Gautam Adani: ಗೌತಮ್ ಅದಾನಿ ಆಸ್ತಿ 6,61,453.87 ಕೋಟಿ ರೂಪಾಯಿ; ಅಂಬಾನಿಯನ್ನೂ ಮೀರಿಸಿ ಏಷ್ಯಾದ ನಂಬರ್ 1 ಶ್ರೀಮಂತ

ಏಷ್ಯಾದ ಅತಿ ಶ್ರೀಮಂತ ಎಂಬ ಅಗ್ಗಳಿಕೆಗೆ ಪಾತ್ರವಾಗಿರುವ ಗೌತಮ್ ಅದಾನಿ, ಈ ವರೆಗೆ ಆ ಸ್ಥಾನವನ್ನು ಅಲಂಕರಿಸಿದ್ದ ಮುಕೇಶ್​ ಅಂಬಾನಿ ಅವರನ್ನು ಪಕ್ಕಕ್ಕೆ ಸರಿಸಿದ್ದಾರೆ.

Gautam Adani: ಗೌತಮ್ ಅದಾನಿ ಆಸ್ತಿ 6,61,453.87 ಕೋಟಿ ರೂಪಾಯಿ; ಅಂಬಾನಿಯನ್ನೂ ಮೀರಿಸಿ ಏಷ್ಯಾದ ನಂಬರ್ 1 ಶ್ರೀಮಂತ
ಗೌತಮ್ ಅದಾನಿ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Feb 08, 2022 | 7:02 PM

ಒಂದು ಕಾಲಕ್ಕೆ ಸಣ್ಣ- ಪುಟ್ಟ ಪದಾರ್ಥಗಳ ವ್ಯವಹಾರವನ್ನು ಮಾಡಿಕೊಂಡಿದ್ದು, ಈಗ ಬಂದರಿನಿಂದ, ಗಣಿಗಾರಿಕೆ, ಗ್ರೀನ್​ ಎನರ್ಜಿ ತನಕ ದೊಡ್ಡ ಉದ್ಯಮ ಸಾಮ್ರಾಜ್ಯವನ್ನೇ ನಿರ್ಮಿಸಿರುವ ಗೌತಮ್ ಅದಾನಿ (Gautam Adani) ಏಷ್ಯಾದ ಅತಿ ಶ್ರೀಮಂತ ಎಂಬ ಕಿರೀಟವನ್ನು ಧರಿಸಿದ್ದಾರೆ. 59 ವರ್ಷದ ಗೌತಮ್ ಅದಾನಿ ಆಸ್ತಿ ಮೌಲ್ಯ ಸೋಮವಾರದಂದು 8850 ಕೋಟಿ ಅಮೆರಿಕನ್ ಡಾಲರ್ ಮುಟ್ಟಿದೆ ಎಂದು ಬ್ಲೂಮ್​ಬರ್ಗ್ ಬಿಲಿಯನೇರ್ ಸೂಚ್ಯಂಕವು ತೋರಿಸುತ್ತಿದೆ. ಈ ಮೂಲಕ ಮುಕೇಶ್ ಅಂಬಾನಿ (8790 ಕೋಟಿ ಅಮೆರಿಕನ್ ಡಾಲರ್) ಅವರನ್ನು ಗೌತಮ್ ಅದಾನಿ ಮೀರಿಸಿದ್ದಾರೆ. 1200 ಕೋಟಿ ಅಮೆರಿಕನ್ ಡಾಲರ್​ನಷ್ಟು ಗೌತಮ್ ಅದಾನಿ ಆಸ್ತಿ ಏರಿಕೆ ಆಗಿದೆ. ಇವರಿಬ್ಬರ ಆಸ್ತಿಯನ್ನು ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ, ಗೌತಮ್ ಅದಾನಿ ಆಸ್ತಿ 6,61,453.87 ಕೋಟಿ (6.61 ಲಕ್ಷ ಕೋಟಿ). ಇನ್ನು ಮುಕೇಶ್ ಅಂಬಾನಿ ಆಸ್ತಿ 6,56,969.43 ಕೋಟಿ (6.57 ಲಕ್ಷ ಕೋಟಿ) ಆಗುತ್ತದೆ. ಈ ವರ್ಷದಲ್ಲಿ ಅತಿ ಹೆಚ್ಚಿನ ಆಸ್ತಿ ಗಳಿಕೆ ಕಂಡ ವ್ಯಕ್ತಿ ಕೂಡ ಗೌತಮ್ ಅದಾನಿ ಆಗಿದ್ದಾರೆ.

