7th pay commission: ಕೇಂದ್ರ ಸರ್ಕಾರದಿಂದ ಸಿಬ್ಬಂದಿಗೆ ಶೇ 14ರಷ್ಟು ತುಟ್ಟಿ ಭತ್ಯೆ ಹೆಚ್ಚಳ

| Updated By: Srinivas Mata

Updated on: Feb 08, 2022 | 8:24 PM

ಕೇಂದ್ರ ಸರ್ಕಾರವು ಸಿಬ್ಬಂದಿಗೆ ಶೇಕಡಾ 14ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದೆ. ಇದರಿಂದ ಆಗುವ ವೇತನ ಹೆಚ್ಚಳದ ಬಗ್ಗೆ ಇಲ್ಲಿದೆ ವಿವರ.

7th pay commission: ಕೇಂದ್ರ ಸರ್ಕಾರದಿಂದ ಸಿಬ್ಬಂದಿಗೆ ಶೇ 14ರಷ್ಟು ತುಟ್ಟಿ ಭತ್ಯೆ ಹೆಚ್ಚಳ
ಸಾಂದರ್ಭಿಕ ಚಿತ್ರ
Follow us on

ಹಣಕಾಸು ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸಾರ್ವಜನಿಕ ಉದ್ಯಮಗಳ ಇಲಾಖೆಯು ಈ ವರ್ಷದ ಜನವರಿಯಲ್ಲಿ ಕಚೇರಿ ಸುತ್ತೋಲೆಯನ್ನು ಹೊರಡಿಸಿದ್ದು, ಮಂಡಳಿ ಮಟ್ಟದ ಮತ್ತು ಒಕ್ಕೂಟೇತರ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು (ಸಿಪಿಎಸ್‌ಇ) ಸೇರಿದಂತೆ ಮಂಡಳಿಯ ಕೆಳ ಮಟ್ಟದ ಹುದ್ದೆಗಳಿಗೆ ಸಂಂಧಿಸಿದ ಹಾಗೆ 1.1.2007ರಿಂದ ಅನ್ವಯ ಆಗುವಂತೆ ಪರಿಷ್ಕೃತ ದರಗಳಲ್ಲಿ IDA ಪಾವತಿ ಜಾರಿಯಾಗುತ್ತದೆ ಎಂದಿತ್ತು. “…ಮಂಡಳಿ ಮಟ್ಟ ಮತ್ತು ಮಂಡಳಿಯ ಕೆಳಗಿನ ಮಟ್ಟದ ಅಧಿಕಾರಿಗಳು ಮತ್ತು ಸಿಪಿಎಸ್​ಇಗಳ ಒಕ್ಕೂಟೇತರ ಮೇಲ್ವಿಚಾರಕರಿಗೆ ಪಾವತಿಸಬೇಕಾದ ತುಟ್ಟಿ ಭತ್ಯೆ (Dearness Allowance) ದರಗಳನ್ನು ಸೂಚಿಸಲಾಗಿದೆ. 2007ರ ವೇತನ ಶ್ರೇಣಿಗಳಿಗಾಗಿ 01.01.2022ರಿಂದ ಸಿಪಿಎಸ್​ಇಗಳ ಕಾರ್ಯನಿರ್ವಾಹಕರು ಮತ್ತು ಸಂಘಟಿರಲ್ಲದ ಮೇಲ್ವಿಚಾರಕರಿಗೆ ಪಾವತಿಸಬೇಕಾದ ಡಿಎ ದರ ಶೇ 184.1ರಷ್ಟು,” ಎನ್ನಲಾಗಿದೆ.

ದಿನಾಂಕ 26.11.2008, 09.02.2009 ಮತ್ತು 02,04.2009ಕ್ಕೆ ಡಿಪಿಇ ಒಎಂಗಳ ಪ್ರಕಾರ, ಪರಿಷ್ಕೃತ ವೇತನ ಶ್ರೇಣಿಗಳನ್ನು (2007) ಅನುಮತಿಸಲಾದ ಐಡಿಎ ಉದ್ಯೋಗಿಗಳ ಸಂದರ್ಭದಲ್ಲಿ ಮೇಲಿನ ಡಿಎ ದರವು ಅಂದರೆ ಶೇ 184.1 ಅನ್ವಯಿಸುತ್ತದೆ. ಭಾರತ ಸರ್ಕಾರದ ಎಲ್ಲ ಆಡಳಿತ ಸಚಿವಾಲಯಗಳು/ಇಲಾಖೆಗಳು ತಮ್ಮ ಕಡೆಯಿಂದ ಅಗತ್ಯ ಕ್ರಮಕ್ಕಾಗಿ ಆಡಳಿತ ನಿಯಂತ್ರಣದಲ್ಲಿರುವ ಸಿಪಿಎಸ್​ಇಗಳ ಗಮನಕ್ಕೆ ತರಲು ವಿನಂತಿಸಲಾಗಿದೆ ಎಂದು ಕಚೇರಿ ಸುತ್ತೋಲೆ ಉಲ್ಲೇಖಿಸಿದೆ.

