ಜೆಪಿ ಮಾರ್ಗನ್ ಬಾಂಡ್ ಮಾರುಕಟ್ಟೆಗೆ ಭಾರತದ ಸೇರ್ಪಡೆಯಿಂದ 23 ಬಿಲಿಯನ್ ಡಾಲರ್ ಬಂಡವಾಳ: ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ
JP Morgan Bond Index: ಜೆಪಿ ಮಾರ್ಗನ್ನ ಎಮರ್ಜಿಂಗ್ ಮಾರ್ಕೆಟ್ ಡೆಟ್ ಇಂಡೆಕ್ಸ್ನಲ್ಲಿ ಭಾರತದ ಬಾಂಡ್ಗಳನ್ನು ಒಳಗೊಳ್ಳಲಾಗುತ್ತಿದೆ. ಈ ಬಗ್ಗೆ ಜೆಪಿ ಮಾರ್ಗನ್ ಚೇಸ್ ಅಂಡ್ ಕೋ ಇತ್ತೀಚೆಗೆ ಸ್ಪ್ಟಪಡಿಸಿತ್ತು. ಭಾರತದ ಆರ್ಥಿಕ ಪ್ರಗತಿಗೆ ಈ ಬೆಳವಣಿಗೆ ಇನ್ನಷ್ಟು ಪುಷ್ಟಿ ನೀಡಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜೆಪಿ ಮಾರ್ಗನ್ ಬಾಂಡ್ ಇಂಡೆಕ್ಸ್ನಲ್ಲಿ ಭಾರತವನ್ನು ಒಳಗೊಳ್ಳುವುದರಿಂದ ದೇಶಕ್ಕೆ 23 ಬಿಲಿಯನ್ ಡಾಲರ್ ಹಣದ ಹರಿವು ಬರುತ್ತದೆ ಎಂದಿದ್ದಾರೆ.
ನವದೆಹಲಿ, ಅಕ್ಟೋಬರ್ 5: ಮುಂದಿನ ವರ್ಷದಿಂದ ಜಾಗತಿಕ ಸರ್ಕಾರಿ ಬಾಂಡ್ ಮಾರುಕಟ್ಟೆಗೆ (government bond market) ಭಾರತ ಲಗ್ಗೆ ಇಡಲಿದೆ. ಜೆಪಿ ಮಾರ್ಗನ್ನ ಎಮರ್ಜಿಂಗ್ ಮಾರ್ಕೆಟ್ ಡೆಟ್ ಇಂಡೆಕ್ಸ್ನಲ್ಲಿ (JP Morgan GBI- Emerging Markets) ಭಾರತದ ಬಾಂಡ್ಗಳನ್ನು ಒಳಗೊಳ್ಳಲಾಗುತ್ತಿದೆ. ಈ ಬಗ್ಗೆ ಜೆಪಿ ಮಾರ್ಗನ್ ಚೇಸ್ ಅಂಡ್ ಕೋ ಇತ್ತೀಚೆಗೆ ಸ್ಪ್ಟಪಡಿಸಿತ್ತು. ಭಾರತದ ಆರ್ಥಿಕ ಪ್ರಗತಿಗೆ ಈ ಬೆಳವಣಿಗೆ ಇನ್ನಷ್ಟು ಪುಷ್ಟಿ ನೀಡಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜೆಪಿ ಮಾರ್ಗನ್ ಬಾಂಡ್ ಇಂಡೆಕ್ಸ್ನಲ್ಲಿ ಭಾರತವನ್ನು ಒಳಗೊಳ್ಳುವುದರಿಂದ ದೇಶಕ್ಕೆ 23 ಬಿಲಿಯನ್ ಡಾಲರ್ ಹಣದ ಹರಿವು ಬರುತ್ತದೆ ಎಂದಿದ್ದಾರೆ.
‘ಭಾರತಕ್ಕೆ 23 ಬಿಲಿಯನ್ ಡಾಲರ್ (ಸುಮಾರು 1.9 ಲಕ್ಷ ಕೋಟಿ ರೂ) ಹಣದ ಹರಿವು ಬರುವ ಸಾಧ್ಯತೆ ಇದೆ. ಜೆಪಿ ಮಾರ್ಗನ್ ಬಾಂಡ್ ಇಂಡೆಕ್ಸ್ನಲ್ಲಿ ಒಳಗೊಳ್ಳಲಾಗುವ ಪರಿಣಾಮ ಇದು’ ಎಂದು ಸಚಿವೆ ಹೇಳಿದ್ದಾರೆ.
ಇದನ್ನೂ ಓದಿ: ಎಲ್ಐಸಿ ಸಂಸ್ಥೆಗೆ 84 ಕೋಟಿ ರೂ ದಂಡ ವಿಧಿಸಿ ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್; ಮೇಲ್ಮನವಿ ಸಲ್ಲಿಸಲು ವಿಮಾ ನಿಗಮ ನಿರ್ಧಾರ
ಇಂಡೆಕ್ಸ್ನಲ್ಲಿ ಸೇರ್ಪಡೆಯಾದರೆ ಬಂಡವಾಳ ಹೇಗೆ ಬರುತ್ತದೆ?
