Sign In

By signing in or creating an account, you agree with Associated Broadcasting Company's Terms & Conditions and Privacy Policy.

ಷೇರುಪೇಟೆ ಸಖತ್ ಗೂಳಿ ಓಟ; ನಷ್ಟವೆಲ್ಲಾ ಉಡೀಸ್; ಈ ತಿಂಗಳೇ ಹೊಸ ದಾಖಲೆ ಮಾಡಲಿವೆ ಸೆನ್ಸೆಕ್ಸ್, ನಿಫ್ಟಿ

Stock market bull run for successive 6th session: ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ ಆರನೇ ದಿನ ಲಾಭದಲ್ಲಿ ಅಂತ್ಯಗೊಂಡಿವೆ. ಈ ವರ್ಷ ಕಂಡಿದ್ದ ನಷ್ಟವೆಲ್ಲಾ ಆರು ದಿನದ ಓಟದಲ್ಲಿ ಭರ್ತಿಯಾಗಿವೆ. ಎಲ್ಲಾ ಸೆಕ್ಟರ್​​ಗಳು ಪಾಸಿಟಿವ್ ಆಗಿವೆ. ಬ್ಯಾಂಕಿಂಗ್ ಮತ್ತು ಐಟಿ ವಲಯದ ಷೇರುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಎಫ್​​ಐಐಗಳು ಭಾರತಕ್ಕೆ ಮತ್ತೆ ಮುಗಿಬೀಳುತ್ತಿವೆ. ಇದರ ಜೊತೆಗೆ ವಿಐಎಕ್ಸ್ ಎನ್ನುವ ಭಯ ಸಂವೇದಿ ಸೂಚ್ಯಂಕ ಕೂಡ ಏರುತ್ತಿರುವುದು ಮತ್ತೊಂದು ಸಣ್ಣ ಮಾರ್ಕೆಟ್ ಕರೆಕ್ಷನ್ ಸಾಧ್ಯತೆಯನ್ನು ತೋರಿಸುತ್ತಿದೆ.

ಷೇರುಪೇಟೆ ಸಖತ್ ಗೂಳಿ ಓಟ; ನಷ್ಟವೆಲ್ಲಾ ಉಡೀಸ್; ಈ ತಿಂಗಳೇ ಹೊಸ ದಾಖಲೆ ಮಾಡಲಿವೆ ಸೆನ್ಸೆಕ್ಸ್, ನಿಫ್ಟಿ
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 24, 2025 | 4:57 PM

ನವದೆಹಲಿ, ಮಾರ್ಚ್ 24: ಸತತ ಐದು ತಿಂಗಳು ನಷ್ಟ ಕಂಡಿದ್ದ ಭಾರತದ ಷೇರು ಮಾರುಕಟ್ಟೆ (stock market) ಈಗ ರಬ್ಬರ್ ಬ್ಯಾಂಡ್ ರೀತಿ ಪುಟಿದೆದ್ದಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೇರಿದಂತೆ ಮಾರುಕಟ್ಟೆಯ ಬಹುತೇಕ ಎಲ್ಲಾ ಸೂಚ್ಯಂಕಗಳು ಇಂದು ಸೋಮವಾರ ಸಖತ್ ಏರಿಕೆ ಕಂಡಿವೆ. ಬಿಎಸ್​​ಇ ಸೆನ್ಸೆಕ್ಸ್ ಸಾವಿರಕ್ಕೂ ಅಧಿಕ ಅಂಕಗಳನ್ನು ಗಳಿಸಿದೆ. ನಿಫ್ಟಿ50 ಸೂಚ್ಯಂಕ 300ಕ್ಕೂ ಅಧಿಕ ಅಂಕಗಳನ್ನು ಪಡೆಯಿತು. ಈ ವರ್ಷ (ಜನವರಿಯಿಂದ ಈಚೆ) ಕಂಡಿದ್ದ ನಷ್ಟವೆಲ್ಲವೂ ಈಗ ಭರ್ತಿಯಾಗಿದೆ. ಸತತ ಆರನೇ ಸೆಷನ್ ಮಾರುಕಟ್ಟೆ ಹಸಿರುಬಣ್ಣದಲ್ಲಿ ಅಂತ್ಯಗೊಂಡಿದೆ. ಈ ಗೂಳಿ ಓಟದಲ್ಲಿ ಮಾರುಕಟ್ಟೆ 30 ಲಕ್ಷ ಕೋಟಿ ರೂ ಗಳಿಸಿಬಿಟ್ಟಿದೆ.

