Spy at Sky: ಭೂಮಿಯಲ್ಲಿ ಎಲ್ಲೇ ಅಡಗಿದರೂ ಕಣ್ತಪ್ಪಿಸಿಕೊಳ್ಳಲಾಗದು: ಅಮೆರಿಕದ ಸ್ಪೇಸ್​ಎಕ್ಸ್​ನಿಂದ ನೂರಾರು ಸೀಕ್ರೆಟ್ ಸೆಟಿಲೈಟ್​ಗಳು

|

Updated on: Mar 17, 2024 | 12:02 PM

SpaceX Building Spy Satellite Network for US Intelligence: ಇಲಾನ್ ಮಸ್ಕ್ ಮಾಲಿಕತ್ವದ ಸ್ಪೇಸ್​ಎಕ್ಸ್​ನ ಸ್ಪೇಸ್​ಶೀಲ್ಡ್ ನೂರಾರು ರಹಸ್ಯ ಸೆಟಿಲೈಟ್​ಗಳ ನೆಟ್ವರ್ಕ್ ನಿರ್ಮಿಸುತ್ತಿದ್ದು, ಇದು ಅಮೆರಿಕದ ಮಿಲಿಟರಿಗೆ ನೆರವಾಗಲಿದೆ. 2021ರಲ್ಲಿ ಅಮೆರಿಕ ಸರ್ಕಾರ ಸ್ಪೇಸ್​ಎಕ್ಸ್ ಜೊತೆ ಈ ಯೋಜನೆಗೆ 1.8 ಬಿಲಿಯನ್ ಡಾಲರ್​ನ ಒಪ್ಪಂದ ಮಾಡಿಕೊಂಡಿದೆ. ಭೂಮಿಯ ಬಹುತೇಕ ಪ್ರದೇಶಗಳ ಮೇಲೆ ಈ ಸ್ಪೈ ಸೆಟಿಲೈಟ್​ಗಳು ಕಣ್ಣಿಡಲಿದ್ದು, ನಿಗದಿತ ಟಾರ್ಗೆಟ್​ಗಳ ಬಗ್ಗೆ ನಿಖರ ಮಾಹಿತಿ ಅಮೆರಿಕದ ಮಿಲಿಟರಿಗೆ ಲೈವ್ ಆಗಿ ರವಾನೆಯಾಗಲಿದೆ ಎನ್ನಲಾಗಿದೆ.

Spy at Sky: ಭೂಮಿಯಲ್ಲಿ ಎಲ್ಲೇ ಅಡಗಿದರೂ ಕಣ್ತಪ್ಪಿಸಿಕೊಳ್ಳಲಾಗದು: ಅಮೆರಿಕದ ಸ್ಪೇಸ್​ಎಕ್ಸ್​ನಿಂದ ನೂರಾರು ಸೀಕ್ರೆಟ್ ಸೆಟಿಲೈಟ್​ಗಳು
ಸೆಟಿಲೈಟ್​ನ ಸಾಂದರ್ಭಿಕ ಚಿತ್ರ
Follow us on

