ನವದೆಹಲಿ, ಅಕ್ಟೋಬರ್ 5: ಈ ಹಣಕಾಸು ವರ್ಷದ ಮೂರನೇ ತ್ರೈಮಾಸಿಕವಾದ ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ಅವಧಿಗೆ (24FY Q3) ಸರ್ಕಾರ ಬಡ್ಡಿದರ ಘೋಷಿಸಿದೆ. ಹಿಂದಿನ ಅವಧಿಯಲ್ಲಿದ್ದ ಬಡ್ಡಿದರವನ್ನೇ ಮುಂದುವರಿಸಲು ನಿರ್ಧರಿಸಿದೆ. ಜನರಲ್ ಪ್ರಾವಿಡೆಂಟ್ ಫಂಡ್ (General Provident Fund) ಸೇರಿದಂತೆ 10 ವಿವಿಧ ಭವಿಷ್ಯ ನಿಧಿಗಳಿಗೆ ಸರ್ಕಾರ ಶೇ. 7.1ರಷ್ಟು ಬಡ್ಡಿ ನೀಡುತ್ತಿದೆ. ಕಳೆದ ಕೆಲ ತ್ರೈಮಾಸಿಕ ಅವಧಿಗಳಿಂದಲೂ ಪಿಎಫ್ಗೆ ಸರ್ಕಾರ ಇಷ್ಟೇ ಬಡ್ಡಿ ನೀಡುತ್ತಿದೆ.
‘ಜನರಲ್ ಪ್ರಾವಿಡೆಂಟ್ ಫಂಡ್ ಮತ್ತಿತರ ಅಂತಹುದೇ ಫಂಡ್ಗಳ ಸದಸ್ಯರ ಖಾತೆಗಳಲ್ಲಿ ಸಂಗ್ರಹವಾಗಿರುವ ಮೊತ್ತಕ್ಕೆ 2023ರ ಅಕ್ಟೋಬರ್ನಿಂದ ಡಿಸೆಂಬರ್ 31ರವರೆಗಿನ ಅವಧಿಗೆ ಶೇ. 7.1ರಷ್ಟು ಬಡ್ಡಿ ಮುಂದುವರಿಯುತ್ತದೆ’ ಎಂದು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ಅಕ್ಟೋಬರ್ 4ರಂದು ಬಿಡುಗಡೆ ಮಾಡಿದ ನಿರ್ಣಯದಲ್ಲಿ ತಿಳಿಸಿದೆ.
ಸರ್ಕಾರ ವಿವಿಧ ಉಳಿತಾಯ ಯೋಜನೆಗಳಿಗೆ ಬಡ್ಡಿದರವನ್ನು ಪರಿಷ್ಕರಿಸುವಂತೆ, ಪಿಎಫ್ ನಿಧಿಗಳಿಗೂ ಬಡ್ಡಿದರವನ್ನು ಪ್ರತೀ ಮೂರು ತಿಂಗಳಿಗೊಮ್ಮೆ ಪರಿಷ್ಕರಿಸುತ್ತದೆ. ಹಿಂದಿನ ತ್ರೈಮಾಸಿಕದಲ್ಲಿ (ಜುಲೈನಿಂದ ಸೆಪ್ಟೆಂಬರ್ವರೆಗಿನ ಅವಧಿ) ಶೇ. 7.1ರಷ್ಟು ಬಡ್ಡಿ ಎಂದು ಘೋಷಿಸಲಾಗಿತ್ತು.
ಇದನ್ನೂ ಓದಿ: ಜೆಪಿ ಮಾರ್ಗನ್ ಬಾಂಡ್ ಮಾರುಕಟ್ಟೆಗೆ ಭಾರತದ ಸೇರ್ಪಡೆಯಿಂದ 23 ಬಿಲಿಯನ್ ಡಾಲರ್ ಬಂಡವಾಳ: ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ
ಇದನ್ನೂ ಓದಿ: ಎಲ್ಐಸಿ ಸಂಸ್ಥೆಗೆ 84 ಕೋಟಿ ರೂ ದಂಡ ವಿಧಿಸಿ ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್; ಮೇಲ್ಮನವಿ ಸಲ್ಲಿಸಲು ವಿಮಾ ನಿಗಮ ನಿರ್ಧಾರ
ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆಗೂ ಈ ಮೇಲಿನ ಪಿಎಫ್ಗಳಿಗೂ ಸಂಬಂಧ ಇಲ್ಲ. ಉದ್ಯೋಗಿಗಳಿಗೆ ಇರುವ ಪಿಎಫ್ ಯೋಜನೆಯಲ್ಲಿ ಸರ್ಕಾರ ವರ್ಷಕ್ಕೆ ಶೇ. 8.15ರಷ್ಟು ಬಡ್ಡಿ ನೀಡುತ್ತದೆ. ಇದನ್ನು ಪ್ರತೀ ವರ್ಷ ಅಪ್ಡೇಟ್ ಮಾಡುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