ICICI Bank: 50 ಸಾವಿರದಿಂದ 5 ಲಕ್ಷದ ತನಕ ಐಸಿಐಸಿಐ ಬ್ಯಾಂಕ್​ ಇಂಟರ್​ನೆಟ್​ ಬ್ಯಾಂಕಿಂಗ್​ನಲ್ಲಿ ಇಎಂಐ ಆಯ್ಕೆಗೆ ಅವಕಾಶ

TV9 Digital Desk

| Edited By: Srinivas Mata

Updated on: Sep 04, 2021 | 6:45 PM

ಶಾಲಾ ಶುಲ್ಕದಿಂದ ವಿಮೆ ಪ್ರೀಮಿಯಂ ತನಕ ಐಸಿಐಸಿಐ ಬ್ಯಾಂಕ್​ನ ಇಂಟರ್​ನೆಟ್​ ಬ್ಯಾಂಕಿಂಗ್ ಮೂಲಕ ಪಾವತಿಸುವ ಮೊತ್ತವನ್ನು ಇಎಂಐ ಆಗಿ ಬದಲಾಯಿಸಬಹುದು.

ICICI Bank: 50 ಸಾವಿರದಿಂದ 5 ಲಕ್ಷದ ತನಕ ಐಸಿಐಸಿಐ ಬ್ಯಾಂಕ್​ ಇಂಟರ್​ನೆಟ್​ ಬ್ಯಾಂಕಿಂಗ್​ನಲ್ಲಿ ಇಎಂಐ ಆಯ್ಕೆಗೆ ಅವಕಾಶ
ಸಾಂದರ್ಭಿಕ ಚಿತ್ರ

ಖಾಸಗಿ ಬ್ಯಾಂಕ್​ ಆದ ಐಸಿಐಸಿಐ ಬ್ಯಾಂಕ್ ಯಾವುದೇ ರೀತಿಯ ಆನ್‌ಲೈನ್ ಪಾವತಿ, ಅಂದರೆ ಶಾಲಾ ಶುಲ್ಕ, ಕ್ರೆಡಿಟ್ ಕಾರ್ಡ್ ಪಾವತಿ, ಮತ್ತು ವಿಮಾ ಪ್ರೀಮಿಯಂ ಪಾವತಿ ಅಥವಾ 5 ಲಕ್ಷದವರೆಗಿನ ಯಾವುದೇ ಖರೀದಿಗೆ ಇಎಂಐ ಆಯ್ಕೆಗಳನ್ನು ನೀಡುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಇಂಥದ್ದೊಂದು ಸವಲತ್ತು ನೀಡಲಾಗುತ್ತಿದೆ. ಈ ಸೌಲಭ್ಯವು ಬ್ಯಾಂಕ್​ನ ಇಂಟರ್ನೆಟ್ ಬ್ಯಾಂಕಿಂಗ್ ಪ್ಲಾಟ್​ಫಾರ್ಮ್ ‘EMI @ Internet Banking’ನಲ್ಲಿ ಲಭ್ಯವಿದೆ. ಲಕ್ಷಾಂತರ ಪ್ರೀ ಅಪ್ರೂವ್ಡ್ (ಪೂರ್ವ-ಅನುಮೋದಿತ) ಗ್ರಾಹಕರಿಗೆ ಹೆಚ್ಚು ಕೈಗೆಟುಕಲಿ ಎಂಬ ಉದ್ದೇಶದೊಂದಿಗೆ ಈ ಸೌಲಭ್ಯ ನೀಡಲಾಗುತ್ತಿದೆ. ಈ ಮೂಲಕವಾಗಿ 5 ಲಕ್ಷ ರೂಪಾಯಿವರೆಗಿನ ತಮ್ಮ ವಹಿವಾಟುಗಳನ್ನು ಸುಲಭವಾಗಿ ಮಾಸಿಕ ಕಂತುಗಳಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ.

