Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಬಿಐ ಮಾನಿಟರಿ ಪಾಲಿಸಿ ಕಮಿಟಿ ಸಭೆ ಇಂದು ಅಂತ್ಯ; ಬೆಳಗ್ಗೆ 10 ಗಂಟೆಗೆ ಆರ್​ಬಿಐ ಗವರ್ನರ್ ಸುದ್ದಿಗೋಷ್ಠಿ

RBI MPC Meet: ಅಕ್ಟೋಬರ್ 4ರಂದು ಆರಂಭವಾದ ಆರ್​ಬಿಐ ಎಂಪಿಸಿ ಸಭೆ ಇಂದು ಮುಕ್ತಾಯಗೊಳ್ಳುತ್ತಿದ್ದು, ಆರ್​ಬಿಐ ಗವರ್ನರ್ ಶಕ್ತಿಕಾಂತದಾಸ್ ಸುದ್ದಿಗೋಷ್ಠಿ ಉದ್ದೇಶಿಸಿ ಬೆಳಗ್ಗೆ 10 ಗಂಟೆಗೆ ಮಾತನಾಡಲಿದ್ದಾರೆ. ಸಭೆಯ ವಿಚಾರಗಳನ್ನು ಪ್ರಕಟಿಸಲಿದ್ದಾರೆ. ಆರ್​ಬಿಐ ಎಂಪಿಸಿ ಸಭೆ ಎಂದರೆ ಸಾಮಾನ್ಯವಾಗಿ ರೆಪೋ ದರದ ಬಗ್ಗೆ ಎಲ್ಲರ ಗಮನ ನೆಟ್ಟಿರುತ್ತದೆ. ಈ ಬಾರಿ ಹಣದುಬ್ಬರ ಪರಿಸ್ಥಿತಿ ಬಗ್ಗೆ ಅವಲೋಕನವೇನು ಎಂಬುದರ ಮೇಲೆ ಆಸಕ್ತಿ ಮೂಡಿದೆ.

ಆರ್​ಬಿಐ ಮಾನಿಟರಿ ಪಾಲಿಸಿ ಕಮಿಟಿ ಸಭೆ ಇಂದು ಅಂತ್ಯ; ಬೆಳಗ್ಗೆ 10 ಗಂಟೆಗೆ ಆರ್​ಬಿಐ ಗವರ್ನರ್ ಸುದ್ದಿಗೋಷ್ಠಿ
ಶಕ್ತಿಕಾಂತ ದಾಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 06, 2023 | 4:37 AM

ನವದೆಹಲಿ, ಅಕ್ಟೋಬರ್ 6: ಭಾರತೀಯ ರಿಸರ್ವ್ ಬ್ಯಾಂಕ್​ನ ಹಣಕಾಸು ನೀತಿ ಸಮಿತಿಯ (RBI MPC Meeting) ದ್ವೈಮಾಸಿಕ ಸಭೆಯ ನಿರ್ಧಾರಗಳು ಇಂದು ಪ್ರಕಟವಾಗಲಿವೆ. ಮೊನ್ನೆ (ಅಕ್ಟೋಬರ್ 4ರಂದು) ಆರಂಭವಾದ ಕಮಿಟಿ ಸಭೆ ಇಂದು ಮುಕ್ತಾಯಗೊಳ್ಳುತ್ತದೆ. ಸಭೆ ಬಳಿಕ ಬೆಳಗ್ಗೆ 10 ಗಂಟೆಗೆ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ. ಸಭೆಯಲ್ಲಿ ಚರ್ಚಿಸಲಾದ ವಿಚಾರಗಳು ಹಾಗು ನಿರ್ಧಾರಗಳನ್ನು ಬಹಿರಂಗಪಡಿಸಲಾಗುತ್ತದೆ. ಬಡ್ಡಿದರದಿಂದ ಹಿಡಿದು ಭಾರತದ ಆರ್ಥಿಕ ಮತ್ತು ಹಣಕಾಸು ಪರಿಸ್ಥಿತಿ ಬಗ್ಗೆ ಆರ್​ಬಿಐ ನೀಡುವ ಹೇಳಿಕೆ ಮತ್ತು ನಿರ್ಧಾರಗಳ ಮೇಲೆ ಎಲ್ಲರ ಚಿತ್ತ ನೆಟ್ಟಿರುತ್ತದೆ.

ಆರ್​ಬಿಐ ಎಂಪಿಸಿ ಸಭೆಯಲ್ಲಿ ಈ ಬಾರಿ ಯಾವ ವಿಚಾರ ಪ್ರಮುಖವಾದುವು?