ಜೆಪಿ ಮಾರ್ಗನ್ ವಿವಿಧ ಸೂಚ್ಯಂಕಗಳನ್ನು ಹೊಂದಿದೆ. ಅದರಲ್ಲಿ ಉದಯೋನ್ಮುಖ ಮಾರುಕಟ್ಟೆಗಳ ಸರ್ಕಾರಿ ಬಾಂಡ್ ಇಂಡೆಕ್ಸ್ (GBI- EM) ಒಂದು. ಚೀನಾ, ಇಂಡೋನೇಷ್ಯಾ, ಬ್ರೆಜಿಲ್ ಮೊದಲಾದ ಕೆಲ ಆಯ್ದ ದೇಶಗಳ ಬಾಂಡ್ಗಳು ಇಲ್ಲಿ ಲಭ್ಯ ಇವೆ. ರಷ್ಯಾವನ್ನು ಈ ಪಟ್ಟಿಯಿಂದ ತೆಗೆದು ಭಾರತವನ್ನು ಸೇರಿಸಲಾಗಿದೆ. ಈ ಇಂಡೆಕ್ಸ್ನಲ್ಲಿ ಒಟ್ಟು ಹೂಡಿಕೆ 240 ಬಿಲಿಯನ್ ಡಾಲರ್. ಅಂದರೆ ಸುಮಾರು 20 ಲಕ್ಷ ಕೋಟಿ ರೂನಷ್ಟು ಹೂಡಿಕೆದಾರರ ಬಂಡವಾಳ ಇದರಲ್ಲಿದೆ.
ಈ ಇಂಡೆಕ್ಸ್ನಲ್ಲಿ ಭಾರತಕ್ಕೆ 10 ಪ್ರತಿಶತದಷ್ಟು ವೈಟೇಜ್ ಕೊಡಲಾಗಿದೆ. ಅಂದರೆ, ಶೇ. 10ರಷ್ಟು ಹೂಡಿಕೆಗಳು ಭಾರತದ ಸರ್ಕಾರಿ ಬಾಂಡ್ಗಳ ಮೇಲೆ ವಿನಿಯೋಗ ಆಗುತ್ತವೆ. ಅಂದರೆ, 230ರಿಂದ 240 ಬಿಲಿಯನ್ ಡಾಲರ್ ಬಾಂಡ್ ಇಂಡೆಕ್ಸ್ನಲ್ಲಿ 10 ಪ್ರತಿಶತದಷ್ಟು ಅಂದರೆ ಸುಮಾರು 23 ಬಿಲಿಯನ್ ಡಾಲರ್ನಷ್ಟು ಮೊತ್ತವು ಭಾರತದ ಬಾಂಡ್ಗಳ ಮೇಲೆ ಹೂಡಿಕೆ ಆಗುತ್ತದೆ.
ಇದನ್ನೂ ಓದಿ: ಸ್ವಿಗ್ಗಿ ಸಾಲದ ನೆರವು; 8,000 ಹೋಟೆಲ್ಗಳಿಗೆ 450 ಕೋಟಿ ರೂ ಸಾಲ ವಿತರಣೆ
ಬಾಂಡ್ ಇಂಡೆಕ್ಸ್ನಲ್ಲಿ ಭಾರತದ ಸೇರ್ಪಡೆಯಿಂದ ಏನೇನು ಲಾಭಗಳು?
- ಜೆಪಿ ಮಾರ್ಗನ್ ಬಾಂಡ್ ಇಂಡೆಕ್ಸ್ಗೆ ಭಾರತದ ಸೇರ್ಪಡೆಯಿಂದ ದೇಶಕ್ಕೆ ಕನಿಷ್ಠ 23 ಬಿಲಿಯನ್ ಡಾಲರ್ ಬಂಡವಾಳ ಹರಿದುಬರುತ್ತದೆ.
- ಭಾರತದ ಬಾಂಡ್ಗಳಿಗೆ ಬೇಡಿಕೆ ಹೆಚ್ಚಿದಂತೆ ಬಡ್ಡಿದರ ಕಡಿಮೆ ಆಗುತ್ತದೆ. ಇದರಿಂದ ಸರ್ಕಾರಕ್ಕೆ ಹೊರೆ ಕಡಿಮೆ ಆಗುತ್ತದೆ.
- ಖಾಸಗಿ ಬ್ಯಾಂಕುಗಳಿಗೆ ಈ ಸರ್ಕಾರಿ ಬಾಂಡ್ಗಳನ್ನು ಖರೀದಿಸಬೇಕಾದ ಒತ್ತಡ ಕಡಿಮೆ ಆಗುತ್ತದೆ.
- ಜೆಪಿ ಮಾರ್ಗನ್ನ ಬಾಂಡ್ ಇಂಡೆಕ್ಸ್ಗೆ ಭಾರತ ಸೇರ್ಪಡೆಯಾಗುವುದರಿಂದ ಬ್ಲೂಂಬರ್ಗ್ ಮತ್ತು ಎಫ್ಟಿಎಸ್ಇಗಳೂ ಕೂಡ ತಮ್ಮ ಬಾಂಡ್ ಇಂಡೆಕ್ಸ್ಗೆ ಭಾರತವನ್ನು ಸೇರಿಸಿಕೊಳ್ಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