ದೇಶದಲ್ಲಿ ಮೊದಲು ಲಕ್ಷಾಂತರ ಗ್ರಾಹಕರಿಗೆ ಈ ಅತ್ಯುತ್ತಮ ಸೌಲಭ್ಯವನ್ನು ನೀಡುವ ದೇಶದ ಮೊದಲ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ಆಗಿದೆ. ಈ ಸೌಲಭ್ಯವನ್ನು ನೀಡಲು ಆನ್‌ಲೈನ್ ಪಾವತಿ ಗೇಟ್‌ವೇ ಸಂಗ್ರಾಹಕರಲ್ಲಿ ಪ್ರಮುಖವಾದ ಬಿಲ್‌ಡೆಸ್ಕ್ ಮತ್ತು ರೇಜೋರ್‌ಪೇ ಜೊತೆ ಐಸಿಐಸಿಐ ಬ್ಯಾಂಕ್ ಒಪ್ಪಂದ ಮಾಡಿಕೊಂಡಿದೆ. ಪ್ರಸ್ತುತ, ‘EMI @ ಇಂಟರ್ನೆಟ್ ಬ್ಯಾಂಕಿಂಗ್’ ಅನ್ನು ಆನ್‌ಲೈನ್ ಶಾಪಿಂಗ್ ಪೋರ್ಟಲ್‌ಗಳು, ವಿಮೆ, ಪ್ರಯಾಣ, ಶಿಕ್ಷಣ- ಶಾಲಾ ಶುಲ್ಕಗಳು, ವಿವಿಧ ಕಾರ್ಡ್‌ಗಳ ಪಾವತಿಗಳು ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಖರೀದಿಯಂತಹ ವಿಭಾಗಗಳಲ್ಲಿ ಸಕ್ರಿಯಗೊಳಿಸಲಾಗಿದೆ. ಬಡ್ಡಿದರವು ಶೇ 10 ಮತ್ತು ಶೇ 15ರ ಮಧ್ಯೆ ಬದಲಾಗುತ್ತದೆ. ಮೊತ್ತ ಮತ್ತು EMI ಅವಧಿಯನ್ನು ಇದು ಅವಲಂಬಿಸಿರುತ್ತದೆ. ಈ ಸೌಲಭ್ಯವು ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಮೊದಲ ಮತ್ತು ಮುಖ್ಯವಾದ ಉಪಯೋಗ ಏನೆಂದರೆ, ವೆಚ್ಚದ ಭಾರವನ್ನು ಮೂರು, ಆರು ಅಥವಾ ಒಂಬತ್ತು ತಿಂಗಳಿಗೆ ಹಂಚಲಾಗುತ್ತದೆ. ಸಾಕಷ್ಟು ಪ್ರಯೋಜನಗಳ ಜೊತೆಗೆ ಆರಾಮದಾಯಕ ಅವಧಿ, ವಹಿವಾಟು ಮಿತಿ, ಜತೆಗೆ ಯಾವುದೇ ಪ್ರೊಸೆಸಿಂಗ್​ ಶುಲ್ಕ ಇತ್ಯಾದಿಗಳು ಇರುವುದಿಲ್ಲ.

ಆರಾಮದಾಯಕ ಮರುಪಾವತಿ ಅವಧಿಗಳು ಗ್ರಾಹಕರು ತಮ್ಮ ಆಯ್ಕೆಯ ಅವಧಿಯನ್ನು ಮೂರು, ಆರು ಮತ್ತು ಒಂಬತ್ತು ತಿಂಗಳಿಂದ ಆಯ್ಕೆ ಮಾಡಿಕೊಳ್ಳಬಹುದು. ಬ್ಯಾಂಕ್​ನ ವೆಬ್‌ಸೈಟ್ ಪ್ರಕಾರ, 12 ತಿಂಗಳ ಇಎಂಐ ಶೀಘ್ರದಲ್ಲೇ ಲಭ್ಯ ಆಗುತ್ತದೆ.