ಉದ್ಯಮಿ ಗೌತಮ್ ಅದಾನಿ ಅವರ ವಿವಾದಾತ್ಮಕ ಆಸ್ಟ್ರೇಲಿಯಾದ ಗಣಿ ಯೋಜನೆಯು ಗ್ರೇಟಾ ಥನ್‌ಬರ್ಗ್ ಸೇರಿ ಹವಾಮಾನ ಕಾರ್ಯಕರ್ತರ ವಿರೋಧದಿಂದ ಗಮನವನ್ನು ಸೆಳೆಯಿತು. ಅಂದಹಾಗೆ ಅದಾನಿ ಸಮೂಹವು ಫಾಸಿಲ್ ಇಂಧನವನ್ನು ಮೀರಿ ವಿಸ್ತರಣೆಗಾಗಿ ಎದುರು ನೋಡುತ್ತಿದೆ. ನವೀಕರಿಸಬಹುದಾದ ಇಂಧನ, ವಿಮಾನ ನಿಲ್ದಾಣಗಳು, ಡೇಟಾ ಕೇಂದ್ರಗಳು ಮತ್ತು ರಕ್ಷಣಾ ಒಪ್ಪಂದಗಳತ್ತಲೂ ಉದ್ಯಮವನ್ನು ಹಿಗ್ಗಿಸುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರ ನಿರ್ಮಾಣಕ್ಕೆ ಮತ್ತು ದೇಶದ ದೀರ್ಘಕಾಲೀನ ಆರ್ಥಿಕ ಗುರಿಗಳನ್ನು ಮುಟ್ಟಲು ಗ್ರೀನ್ ಎಕಾನಮಿ ನಿರ್ಣಾಯಕ ಎಂದು ಪರಿಗಣಿಸುತ್ತಾರೆ.

“ಅದಾನಿ ಸಮೂಹವು ಸರಿಯಾದ ಸಮಯಕ್ಕೆ ಈಗ ಬೇಡಿಕೆಯಲ್ಲಿ ಇರುವ ಎಲ್ಲ ವಲಯಗಳನ್ನು ಗುರುತಿಸಿದೆ ಮತ್ತು ಪ್ರವೇಶಿಸಿದೆ. ಇದು ವಿದೇಶೀ ಬಂಡವಾಳ ಹೂಡಿಕೆದಾರರ ಆಯ್ದ ಬ್ಯಾಂಡ್‌ಗೆ ಮನ ಮುಟ್ಟುವಂತೆ ಮಾಡಿದೆ” ಎಂದು ಮುಂಬೈ ಮೂಲದ ಬ್ರೋಕರೇಜ್ ಎಚ್​ಡಿಎಫ್​ಸಿ ಸೆಕ್ಯೂರಿಟೀಸ್ ಲಿಮಿಟೆಡ್‌ನ ರೀಟೇಲ್ ಸಂಶೋಧನೆಯ ಮುಖ್ಯಸ್ಥ ದೀಪಕ್ ಜಸಾನಿ ಹೇಳಿದ್ದಾರೆ. ಆದರೆ ವಲಯಗಳು ಬಂಡವಾಳವನ್ನು ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಮಾಡುವಂಥವು ಮತ್ತು ಕಂಪೆನಿಯು ವಿಸ್ತರಣೆಗಾಗಿ ನಿಧಿಯನ್ನು ಸಂಗ್ರಹಿಸುವಲ್ಲಿ ಸ್ವಲ್ಪ ಕಷ್ಟವನ್ನು ಎದುರಿಸಿದೆ.