ಕೇಂದ್ರ ಸರ್ಕಾರಿ ನೌಕರರಿಗೆ 18 ತಿಂಗಳ ಡಿಎ ಬಾಕಿ ಒಂದೇ ಬಾರಿಗೆ 2 ಲಕ್ಷ ರೂ.

ಕೇಂದ್ರ ಸಚಿವ ಸಂಪುಟವು ಈ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳಲು ಚಿಂತನೆ ನಡೆಸುತ್ತಿದೆ ಎಂದು ಹಲವು ಮಾಧ್ಯಮ ವರದಿಗಳು ತಿಳಿಸಿವೆ. ಜೆಸಿಎಂ ನ್ಯಾಷನಲ್ ಕೌನ್ಸಿಲ್‌ನ ಶಿವ ಗೋಪಾಲ್ ಮಿಶ್ರಾ ಅವರನ್ನು ಉಲ್ಲೇಖಿಸಿ ಹಿಂದಿ ಮಾಧ್ಯಮ ವರದಿಯು ಈ ಹಿಂದೆ ತಿಳಿಸಿರುವಂತೆ, ಲೆವೆಲ್-1 ಉದ್ಯೋಗಿಗಳ ಡಿಎ ಬಾಕಿ 11,880 ರಿಂದ 37,554ರ ವರೆಗೆ ಇರುತ್ತದೆ ಎಂದು ಉಲ್ಲೇಖಿಸಿತ್ತು. ಆದರೆ ಲೆವೆಲ್-13 (7ನೇ ಸಿಪಿಸಿ ಮೂಲ ವೇತನ ಶ್ರೇಣಿ ರೂ. 1,23,100 ರಿಂದ ರೂ. 2,15,900) ಅಥವಾ ಲೆವೆಲ್-14 (ವೇತನ ಸ್ಕೇಲ್) ಗಾಗಿ ನೌಕರನ ಕೈಯಲ್ಲಿರುವ ಡಿಎ ಬಾಕಿ ರೂ. 1,44,200-2,18,200 ಪಾವತಿಸಲಾಗುವುದು ಎಂದು ವರದಿಗಳು ಉಲ್ಲೇಖಿಸಿವೆ.

ಜೆಸಿಎಂ ರಾಷ್ಟ್ರೀಯ ಮಂಡಳಿ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಮತ್ತು ಹಣಕಾಸು ಸಚಿವರ ನಡುವೆ ಬಾಕಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲಾಗಿದೆ ಎಂದು ವರದಿಯು ಸೇರಿಸಿದೆ. ಆದರೆ ಖಚಿತ ಉತ್ತರ ಸಿಕ್ಕಿಲ್ಲ. ನೌಕರರು ಇನ್ನೂ ಬೇಡಿಕೆಗೆ ಅಚಲವಾಗಿದ್ದು, ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ. ಆದರೆ ಶೀಘ್ರದಲ್ಲೇ ಈ ಬಗ್ಗೆ ಸಂಪುಟ ಕಾರ್ಯದರ್ಶಿ ಜತೆ ಚರ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ. ವೆಚ್ಚ ಇಲಾಖೆಯ ವಾರ್ಷಿಕ ವರದಿ ಪ್ರಕಾರ, ದೇಶದಲ್ಲಿ ಒಟ್ಟು 48 ಲಕ್ಷ ಕೇಂದ್ರ ನೌಕರರು ಮತ್ತು ಸುಮಾರು 60 ಲಕ್ಷ ಪೆನ್ಷನ್​ದಾರರಿದ್ದಾರೆ.

ಇದನ್ನೂ ಓದಿ: Salary Hike: 2022ರಲ್ಲಿ ಎಷ್ಟು ವೇತನ ಹೆಚ್ಚಳ ಆಗಬಹುದು ಎಂಬ ನಿರೀಕ್ಷೆಯನ್ನು ತಿಳಿಸುತ್ತಿದೆ ಈ ವರದಿ