ಹೆಚ್ಚಿನ ವಹಿವಾಟು ಮಿತಿ ರೂ. 50,000ರಿಂದ ರೂ. 5 ಲಕ್ಷದವರೆಗೆ ಗ್ರಾಹಕರು ಖರೀದಿಗಳನ್ನು ಮಾಡಬಹುದು ಅಥವಾ ಉತ್ಪನ್ನಗಳು ಅಥವಾ ಸೇವೆಗಳ ಯಾವುದೇ ಪಾವತಿಯನ್ನು ಮಾಡಬಹುದು. ಮೊತ್ತವು ತಾನೇತಾನಾಗಿ ಇಎಂಐ ಆಗಿ ಬದಲಾಗುತ್ತದೆ.

ಶೀಘ್ರ ಪ್ರಕ್ರಿಯೆ ಬ್ಯಾಂಕ್​ನ ಇಂಟರ್​ನೆಟ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್ ಮೂಲಕ ಪಾವತಿ ಮಾಡುವಾಗ ಗ್ರಾಹಕರು ತಮ್ಮ ಹೆಚ್ಚಿನ ಮೌಲ್ಯದ ವಹಿವಾಟುಗಳನ್ನು ತಕ್ಷಣವೇ ಇಎಂಐಗಳಾಗಿ ಪರಿವರ್ತಿಸಬಹುದು.

ಯಾವುದೇ ಪ್ರೊಸೆಸಿಂಗ್ ಶುಲ್ಕವಿಲ್ಲ ಐಸಿಐಸಿಐ ಬ್ಯಾಂಕ್ ಈ ಇಎಂಐ ಸೌಲಭ್ಯವನ್ನು ಶೂನ್ಯ ಪ್ರೊಸೆಸಿಂಗ್ ಶುಲ್ಕ ಮತ್ತು ಡಾಕ್ಯುಮೆಂಟ್ ಶುಲ್ಕದೊಂದಿಗೆ ನೀಡುತ್ತದೆ. ಎಲ್ಲಿ ಅನ್ವಯವಾಗುತ್ತದೆಯೋ ಅಲ್ಲಿ ನಿಗದಿತ ಬಡ್ಡಿ ದರವನ್ನು ಹೊರತುಪಡಿಸಿ ಯಾವುದೇ ಡಾಕ್ಯುಮೆಂಟ್, ಟೈಮ್ ಅಥವಾ ಪ್ರೊಸೆಸಿಂಗ್ ಶುಲ್ಕದ ಅಗತ್ಯವಿಲ್ಲ.

ವಿಶಾಲ ವ್ಯಾಪ್ತಿಯ ಆಯ್ಕೆ ಸೇವೆಗಳು ಗ್ರಾಹಕರು ತಮ್ಮ ನೆಚ್ಚಿನ ಗ್ಯಾಜೆಟ್ ಖರೀದಿಸಲು ಅಥವಾ ತಮ್ಮ ಮಗುವಿನ ವಿಮಾ ಕಂತು ಅಥವಾ ಶಾಲಾ ಶುಲ್ಕವನ್ನು ಪಾವತಿಸಲು ಅಥವಾ ರಜೆ ವಿಶ್ರಾಂತಿಗಾಗಿ ಪಾವತಿಸಲು ಅಥವಾ ಕ್ರೆಡಿಟ್ ಕಾರ್ಡ್ ಪಾವತಿಗಾಗಿ ಈ ಸೌಲಭ್ಯವನ್ನು ಆಯ್ಕೆ ಮಾಡಬಹುದು.

