಳಿಗೆ ನಮ್ಮ ಮಾತುಕತೆ ನಡೆಯುತ್ತಿರುವ ಹೊತ್ತಿಗೇ ಅದೇ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ವ್ಯಕ್ತಿಯೊಬ್ಬರು, ಎಂಥ ನೀವು ದಿನಸಿ ಅಂಗಡಿ ಮಾಡೋರಾ ಏನು ಅಂತ ಕೇಳುತ್ತಲೇ ಮುಂದೆ ಸಾಗಿದರು. ಅವರ ಕಡೆ ನೋಡುತ್ತಲೇ, ಇದೂ ಒಂದು ಪ್ಲ್ಯಾನ್ ಇದೆ ನನಗೆ ಈ ವ್ಯಕ್ತಿ ಹೇಳಿದರು.

ಹಾಲು ಸಂಗ್ರಹ ಈ ಜಾಗದಲ್ಲಿ ಹಾಲು ಸಂಗ್ರಹ ಕೇಂದ್ರವೊಂದನ್ನು ಮಾಡಬಹುದು ಅಂತಲೂ ಪರಿಚಿತರೊಬ್ಬರು ಹೇಳಿದ್ದಾರೆ. ಬಂಡವಾಳ ಎಷ್ಟು ಬೇಕಾಗಬಹುದು ಎಂಬ ಲೆಕ್ಕಾಚಾರದಲ್ಲಿ ಇದ್ದೀನಿ ಅಂತ ಅವರು ಹೇಳಿದರು.

ನಗರ ಪ್ರದೇಶದಲ್ಲಿ ಗ್ಯಾರೇಜ್​ಗಳನ್ನು ಇಟ್ಟುಕೊಂಡಿದ್ದವರು ಈಗ ತಾವಿದ್ದ ಪಟ್ಟಣ, ಹಳ್ಳಿಗಳಲ್ಲಿ ಶುರು ಮಾಡಿದ್ದಾರೆ. ರಸಗೊಬ್ಬರ ಮಳಿಗೆಗಳನ್ನು ಆರಂಭಿಸಿದವರಿದ್ದಾರೆ. ಒಂದೇ ಆದಾಯವನ್ನು ನೆಚ್ಚಿಕೊಳ್ಳುವುದಕ್ಕಿಂತ ಒಂದಕ್ಕಿಂತ ಹೆಚ್ಚು ಆದಾಯ ಬರುವ ಮಾರ್ಗ ನೋಡಿಕೊಂಡರೆ ಉತ್ತಮ. ಹೀಗೆ ಆಲೋಚಿಸುತ್ತಾ ಹೋದರೆ ಪಟ್ಟಣ- ಹಳ್ಳಿಗಳಲ್ಲಿ ಆರಂಭ ಮಾಡುವುದಕ್ಕೆ ಸೂಕ್ತವಾದ ವ್ಯವಹಾರಗಳು ಸಾಕಷ್ಟಿವೆ. ಅದಕ್ಕೆ ಮುಂಚೆ ಕೆಲವು ಫೀಲ್ಡ್ ವರ್ಕ್ ಮಾಡಬೇಕು, ಬಂಡವಾಳ ಒಂದಿಷ್ಟು ಕೈಯಲ್ಲಿಟ್ಟುಕೊಳ್ಳಬೇಕು, ಅಷ್ಟೇ.

ಇದನ್ನೂ ಓದಿ: Business Ideas: ಸಣ್ಣ ಬಂಡವಾಳದಲ್ಲಿ ಮಾಡಬಹುದಾದ 5 ಬಿಜಿನೆಸ್ ಐಡಿಯಾಗಳು

(Business ideas which suitable for town and villages during corona lockdown)

Published On - 12:58 pm, Mon, 19 April 21

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