2.9 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಪುನಶ್ಚೇತನಕ್ಕೆ ಮತ್ತು 2070ರ ವೇಳೆಗೆ ಭಾರತದ ಕಾರ್ಬನ್ ನಿವ್ವಳ-ಶೂನ್ಯ ಗುರಿಯನ್ನು ತಲುಪಲು ಮೋದಿ ಅವರು ನೋಡುತ್ತಿರುವಂತೆ ಹಸಿರು ಶಕ್ತಿ ಮತ್ತು ಮೂಲಸೌಕರ್ಯಕ್ಕೆ ಅವರ ಪ್ರಯತ್ನವು ಫಲ ನೀಡಲಿದೆ. ಅದಾನಿ ಸಮೂಹದ ಕೆಲವು ಲಿಸ್ಟೆಡ್ ಸ್ಟಾಕ್‌ಗಳು ಕಳೆದ ಎರಡು ವರ್ಷಗಳಲ್ಲಿ ಶೇ 600ಕ್ಕಿಂತ ಹೆಚ್ಚು ಏರಿಕೆ ಕಂಡಿವೆ. MSCI ಇಂಕ್ ತನ್ನ ಭಾರತೀಯ ಮಾನದಂಡ ಸೂಚ್ಯಂಕದಲ್ಲಿ ಹೆಚ್ಚಿನ ಅದಾನಿ ಕಂಪೆನಿಗಳನ್ನು ಸೇರಿಸುವ ನಿರ್ಧಾರವು ಯಾವುದೇ ಫಂಡ್​ ಅನ್ನು ಟ್ರ್ಯಾಕ್ ಮಾಡುವುದಕ್ಕೆ ಅಳತೆಗೋಲಾಗಿ ಬಳಸುವಂಥದ್ದಕ್ಕೆ ಸೂಚ್ಯಂಕದಲ್ಲಿ ಇರುವ ಷೇರುಗಳನ್ನು ಖರೀದಿಸಬೇಕಾಗುತ್ತದೆ. 2020ನೇ ಇಸವಿಯು ಮುಕೇಶ್ ಅಂಬಾನಿ ಅವರ ವರ್ಷವಾಗಿದ್ದರೂ ಅವರ ತೈಲದಿಂದ ಪೆಟ್ರೋಕೆಮಿಕಲ್ಸ್ ತನಕದ ಗುಂಪಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತಂತ್ರಜ್ಞಾನದ ಪಿವೋಟ್ ಮೂಲಕ ಶತಕೋಟಿ ಡಾಲರ್ ಸಂಪತ್ತನ್ನು ಸೃಷ್ಟಿಸಿತು, ಅದು ಫೇಸ್‌ಬುಕ್ ಮತ್ತು ಗೂಗಲ್ ಇಂಕ್ ಅನ್ನು ಹೂಡಿಕೆದಾರರಾಗಿ ತಂದಿತು; ಆಗಿನಿಂದ ಬಟ್ಟು ಅದಾನಿ ಕಡೆಗೆ ತಿರುಗಿದೆ.

