Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈರುಳ್ಳಿ ಮೇಲಿನ ಶೇ. 20 ರಫ್ತು ಸುಂಕ ರದ್ದು; ಏಪ್ರಿಲ್ 1ರಿಂದ ಈರುಳ್ಳಿ ಬೆಲೆ ಕಣ್ಣೀರು ಬರಿಸುವ ಸಾಧ್ಯತೆ

Govt to withdraw export duty on Onion: ಈರುಳ್ಳಿ ರಫ್ತು ಮೇಲೆ ಇರುವ ಶೇ. 20ರಷ್ಟು ಸುಂಕವನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ. ಏಪ್ರಿಲ್ 1ರಿಂದ ಈರುಳ್ಳಿ ರಫ್ತು ಅನಿರ್ಬಂಧಿತವಾಗಿರಲಿದೆ. 2024ರ ಸೆಪ್ಟೆಂಬರ್​​ನಿಂದಲೂ ಶೇ. 20ರಷ್ಟು ರಫ್ತು ಸುಂಕ ಇದೆ. ಇಷ್ಟಾದರೂ ಈ ಹಣಕಾಸು ವರ್ಷದಲ್ಲಿ ಈರುಳ್ಳಿ ರಫ್ತು ಗಣನೀಯವಾಗಿ ಹೆಚ್ಚಿದೆ. ಏಪ್ರಿಲ್ 1ರಿಂದ ರಫ್ತು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಇದರಿಂದ ಆಂತರಿಕವಾಗಿ ಈರುಳ್ಳಿ ಕೊರತೆ ಸೃಷ್ಟಿಯಾಗುತ್ತಾ ಎನ್ನುವುದು ಪ್ರಶ್ನೆ.

ಈರುಳ್ಳಿ ಮೇಲಿನ ಶೇ. 20 ರಫ್ತು ಸುಂಕ ರದ್ದು; ಏಪ್ರಿಲ್ 1ರಿಂದ ಈರುಳ್ಳಿ ಬೆಲೆ ಕಣ್ಣೀರು ಬರಿಸುವ ಸಾಧ್ಯತೆ
ಈರುಳ್ಳಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 24, 2025 | 12:03 PM

ನವದೆಹಲಿ, ಮಾರ್ಚ್ 24: ಸರ್ಕಾರ ಈರುಳ್ಳಿ ಮೇಲಿನ ರಫ್ತು ಸುಂಕವನ್ನು (export duty  on Onion) ಹಿಂಪಡೆದುಕೊಂಡಿದೆ. ಶೇ. 20ರಷ್ಟು ರಫ್ತು ಸುಂಕ ಹೊಂದಿರುವ ಈರುಳ್ಳಿಯ ರಫ್ತು ಏಪ್ರಿಲ್ 1ರಿಂದ ಅನಿರ್ಬಂಧಿತವಾಗುತ್ತಿದೆ. ಈರುಳ್ಳಿ ಬೆಳೆಗಾರರಿಗೆ ಅನುಕೂಲವಾಗುವ ನಿರ್ಧಾರವಾದರೂ ದೇಶದೊಳಗೆ ಈರುಳ್ಳಿ ಕೊರತೆ ಸೃಷ್ಟಿಯಾಗಬಹುದು. ಇದರಿಂದ ಬೆಲೆ ಏರಿಕೆ ಆಗುವ ಸಂಭವವೂ ಇದೆ. ಆದರೆ, ಸರ್ಕಾರ ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ತಾಗದ ರೀತಿಯಲ್ಲಿ ಎಚ್ಚರ ವಹಿಸುವುದಾಗಿ ಹೇಳಿದೆ.

ಈರುಳ್ಳಿ ಮೇಲೆ ಶೇ. 20ರಷ್ಟಿದ್ದ ರಫ್ತು ಸುಂಕವನ್ನು ಏಪ್ರಿಲ್ 1ರಿಂದ ಹಿಂಪಡೆಯಲು ನಿರ್ಧರಿಸಿರುವುದಾಗಿ ಕಂದಾಯ ಇಲಾಖೆ ಮೊನ್ನೆ ಅಧಿಸೂಚನೆ ಹೊರಡಿಸಿದೆ. ಗ್ರಾಹಕ ವ್ಯವಹಾರಗಳ ಇಲಾಖೆಯೊಂದಿಗೆ ಚರ್ಚೆ ನಡೆಸಿ ಕಂದಾಯ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ. ‘ರೈತರಿಗೆ ಉತ್ತಮ ಬೆಲೆ ಹಾಗು ಗ್ರಾಹಕರಿಗೂ ಉತ್ತಮ ಬೆಲೆ ಸಿಗಬೇಕೆನ್ನುವ ಸರ್ಕಾರದ ಬದ್ಧತೆಗೆ ಪೂರಕವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಪ್ರಹ್ಲಾದ್ ಜೋಷಿ ನೇತೃತ್ವದ ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿದೆ.

