IRCTC Tickets On EMI: ರೈಲ್ವೆಯಿಂದ ಹೊಸ ಕೊಡುಗೆ, ಈಗಲೇ ಪ್ರಯಾಣಿಸಿ, ನಂತರ ಪಾವತಿ ಮಾಡಿ

| Updated By: ಗಣಪತಿ ಶರ್ಮ

Updated on: Oct 19, 2022 | 10:08 AM

ಈ ಯೋಜನೆ ಮೂಲಕ ಪ್ರಯಾಣಿಕರು ರೈಲ್ವೆ ಟಿಕೆಟ್​ಗೆ ಇಎಂಐ ಸೌಲಭ್ಯ ಪಡೆಯಬಹುದಾಗಿದೆ ಎಂದು ಐಆರ್​ಸಿಟಿಸಿ ತಿಳಿಸಿದೆ.

IRCTC Tickets On EMI: ರೈಲ್ವೆಯಿಂದ ಹೊಸ ಕೊಡುಗೆ, ಈಗಲೇ ಪ್ರಯಾಣಿಸಿ, ನಂತರ ಪಾವತಿ ಮಾಡಿ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಈಗಲೇ ಪ್ರಯಾಣಿಸಿ, ಆಮೇಲೆ ಪಾವತಿಸಿ ಅಥವಾ ಟ್ರಾವೆಲ್ ನೌ ಪೇ ಲೇಟರ್ (TNPL) ಎಂಬ ಹೊಸ ಯೋಜನೆಯನ್ನು ಭಾರತೀಯ ರೈಲ್ವೆ(Indian Railway) ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ಘೋಷಿಸಿದೆ. ಹಣಕಾಸು ಸೇವೆ ಒದಗಿಸುವ ಕ್ಯಾಷ್ಇ ಸಂಸ್ಥೆಯ ಸಹಯೋಗದಲ್ಲಿ ಈ ಸೇವೆ ನೀಡಲಾಗುತ್ತದೆ. ಇದರ ಮೂಲಕ ಪ್ರಯಾಣಿಕರು ರೈಲ್ವೆ ಟಿಕೆಟ್​ಗೆ ಇಎಂಐ (EMI) ಸೌಲಭ್ಯ ಪಡೆಯಬಹುದಾಗಿದೆ ಎಂದು ಐಆರ್​ಸಿಟಿಸಿ ತಿಳಿಸಿದೆ. ತಕ್ಷಣವೇ ಟಿಕೆಟ್ ಕಾಯ್ದಿರಿಸಿ ಮೂರರಿಂದ ಆರು ತಿಂಗಳ ವರೆಗಿನ ಇಎಂಐ ಸೌಲಭ್ಯವನ್ನು ಪ್ರಯಾಣಿಕರು ಪಡೆಯಬಹುದಾಗಿದೆ.

ಕ್ಯಾಷ್ಇ ಪಾವತಿ ಆಯ್ಕೆಯೊಂದಿಗೆ ಐಆರ್​ಸಿಟಿಸಿ ಆ್ಯಪ್​ನಲ್ಲಿ ಟಿಕೆಟ್ ಕಾಯ್ದಿರಿಸುವಿಕೆ ಪ್ರಕ್ರಿಯೆ ಇನ್ನೂ ಸರಳವಾಗಲಿದೆ. ಲಕ್ಷಾಂತರ ಪ್ರಯಾಣಿಕರಿಗೆ ಇದರಿಂದ ಪ್ರಯೋಜನವಾಗಲಿದೆ ಎನ್ನಲಾಗಿದೆ. ತತ್ಕಾಲ್ ಮತ್ತು ಟಿಕೆಟ್ ಬುಕಿಂಗ್ ಮಾಡುವ ಪ್ರಯಾಣಿಕರಿಗೆ ಐಆರ್​ಸಿಟಿಸಿ ಆ್ಯಪ್​ನ ಚೆಕೌಟ್ ಪೇಜ್​ನಲ್ಲಿ ಇಎಂಐ ಪಾವತಿ ಆಯ್ಕೆ ಲಭ್ಯವಾಗಲಿದೆ. ಐಆರ್​ಸಿಟಿಸಿ ಆ್ಯಪ್​ ಸುಮಾರು 9 ಕೋಟಿ ಡೌಲ್​ಲೋಡ್ ಆಗಿದ್ದು, ಪ್ರತಿ ದಿನ 15 ಲಕ್ಷ ಟಿಕೆಟ್​ಗಳನ್ನು ಈ ಆ್ಯಪ್​ ಮೂಲಕ ಕಾಯ್ದಿರಿಸಲಾಗುತ್ತಿದೆ.

