Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇವತ್ತಿಂದ ಕ್ರಿಕೆಟ್ ವಿಶ್ವಕಪ್; ಇಲ್ಲಿದೆ 5ಜಿ ಡಾಟಾ ನೀಡುವ 500 ರೂ ಒಳಗಿನ ಪ್ರೀಪೇಡ್ ಪ್ಲಾನ್ಸ್

Jio, Airtel Data Plans: ಐಪಿಎಲ್ ಟೂರ್ನಿಯನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ಪ್ರಸಾರ ಮಾಡಲಾಗಿತ್ತು. ಈಗ ಡಿಸ್ನಿ+ ಹಾಟ್​ಸ್ಟಾರ್​ನಲ್ಲೂ ವಿಶ್ವಕಪ್ ಪಂದ್ಯಗಳು ಉಚಿತವಾಗಿ ಪ್ರಸಾರವಾಗುತ್ತಿವೆ. ಇದರಿಂದ ಮೊಬೈಲ್​ನಲ್ಲಿ ಕ್ರಿಕೆಟ್ ಪಂದ್ಯ ನೋಡಬೇಕೆನ್ನುವವರು ಹಾಟ್​ಸ್ಟಾರ್ ಒಟಿಟಿಗೆ ಪ್ರತ್ಯೇಕವಾಗಿ ಸಬ್​ಸ್ಕ್ರಿಪ್ಷನ್ ಪಡೆಯುವ ಅಗತ್ಯ ಇರುವುದಿಲ್ಲ. ರಿಲಾಯನ್ಸ್ ಜಿಯೋ, ಭಾರ್ತಿ ಏರ್ಟೆಲ್, ವೊಡಾಫೋನ್ ಐಡಿಯಾ ಸಂಸ್ಥೆಗಳು ಗ್ರಾಹಕರಿಗೆ ಅನ್​ಲಿಮಿಟೆಡ್ 5ಜಿ ಇರುವ ಹಲವು ಪ್ಲಾನ್​ಗಳನ್ನು ಆಫರ್ ಮಾಡಿವೆ. ಇದರಲ್ಲಿ 500 ಒಳಗಿನ ಕೆಲ ಪ್ಲಾನ್​ಗಳ ವಿವರ ಇಲ್ಲಿದೆ.

ಇವತ್ತಿಂದ ಕ್ರಿಕೆಟ್ ವಿಶ್ವಕಪ್; ಇಲ್ಲಿದೆ 5ಜಿ ಡಾಟಾ ನೀಡುವ 500 ರೂ ಒಳಗಿನ ಪ್ರೀಪೇಡ್ ಪ್ಲಾನ್ಸ್
ಹಾಟ್​ಸ್ಟಾರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 05, 2023 | 2:22 PM

ಇಂದು ಅಕ್ಟೋಬರ್ 5, ಐಸಿಸಿ ಕ್ರಿಕೆಟ್ ವರ್ಲ್ಡ್ ಕಪ್ (ICC World Cup) ಆರಂಭವಾಗುತ್ತಿದೆ. ನವೆಂಬರ್ 19ರವರೆಗೂ ಕ್ರಿಕೆಟ್ ಪ್ರೇಮಿಗಳಿಗೆ ಸುಗ್ಗಿಕಾಲ. 43 ದಿನಗಳ ಕಾಲ 48 ಪಂದ್ಯಗಳನ್ನು ನೋಡಿ ಕಣ್ತುಂಬಿಸಿಕೊಳ್ಳುವ ಅವಕಾಶ ಕ್ರಿಕೆಟ್ ಪ್ರಿಯರಿಗೆ ಇದೆ. ಸ್ಟಾರ್ ಸ್ಪೋರ್ಟ್ಸ್​ನಲ್ಲಿ ಕ್ರಿಕೆಟ್ ಪಂದ್ಯಗಳ ಪ್ರಸಾರ ಇದೆ. ಅದೇ ಸಂಸ್ಥೆ ಡಿಜಿಟಲ್ ಪ್ರಸಾರ ಹಕ್ಕನ್ನೂ ಹೊಂದಿದೆ. ಡಿಸ್ನೀ+ ಹಾಟ್​ಸ್ಟಾರ್​ನಲ್ಲಿ ಐಸಿಸಿ ವಿಶ್ವಕಪ್ ಪ್ರಸಾರವಾಗುತ್ತಿದೆ. ಐಪಿಎಲ್ ಟೂರ್ನಿಯನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ಪ್ರಸಾರ ಮಾಡಲಾಗಿತ್ತು. ಈಗ ಡಿಸ್ನಿ+ ಹಾಟ್​ಸ್ಟಾರ್​ನಲ್ಲೂ ವಿಶ್ವಕಪ್ ಪಂದ್ಯಗಳು ಉಚಿತವಾಗಿ ಪ್ರಸಾರವಾಗುತ್ತಿವೆ. ಇದರಿಂದ ಮೊಬೈಲ್​ನಲ್ಲಿ ಕ್ರಿಕೆಟ್ ಪಂದ್ಯ ನೋಡಬೇಕೆನ್ನುವವರು ಹಾಟ್​ಸ್ಟಾರ್ ಒಟಿಟಿಗೆ ಪ್ರತ್ಯೇಕವಾಗಿ ಸಬ್​ಸ್ಕ್ರಿಪ್ಷನ್ ಪಡೆಯುವ ಅಗತ್ಯ ಇರುವುದಿಲ್ಲ.

ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಗೆ ಅನ್​ಲಿಮಿಟೆಡ್ 5ಜಿ ಇರುವ ಹಲವು ಪ್ಲಾನ್​ಗಳನ್ನು ಆಫರ್ ಮಾಡಿವೆ. 5ಜಿ ನೆಟ್ವರ್ಕ್ ಇರುವ ಪ್ರದೇಶಗಳಲ್ಲಿ ಮತ್ತು 5ಜಿ ಮೊಬೈಲ್ ಸೆಟ್​ಗಳಲ್ಲಿ 5ಜಿ ಡಾಟಾ ಸ್ಪೀಡ್ ಇರುತ್ತದೆ. ಇಲ್ಲದಿದ್ದರೆ 4ಜಿ ಸ್ಪೀಡ್ ಮಾತ್ರವೇ ಲಭ್ಯ ಇರುತ್ತದೆ. ರಿಲಾಯನ್ಸ್ ಜಿಯೋ ಮತ್ತು ಏರ್​ಟೆಲ್​ನ ಅನ್​ಲಿಮಿಟೆಡ್ 5ಜಿ ಪ್ಲಾನ್​ಗಳ ವಿವರ ಇಲ್ಲಿ ಮುಂದಿವೆ…

ಇದನ್ನೂ ಓದಿ: ಜಿಯೋಬುಕ್​ಗೆ ಸೆಡ್ಡು ಹೊಡೆಯಲು ಜೊತೆಯಾದ ಗೂಗಲ್-ಹೆಚ್​ಪಿ: ಬರುತ್ತಿದೆ ಬಜೆಟ್ ಲ್ಯಾಪ್​ಟಾಪ್

ರಿಲಾಯನ್ಸ್ ಜಿಯೋ: 239 ರೂ

ಜಿಯೋದಿಂದ ಅನ್​ಲಿಮಿಟೆಡ್ 5ಜಿ ಡಾಟಾ ಆಫರ್ ಇರುವ ಅತ್ಯಂತ ಕಡಿಮೆ ಬೆಲೆ ಪ್ಲಾನ್ ಇದು. 239 ರೂಗಳ ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ. ದಿನಕ್ಕೆ ಒಂದೂವರೆಗೆ ಜಿಬಿ ಡಾಟಾ ಸಿಗುತ್ತದೆ. ಕರೆ ಕೂಡ ಅನ್​ಲಿಮಿಟೆಡ್.

ಜಿಯೋ: 259 ರೂ

30 ದಿನಗಳ ವ್ಯಾಲಿಡಿಟಿ ಇರುವ ಈ ಪ್ಲಾನ್​ನಲ್ಲಿ ದಿನಕ್ಕೆ 1.5 ಜಿಬಿಯಷ್ಟು ಡಾಟಾ ಸಿಗುತ್ತದೆ. ಅನ್​ಲಿಮಿಟೆಡ್ ಕರೆ, ದಿನಕ್ಕೆ 100 ಎಸ್ಸೆಮ್ಮೆಸ್ ಸೌಲಭ್ಯ ಇದೆ.

ಜಿಯೋ 299 ರೂ ಪ್ಲಾನ್

ರಿಲಾಯನ್ಸ್ ಜಿಯೋದ ಈ ಪ್ಲಾನ್​ನಲ್ಲಿ ದಿನಕ್ಕೆ 2ಜಿಬಿ ಡಾಟಾದಂತೆ 28 ದಿನಗಳವರೆಗೂ ಬಳಸಬಹುದು. ಅನ್​ಲಿಮಿಟೆಡ್ ಕರೆ ಸಿಗುತ್ತದೆ.

ಜಿಯೋ 349 ರೂ ಪ್ಲಾನ್

30 ದಿನಗಳ ವ್ಯಾಲಿಡಿಟಿ ಇರುವ ಈ ಪ್ಲಾನ್​ನಲ್ಲಿ ದಿನಕ್ಕೆ 2.5 ಜಿಬಿ ಡಾಟಾ ಸಿಗುತ್ತದೆ. ಅನ್​ಲಿಮಿಟೆಡ್ ಕರೆ ಮತ್ತು ದಿನಕ್ಕೆ 100 ಎಸ್ಸೆಮ್ಮೆಸ್ ಮಾಡಬಹುದು.

ಜಿಯೋ 419 ರೂ ಪ್ಲಾನ್

28 ದಿನಗಳ ಈ ಪ್ಲಾನ್​ನಲ್ಲಿ ದಿನಕ್ಕೆ 3ಜಿಬಿ ಡಾಟಾ ಸಿಗುತ್ತದೆ. ಅನ್​ಲಿಮಿಟೆಡ್ ಕರೆ, ದಿನಕ್ಕೆ 100 ಎಸ್ಸೆಮ್ಮೆಸ್ ಇರುತ್ತದೆ.

ಇದನ್ನೂ ಓದಿ: ಸ್ವಿಗ್ಗಿ ಸಾಲದ ನೆರವು; 8,000 ಹೋಟೆಲ್​ಗಳಿಗೆ 450 ಕೋಟಿ ರೂ ಸಾಲ ವಿತರಣೆ

ಏರ್ಟೆಲ್ 239 ರೂ ಪ್ಲಾನ್

ಏರ್​ಟೆಲ್​ನ ಈ ಪ್ಲಾನ್ 24 ದಿನ ವ್ಯಾಲಿಡ್ ಇರುತ್ತದೆ. ದಿನಕ್ಕೆ 1ಜಿಬಿ ಡಾಟಾ, 100 ಎಸ್ಸೆಮ್ಮೆಸ್ ಇರುತ್ತದೆ. ವಿಶೇಷ ಎಂದರೆ 200 ಜಿಬಿವರೆಗೂ ಡಾಟಾ ರೋಲೋವರ್ ಅವಕಾಶ ಇರುತ್ತದೆ.

ಏರ್ಟೆಲ್ 265 ರೂ ಪ್ಲಾನ್

28 ದಿನಗಳ ವ್ಯಾಲಿಡಿಟಿ, ದಿನಕ್ಕೆ 1 ಜಿಬಿ ಡಾಟಾ, 100 ಎಸ್ಸೆಮ್ಮೆಸ್ ಇದೆ.

ಏರ್ಟೆಲ್ 295 ರೂ ಪ್ಲಾನ್

30 ದಿನಗಳ ವ್ಯಾಲಿಡಿಟಿ, ಒಟ್ಟು ಡಾಟಾ 25ಜಿಬಿ, ದಿನಕ್ಕೆ 100 ಎಸ್ಸೆಮ್ಮೆಸ್ ಇದೆ.

ಏರ್ಟೆಲ್ 299 ರೂ ಪ್ಲಾನ್

28 ದಿನಗಳ ವ್ಯಾಲಿಡಿಟಿ, ದಿನಕ್ಕೆ 1.5ಜಿಬಿ ಡಾಟಾ, 100 ಎಸ್ಸೆಮ್ಮೆಸ್ ಇದೆ.

ಏರ್ಟೆಲ್ 319 ರೂ ಪ್ಲಾನ್

28 ದಿನಗಳ ವ್ಯಾಲಿಡಿಟಿ, ದಿನಕ್ಕೆ 2ಜಿಬಿ ಡಾಟಾ, 100 ಎಸ್ಸೆಮ್ಮೆಸ್.

ಏರ್ಟೆಲ್ 359 ರೂ ಪ್ಲಾನ್

ಒಂದು ತಿಂಗಳ ವ್ಯಾಲಿಡಿಟಿ, ದಿನಕ್ಕೆ 2ಜಿಬಿ ಡಾಟಾ, 100 ಎಸ್ಸೆಮ್ಮೆಸ್.

ಏರ್ಟೆಲ್ 399 ರೂ ಪ್ಲಾನ್

28 ದಿನಗಳ ವ್ಯಾಲಿಡಿಟಿ, ದಿನಕ್ಕೆ 2.5ಜಿಬಿ ಡಾಟಾ ಸೌಲಭ್ಯ ಸಿಗುತ್ತದೆ.

ಏರ್ಟೆಲ್ 455 ರೂ ಪ್ಲಾನ್

84 ದಿನಗಳ ವ್ಯಾಲಿಡಿಟಿ; ಒಟ್ಟು 6ಜಿ ಡಾಟಾ ಸಿಗುತ್ತದೆ. ದಿನಕ್ಕೆ 100 ಎಸ್ಸೆಮ್ಮೆಸ್ ಬಳಸಬಹುದು.

ಏರ್ಟೆಲ್ 479 ರೂ ಪ್ಲಾನ್

56 ದಿನಗಳ ವ್ಯಾಲಿಡಿಟಿ, ದಿನಕ್ಕೆ 1.5ಜಿಬಿ ಡಾಟಾ, 100 ಎಸ್ಸೆಮ್ಮೆಸ್ ಬಳಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