ಹಸಿರು ಉಪಕ್ರಮಗಳು, ಫಾಸಿಲ್ ಇಂಧನಗಳು ಅಥವಾ ಕಲ್ಲಿದ್ದಲಿನ ಮೇಲೆ ತಮ್ಮ ಸಾಮ್ರಾಜ್ಯಗಳನ್ನು ನಿರ್ಮಿಸಿದ ಇಬ್ಬರೂ ಭಾರತೀಯ ಬಿಲಿಯನೇರ್‌ಗಳು ಈಗ ಗ್ರೀನ್ ಎನರ್ಜಿ ಯೋಜನೆಗಳೊಂದಿಗೆ ಮುಂದಕ್ಕೆ ಸಾಗುತ್ತಿದ್ದಾರೆ. ಮುಕೇಶ್ ಅಂಬಾನಿ ಮುಂದಿನ ಮೂರು ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನದಲ್ಲಿ 76 ಶತಕೋಟಿ ಡಾಲರ್​ನಷ್ಟು ದೊಡ್ಡದಾದ ವೆಚ್ಚದ ಯೋಜನೆಯ ಭಾಗವಾಗಿ 10 ಶತಕೋಟಿ ಡಾಲರ್ ಹೂಡಿಕೆ ಮಾಡುವ ಮಾತು ನೀಡಿದ್ದಾರೆ. 2030ರ ವೇಳೆಗೆ ಒಟ್ಟು 70 ಶತಕೋಟಿ ಡಾಲರ್ ಹೂಡಿಕೆ ಮಾಡಲು ಅದಾನಿ ನಿರ್ಧಾರ ಮಾಡಿದ್ದು, ತಮ್ಮ ಸಮೂಹವನ್ನು ವಿಶ್ವದ ಅತಿದೊಡ್ಡ ರಿನೀವಬಲ್ ಎನರ್ಜಿ ಉತ್ಪಾದಕವಾಗಲು ಸಹಾಯ ಮಾಡುತ್ತದೆ.

ಟೋಟಲ್ ಎಸ್​ಇ ಮತ್ತು ವಾರ್​ಬರ್ಗ್ ಪಿನಾಕಸ್ ಎಲ್​ಎಲ್​ಸಿ ಸೇರಿದಂತೆ ಇತರ ಸಂಸ್ಥೆಗಳು 2021ರಲ್ಲಿ ಅದಾನಿ ಕಂಪೆನಿಗಳಲ್ಲಿ ಹೂಡಿಕೆ ಮಾಡಿವೆ. ಫ್ರೆಂಚ್ ತೈಲ ದೈತ್ಯ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ನ ಶೇ 20ರಷ್ಟನ್ನು ಖರೀದಿಸಲು 2021ರ ಜನವರಿಯಲ್ಲಿ ಒಪ್ಪಿಕೊಂಡಿತು ಮತ್ತು ಸೋಲಾರ್ ಆಸ್ತಿಗಳನ್ನು ನಿರ್ವಹಿಸುವ ಭಾರತೀಯ ಪಾಲುದಾರರ ಪೋರ್ಟ್‌ಫೋಲಿಯೊದಲ್ಲಿ ಶೇ 50ರಷ್ಟು ಪಾಲನ್ನು ಖರೀದಿಸಿತು. ಭಾರೀ ರಿಯಾಯಿತಿಯಲ್ಲಿ ಈ ವ್ಯವಹಾರ ನಡೆದಿದ್ದು, ಒಪ್ಪಂದದ ಮೌಲ್ಯವು ಕೇವಲ 2.5 ಬಿಲಿಯನ್ ಆಗಿತ್ತು, ಆ ಸಮಯದಲ್ಲಿ ಅದಾನಿ ಗ್ರೀನ್‌ನ ಮಾರುಕಟ್ಟೆ ಬಂಡವಾಳ ಮೌಲ್ಯ 20 ಶತಕೋಟಿ ಡಾಲರ್ ಆಗಿತ್ತು.

2021ರ ಮಾರ್ಚ್​​ನಲ್ಲಿ ವಾರ್​ಬರ್ಗ್ ಮಾತನಾಡಿ, ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯ ಲಿಮಿಟೆಡ್‌ನ ಅರ್ಧ ಪರ್ಸೆಂಟ್​ ಬದಲಾಗಿ 110 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಹೇಳಿದೆ. ಗ್ರೀನ್ ಎನರ್ಜಿ ಉತ್ತೇಜನ ಭಾಗವಾಗಿ ಅದಾನಿ ತನ್ನ ರಿನೀವಬಲ್-ಇಂಧನ ಸಾಮರ್ಥ್ಯವನ್ನು 2025ರ ವೇಳೆಗೆ ಸುಮಾರು ಎಂಟು ಪಟ್ಟು ಹೆಚ್ಚಿಸುವ ಯೋಜನೆಗಳನ್ನು ತಿಳಿಸಿದೆ. ಸಾಫ್ಟ್‌ಬ್ಯಾಂಕ್ ಗ್ರೂಪ್ ಕಾರ್ಪೊರೇಷನ್‌ನ ಸ್ಥಳೀಯ ನವೀಕರಿಸಬಹುದಾದ ವಿದ್ಯುತ್ ವ್ಯವಹಾರವನ್ನು ಎಸ್​ಬಿ ಎನರ್ಜಿ ಇಂಡಿಯಾಗೆ 3.5 ಶತಕೋಟಿ ಡಾಲರ್ ಎಂಟರ್‌ಪ್ರೈಸ್ ಮೌಲ್ಯವನ್ನು ನೀಡಿ, ಖರೀದಿಸಲು ಅದಾನಿ ಗ್ರೀನ್ ಒಪ್ಪಿಕೊಂಡಿತು.

ಕೇವಲ ಮೂರು ವರ್ಷಗಳಲ್ಲಿ ಅದಾನಿ ಏಳು ವಿಮಾನ ನಿಲ್ದಾಣಗಳು ಮತ್ತು ಭಾರತದ ವಾಯು ಸಂಚಾರದ ಕಾಲು ಭಾಗದಷ್ಟು ನಿಯಂತ್ರಣವನ್ನು ಪಡೆದುಕೊಂಡಿದೆ. ಗೌತಮ್ ಅದಾನಿ ಗುಂಪು ಈಗ ದೇಶದ ಅತಿದೊಡ್ಡ ವಿಮಾನ ನಿಲ್ದಾಣ ನಿರ್ವಾಹಕರು, ವಿದ್ಯುತ್ ಉತ್ಪಾದಕರು ಮತ್ತು ಸರ್ಕಾರೇತರ ವಲಯದಲ್ಲಿ ನಗರ ಅನಿಲ ರೀಟೇಲರ್​ಗಳನ್ನು ಹೊಂದಿದೆ. ಅದಾನಿ ಗ್ರೀನ್ ಮತ್ತು ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್‌, ಮುಂಬೈ ಷೇರುಗಳು, ಫ್ರೆಂಚ್ ಸಂಸ್ಥೆಯೊಂದಿಗೆ -ಲಿಸ್ಟಿಂಗ್​ ಮಾಡಿದ ಜಂಟಿ ಉದ್ಯಮವಾಗಿದ್ದು, 2020ರ ಆರಂಭದಿಂದ ಶೇ 1,000ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಶೇ 730ಕ್ಕಿಂತ ಹೆಚ್ಚು ಏರಿದೆ, ಅದಾನಿ ಟ್ರಾನ್ಸ್‌ಮಿಷನ್ ಲಿಮಿಟೆಡ್ ಈ ಅವಧಿಯಲ್ಲಿ ಶೇ 500ಕ್ಕಿಂತ ಹೆಚ್ಚು ಮತ್ತು ಅದಾನಿ ಪೋರ್ಟ್ಸ್ ಶೇ 95ರಷ್ಟು ಹೆಚ್ಚಳವಾಗಿದೆ. ಬೆಂಚ್​ಮಾರ್ಕ್ S&P ಬಿಎಸ್​ಇ ಸೆನ್ಸೆಕ್ಸ್ ಸೂಚ್ಯಂಕವು ಈ ಅವಧಿಯಲ್ಲಿ ಶೇ 40ರಷ್ಟು ಗಳಿಕೆ ಕಂಡಿದೆ.

ಕಾಲೇಜು ತೊರೆದ ಗೌತಮ್ ಅದಾನಿ 1980ರ ದಶಕದ ಆರಂಭದಲ್ಲಿ ತನ್ನ ಸಹೋದರನ ಪ್ಲಾಸ್ಟಿಕ್ ವ್ಯಾಪಾರವನ್ನು ನಡೆಸಲು ತವರು ರಾಜ್ಯವಾದ ಗುಜರಾತ್‌ಗೆ ಹಿಂತಿರುಗುವ ಮೊದಲು ಮುಂಬೈನ ವಜ್ರ ಉದ್ಯಮದಲ್ಲಿ ಅದೃಷ್ಟವನ್ನು ಪ್ರಯತ್ನಿಸಿದರು. 1988 ರಲ್ಲಿ ಅವರು ಅದಾನಿ ಎಂಟರ್‌ಪ್ರೈಸಸ್ ಅನ್ನು ಸ್ಥಾಪಿಸಿದರು. ಎರಡು ದಶಕಗಳ ಹಿಂದೆ ಅವರನ್ನು ಅಪಹರಿಸಲಾಗಿತ್ತು. 2008ನೇ ಇಸವಿಯಲ್ಲಿ ಕನಿಷ್ಠ 166 ಜನರನ್ನು ಕೊಂದ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಅವರು ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ ಒತ್ತೆಯಾಳುಗಳಲ್ಲಿ ಒಬ್ಬರಾಗಿದ್ದರು.

ಅದಾನಿಯವರ ಸುಸ್ಥಿರತೆಯ ಕ್ಲೇಮ್​ಗಳು ಮತ್ತು ಹಸಿರು ಮಹತ್ವಾಕಾಂಕ್ಷೆಗಳನ್ನು ಹವಾಮಾನ ಪ್ರಚಾರಕರು ಟೀಕಿಸುತ್ತಾರೆ. ಬಿಲಿಯನೇರ್ ಗೌತಮ್​ ಅದಾನಿ ಅವರ ಪರವಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇದೆ ಎಂಬ ಟೀಕೆಯು ರಾಜಕೀಯ ವಿರೋಧಿಗಳಿಂದ ಬರುತ್ತಿದೆ. ಅಂತಹ ಟೀಕೆಗಳನ್ನು ಆಧಾರರಹಿತವೆಂದು ಅದಾನಿ ತಳ್ಳಿಹಾಕಿದ್ದಾರೆ ಮತ್ತು ಮೋದಿಯವರ ಆದ್ಯತೆಗಳೊಂದಿಗೆ ತಮ್ಮ ಹೂಡಿಕೆಗಳನ್ನು ತಾಳೆ ಮಾಡುವ ಯಶಸ್ವಿ ತಂತ್ರದೊಂದಿಗೆ ಅಭಿವೃದ್ಧಿ ಹೊಂದಿದ್ದಾರೆ. ಬಂದರುಗಳಂತಹ ಕೆಲವು ದೊಡ್ಡ ಅದಾನಿ ಗ್ರೂಪ್ ವ್ಯವಹಾರಗಳು “ಬಹುತೇಕ ಏಕಸ್ವಾಮ್ಯ” ಎಂದು ಸ್ಥಳೀಯ ಬ್ರೋಕರೇಜ್ ಐಐಎಫ್​ಎಲ್​ ಸೆಕ್ಯುರಿಟೀಸ್ ಲಿಮಿಟೆಡ್‌ನ ನಿರ್ದೇಶಕ ಸಂಜೀವ್ ಭಾಸಿನ್ ಅಭಿಪ್ರಾಯ ಪಡುತ್ತಾರೆ. ಅನೇಕ ಅದಾನಿ ಕಂಪೆನಿಗಳು ಭಾರತದ ಕೈಗಾರಿಕೀಕರಣ ಮತ್ತು ಮೂಲಸೌಕರ್ಯಗಳೊಂದಿಗೆ ನಿಕಟ ಸಂಬಂಧ ಹೊಂದಿವೆ.

ಇದನ್ನೂ ಓದಿ: Mark Zuckerberg: ಒಂದೇ ದಿನ ಮಾರ್ಕ್​ ಝುಕರ್​ಬರ್ಗ್​​ ಆಸ್ತಿ 2.15 ಲಕ್ಷ ಕೋಟಿ ರೂ. ಇಳಿಕೆ; ಅದಾನಿ, ಅಂಬಾನಿ ಝೂಮ್

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