ಇದನ್ನೂ ಓದಿ: ಸರ್ಕಾರಿ ಬ್ಯಾಂಕುಗಳ ಕಥೆ.. ಅಂದು ದಾಖಲೆಯ ನಷ್ಟ; ಇಂದು 27,830 ಕೋಟಿ ರೂ ಲಾಭಾಂಶ ಬಿಡುಗಡೆ

ಇದನ್ನೂ ಓದಿ
Image
ಫೀನಿಕ್ಸ್​​ನಂತೆ ತಿರುಗಿನಿಂತ ಸರ್ಕಾರಿ ಬ್ಯಾಂಕುಗಳಿಂದ ದಾಖಲೆ ಡಿವಿಡೆಂಡ್
Image
ಚೀನಾದಿಂದ ಭಾರತಕ್ಕೆ ಆರ್ಥಿಕ ಅಡ್ಡಗಾಲು?
Image
ಲೋಕೋಮೋಟಿವ್ ಎಂಜಿನ್ ತಯಾರಿಕೆಯಲ್ಲಿ ಭಾರತ ಸೂಪರ್​ಫಾಸ್ಟ್
Image
4.3 ಟ್ರಿಲಿಯನ್ ಡಾಲರ್ ಆದ ಭಾರತದ ಜಿಡಿಪಿ

ಕಳೆದ ಆರೇಳು ತಿಂಗಳಿಂದಲೂ ಈರುಳ್ಳಿ ರಫ್ತಿಗೆ ನಿರ್ಬಂಧಗಳನ್ನು ಹಾಕಲಾಗಿದೆ. ಶೇ. 20ರಷ್ಟು ಸುಂಕ ಇದ್ದರೂ ಈರುಳ್ಳಿ ರಫ್ತಿನಲ್ಲಿ ಏರಿಕೆ ಆಗುತ್ತಿದೆ. 2024ರ ಸೆಪ್ಟೆಂಬರ್​​ನಿಂದ ಈರುಳ್ಳಿ ರಫ್ತಿಗೆ ಶೇ. 20ರಷ್ಟು ಸುಂಕ ಇದೆ. ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ (ಮಾರ್ಚ್ 18) 1.17 ಮಿಲಿಯನ್ ಟನ್ ಈರುಳ್ಳಿ ರಫ್ತಾಗಿರುವುದು ತಿಳಿದುಬಂದಿದೆ.

ಸೆಪ್ಟೆಂಬರ್ ತಿಂಗಳಲ್ಲಿ 72,000 ಟನ್ ಈರುಳ್ಳಿ ರಫ್ತಾಗಿತ್ತು. ಆದರೆ, 2025ರ ಜನವರಿ ತಿಂಗಳಲ್ಲಿ ರಫ್ತಾದ ಈರುಳ್ಳಿ ಪ್ರಮಾಣ ಬರೋಬ್ಬರಿ 1,85,000 ಟನ್​​ಗಳಷ್ಟು ಎನ್ನಲಾಗಿದೆ.

ರಫ್ತು ಹೆಚ್ಚಾದರೂ ಬೆಲೆ ಏರಿಕೆ ಇಲ್ಲ..?

ಶೇ. 20ರಷ್ಟು ಸುಂಕ ಇದ್ದರೂ ಈರುಳ್ಳಿ ರಫ್ತು ಗಣನೀಯವಾಗಿ ಏರಿಕೆ ಆಗಿದ್ದು ಗಮನಾರ್ಹ ಅಂಶ. ಹಾಗೆಯೇ, ಈರುಳ್ಳಿ ರಫ್ತು ಪ್ರಮಾಣ ಏರಿಕೆ ಆದರೂ ಕೂಡ ಪ್ರಮುಖ ಮಾರುಕಟ್ಟೆಗಳಲ್ಲಿ ಸ್ಥಳೀಯವಾಗಿ ಈರುಳ್ಳಿ ಬೆಲೆ ಕಣ್ಣೀರು ತರಿಸಲಿಲ್ಲ. ಈಗಲೂ ಕೂಡ ಈರುಳ್ಳಿ ಬೆಲೆ ತಹಬದಿಯಲ್ಲೇ ಇದೆ. ಜನವರಿ ಮತ್ತು ಫೆಬ್ರುವರಿಯಲ್ಲಿ ಹಣದುಬ್ಬರ ಇಳಿಕೆಗೆ ಈ ಈರುಳ್ಳಿ ಬೆಲೆ ಇಳಿಕೆಯೂ ಒಂದು ಕಾರಣವಾಗಿದೆ.

ಇದನ್ನೂ ಓದಿ: ಭಾರತದ ಬೆಳವಣಿಗೆಯ ದಾರಿಗೆ ಚೀನಾ ಕಲ್ಲು, ಮುಳ್ಳು ತುಂಬುತ್ತಿದೆಯಾ? ನೆರೆ ದೇಶದ ತಂತ್ರಗಳು ಹೇಗಿವೆ ಗೊತ್ತಾ?

ಏಪ್ರಿಲ್ 1ರ ಬಳಿಕ ಈರುಳ್ಳಿ ಬೆಲೆ ಹೆಚ್ಚುತ್ತಾ?

ಏಪ್ರಿಲ್ 1ರಿಂದ ಈರುಳ್ಳಿ ರಫ್ತಿಗೆ ಯಾವ ನಿರ್ಬಂಧವೂ ಇರುವುದಿಲ್ಲ. ಇದು ಇನ್ನೂ ಹೆಚ್ಚಿನ ಈರುಳ್ಳಿಗೆ ಕಾರಣವಾಗಬಹುದು. ಒಂದು ವೇಳೆ, ಈ ಬಾರಿ ಈರುಳ್ಳಿ ಫಸಲು ಉತ್ತಮವಾಗಿ ಬರದೇ ಹೋದರೆ ಈರುಳ್ಳಿ ದಾಸ್ತಾನು ಕಡಿಮೆ ಆಗಬಹುದು. ಇದರಿಂದ ಬೆಲೆ ಏರಿಕೆ ಆಗುವ ಸಾಧ್ಯತೆ ಇಲ್ಲದಿಲ್ಲ. ಅಕಸ್ಮಾತ್ ಆ ಸಾಧ್ಯತೆ ಕಂಡುಬಂದಲ್ಲಿ ಸರ್ಕಾರವು ಈರುಳ್ಳಿ ರಫ್ತನ್ನು ಮತ್ತೆ ನಿರ್ಬಂಧಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!