ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಹೆಂಡತಿ, ಮಗಳಿಗೆ ಸಿಬಿಐ ವಿಶೇಷ ಕೋರ್ಟ್ ಮಧ್ಯಂತರ ಜಾಮೀನು
ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಹೆಂಡತಿ ಮತ್ತು ಮಗಳಿಗೆ ಸಿಬಿಐ ವಿಶೇಷ ಕೋರ್ಟ್ನಿಂದ ಮಧ್ಯಂತರ ಜಾಮೀನು ಸಿಕ್ಕಿದೆ.
ಖಾಸಗಿ ಬ್ಯಾಂಕ್ನ ವಂಚನೆ ಆರೋಪದಡಿ ಪ್ರಕರಣ ದಾಖಲಾಗಿರುವ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರ ಪತ್ನಿ ಮತ್ತು ಮಗಳಿಗೆ ಕೇಂದ್ರೀಯ ತನಿಖಾ ದಳದ (ಸಿಬಿಐ) ವಿಶೇಷ ನ್ಯಾಯಾಲಯವು ಸೆಪ್ಟೆಂಬರ್ 4ನೇ ತಾರೀಕಿನ ಶನಿವಾರ ಮಧ್ಯಂತರ ಜಾಮೀನು ನೀಡಿದೆ. ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (ಡಿಎಚ್‌ಎಫ್‌ಎಲ್) ಪ್ರಕರಣದಲ್ಲಿ ಕಪೂರ್ ಪತ್ನಿ ಬಿಂದು ಮತ್ತು ಮಗಳು ರಾಧಾ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಸಿಬಿಐನಿಂದ ಇತ್ತೀಚೆಗೆ ಸಲ್ಲಿಸಿದ ಪೂರಕ ಚಾರ್ಜ್ ಶೀಟ್ನಲ್ಲಿ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಆದರೆ ಈ ಪ್ರಕರಣದಲ್ಲಿ ಇಬ್ಬರನ್ನೂ ಬಂಧಿಸಿಲ್ಲ.
ಚಾರ್ಜ್ಶೀಟ್ ಬಗ್ಗೆ ಅರಿತ ನಂತರ, ನ್ಯಾಯಾಲಯವು ಆರೋಪಿಗಳನ್ನು ಕರೆಸಿತು. ಮತ್ತು ಇಬ್ಬರೂ ಇಂದು ನ್ಯಾಯಾಲಯಕ್ಕೆ ಹಾಜರಾದರು. ನಂತರ ವಿಜಯ್ ಅಗರ್ವಾಲ್ ಮತ್ತು ರಾಹುಲ್ ಅಗರ್ವಾಲ್ ಅವರನ್ನು ಒಳಗೊಂಡ ಕಾನೂನು ತಂಡದ ಮೂಲಕ ಜಾಮೀನು ಅರ್ಜಿಗಳನ್ನು ಸಲ್ಲಿಸಿದರು. ಸಿಬಿಐನಿಂದ ತನಿಖೆಯ ಸಮಯದಲ್ಲಿ ಅವರನ್ನು ಬಂಧಿಸದೆ ಚಾರ್ಜ್ ಶೀಟ್ ಸಲ್ಲಿಸಿದ್ದರಿಂದ ಈಗ ಬಂಧನ ಅಗತ್ಯವಿಲ್ಲ ಎಂದು ವಾದಿಸಿದರು. ಮನವಿಗಳಿಗೆ ಉತ್ತರ ಸಲ್ಲಿಸಲು ತನಿಖಾ ಸಂಸ್ಥೆ ಸಮಯಾವಕಾಶ ಕೋರಿದಾಗ, ಇಬ್ಬರೂ ಮಧ್ಯಂತರ ಜಾಮೀನು ಕೋರಿದರು. ಇದಕ್ಕೆ ವಿಶೇಷ ನ್ಯಾಯಾಧೀಶ ಎಸ್.ಯು. ವಡ್ಗಾಂವ್ಕರ್ ಅನುಮತಿಸಿದರು.
ಸಿಬಿಐ ಪ್ರಕಾರ, ಯೆಸ್ ಬ್ಯಾಂಕ್‌ನಿಂದ 3,700 ಕೋಟಿ ರೂಪಾಯಿ ಮೌಲ್ಯದ ಡಿಎಚ್‌ಎಫ್‌ಎಲ್‌ನ ಡಿಬೆಂಚರ್‌ಗಳನ್ನು ಹೂಡಿಕೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಿತ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾದ ನಂತರ ನ್ಯಾಯಾಂಗ ಬಂಧನದಲ್ಲಿರುವ ಕಪೂರ್ ಮತ್ತು ಅವರ ಕುಟುಂಬವು ಲಂಚ ಪಡೆದಿದ್ದಾರೆ. ಸಿಬಿಐ ಹೇಳಿರುವಂತೆ, ಡಿಎಚ್‌ಎಫ್‌ಎಲ್‌ನಲ್ಲಿ ಯೆಸ್ ಬ್ಯಾಂಕ್ ಹೂಡಿಕೆಗೆ ಪ್ರತಿಯಾಗಿ, ಕಪೂರ್ ಅವರ ಪತ್ನಿ ಮತ್ತು ಪುತ್ರಿಯರಿಂದ ನಿಯಂತ್ರಿಸುವ ಸಂಸ್ಥೆಗೆ 600 ಕೋಟಿ ರೂಪಾಯಿ ಲಂಚದ ರೂಪದಲ್ಲಿ ನೀಡಿದೆ ಎಂದು ಹೇಳಿಕೊಂಡಿದೆ.
ಇದನ್ನೂ ಓದಿ: ಡಿಎಚ್ಎಫ್ಎಲ್ನಿಂದ 14,046 ಕೋಟಿ ರೂ. ಪಿಎಂಎವೈ ವಂಚನೆ; ಸಿಬಿಐನಿಂದ ಪ್ರಕರಣ ದಾಖಲು
(Yes Bank Founder Rana Kapoor Wife And Daughter Grant Interim Bail From CBI Special Court In DHFL Scam)