ಶಾಲೆ/ಕಾಲೇಜು ಶುಲ್ಕ ಪಾವತಿ ಬ್ಯಾಂಕ್ ತನ್ನ ಗ್ರಾಹಕರಿಗೆ ತಮ್ಮ ಮಕ್ಕಳಿಗೆ ಶಿಕ್ಷಣ ಸಂಸ್ಥೆಗಳ ಶುಲ್ಕವನ್ನು ಪಾವತಿಸಲು ಇಎಂಐ ಸೌಲಭ್ಯವನ್ನು ನೀಡುತ್ತಿರುವುದು ಬಹುಶಃ ಇದೇ ಮೊದಲು. ಈ ಯೋಜನೆಯಡಿ 2,500ಕ್ಕೂ ಹೆಚ್ಚು ಶಾಲಾ -ಕಾಲೇಜುಗಳು ಲಭ್ಯವಿವೆ. ಆರ್ಮಿ ಪಬ್ಲಿಕ್ ಸ್ಕೂಲ್, ಸೇಂಟ್ ಕ್ಸೇವಿಯರ್ಸ್ ಸ್ಕೂಲ್ ಮತ್ತು ಯೂನಿವರ್ಸಿಟಿ, ವೆಲಿಂಗ್ಕರ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್, ಅಮಿಟಿ ಸ್ಕೂಲ್, ದೆಹಲಿ ಪಬ್ಲಿಕ್ ಸ್ಕೂಲ್, ಸಿಂಬಯೋಸಿಸ್, ಧೀರೂಭಾಯಿ ಅಂಬಾನಿ ಇಂಟರ್​ನ್ಯಾಷನಲ್ ಸ್ಕೂಲ್, ಡೂನ್ ಇಂಟರ್​ನ್ಯಾಷನಲ್ ಸ್ಕೂಲ್, ಡಾನ್ ಬಾಸ್ಕೋ ಸ್ಕೂಲ್, ಕ್ಸೇವಿಯರ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್, ಡಾ. ಡಿ.ವೈ. ಪಾಟೀಲ್ ಸ್ಕೂಲ್ ಆಫ್ ಇಂಜಿನಿಯರಿಂಗ್, ಇಂಡಿಯನ್​ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್, ವೆಲ್​ಹ್ಯಾ,ಮ್ ಗರ್ಲ್ಸ್ ಸ್ಕೂಲ್, ಎಐಐಎಂಎಸ್, ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಿಐಟಿಎಸ್ ಪಿಲಾನಿ, ಸೇಂಟ್ ತೆರೇಸಾ ಸ್ಕೂಲ್, ಸೇಂಟ್ ಸ್ಟೀಫನ್ಸ್ ಸ್ಕೂಲ್, ಭಾರತೀಯ ವಿದ್ಯಾ ಭವನ, ಕಳಿಂಗ ವಿಶ್ವವಿದ್ಯಾಲಯ ಮತ್ತು ಇನ್ನೂ ಹಲವು ಈ ಪಟ್ಟಿಯಲ್ಲಿವೆ.

ಪ್ರಕ್ರಿಯೆ ತಮ್ಮ ಅರ್ಹತೆಯನ್ನು ಪರೀಕ್ಷಿಸಲು, ಗ್ರಾಹಕರು 5676766ಗೆ ಎಸ್‌ಎಂಎಸ್ ಕಳುಹಿಸಬೇಕು ಮತ್ತು ಐಸಿಐಸಿಐ ಬ್ಯಾಂಕ್ ಅವರಿಗೆ ಆ ಬಗ್ಗೆ ಸಂದೇಶದ ಮೂಲಕ ಮಾಹಿತಿ ತಿಳಿಸುತ್ತದೆ.

