Income Tax: ಏಪ್ರಿಲ್ನಿಂದ ಆಗಸ್ಟ್ ಮಧ್ಯೆ ತೆರಿಗೆ ಪಾವತಿದಾರರಿಗೆ 67401 ಕೋಟಿ ರೂಪಾಯಿ ರೀಫಂಡ್
2021ರ ಏಪ್ರಿಲ್ 1 ಹಾಗೂ ಆಗಸ್ಟ್ 30ರ ಮಧ್ಯೆ 23 ಲಕ್ಷ ತೆರಿಗೆದಾರರಿಗೆ 67401 ಕೋಟಿ ರೂಪಾಯಿ ತೆರಿಗೆಯನ್ನು ಮರುಪಾವತಿ ಮಾಡಲಾಗಿದೆ.
ಕೇಂದ್ರೀಯ ನೇರ ತೆರಿಗೆ ಮಂಡಳಿ ಏಪ್ರಿಲ್ 1 ಮತ್ತು ಆಗಸ್ಟ್ 16, 2021ರ ನಡುವೆ 23.99 ಲಕ್ಷ ಭಾರತೀಯ ತೆರಿಗೆದಾರರಿಗೆ 67,401 ಕೋಟಿ ರೂಪಾಯಿಗಳ ಮರುಪಾವತಿಯನ್ನು ನೀಡಿದೆ ಎಂದು ಭಾರತದ ಆದಾಯ ತೆರಿಗೆ ಇಲಾಖೆ ಶನಿವಾರ ತಿಳಿಸಿದೆ. 22,61,918 ಪ್ರಕರಣಗಳಲ್ಲಿ ರೂ. 16,373 ಕೋಟಿ ಆದಾಯ ತೆರಿಗೆ ಮರುಪಾವತಿ ಮತ್ತು 1,37,327 ಪ್ರಕರಣಗಳಲ್ಲಿ ಕಾರ್ಪೊರೇಟ್ ತೆರಿಗೆ ಮರುಪಾವತಿ ರೂ. 51,029 ಕೋಟಿ ನೀಡಲಾಗಿದೆ ಎಂದು ಆ್ದದಾಯ ತೆರಿಗೆ ಇಲಾಖೆ ಹೇಳಿದೆ.
“ಸಿಬಿಡಿಟಿಯು 1 ಏಪ್ರಿಲ್ 2021 ರಿಂದ 30 ಆಗಸ್ಟ್ 2021ರ ನಡುವೆ 23.99 ಲಕ್ಷಕ್ಕೂ ಹೆಚ್ಚು ತೆರಿಗೆದಾರರಿಗೆ ರೂ. 67,401 ಕೋಟಿಗಳಷ್ಟು ಮರುಪಾವತಿಯನ್ನು ನೀಡಿದೆ. 22,61,918 ಪ್ರಕರಣಗಳಲ್ಲಿ ರೂ. 16,373 ಕೋಟಿಗಳ ಆದಾಯ ತೆರಿಗೆ ಮರುಪಾವತಿಯನ್ನು ನೀಡಲಾಗಿದೆ. 1,37,327 ಪ್ರಕರಣಗಳಲ್ಲಿ ಕಾರ್ಪೊರೇಟ್ ತೆರಿಗೆ ಮರುಪಾವತಿ 51,029 ಕೋಟಿ ರೂಪಾಯಿ ನೀಡಲಾಗಿದೆ,” ಎಂದು ಆದಾಯ ತೆರಿಗೆ ಇಲಾಖೆಯಿಂದ ಟ್ವೀಟ್ ಮಾಡಿದೆ.
ಏಪ್ರಿಲ್ 1 ಮತ್ತು ಆಗಸ್ಟ್ 16ರ ನಡುವೆ 22.75 ಲಕ್ಷಕ್ಕೂ ಹೆಚ್ಚು ತೆರಿಗೆ ಪಾವತಿದಾರರಿಗೆ 49,696 ಕೋಟಿ ರೂಪಾಯಿಗಿಂತ ಹೆಚ್ಚಿನ ಆದಾಯ ತೆರಿಗೆ ಮರುಪಾವತಿಯನ್ನು ನೀಡಲಾಗಿದೆ ಎಂದು ಇಲಾಖೆ ಈ ಹಿಂದೆ ಹೇಳಿತ್ತು. ಅಂದಹಾಗೆ ವಿವಿಧ ಐಟಿ ರಿಟರ್ನ್ಸ್ ಫೈಲಿಂಗ್ ಗಡುವನ್ನು ವಿಸ್ತರಣೆ ಮಾಡಲಾಗಿದೆ.
ಇದನ್ನೂ ಓದಿ: Income Tax Returns: ಆದಾಯ ತೆರಿಗೆ ರಿಟರ್ನ್ಸ್ ಕೊನೆ ದಿನಾಂಕ ಸೆಪ್ಟೆಂಬರ್ 30ರ ತನಕ ವಿಸ್ತರಣೆ
(CBDT Refunds Rs 67401 Crore To 23 Lakh Tax Payers Between April To August)
Published On - 4:04 pm, Sat, 4 September 21