ಮೂರನೇ ತ್ರೈಮಾಸಿಕ ಅವಧಿಗೆ ಪಿಎಫ್ ಬಡ್ಡಿದರದಲ್ಲಿ ಇಲ್ಲ ಬದಲಾವಣೆ; ಹತ್ತು ವಿವಿಧ ಪಿಎಫ್ ನಿಧಿಗಳಿಗೆ ಸರ್ಕಾರ ಎಷ್ಟು ಬಡ್ಡಿ ನೀಡುತ್ತೆ?

PF Interest Rates: ಜನರಲ್ ಪ್ರಾವಿಡೆಂಟ್ ಫಂಡ್ ಸೇರಿದಂತೆ 10 ವಿವಿಧ ಭವಿಷ್ಯ ನಿಧಿಗಳಿಗೆ ಸರ್ಕಾರ ಶೇ. 7.1ರಷ್ಟು ಬಡ್ಡಿ ನೀಡುತ್ತಿದೆ. ಕಳೆದ ಕೆಲ ತ್ರೈಮಾಸಿಕ ಅವಧಿಗಳಿಂದಲೂ ಪಿಎಫ್​ಗೆ ಸರ್ಕಾರ ಇಷ್ಟೇ ಬಡ್ಡಿ ನೀಡುತ್ತಿದೆ. ಆದರೆ ಈ ಪಿಎಫ್​ಗಳಿಗೂ ಎಂಪ್ಲಾಯೀ ಪಿಎಫ್​ಗಳಿಗೂ ಸಂಬಂಧ ಇಲ್ಲ. ಇಪಿಎಫ್​ಗೆ ಸರ್ಕಾರ ಹೆಚ್ಚಿನ ಬಡ್ಡಿ ನೀಡುತ್ತದೆ. ಈ ಬಗ್ಗೆ ಒಂದು ವರದಿ...

ಮೂರನೇ ತ್ರೈಮಾಸಿಕ ಅವಧಿಗೆ ಪಿಎಫ್ ಬಡ್ಡಿದರದಲ್ಲಿ ಇಲ್ಲ ಬದಲಾವಣೆ; ಹತ್ತು ವಿವಿಧ ಪಿಎಫ್ ನಿಧಿಗಳಿಗೆ ಸರ್ಕಾರ ಎಷ್ಟು ಬಡ್ಡಿ ನೀಡುತ್ತೆ?
ಬಡ್ಡಿದರ
Follow us
|

Updated on: Oct 05, 2023 | 4:20 PM

ನವದೆಹಲಿ, ಅಕ್ಟೋಬರ್ 5: ಈ ಹಣಕಾಸು ವರ್ಷದ ಮೂರನೇ ತ್ರೈಮಾಸಿಕವಾದ ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ಅವಧಿಗೆ (24FY Q3) ಸರ್ಕಾರ ಬಡ್ಡಿದರ ಘೋಷಿಸಿದೆ. ಹಿಂದಿನ ಅವಧಿಯಲ್ಲಿದ್ದ ಬಡ್ಡಿದರವನ್ನೇ ಮುಂದುವರಿಸಲು ನಿರ್ಧರಿಸಿದೆ. ಜನರಲ್ ಪ್ರಾವಿಡೆಂಟ್ ಫಂಡ್ (General Provident Fund) ಸೇರಿದಂತೆ 10 ವಿವಿಧ ಭವಿಷ್ಯ ನಿಧಿಗಳಿಗೆ ಸರ್ಕಾರ ಶೇ. 7.1ರಷ್ಟು ಬಡ್ಡಿ ನೀಡುತ್ತಿದೆ. ಕಳೆದ ಕೆಲ ತ್ರೈಮಾಸಿಕ ಅವಧಿಗಳಿಂದಲೂ ಪಿಎಫ್​ಗೆ ಸರ್ಕಾರ ಇಷ್ಟೇ ಬಡ್ಡಿ ನೀಡುತ್ತಿದೆ.

‘ಜನರಲ್ ಪ್ರಾವಿಡೆಂಟ್ ಫಂಡ್ ಮತ್ತಿತರ ಅಂತಹುದೇ ಫಂಡ್​ಗಳ ಸದಸ್ಯರ ಖಾತೆಗಳಲ್ಲಿ ಸಂಗ್ರಹವಾಗಿರುವ ಮೊತ್ತಕ್ಕೆ 2023ರ ಅಕ್ಟೋಬರ್​ನಿಂದ ಡಿಸೆಂಬರ್ 31ರವರೆಗಿನ ಅವಧಿಗೆ ಶೇ. 7.1ರಷ್ಟು ಬಡ್ಡಿ ಮುಂದುವರಿಯುತ್ತದೆ’ ಎಂದು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ಅಕ್ಟೋಬರ್ 4ರಂದು ಬಿಡುಗಡೆ ಮಾಡಿದ ನಿರ್ಣಯದಲ್ಲಿ ತಿಳಿಸಿದೆ.

