IPL 2025: 6,6,6,6,6,6… ಸಿಕ್ಸರ್ಗಳ ಮಳೆ ಸುರಿಸಿದ ಮಾರ್ಷ್; ವಿಡಿಯೋ
IPL 2025: ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2025 ಪಂದ್ಯದಲ್ಲಿ, ಮಿಚೆಲ್ ಮಾರ್ಷ್ ಅವರು ಅದ್ಭುತವಾದ ಅರ್ಧಶತಕ ಬಾರಿಸಿ ಲಕ್ನೋ ತಂಡವನ್ನು 200 ರನ್‌ಗಳ ಗಡಿ ದಾಟಿಸಿದ್ದಾರೆ. ಕೇವಲ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಮಾರ್ಷ್, ಲಕ್ನೋ ಪರ ಅತಿ ವೇಗದ ಅರ್ಧಶತಕ ಬಾರಿಸಿದ ನಾಲ್ಕನೇ ಆಟಗಾರ ಎನಿಸಿಕೊಂಡರು.
ಐಪಿಎಲ್ 2025 ಮಾರ್ಚ್ 24 ರಂದು ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ 210 ರನ್‌ಗಳ ಟಾರ್ಗೆಟ್ ನೀಡಿತು. ತಂಡದ ಪರ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಬಂದಿದ್ದ ಮಿಚೆಲ್ ಮಾರ್ಷ್ ಬೌಂಡರಿಗಳ ಮಳೆಗರೆದು ಸಿಡಿಲಬ್ಬದ ಅರ್ಧಶತಕ ಬಾರಿಸಿದರು. ಕೇವಲ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಮಾರ್ಷ್ ಲಕ್ನೋ ಪರ ಅತಿ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ಲಕ್ನೋ ಪರ ಅತ್ಯಂತ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಪೂರನ್ ಹೆಸರಿನಲ್ಲಿದೆ. 2023 ರಲ ಐಪಿಎಲ್‌ನಲ್ಲಿ ನಿಕೋಲಸ್ ಪೂರನ್ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಎರಡನೇ ಸ್ಥಾನದಲ್ಲೂ ಪೂರನ್ ಇದ್ದು, ಮೂರನೇ ಸ್ಥಾನದಲ್ಲಿ ಕೈಲ್ ಮೇಯರ್ಸ್ ಇದ್ದಾರೆ. ಅಂತಿಮವಾಗಿ ಮಾರ್ಷ್ 36 ಎಸೆತಗಳಲ್ಲಿ 6 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 72 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.