ನವದೆಹಲಿ, ಅಕ್ಟೋಬರ್ 18: ಕೇಂದ್ರ ಸರ್ಕಾರ ಇದೀಗ ದೀಪಾವಳಿ ಬೋನಸ್ (Deepavali Bonus) ಪ್ರಕಟಿಸಿದೆ. ಕೇಂದ್ರ ಸರ್ಕಾರದ ಗ್ರೂಪ್ ಸಿ ನೌಕರರು ಹಾಗೂ ನಾನ್ ಗೆಜೆಟೆಡ್ ಗ್ರೂಪ್ ಬಿ ದರ್ಜೆಯ ಅಧಿಕಾರಿಗಳಿಗೆ ದೀಪಾವಳಿ ಹಬ್ಬಕ್ಕೆ ಮುನ್ನ ಬೋನಸ್ ಸಿಗಲಿದೆ. ಅರೆಸೇನಾ ಪಡೆಗಳೂ ಈ ಬೋನಸ್ ಫಲಾನುಭವಿಗಳ ಪಟ್ಟಿಯಲ್ಲಿದ್ದಾರೆ. ವರದಿ ಪ್ರಕಾರ ಈ ಕೇಂದ್ರ ಸರ್ಕಾರಿ ನೌಕರರಿಗೆ 2022-23ರ ಸಾಲಿಗೆ 7,000 ರೂ ಮಿತಿಯ ಬೋನಸ್ ಅನ್ನು ಕೇಂದ್ರ ಹಣಕಾಸು ಸಚಿವಾಲಯ ನಿಗದಿಪಡಿಸಿದೆ.
‘ಉತ್ಪನ್ನತೆ ಆಧಾರಿತ ಬೋನಸ್ ಸ್ಕೀಮ್ನ (Productivity Linked Bonus) ವ್ಯಾಪ್ತಿಗೆ ಸೇರದ ಕೇಂದ್ರ ಸರ್ಕಾರದ ಗ್ರೂಪ್ ಸಿ ಮತ್ತು ಗ್ರೂಪ್ ಬಿ ಶ್ರೇಣಿಯ ನಾನ್ ಗೆಜೆಟೆಡ್ ಉದ್ಯೋಗಿಗಳಿಗೆ 2022-23ರ ಅಕೌಂಟಿಂಗ್ ವರ್ಷಕ್ಕೆ 30 ದಿನಗಳ ಭತ್ಯೆಗೆ ಸಮವಾದ ಬೋನಸ್ ಅನ್ನು ನೀಡಲಾಗಿದೆ,’ ಎಂದು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಸೇರಿದ ವೆಚ್ಚ ಇಲಾಖೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
The central government has approved a Diwali bonus for Group C and non-gazetted Group B rank officials, including paramilitary forces, with a maximum limit of Rs 7,000. (n/1) pic.twitter.com/IK0if6Swxh
— Press Trust of India (@PTI_News) October 17, 2023
ಇದನ್ನೂ ಓದಿ: ನಾಮಿನಿ ಎನ್ನುವುದು ನಾಮಕಾವಸ್ತೆಯಾ? ವಾರಸುದಾರಿಕೆ ಸಿಗುವುದು ಖಚಿತವಲ್ಲವಾ? ಏನನ್ನುತ್ತದೆ ಕಾನೂನು?
ಮೇಲೆ ತಿಳಿಸಿದ ವರ್ಗದ ಉದ್ಯೋಗಿಗಳು 2023ರ ಮಾರ್ಚ್ 31ರಲ್ಲಿ ಸೇವೆಯಲ್ಲಿರಬೇಕು. ಹಾಗು 2022-23ರ ಹಣಕಾಸು ವರ್ಷದಲ್ಲಿ ಕನಿಷ್ಠ 6 ತಿಂಗಳು ನಿರಂತರ ಸೇವೆಯಲ್ಲಿರಬೇಕು. ಇಂಥವರು ಬೋನಸ್ಗೆ ಅರ್ಹರಾಗಿರುತ್ತಾರೆ.
ಎಲ್ಲರಿಗೂ ಸಮಾನವಾಗಿ 7,000 ರೂ ಬೋನಸ್ ಸಿಗುವುದಿಲ್ಲ. ಸರಾಸರಿ ಭತ್ಯೆ ಅಥವಾ ನಿಗದಿಪಡಿಸಿದ ಬೋನಸ್ ಮಿತಿಯಲ್ಲಿ ಯಾವುದು ಕಡಿಮೆಯೋ ಅಷ್ಟನ್ನು ನೀಡಲಾಗುತ್ತದೆ.
ಇದನ್ನೂ ಓದಿ: ಅಭಿಬಸ್ 1 ರೂ ಟಿಕೆಟ್; ಕೆಎಸ್ಸಾರ್ಟಿಸಿ ದಸರಾ ಕೊಡುಗೆ; ಆಂಧ್ರ ಬಸ್ ಡಿಸ್ಕೌಂಟ್; ಏರ್ ಇಂಡಿಯಾ ಫ್ಲೈಟ್ ಆಫರ್
ತಾತ್ಕಾಲಿಕ ಹುದ್ದೆಯ ನೌಕರರಾದರೆ (casual labour) ವಾರದಲ್ಲಿ 6 ದಿನ ಕೆಲಸ ಇರುವ ಕಚೇರಿಗಳಲ್ಲಿ ವರ್ಷಕ್ಕೆ ಕನಿಷ್ಠ 240 ದಿನಗಳು ಸೇವೆಯಲ್ಲಿ ಹಾಜರಾತಿ ಹೊಂದಿರಬೇಕು. ಈ ರೀತಿ 3 ಹಾಗೂ ಹೆಚ್ಚು ವರ್ಷ ಕರ್ತವ್ಯ ನಿಭಾಯಿಸಿರಬೇಕು. ಒಂದು ವೇಳೆ ವಾರಕ್ಕೆ 5 ದಿನ ಕೆಲಸ ಇರುವ ಕಚೇರಿಯಲ್ಲಾದರೆ ಇವರು ವರ್ಷಕ್ಕೆ 206 ದಿನಗಳಂತೆ ಕನಿಷ್ಠ 3 ವರ್ಷ ಕೆಲಸಕ್ಕೆ ಹಾಜರಿದ್ದಿರಬೇಕು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