ನವದೆಹಲಿ, ಮಾರ್ಚ್ 17: ಭವಿಷ್ಯದ ಯುದ್ಧಗಳು (future wars) ಹೊಸ ತಂತ್ರಜ್ಞಾನ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ನಡೆಯುತ್ತವೆ ಎಂದು ಹೇಳಲಾಗುತ್ತದೆ. ಆಗಸದಲ್ಲಿರುವ ಉಪಗ್ರಹಗಳು ವಿವಿಧ ಜನೋಪಯೋಗಿ ಸೇವೆಗಳಿಗೆ ಬಳಕೆ ಆಗುತ್ತವೆ. ಅವುಗಳ ಮಧ್ಯೆ ಸಾಕಷ್ಟು ಸ್ಪೈ ಸೆಟಿಲೈಟ್​ಗಳಿದ್ದು (spy satellites), ಇವು ರಹಸ್ಯವಾಗಿ ಕೆಲಸ ಮಾಡುತ್ತವೆ. ಯಾವುದೇ ಟಾರ್ಗೆಟ್ ಮೇಲೂ ಇವು ಕಣ್ಣಿಡಬಲ್ಲುವು. ಅಮೆರಿಕದ ಬಳಿ ಸದ್ಯದಲ್ಲೇ ಇಂಥ ಬಲಿಷ್ಠ ವ್ಯವಸ್ಥೆ ಬರಲಿದೆ. ವಿಶ್ವದ ಯಾವುದೇ ಮೂಲೆಯಲ್ಲಿರುವ ಯಾವುದೇ ಸ್ಥಳದ ಲೈವ್ ಸ್ಥಿತಿಗತಿಯನ್ನು ಕುಳಿತಲ್ಲೇ ನೋಡಬಹುದಾದಂತಹ ಶಕ್ತಿಶಾಲಿ ಗೂಢಚರ್ಯೆ ವ್ಯವಸ್ಥೆಯನ್ನು ಅಮೆರಿಕ ಅಭಿವೃದ್ದಿಪಡಿಸುತ್ತಿದೆ. ಅದಕ್ಕಾಗಿ ಇಲಾನ್ ಮಸ್ಕ್ ಮಾಲಕತ್ವದ ಸ್ಪೇಸ್​ಎಕ್ಸ್ ಮತ್ತು ಅಮೆರಿಕದ ಗುಪ್ತಚರ ಸಂಸ್ಥೆ ಮಧ್ಯೆ ಮೂರು ವರ್ಷದ ಹಿಂದೆ ರಹಸ್ಯ ಒಪ್ಪಂದ ಆಗಿದೆ ಎನ್ನುವಂತಹ ಸುದ್ದಿ ಕೇಳಿಬಂದಿದೆ.

2021ರಲ್ಲಿ 1.8 ಬಿಲಿಯನ್ ಡಾಲರ್ ಮೌಲ್ಯದ ಈ ಸೀಕ್ರೆಟ ಒಪ್ಪಂದ ಆಗಿದ್ದು, ಅದರಂತೆ ಭೂಮಿಯ ಕೆಳಗಿನ ಕಕ್ಷೆಯಲ್ಲಿ ನೂರಾರು ರಹಸ್ಯ ಸೆಟಿಲೈಟ್​ಗಳನ್ನು ಸೇರಿಸಲಾಗುತ್ತಿದೆ. ಇವು ಸೆರೆ ಹಿಡಿಯುವ ಭೂಮಿಯ ಹೈ ರೆಸಲ್ಯೂಶನ್ ಚಿತ್ರಗಳು ಬಹಳ ಸೂಕ್ಷ್ಮ ಮಾಹಿತಿಯನ್ನೂ ತೆರೆದಿಡಬಲ್ಲುವು.

ಇದನ್ನೂ ಓದಿ: ಎಲೆಕ್ಟ್ರಿಕ್ ಕಾರು ಕಂಪನಿಗಳಿಂದ ಹೂಡಿಕೆ ಆಕರ್ಷಿಸಲು ಹೊಸ ಟ್ಯಾಕ್ಸ್ ಸ್ಕೀಮ್ ಜಾರಿಗೆ ತರುತ್ತಿರುವ ಸರ್ಕಾರ

ಸ್ಪೇಸ್​ಎಕ್ಸ್​ನ ಸ್ಟಾರ್​ಶೀಲ್ಡ್ ವಿಶ್ವಾದ್ಯಂತ ಸ್ಪೈ ಸೆಟಿಲೈಟ್​ಗಳ ಜಾಲ ನಿರ್ಮಿಸುತ್ತಿದೆ. ಇವು ಅಮೆರಿಕದ ಸೇನಾ ಪಡೆಗಳಿಗೆ ಶಕ್ತಿಯಾಗಿ ನಿಲ್ಲಲಿವೆ. ಭೂಮಿಯ ಯಾವುದೇ ಸ್ಥಳದಲ್ಲಿ ಸಂಭಾವ್ಯ ಗುರಿಯ ಮೇಲೆ ಕಣ್ಣಿಟ್ಟು, ಆ ಮಾಹಿತಿಯನ್ನು ಅಮೆರಿಕದ ಮಿಲಿಟರಿ ಮತ್ತು ಗುಪ್ತಚರ ಅಧಿಕಾರಿಗಳಿಗೆ ಈ ಸ್ಪೈ ಸೆಟಿಲೈಟ್​ಗಳು ಒದಗಿಸಬಲ್ಲುವು.

ಸ್ಪೇಸ್​ಎಕ್ಸ್​ನ ಫಾಲ್ಕನ್-9 ರಾಕೆಟ್​ಗಳನ್ನು ಉಪಯೋಗಿಸಿ ಈಗಾಗಲೇ ಹಲವಾರು ಪ್ರಾಯೋಗಿಕ ಸೆಟಿಲೈಟ್​ಗಳನ್ನು ಉಡಾವಣೆ ಮಾಡಲಾಗಿದೆ. ಕೆಳಗಿನ ಭೂಕಕ್ಷೆಯಲ್ಲಿ ಸಾಕಷ್ಟು ಅಪರಿಚಿತ ಸೆಟಿಲೈಟ್​ಗಳಿದ್ದು, ಅವುಗಳನ್ನು ಸ್ಪೇಸ್​ಎಕ್ಸ್ ತೇಲಿಬಿಟ್ಟಿರಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: ಲಕ್ಷದ್ವೀಪದಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಲೀಟರ್​ಗೆ ಬರೋಬ್ಬರಿ 15 ರೂವರೆಗೆ ಕುಸಿತ; ಭಾರತದಲ್ಲಿ ಇತಿಹಾಸದಲ್ಲೇ ಅತಿದೊಡ್ಡ ಇಳಿಕೆ

ಈ ಸ್ಪೈ ಸೆಟಿಲೈಟ್ ಜಾಲ ಸಮರದಲ್ಲಿ ಅಮೆರಿಕ ಮಾತ್ರವಲ್ಲ, ಚೀನಾ ಕೂಡ ಇದೆ. ತನ್ನದೇ ಗೂಢಚರ್ಯೆ ಉಪಗ್ರಹ ಸಮೂಹವನ್ನು ನಿರ್ಮಿಸಲು ಚೀನಾ ಯೋಜಿಸಿದೆ. ಪಾಕಿಸ್ತಾನಕ್ಕೂ ಕೆಲ ಸ್ಪೈ ಸೆಟಿಲೈಟ್​ಗಳನ್ನು ಚೀನಾ ಒದಗಿಸಲು ಮುಂದಾಗಿದೆ. ಚೀನಾ ಇತ್ತೀಚೆಗೆ ಭೂಮಿಯ ಮೇಲಿರುವ ಸೆಟಿಲೈಟ್ ಅನ್ನು ನಾಶ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಿರುವುದಾಗಿ ಹೇಳಿಕೊಂಡಿತ್ತು. ಆಕಾಶದಲ್ಲಿರುವ ಗುಪ್ತ ಸೆಟಿಲೈಟ್​ಗಳನ್ನು ಲೇಸರ್ ಮೂಲಕ ಹೊಡೆದುರುಳಿಸುವ ಶಕ್ತಿ ಚೀನಾ ಬಳಿ ಇದೆ. ರಷ್ಯಾ ಬಳಿಯೂ ಇಡೀ ಸೆಟಿಲೈಟ್ ನೆಟ್​ವರ್ಕ್​ಗಳನ್ನು ನಿಷ್ಕ್ರಿಯಗೊಳಿಸಬಲ್ಲಂತಹ ಶಸ್ತ್ರಾಸ್ತ್ರ ಇದೆ ಎನ್ನಲಾಗುತ್ತಿದೆ. ಅಮೆರಿಕ ಈ ಹಿಂದೆ ಈ ಬಗ್ಗೆ ಅಪಾಯದ ಸೂಚನೆ ರವಾನಿಸಿದ್ದು ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:01 pm, Sun, 17 March 24