ನೀವು ಅರ್ಹರಾಗಿದ್ದರೆ ಶಾಲೆ ಅಥವಾ ಕಾಲೇಜು ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ, ‘ಐಸಿಐಸಿಐ ನೆಟ್‌ಬ್ಯಾಂಕಿಂಗ್’ ಮೂಲಕ ಪಾವತಿ ಆಯ್ಕೆಯನ್ನು ಆರಿಸಿ ಮತ್ತು ನಿಮ್ಮ ಗ್ರಾಹಕರ ಐಡಿ ಮತ್ತು ಪಾಸ್‌ವರ್ಡ್ ಅನ್ನು ಇರಿಸಿ. ಆ ನಂತರ EMI ಆಯ್ಕೆ, ಮೊತ್ತ ಮತ್ತು ಅವಧಿಯನ್ನು ಆಯ್ಕೆ ಮಾಡಿ ಮತ್ತು ಪಾವತಿ ಕ್ಲಿಕ್ ಮಾಡಿ.

ಗೊತ್ತುಪಡಿಸಿದ ಸ್ಲಾಟ್‌ನಲ್ಲಿ ಕೀಲಿ ಮಾಡಬೇಕಾದ OTP ಅನ್ನು ಜನರೇಟ್​ ಮಾಡುತ್ತದೆ.

ನೀವು ಬೇರೆ ಯಾವುದಾದರೂ ಕಾರಣಕ್ಕಾಗಿ ಪಾವತಿಸುತ್ತಿದ್ದರೆ ಅಂದರೆ ಕಾರ್ಡ್ ಪಾವತಿ, ವಿಮಾ ಪ್ರೀಮಿಯಂ ಪಾವತಿ ಅಥವಾ ಸ್ಮಾರ್ಟ್ ವಾಚ್ ಅನ್ನು ಖರೀದಿಸುತ್ತಿದ್ದರೆ ನೀವು ಸಂಬಂಧಿಸಿದ ಪಾವತಿ ಗೇಟ್‌ವೇ ಮೂಲಕ ‘ಐಸಿಐಸಿಐ ನೆಟ್‌ಬ್ಯಾಂಕಿಂಗ್’ ಮೂಲಕ ಪಾವತಿ ಆಯ್ಕೆಯನ್ನು ಆರಿಸಿಕೊಳ್ಳಬೇಕು ಮತ್ತು ನಿಮ್ಮ ಕ್ರೆಡೆನ್ಷಿಯಲ್​ಗಳನ್ನು ಮಾತ್ರ ಹಾಕಬೇಕು.

ಐಸಿಐಸಿಐ ನೆಟ್ ಬ್ಯಾಂಕಿಂಗ್ ಪುಟ ತೆರೆದ ನಂತರ ನೀವು ‘ಇಎಂಐ @ ಇಂಟರ್ನೆಟ್ ಬ್ಯಾಂಕಿಂಗ್’ ಆಯ್ಕೆಗೆ ತೆರಳಬೇಕು. ಮೊತ್ತ ಮತ್ತು ಅವಧಿಯನ್ನು ನಮೂದಿಸಿ ಮತ್ತು ಮುಂದುವರಿಯಿರಿ.

ಅದರ ನಂತರ ನೀವು OTP ಸ್ವೀಕರಿಸುತ್ತೀರಿ. ಗೊತ್ತುಪಡಿಸಿದ ಸ್ಥಳದಲ್ಲಿ ಒಟಿಪಿಯನ್ನು ನಮೂದಿಸಿ ಮತ್ತು ‘ಪಾವತಿ’ ಮೇಲೆ ಕ್ಲಿಕ್ ಮಾಡಿ. ಪಾವತಿ ಪೂರ್ಣಗೊಂಡ ನಂತರ ಸಂದೇಶವನ್ನು ಪಡೆಯುತ್ತೀರಿ.

ಇದನ್ನೂ ಓದಿ: ICICI Bank: ಐಸಿಐಸಿಐ ಬ್ಯಾಂಕ್ ಎಟಿಎಂ ನಗದು ವಿಥ್​ಡ್ರಾ, ಚೆಕ್​ಬುಕ್​ ಶುಲ್ಕಗಳು ಆಗಸ್ಟ್​ನಿಂದ ಬದಲಾವಣೆ​

(ICICI Bank Offering EMI Facility To School Fee To Insurance Premium Through Internet Banking Platform)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada