Salary Hike: 2022ರಲ್ಲಿ ಎಷ್ಟು ವೇತನ ಹೆಚ್ಚಳ ಆಗಬಹುದು ಎಂಬ ನಿರೀಕ್ಷೆಯನ್ನು ತಿಳಿಸುತ್ತಿದೆ ಈ ವರದಿ

ಭಾರತದಲ್ಲಿ 2022ನೇ ಇಸವಿಯಲ್ಲಿ ಹೆಚ್ಚಿನ ಸಂಬಳ ಹಾಗೂ ಶೇ 9.3ರಷ್ಟು ವೇತನ ಹೆಚ್ಚಳವನ್ನು ನಿರೀಕ್ಷೆ ಮಾಡಬಹುದು ಎಂದು ವರದಿಯೊಂದು ತಿಳಿಸಿದೆ. ಆ ಬಗ್ಗೆ ವಿವರಗಳು ಇಲ್ಲಿವೆ.

Salary Hike: 2022ರಲ್ಲಿ ಎಷ್ಟು ವೇತನ ಹೆಚ್ಚಳ ಆಗಬಹುದು ಎಂಬ ನಿರೀಕ್ಷೆಯನ್ನು ತಿಳಿಸುತ್ತಿದೆ ಈ ವರದಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Oct 20, 2021 | 6:24 PM

ಒಂದು ವರದಿಯ ಪ್ರಕಾರ, ಭಾರತದಲ್ಲಿ ಮತ್ತೆ ಹೆಚ್ಚಿನ ಸಂಬಳ ದೊರೆಯುತ್ತಿದೆ. 2022ನೇ ಇಸವಿಯಲ್ಲಿ ಅಂದಾಜು ಶೇ 9.3ರಷ್ಟು ವೇತನ ಹೆಚ್ಚಳದ ನಿರೀಕ್ಷೆ ಮಾಡಲಾಗಿದೆ. ಅಂದಹಾಗೆ 2021ನೇ ಇಸವಿಯಲ್ಲಿ ಇದು ಶೇಕಡಾ 8ರಷ್ಟಿತ್ತು. ಉದ್ಯೋಗಿಗಳ ನೇಮಕಾತಿ ಮತ್ತು ಉದ್ಯೋಗಿಗಳನ್ನು ಉಳಿಸಿಕೊಳ್ಳುವಲ್ಲಿ ಹೆಚ್ಚುತ್ತಿರುವ ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ಉದ್ಯೋಗದಾತರು ಸಿಬ್ಬಂದಿಗೆ ಹೆಚ್ಚಿನ ವೇತನ ಏರಿಕೆ ನೀಡಲು ತಯಾರಿ ನಡೆಸುತ್ತಿದ್ದಾರೆ. ಜಾಗತಿಕ ಸಲಹೆ, ಬ್ರೋಕಿಂಗ್ ಮತ್ತು ಸಲ್ಯೂಷನ್ ಸಂಸ್ಥೆಗಳಾದ ವಿಲ್ಲೀಸ್ ಟವರ್ಸ್ ವ್ಯಾಟ್ಸನ್ ಅವರ ‘ಸಂಬಳ ಬಜೆಟ್ ಯೋಜನೆ ವರದಿ’ ಪ್ರಕಾರ, 2021ರಲ್ಲಿ ಶೇ 8ರಷ್ಟು ವಾಸ್ತವಿಕ ಹೆಚ್ಚಳಕ್ಕೆ ಹೋಲಿಸಿದರೆ, ಮುಂದಿನ ವರ್ಷ (2022) ವೇತನಗಳು ಶೇ 9.3ರಷ್ಟು ಏರಿಕೆ ಆಗುವ ನಿರೀಕ್ಷೆಯಿದೆ. ಸಮೀಕ್ಷೆಯ ಪ್ರಕಾರ, ಮುಂಬರುವ ವರ್ಷದಲ್ಲಿ ಭಾರತದ ನಿರೀಕ್ಷಿತ ವೇತನ ಹೆಚ್ಚಳ ಏಷ್ಯಾ-ಪೆಸಿಫಿಕ್‌ನಲ್ಲೇ ಅತಿ ದೊಡ್ಡದಾಗಿದೆ. ಏಕೆಂದರೆ ಮುಂಬರುವ 12 ತಿಂಗಳಲ್ಲಿ ಪ್ರಬಲ ವ್ಯಾಪಾರ ದೃಷ್ಟಿಕೋನದ ಆಶಾವಾದವು ಬಲವಾಗಿದೆ.