ನಿಫ್ಟಿ50 ಇಂಡೆಕ್ಸ್ ಗಳಿಕೆ ಈ ವರ್ಷದಿಂದೀಚೆಗೆ ಮೊದಲ ಬಾರಿಗೆ ಕೆಂಪು ಬಣ್ಣದಿಂದ ಹಸಿರು ಬಣ್ಣಕ್ಕೆ ತಿರುಗಿದೆ. ಅಂದರೆ, ನಷ್ಟದಿಂದ ಲಾಭದ ಹಳಿಗೆ ಬಂದಿದೆ. ಬಿಎಸ್​​ಇ ಸೆನ್ಸೆಕ್ಸ್ ಈಗಲೂ ಕೂಡ ಕೆಂಪು ಬಣ್ಣದಲ್ಲೇ ಇದೆಯಾದರೂ ಇವತ್ತಿನ ರೀತಿಯಲ್ಲೇ ನಾಳೆಯೂ ಬುಲ್ ರನ್ ಆಗಿಹೋದರೆ ಅದೂ ಕೂಡ ಪಾಸಿಟಿವ್ ಆಗಿ ತಿರುಗುತ್ತದೆ. ಕುತೂಹಲ ಎಂದರೆ, ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕೂಡ ತಮ್ಮ ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಶೇ. 10ರಷ್ಟು ಮಾತ್ರವೇ ಕೆಳಗಿರುವುದು. ಈ ತಿಂಗಳೊಳಗೆ ಈ ಸೂಚ್ಯಂಕಗಳು ಹೊಸ ದಾಖಲೆ ಬರೆಯುವ ಸಂಭವ ಹೆಚ್ಚಿದೆ.

ಐಟಿ ಮತ್ತು ಬ್ಯಾಂಕಿಂಗ್ ಸೆಕ್ಟರ್​ಗಳ ಏಳ್ಗೆ

ಷೇರು ಮಾರುಕಟ್ಟೆಯ ಬುಲ್​ ರನ್​​ನಲ್ಲಿ ಬಹುತೇಕ ಎಲ್ಲಾ ವಲಯಗಳ ಸ್ಟಾಕ್​​​ಗಳು ಹಸಿರುಬಣ್ಣದಲ್ಲಿವೆ. ಆದರೆ, ಬ್ಯಾಂಕ್ ಮತ್ತು ಐಟಿ ವಲಯಗಳು ಹೆಚ್ಚು ಬೇಡಿಕೆ ಪಡೆದಿವೆ. ಎಲ್ಲಾ ವಲಯದ ಉತ್ತಮ ಸ್ಟಾಕ್​​ಗಳು ಕಡಿಮೆ ಬೆಲೆಗೆ ಲಭ್ಯವಾಗುತ್ತಿರುವುದರಿಂದ ಹೂಡಿಕೆದಾರರಿಗೆ ಸುಗ್ಗಿಯಾದಂತಾಗಿದೆ.

ಇದನ್ನೂ ಓದಿ
Image
ಎಕ್ಸ್​​ಗೆ ಮುನ್ನ ಇದ್ದ ಟ್ವಿಟ್ಟರ್ ಲೋಗೋ ಹರಾಜು
Image
ಫೀನಿಕ್ಸ್​​ನಂತೆ ತಿರುಗಿನಿಂತ ಸರ್ಕಾರಿ ಬ್ಯಾಂಕುಗಳಿಂದ ದಾಖಲೆ ಡಿವಿಡೆಂಡ್
Image
ಚೀನಾದಿಂದ ಭಾರತಕ್ಕೆ ಆರ್ಥಿಕ ಅಡ್ಡಗಾಲು?
Image
ಷೇರು ಯಾವಾಗ ಮಾರಬೇಕು? ದೀರ್ಘಾವಧಿ ಇಟ್ಟುಕೊಳ್ಳಬೇಕಾ?

ಇದನ್ನೂ ಓದಿ: 2,000 ರೂ ಒಳಗಿನ ಯುಪಿಐ ಪಾವತಿ: 1,500 ಕೋಟಿ ರೂ ಇನ್ಸೆಂಟಿವ್ ಸ್ಕೀಮ್​​ಗೆ ಸಂಪುಟ ಅನುಮೋದನೆ; ಏನಿದು ಯೋಜನೆ? ಯಾರಿಗೆ ಅನುಕೂಲ?

ಆರೇಳು ತಿಂಗಳಿಂದ ಭಾರತದಿಂದ ಗುಳೆಹೋಗಿದ್ದ ವಿದೇಶೀ ಹೂಡಿಕೆಗಳು ಹಂತ ಹಂತವಾಗಿ ಮರಳಿ ಬರುತ್ತಿವೆ. ಇದರ ಜೊತೆಗೆ ಭಾರತದ ಹೂಡಿಕೆಗಳೂ ಕೂಡ ಹೆಚ್ಚಾಗಿವೆ. ಇದರ ಪರಿಣಾಮವಾಗಿ ಷೇರು ಮಾರುಕಟ್ಟೆಯಲ್ಲಿ ಮಿಂಚಿನ ಸಂಚಾರ ಆಗುತ್ತಿದೆ.

ಮಾರ್ಕೆಟ್ ಕರೆಕ್ಷನ್ ಮುಕ್ತಾಯ: ರಮೇಶ್ ದಮಾನಿ

ಕಳೆದ ಐದು ತಿಂಗಳಲ್ಲಿ ಆಗಿದ್ದು ಮಾರ್ಕೆಟ್ ಕರೆಕ್ಷನ್ ಅಷ್ಟೆಯೇ ಹೊರತು ಮಾರುಕಟ್ಟೆ ಕುಸಿತವಲ್ಲ ಎಂದು ಹೂಡಿಕೆದಾರ ರಮೇಶ್ ದಮಾನಿ ಅಭಿಪ್ರಾಯಪಟ್ಟಿದ್ದಾರೆ. ಷೇರು ಮಾರುಕಟ್ಟೆ ಕುಸಿತದ ಹಂತದಲ್ಲಿ ಎಲ್ಲಾ ಷೇರುಗಳೂ ಇಳಿಕೆಯ ಸುಳಿಗೆ ಸಿಕ್ಕಿಬಿಡುತ್ತವೆ. ಆದರೆ, ಕೆಲ ಷೇರುಗಳು ತಮ್ಮ ಬೇಡಿಕೆ ಉಳಿಸಿಕೊಂಡು ಬೆಳೆಯುತ್ತಿದ್ದವು. ಇಂಥದ್ದನ್ನು ಮಾರುಕಟ್ಟೆ ಕುಸಿತದಲ್ಲಿ ಕಾಣಲಾಗುವುದಿಲ್ಲ. ಮಾರ್ಕೆಟ್ ಕರೆಕ್ಷನ್ ಆಗಿರುವುದಕ್ಕೆ ಇದು ಸಾಕ್ಷಿ ಎಂದು ರಮೇಶ್ ದಮಾನಿ ತಮ್ಮ ವಾದಕ್ಕೆ ಸಮರ್ಥನೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಟ್ವಿಟ್ಟರ್ ಲೋಗೋ ಹರಾಜು, 30 ಲಕ್ಷ ರೂಗೆ ಮಾರಾಟ; ಈ ಲೋಗೋ ಹಿಂದಿದೆ ಸಣ್ಣ ಸ್ವಾರಸ್ಯಕರ ಕಥೆ

ವಿಐಎಕ್ಸ್ ಭಯ

ಎನ್​​ಎಸ್​​ಇನಲ್ಲಿ ಭಯವನ್ನು ಅಳೆಯುವ ವಿಐಎಕ್ಸ್ ಇಂಡೆಕ್ಸ್ ಹೆಚ್ಚಿದೆ. ಇದು ಮುಂದಿನ ದಿನಗಳಲ್ಲಿ ಮಾರುಕಟ್ಟೆ ಮತ್ತೆ ಕುಸಿಯುವ ಸಾಧ್ಯತೆಯನ್ನು ತೋರಿಸುತ್ತದೆ ಎಂದು ಕೆಲವರು ವಿಶ್ಲೇಷಿಸುತ್ತಿರುವುದುಂಟು. ಮಾರುಕಟ್ಟೆಯಿಂದ ಹೊರಹೋಗಲು ಕಾಯುತ್ತಿದ್ದವರು ಸರಿಯಾದ ಸಂದರ್ಭಕ್ಕೆ ಕಾಯುತ್ತಿರಬಹುದು. ಇದರಿಂದ ಮತ್ತೊಂದು ಸಣ್ಣ ಸುತ್ತಿನ ಮಾರ್ಕೆಟ್ ಕರೆಕ್ಷನ್ ಆಗಬಹುದು ಎನ್ನುವುದು ಕೆಲವರ ಎಣಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!
ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!
ಯತ್ನಾಳ್ ಕಾಂಗ್ರೆಸ್​ಗೆ ಬರುತ್ತೇನೆಂದರೆ ಸ್ವಾಗತಿಸಲು ನಾನ್ಯಾರೂ ಅಲ್ಲ: ಶಾಸಕ
ಯತ್ನಾಳ್ ಕಾಂಗ್ರೆಸ್​ಗೆ ಬರುತ್ತೇನೆಂದರೆ ಸ್ವಾಗತಿಸಲು ನಾನ್ಯಾರೂ ಅಲ್ಲ: ಶಾಸಕ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