ಸರ್ಕಾರ ವಿವಿಧ ಉಳಿತಾಯ ಯೋಜನೆಗಳಿಗೆ ಬಡ್ಡಿದರವನ್ನು ಪರಿಷ್ಕರಿಸುವಂತೆ, ಪಿಎಫ್ ನಿಧಿಗಳಿಗೂ ಬಡ್ಡಿದರವನ್ನು ಪ್ರತೀ ಮೂರು ತಿಂಗಳಿಗೊಮ್ಮೆ ಪರಿಷ್ಕರಿಸುತ್ತದೆ. ಹಿಂದಿನ ತ್ರೈಮಾಸಿಕದಲ್ಲಿ (ಜುಲೈನಿಂದ ಸೆಪ್ಟೆಂಬರ್​ವರೆಗಿನ ಅವಧಿ) ಶೇ. 7.1ರಷ್ಟು ಬಡ್ಡಿ ಎಂದು ಘೋಷಿಸಲಾಗಿತ್ತು.

ಇದನ್ನೂ ಓದಿ: ಜೆಪಿ ಮಾರ್ಗನ್ ಬಾಂಡ್ ಮಾರುಕಟ್ಟೆಗೆ ಭಾರತದ ಸೇರ್ಪಡೆಯಿಂದ 23 ಬಿಲಿಯನ್ ಡಾಲರ್ ಬಂಡವಾಳ: ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ

ಈ ಫಂಡ್​ಗಳಿಗೆ ಸರ್ಕಾರದಿಂದ ಶೇ. 7.1ರಷ್ಟು ಬಡ್ಡಿ ಸಿಗುತ್ತದೆ:

  1. ಜನರಲ್ ಪ್ರಾವಿಡೆಂಟ್ ಫಂಡ್ (ಕೇಂದ್ರೀಯ ಸೇವೆ)
  2. ಜನರಲ್ ಪ್ರಾವಿಡೆಂಟ್ ಫಂಡ್ (ಡಿಫೆನ್ಸ್ ಸರ್ವಿಸ್)
  3. ಕಾಂಟ್ರಿಬ್ಯುಟರಿ ಪ್ರಾವಿಡೆಂಟ್ ಫಂಡ್
  4. ಅಖಿಲ ಭಾರತ ಸೇವಾ ಭವಿಷ್ಯ ನಿಧಿ
  5. ಸ್ಟೇಟ್ ರೈಲ್ವೆ ಪ್ರಾವಿಡೆಂಟ್ ಫಂಡ್
  6. ಇಂಡಿಯನ್ ಆರ್ಡಿನನ್ಸ್ ಡಿಪಾರ್ಟ್ಮೆಂಟ್ ಪ್ರಾವಿಡೆಂಟ್ ಫಂಡ್
  7. ಇಂಡಿಯನ್ ಆರ್ಡಿನನ್ಸ್ ಫ್ಯಾಕ್ಟರೀಸ್ ವರ್ಕ್​ಮೆನ್ಸ್ ಪ್ರಾವಿಡೆಂಟ್ ಫಂಡ್
  8. ಇಂಡಿಯನ್ ನೇವಲ್ ಡಾಕ್​ಯಾರ್ಡ್ ವರ್ಕ್​ಮೆನ್ಸ್ ಪ್ರಾವಿಡೆಂಟ್ ಫಂಡ್
  9. ಡಿಫೆನ್ಸ್ ಸರ್ವಿಸಸ್ ಆಫೀಸರ್ಸ್ ಪ್ರಾವಿಡೆಂಟ್ ಫಂಡ್
  10. ಆರ್ಮ್ಡ್ ಫೋರ್ಸಸ್ ಪರ್ಸೋನಲ್ ಪ್ರಾವಿಡೆಂಟ್ ಫಂಡ್

ಇದನ್ನೂ ಓದಿ: ಎಲ್​ಐಸಿ ಸಂಸ್ಥೆಗೆ 84 ಕೋಟಿ ರೂ ದಂಡ ವಿಧಿಸಿ ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್; ಮೇಲ್ಮನವಿ ಸಲ್ಲಿಸಲು ವಿಮಾ ನಿಗಮ ನಿರ್ಧಾರ

ಇಪಿಎಫ್ ಬೇರೆ?

ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆಗೂ ಈ ಮೇಲಿನ ಪಿಎಫ್​ಗಳಿಗೂ ಸಂಬಂಧ ಇಲ್ಲ. ಉದ್ಯೋಗಿಗಳಿಗೆ ಇರುವ ಪಿಎಫ್ ಯೋಜನೆಯಲ್ಲಿ ಸರ್ಕಾರ ವರ್ಷಕ್ಕೆ ಶೇ. 8.15ರಷ್ಟು ಬಡ್ಡಿ ನೀಡುತ್ತದೆ. ಇದನ್ನು ಪ್ರತೀ ವರ್ಷ ಅಪ್​ಡೇಟ್ ಮಾಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