ಇದನ್ನೂ ಓದಿ: Indian Railways: ಗುಜರಿ ಮಾರಾಟದಿಂದ ರೈಲ್ವೆ ಇಲಾಖೆಗೆ 6 ತಿಂಗಳಲ್ಲಿ 2,582 ಕೋಟಿ ರೂ. ಆದಾಯ!

ಇದನ್ನೂ ಓದಿ
Petrol Price on October 19: ನಿಮ್ಮ ನಗರದಲ್ಲಿ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?; ಇಲ್ಲಿದೆ ಮಾಹಿತಿ
Gold Price Today: ಚಿನ್ನದ ದರ 40 ರೂಪಾಯಿ ಇಳಿಕೆ, ಬೆಳ್ಳಿ ದರವೂ ಕುಸಿತ
Microsoft: ಆರ್ಥಿಕ ಸಂಕಷ್ಟ, ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಮೈಕ್ರೋಸಾಫ್ಟ್
SBI Interest Rate Hike: ಉಳಿತಾಯ ಖಾತೆ ಬಡ್ಡಿ ದರ ಹೆಚ್ಚಿಸಿದ ಎಸ್​ಬಿಐ

ದೇಶದ ಅತಿ ಹೆಚ್ಚು ಸಂಖ್ಯೆಯ ಪ್ರಯಾಣಿಕರಿಗೆ ಇನ್ನುಮುಂದೆ ಇಎಂಐ ಮೂಲಕ ಪಾವತಿ ಮಾಡಿ ರೈಲು ಪ್ರಯಾಣ ಮಾಡುವುದು ಬಹಳ ಸುಲಭವಾಗಿದೆ. ನಮ್ಮ ಸಂಸ್ಥೆಯು ಐಆರ್​ಸಿಟಿಸಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದನ್ನು ಘೋಷಿಸಲು ಬಹಳ ಸಂತಸವಾಗುತ್ತಿದೆ. ಈ ಯೋಜನೆ ಡಿಜಿಟಲ್ ಇಎಂಐ ಪಾವತಿ ಪ್ರಕ್ರಿಯೆಗೆ ಇನ್ನಷ್ಟು ವೇಗ ನೀಡಲಿದೆ. ಬಹಳ ಸರಳವಾಗಿ ಪಾವತಿ ಮಾಡುವಂತೆ ಇಎಂಐ ಆಯ್ಕೆಯನ್ನು ನೀಡಲಾಗಿದೆ ಎಂದು ಕ್ಯಾಷ್​ಇ ಸ್ಥಾಪಕ ಅಧ್ಯಕ್ಷ ವಿ. ರಮಣ್ ಕುಮಾರ್ ತಿಳಿಸಿದ್ದಾರೆ.

ಹೇಗೆ ಕಾರ್ಯನಿರ್ವಹಿಸುತ್ತದೆ?:

ಕ್ಯಾಷ್​ಇ ಸಂಸ್ಥೆಯು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಆಲ್ಗಾರಿದಂ ಪ್ಲಾಟ್​ಫಾರ್ಮ್ ‘ಸೋಷಿಯಲ್ ಲೋನ್ ಕ್ವೊಟೆಂಟ್ (SLQ)’ ಆಧಾರದಲ್ಲಿ ಕಾರ್ಯನಿರ್ವಹಿಸುತ್ತದೆ. ಇಎಂಐ ಸೌಲಭ್ಯ ಪಡೆಯುವ ವ್ಯಕ್ತಿಯ ಪಾವತಿ ಸಾಮರ್ಥ್ಯ ಹೇಗಿದೆ ಎಂಬುದನ್ನು ಆತನ ಸಾಮಾಜಿಕ ಮತ್ತು ಮೊಬೈಲ್ ದತ್ತಾಂಶಗಳ ಆಧಾರದಲ್ಲಿ ಎಸ್​ಎಲ್​ಕ್ಯು ಲೆಕ್ಕಹಾಕುತ್ತದೆ. ಬಳಿಕ ಆತ ಇಎಂಐ ಸೌಲಭ್ಯಕ್ಕೆ ಅರ್ಹನೇ ಅಥವಾ ಅಲ್ಲವೇ ಎಂಬ ಮಾಹಿತಿ ಒದಗಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