ಸಂಬಳ ಬಜೆಟ್ ಯೋಜನಾ ವರದಿ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ. ಅದು 2021ರ ಮೇ ಮತ್ತು ಜೂನ್ ನಡುವೆ ಆನ್‌ಲೈನ್‌ನಲ್ಲಿ ನಡೆದಿದ್ದು, 13 ಏಷ್ಯಾ-ಪೆಸಿಫಿಕ್ ಮಾರುಕಟ್ಟೆಗಳ 1,405 ಸಂಸ್ಥೆಗಳು ಹಾಗೂ 435 ಕಂಪೆನಿಗಳು ಇದರಲ್ಲಿ ಒಳಗೊಂಡಿವೆ. 2020ರ ನಾಲ್ಕನೇ ತ್ರೈಮಾಸಿಕದಲ್ಲಿ ಇದ್ದ ಶೇ 37ಕ್ಕಿಂತ ಹೆಚ್ಚಿನ ಭಾರತೀಯ ಉದ್ಯಮಗಳು (ಶೇ 52.2) ಮುಂದಿನ 12 ತಿಂಗಳಲ್ಲಿ ಅನುಕೂಲಕರವಾದ ಕಂಪೆನಿಯ ಆದಾಯದ ಮುನ್ನೋಟವನ್ನು ಮುನ್ಸೂಚನೆ ನೀಡಿವೆ ಎಂದು ವರದಿಯು ಸೂಚಿಸುತ್ತದೆ. ಇದು ಬಹು ನಿರೀಕ್ಷಿತ ಆರ್ಥಿಕ ಚೇತರಿಕೆಯನ್ನು ಸೂಚಿಸುತ್ತದೆ. ಇದರಿಂದಾಗಿ ಸಂಸ್ಥೆಗಳಾದ್ಯಂತ ಹೆಚ್ಚಿನ ನೇಮಕಾತಿಗೆ ಕಾರಣವಾಗುತ್ತದೆ. ಶೇ 30ರಷ್ಟು ಕಂಪೆನಿಗಳು ಮುಂದಿನ 12 ತಿಂಗಳಲ್ಲಿ ನೇಮಿಸಿಕೊಳ್ಳುವ ನಿರೀಕ್ಷೆಯಿದೆ. ಸಮೀಕ್ಷೆಯ ಪ್ರಕಾರ, ಇದು 2020ನೇ ಇಸವಿಗಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ.

ಎಂಜಿನಿಯರಿಂಗ್ (ಶೇ 57.5), ಮಾಹಿತಿ ತಂತ್ರಜ್ಞಾನ (ಶೇ 53.4), ತಾಂತ್ರಿಕವಾಗಿ ನುರಿತ ಕರಕುಶಲ ವಸ್ತುಗಳು (ಶೇ 34.2), ಮತ್ತು ಮಾರಾಟ (ಶೇ 34.2) ನಂತಹ ಪ್ರಮುಖ ಕಾರ್ಯಗಳು ಕೈಗಾರಿಕೆಗಳಾದ್ಯಂತ ನೇಮಕಾತಿಯ ಗಣನೀಯ ಭಾಗವನ್ನು ಹೊಂದಿರುತ್ತವೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ. ಸಂಶೋಧನೆಯ ಪ್ರಕಾರ, ಭಾರತದ ಸ್ವಯಂಪ್ರೇರಿತ ಮತ್ತು ಅನೈಚ್ಛಿಕ ಅಟ್ರಿಷನ್ (ಕೆಲಸ ಬಿಡುವ) ದರಗಳು ಈ ಪ್ರಾದೇಶಿಕ ಭಾಗದ ಇತರ ದೇಶಗಳಿಗಿಂತ ಕಡಿಮೆಯಾಗಿದೆ. ಸ್ವಯಂಪ್ರೇರಿತ ಅಟ್ರಿಷನ್ ದರವು ಶೇ 8.9 ಮತ್ತು ಅನೈಚ್ಛಿಕ ಅಟ್ರಿಷನ್ ದರವು ಶೇ 3.3ರಷ್ಟು ಎಂದು ಸಹ ಅದು ಹೇಳಿದೆ.

“ಹೆಚ್ಚಿನ ಕಂಪೆನಿ ಆಶಾವಾದವು ಹೆಚ್ಚಿದ ವೇತನ ಬಜೆಟ್ ಮತ್ತು ನೇಮಕಾತಿ ಚಟುವಟಿಕೆಗಳಲ್ಲಿ ವ್ಯಕ್ತವಾಗುತ್ತಿದೆ. ಸಾಂಕ್ರಾಮಿಕ ರೋಗವು ತಮ್ಮ ಉದ್ಯೋಗಿಗಳಿಗೆ ಉದ್ಯಮದ ಬಜೆಟ್​ನಲ್ಲಿ ಒಂದು ಮಹತ್ವದ ತಿರುವು,” ಎಂದು ವಿಲ್ಲೀಸ್ ಟವರ್ಸ್ ವ್ಯಾಟ್ಸನ್ ಕನ್ಸಲ್ಟಿಂಗ್‌ನ ರಾಜುಲ್ ಮಾಥುರ್ ಹೇಳಿದ್ದಾರೆ. “ಈ ಪ್ರವೃತ್ತಿಯು ಭವಿಷ್ಯದಲ್ಲಿ ಭಾರತದಲ್ಲಿ ಒಟ್ಟು ಪ್ರತಿಫಲಗಳ ಬಗ್ಗೆ, ವ್ಯಕ್ತಿಗಳು ಖರ್ಚು ಮಾಡುವ ಮತ್ತು ಯೋಚಿಸುವ ವಿಧಾನವನ್ನು ಪರಿವರ್ತಿಸುವ ಸಾಧ್ಯತೆಯಿದೆ,” ಎಂದು ಮಾಥುರ್ ಹೇಳಿದ್ದಾರೆ. ಸಮೀಕ್ಷೆಯ ಪ್ರಕಾರ, ಹೈಟೆಕ್ ವಲಯದ ಸಂಬಳವು 2022ರಲ್ಲಿ ಶೇ 9.9, ನಂತರ ಗ್ರಾಹಕ ಉತ್ಪನ್ನಗಳು ಮತ್ತು ಚಿಲ್ಲರೆ ವ್ಯಾಪಾರದಲ್ಲಿ ಶೇ 9.5 ಮತ್ತು ಉತ್ಪಾದನೆಯಲ್ಲಿ ಶೇ 9.30ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: Salary Hike: ಹೊಸ ಉದ್ಯೋಗಿಗಳಿಗೆ ಶೇ 120ರಷ್ಟು ವೇತನ ಹೆಚ್ಚಳಕ್ಕೆ ಟಿಸಿಎಸ್, ವಿಪ್ರೋ, ಇನ್ಫೋಸಿಸ್ ಯೋಜನೆ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್