  • ರೆಪೋ ದರ (ಬಡ್ಡಿದರ)
  • ಹಣದುಬ್ಬರ ಅಂದಾಜು
  • ಜಿಡಿಪಿ ಅಂದಾಜು
  • ಹಣಕಾಸು ಹರಿವು

ಇದನ್ನೂ ಓದಿ: ಜೆಪಿ ಮಾರ್ಗನ್ ಬಾಂಡ್ ಮಾರುಕಟ್ಟೆಗೆ ಭಾರತದ ಸೇರ್ಪಡೆಯಿಂದ 23 ಬಿಲಿಯನ್ ಡಾಲರ್ ಬಂಡವಾಳ: ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ

ರೆಪೋ ದರ ಎಂಬುದು ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲಕ್ಕೆ ಆರ್​ಬಿಐ ವಿಧಿಸುವ ಬಡ್ಡಿದರವಾಗಿದೆ. ಕಳೆದ ಒಂದು ವರ್ಷದಿಂದಲೂ ರೆಪೋ ದರ ಶೇ. 6.5ರಷ್ಟಿದೆ. ಈ ಬಾರಿಯೂ ಅದರಲ್ಲಿ ಬದಲಾವಣೆ ಆಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಆರ್​ಬಿಐ ಎಂಪಿಸಿ ಸಭೆ ಎಂದರೆ ಸಾಮಾನ್ಯವಾಗಿ ರೆಪೋ ದರದ ಬಗ್ಗೆ ಎಲ್ಲರ ಗಮನ ನೆಟ್ಟಿರುತ್ತದೆ. ಈ ಬಾರಿ ಹಣದುಬ್ಬರ ಪರಿಸ್ಥಿತಿ ಬಗ್ಗೆ ಅವಲೋಕನವೇನು ಎಂಬುದರ ಮೇಲೆ ಆಸಕ್ತಿ ಮೂಡಿದೆ. ಹಣದುಬ್ಬರ ನಿಯಂತ್ರಣಕ್ಕೆ ಆರ್​ಬಿಐ ಬೇರೆ ತಂತ್ರ ಅನುಸರಿಸಬಹುದು. ಅದರಲ್ಲಿ ಹಣಕಾಸು ಹರಿವು ಹಿಂಪಡೆಯುವುದು (Accommodative stance) ಒಂದು ಕ್ರಮ. ಹಣಕಾಸು ಹರಿವನ್ನು ಹಿಂಪಡೆಯಲು ಕಳೆದ ಬಾರಿ ನಿರ್ಧರಿಸಲಾಗಿತ್ತು. ಈ ಬಾರಿಯೂ ಅದೇ ನಿಲುವು ಮುಂದುವರಿಯಬಹುದು.

ಇದನ್ನೂ ಓದಿ: ಮೂರನೇ ತ್ರೈಮಾಸಿಕ ಅವಧಿಗೆ ಪಿಎಫ್ ಬಡ್ಡಿದರದಲ್ಲಿ ಇಲ್ಲ ಬದಲಾವಣೆ; ಹತ್ತು ವಿವಿಧ ಪಿಎಫ್ ನಿಧಿಗಳಿಗೆ ಸರ್ಕಾರ ಎಷ್ಟು ಬಡ್ಡಿ ನೀಡುತ್ತೆ?

ಸದ್ಯ, ಹಣದುಬ್ಬರ ಆಗಸ್ಟ್ ತಿಂಗಳಲ್ಲಿ ಶೇ. 6.83ರಷ್ಟಿದೆ. ಇದನ್ನು ಶೇ. 4ಕ್ಕೆ ಹಿಡಿದು ನಿಲ್ಲಿಸುವುದು ಆರ್​ಬಿಐನ ಗುರಿಯಾಗಿದೆ. ಕಡೇಪಕ್ಷ ಹಣದುಬ್ಬರ ತಾಳಿಕೆ ಮಿತಿಯಾದ ಶೇ. 6ರೊಳಗೆ ಅದನ್ನು ತರುವ ಸಂಕಲ್ಪ ಇದೆ. ಟೊಮೆಟೋ ಮತ್ತಿತರ ತರಕಾರಿಗಳ ಬೆಲೆ ಏರಿಕೆಯಿಂದಾಗಿ ಜುಲೈನಲ್ಲಿ ಹಣದುಬ್ಬರ ಶೇ. 7.44ಕ್ಕೆ ಜಿಗಿದಿತ್ತು. ಆಗಸ್ಟ್​​ನಲ್ಲಿ ತುಸು ಕಡಿಮೆ ಆಗಿದೆ. ಸೆಪ್ಟೆಂಬರ್​ನಲ್ಲಿ ಇದು ಇನ್ನೂ ಸ್ವಲ್ಪ ಕಡಿಮೆ ಆಗಬಹುದಾದರೂ ತಾಳಿಕೆ ಮಿತಿಯಾದ ಶೇ. 6ಕ್ಕಿಂತಲೂ ಹೆಚ್ಚೇ ಇರಬಹುದು ಎಂದು ನಿರೀಕ್ಷಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